Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs SA: ನ್ಯೂಲ್ಯಾಂಡ್ಸ್‌ ಪಿಚ್‌ಗೆ ಅತೃಪ್ತಿಕರ ರೇಟಿಂಗ್ ನೀಡಿದ ಐಸಿಸಿ

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಎರಡನೇ ಟೆಸ್ಟ್‌ ಕೇಪ್‌ ಟೌನ್‌ನಲ್ಲಿ ನಡೆದಿತ್ತು. ನ್ಯೂಲ್ಯಾಂಡ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಒಂದೂವರೆ ದಿನದಲ್ಲಿ ಫಲಿತಾಂಶ ಕಂಡಿತ್ತು. ಈ ಪಿಚ್‌ ಬಗ್ಗೆ ಹಲವು ಪ್ರಶ್ನೆಗಳು ಎದ್ದಿದ್ದವು. ಈಗ ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ಸಹ ನಿರ್ಧಾರವನ್ನು ಪ್ರಕಟಿಸಿದೆ.

ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ನಡೆದ ಪಿಚ್‌ಗೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಅತೃಪ್ತಿಕರ ರೇಟಿಂಗ್ ನೀಡಿದೆ. ಅಲ್ಲದೆ ಒಂದು ಡಿಮೆರಿಟ್ ಪಾಯಿಂಟ್ ನೀಡಲಾಗಿದೆ.

IND vs SA: ICC gives unsatisfactory rating to Newlands pitch

ಉಭಯ ತಂಡಗಳು ನಡುವೆ ನಡೆದ ಎರಡು ಟೆಸ್ಟ್‌ ಸರಣಿಯ ಕೊನೆಯ ಪಂದ್ಯ, ಕೇಪ್‌ಟೌನ್‌ನಲ್ಲಿ ನಡೆದಿತ್ತು. ಈ ಪಂದ್ಯ ಇತಿಹಾಸದ ಪುಟ ಸೇರಿದೆ. ಅತ್ಯಂತ ಕಡಿಮೆ ಎಸೆತಗಳಲ್ಲಿ ಮುಗಿದ ಟೆಸ್ಟ್‌ ಎಂಬ ದಾಖಲೆಯನ್ನು ಈ ಟೆಸ್ಟ್‌ ಹೊಂದಿದೆ. ಎರಡನೇ ಟೆಸ್ಟ್‌ ಒಂದೂ ವರೆ ದಿನದಲ್ಲೀ ಮುಗಿದಿದೆ. ಈ ಪಂದ್ಯದಲ್ಲಿ ಎರಡೂ ತಂಡಗಳು 4 ಇನಿಂಗ್ಸ್‌ ಸೇರಿದಂತೆ 107 ಓವರ್‌ಗಳಷ್ಟೇ ಬ್ಯಾಟಿಂಗ್‌ ಮಾಡಲಷ್ಟೇ ಶಕ್ತವಾಗಿದ್ದವು. ಇದು 147 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಅತ್ಯಂತ ಕಡಿಮೆ ಓವರ್‌ ಪಂದ್ಯವಾಗಿದೆ.

ಐಸಿಸಿಯು ಪಿಚ್‌ಗೆ ತೃಪ್ತಿಕರವಲ್ಲದ ರೇಟಿಂಗ್ ನೀಡಿದ ನಂತರ ಕ್ರಿಕೆಟ್ ದಕ್ಷಿಣ ಆಫ್ರಿಕಾ ಈಗ ಮೇಲ್ಮನವಿ ಸಲ್ಲಿಸಲು 14 ದಿನಗಳ ಕಾಲಾವಕಾಶ ಹೊಂದಿದೆ. ಮಂಡಳಿಯು 14 ದಿನಗಳಲ್ಲಿ ರೇಟಿಂಗ್ ವಿರುದ್ಧ ಮೇಲ್ಮನವಿ ಸಲ್ಲಿಸಬಹುದು.

ಮ್ಯಾಚ್ ರೆಫರಿ ಕಳವಳ

ನ್ಯೂಲ್ಯಾಂಡ್ಸ್ ಪಿಚ್ ಬಗ್ಗೆ ಮ್ಯಾಚ್ ರೆಫರಿ ಕ್ರಿಸ್ ಬ್ರಾಡ್ ಕಳವಳ ವ್ಯಕ್ತಪಡಿಸಿದ್ದಾರೆ. ನ್ಯೂಲ್ಯಾಂಡ್ಸ್ ಪಿಚ್‌ನಲ್ಲಿ ಬ್ಯಾಟ್ ಮಾಡುವುದು ತುಂಬಾ ಕಷ್ಟಕರವಾಗಿತ್ತು. ಪಂದ್ಯದುದ್ದಕ್ಕೂ ಚೆಂಡು ವೇಗವಾಗಿ ಮತ್ತು ಕೆಲವೊಮ್ಮೆ ಅಸಹಜ ಬೌನ್ಸ್‌, ಲೇಟ್‌ ಸ್ವಿಂಗ್ ಪರಿಣಾಮ ಆಡುವುದು ಕಷ್ಟ. ಈ ಅಂಗಳದಲ್ಲಿ ಬ್ಯಾಟಿಂಗ್ ಮಾಡುವುದು ಕಷ್ಟ. ಅನೇಕ ಬ್ಯಾಟ್ಸ್‌ಮನ್‌ಗಳ ಗ್ಲೌಸ್‌ಗೆ ಚೆಂಡು ಬಡೆದಿತ್ತು. ಅಲ್ಲದೆ ಪೆಟ್ಟು ಸಹ ಬಿದ್ದಿದೆ. ಮತ್ತು ವಿಚಿತ್ರ ಬೌನ್ಸ್‌ನಿಂದ ಅನೇಕ ವಿಕೆಟ್‌ಗಳು ಸಹ ಬಿದ್ದವು.

IND vs SA: ICC gives unsatisfactory rating to Newlands pitch

ಪಿಚ್ ಬಗ್ಗೆ ಐಸಿಸಿ ನಿಯಮಗಳು

ICC ಯ 'ಪಿಚ್ ಮತ್ತು ಔಟ್‌ಫೀಲ್ಡ್ ಮಾನಿಟರಿಂಗ್ ಪ್ರಕ್ರಿಯೆ' ಅಡಿಯಲ್ಲಿ, ಎಲ್ಲಾ ಪಂದ್ಯಗಳ ಸಮಯದಲ್ಲಿ ಪಿಚ್ ಮತ್ತು ಔಟ್‌ಫೀಲ್ಡ್ ಅನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ. ಮ್ಯಾಚ್ ರೆಫರಿಯು ಅತೃಪ್ತಿಕರವೆಂದು ಪರಿಗಣಿಸುವ ಪಿಚ್ ಮತ್ತು ಔಟ್‌ಫೀಲ್ಡ್‌ಗೆ ICC ಒಂದು ಡಿಮೆರಿಟ್ ಪಾಯಿಂಟ್ ನೀಡುತ್ತದೆ.

ಒಂದು ಸ್ಥಳವು 5 ವರ್ಷಗಳಲ್ಲಿ 6 ಅಥವಾ ಹೆಚ್ಚಿನ ಡಿಮೆರಿಟ್ ಅಂಕಗಳನ್ನು ಪಡೆದರೆ, ಅದನ್ನು 12 ತಿಂಗಳವರೆಗೆ ನಿಷೇಧಿಸಲಾಗುತ್ತದೆ. ಅಂದರೆ ಒಂದು ವರ್ಷದವರೆಗೆ ಆ ಸ್ಥಳದಲ್ಲಿ ಯಾವುದೇ ಅಂತಾರಾಷ್ಟ್ರೀಯ ಪಂದ್ಯ ನಡೆಯುವುದಿಲ್ಲ.

ಗುರುವಾರ ಕೇಪ್‌ಟೌನ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ ತಂಡ 55 ರನ್‌ಗಳಿಗೆ ಆಲೌಟ್ ಆಯಿತು. ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 153 ರನ್ ಗಳಿಸಲಷ್ಟೇ ಶಕ್ತವಾಯಿತು. ಟೀಮ್ ಇಂಡಿಯಾ 98 ರನ್‌ಗಳ ಮುನ್ನಡೆ ಸಾಧಿಸಿದೆ.

ದಕ್ಷಿಣ ಆಫ್ರಿಕಾ ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 176 ರನ್ ಗಳಿಸಲಷ್ಟೇ ಶಕ್ತವಾಯಿತು. ಭಾರತಕ್ಕೆ 79 ರನ್‌ಗಳ ಗುರಿ ನೀಡಿತು. ಎರಡನೇ ಅವಧಿಯ ಕೇವಲ 12 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಟೀಂ ಇಂಡಿಯಾ ಈ ಸಾಧನೆ ಮಾಡಿತ್ತು.

Story first published: Tuesday, January 9, 2024, 20:41 [IST]
Other articles published on Jan 9, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+