For Quick Alerts
ALLOW NOTIFICATIONS  
For Daily Alerts
 

IND vs SA: 2ನೇ ಟಿ20 ಪಂದ್ಯದಲ್ಲಿ ಈ ಸ್ಪಿನ್ನರ್‌ಗೆ ಅವಕಾಶ ನೀಡಿ; ಮಾಜಿ ಆಟಗಾರ ಗೌತಮ್ ಗಂಭೀರ್

IND vs SA: Give Chance To This Spinner In The 2nd T20 Match Says Gautam Gambhir

ಗುರುವಾರ ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಐದು ಪಂದ್ಯಗಳ ಸರಣಿಯ ಮೊದಲ ಟಿ20ಐನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಏಳು ವಿಕೆಟ್‌ಗಳ ಸೋಲನ್ನು ಎದುರಿಸಿದ ಭಾರತ ತಂಡ, ಟಿ20 ಕ್ರಿಕೆಟ್‌ನಲ್ಲಿ ಸತತ 13 ಪಂದ್ಯಗಳನ್ನು ಗೆದ್ದು ವಿಶ್ವದಾಖಲೆ ಮಾಡುವ ಅವಕಾಶವನ್ನು ಸ್ವಲ್ಪದರಲ್ಲಿಯೇ ಕಳೆದುಕೊಂಡಿತು.

ದೆಹಲಿಯ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 212 ರನ್‌ಗಳನ್ನು ಡಿಫೆಂಡ್ ಮಾಡಲು ವಿಫಲವಾಗಿತ್ತು. ಮುಂದಿನ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಅಗತ್ಯ ಬದಲಾವಣೆಗಳನ್ನು ಸೂಚಿಸಿದ ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್, ಒಬ್ಬ ವೇಗದ ಬೌಲರ್ ಬದಲಿಗೆ ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಎರಡನೇ ಟಿ20 ಪಂದ್ಯ ಆಡಬೇಕೆಂದು ಸಲಹೆ ನೀಡಿದ್ದಾರೆ.

IND vs SA: Give Chance To This Spinner In The 2nd T20 Match Says Gautam Gambhir

"ಒಂದು ವೇಳೆ ಒಬ್ಬ ವೇಗದ ಬೌಲರ್ ಹನ್ನೊಂದರ ಬಳಗದಿಂದ ಹೊರಗುಳಿಯಬಹುದು ಮತ್ತು ರವಿ ಬಿಷ್ಣೋಯ್ ಲೆಗ್-ಸ್ಪಿನ್ನರ್ ರೂಪದಲ್ಲಿ ಆಡಬಹುದು. ಹಾರ್ದಿಕ್ ಪಾಂಡ್ಯ ನಿಮ್ಮ ಮೂರನೇ ವೇಗದ ಆಯ್ಕೆ ಆಗಿರುತ್ತಾರೆ," ಎಂದಿದ್ದಾರೆ.

"ನೀವು ಎರಡು ಮಣಿಕಟ್ಟಿನ ಸ್ಪಿನ್ನರ್‌ಗಳನ್ನು ಆಕ್ರಮಣಕಾರಿ ಆಯ್ಕೆಗಳಾಗಿ ಹೊಂದಬಹುದು. ಆದರೆ ಮೈದಾನವು ಚಿಕ್ಕದಾಗಿದ್ದರೆ ಮತ್ತು ವಿಕೆಟ್‌ನಲ್ಲಿ ಹೆಚ್ಚು ಸ್ಪಿನ್ನರ್‌ಗಳಿಗೆ ಸಹಾಯ ಮಾಡದಿದ್ದರೆ, ನೀವು ಬಹುಶಃ ಹಿಂದಿನ ತಂಡವನ್ನು ನೋಡಬಹುದು," ಎಂದು ಸ್ಟಾರ್ ಸ್ಪೋರ್ಟ್ಸ್‌ನಲ್ಲಿನ ಪಂದ್ಯದ ನಂತರದ ಶೋನಲ್ಲಿ ಗೌತಮ್ ಗಂಭೀರ್ ಹೇಳಿದರು.

ಮೊದಲ ಟಿ20ಯಲ್ಲಿ ಭಾರತದ ವೇಗಿಗಳ ದಾಳಿ ಎಲ್ಲ ಕಡೆ ಇತ್ತು. ಭುವನೇಶ್ವರ್ ಕುಮಾರ್, ಅವೇಶ್ ಖಾನ್ ಮತ್ತು ಹರ್ಷಲ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು, ಆದರೆ ದಕ್ಷಿಣ ಆಫ್ರಿಕಾ ಬ್ಯಾಟ್ಸ್‌ಮನ್‌ಗಳನ್ನು ತಡೆಯುವಲ್ಲಿ ವಿಫಲರಾದರು. ಹಾರ್ದಿಕ್ ಪಾಂಡ್ಯ ಒಂದು ಓವರ್ ಬೌಲ್ ಮಾಡಿದರು. ಆದರೆ ಅವರು 18 ರನ್ ನೀಡಿದರು. ಆದರೆ ಭುವನೇಶ್ವರ್ ಕುಮಾರ್ ಮತ್ತು ಹರ್ಷಲ್ ಹರ್ಷಲ್ 10ಕ್ಕಿಂತ ಹೆಚ್ಚು ಎಕಾನಮಿ ಬೌಲ್ ಮಾಡಿ, ರನ್ ಬಿಟ್ಟುಕೊಟ್ಟರು.

IND vs SA: Give Chance To This Spinner In The 2nd T20 Match Says Gautam Gambhir

ದೀಪಕ್ ಹೂಡಾ ಮೊದಲ ಟಿ20 ಆಡಬೇಕಿತ್ತು. ಆದರೆ ಭಾರತ ತಂಡದ ಆಡಳಿತವು ದಿನೇಶ್ ಕಾರ್ತಿಕ್ ಅವರನ್ನು ಪ್ರಮುಖ ಫಿನಿಶರ್ ಆಗಿ ಆಯ್ಕೆ ಮಾಡಿರುವುದರಿಂದ ಅವರೊಂದಿಗೇ ಮುಂದುವರಿಯಬೇಕು ಎಂದು ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.

"ಈಗ ನೀವು ದಿನೇಶ್ ಕಾರ್ತಿಕ್ ಅವರನ್ನು ಆಡಿಸಿದ್ದೀರಿ, ಇದೇ ವೇಳೆ ಉತ್ತಮ ಫಾರ್ಮ್‌ನಲ್ಲಿದ್ದ ಯುವ ಆಟಗಾರ ದೀಪಕ್ ಹೂಡಾನನ್ನು ಆಡಿಸಬಹುದಿತ್ತು ಎಂದು ನನಗೆ ಇನ್ನೂ ಅನಿಸುತ್ತದೆ. ಆದರೆ ಮುಂದಿನ ಪಂದ್ಯಗಳಲ್ಲಿ ಯಾವುದೇ ಬದಲಾವಣೆಗಳ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ. ವಿಕೆಟ್ ಹೆಚ್ಚು ಒಣಗದ ಹೊರತು ಇದನ್ನು ಮಾಡಬೇಕು," ಎಂದು ಮಾಜಿ ಆರಂಭಿಕ ಬ್ಯಾಟ್ಸ್‌ಮನ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಮೆಂಟರ್ ಗೌತಮ್ ಗಂಭೀರ್ ತಿಳಿಸಿದರು.

Story first published: Saturday, June 11, 2022, 19:25 [IST]
Other articles published on Jun 11, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+