ಮೂರು ಪಂದ್ಯಗಳ ಟಿ20 ಸರಣಿಯನ್ನು ಸಮಬಲಗೊಳಿಸಿದ ನಂತರ, ಪ್ರವಾಸಿ ಭಾರತ ಮತ್ತು ಆತಿಥೇಯ ದಕ್ಷಿಣ ಆಫ್ರಿಕಾ ತಂಡಗಳು ಹೊಸ ಮುಖಗಳೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಮುಖಾಮುಖಿಯಾಗುತ್ತಿವೆ.
ಭಾನುವಾರ, ಡಿಸೆಂಬರ್ 17ರಂದು ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಸ್ಟೇಡಿಯಂನಲ್ಲಿ ಕೆಎಲ್ ರಾಹುಲ್ ನಾಯಕತ್ವದ ಭಾರತ ಮತ್ತು ಏಡೆನ್ ಮಾರ್ಕ್ರಾಮ್ ನಾಯಕತ್ವದ ದಕ್ಷಿಣ ಆಫ್ರಿಕಾ ತಂಡಗಳು ಮೊದಲ ಏಕದಿನ ಪಂದ್ಯದಲ್ಲಿ ಸೆಣಸಾಡಲಿವೆ.

ಟೀಮ್ ಇಂಡಿಯಾ ಕೆಲವು ಹೊಸ ಮುಖಗಳನ್ನು ಪರಿಚಯಿಸಲು ಸಜ್ಜಾಗಿದೆ. ಕೆಎಲ್ ರಾಹುಲ್ ಮತ್ತೆ ನಾಯಕತ್ವದ ಪಾತ್ರವನ್ನು ವಹಿಸಿಕೊಂಡಿದ್ದಾರೆ. ಇನ್ನು ಏಡೆನ್ ಮಾರ್ಕ್ರಾಮ್ ನೇತೃತ್ವದ ದಕ್ಷಿಣ ಆಫ್ರಿಕಾ, ಟಿ20 ಪಂದ್ಯಗಳಲ್ಲಿ ನೋಡಿದಂತೆ ಹೊಸ ತಂಡವನ್ನು ನೋಡಲಿದೆ.
ತವರಿನಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ ಭಾರತವು ತಂಡ ದಕ್ಷಿಣ ಆಫ್ರಿಕಾ ವಿರುದ್ಧ 243 ರನ್‌ಗಳ ಗೆಲುವಿನ ಹೊರತಾಗಿಯೂ, ಮುಂಬರುವ ಪಂದ್ಯವು ಗಮನಾರ್ಹವಾಗಿ ವಿನೂತನ ತಂಡವನ್ನು ಹೊಂದಿರುತ್ತದೆ. ಕೇವಲ ಕೆಎಲ್ ರಾಹುಲ್, ಕುಲದೀಪ್ ಯಾದವ್ ಮತ್ತು ಶ್ರೇಯಸ್ ಅಯ್ಯರ್ ಮಾತ್ರ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ವಾಂಡರರ್ಸ್ ಸ್ಟೇಡಿಯಂನಲ್ಲಿನ ಪಿಚ್ ಬ್ಯಾಟಿಂಗ್ ಸ್ನೇಹಿಯಾಗಿದೆ, ಇದು ಸಮತಟ್ಟಾದ ಮೇಲ್ಮೈ ಮತ್ತು ಬ್ಯಾಟರ್‌ಗಳು ಅಬ್ಬರಿಸಲು ಸಣ್ಣ ಬೌಂಡರಿಗಳನ್ನು ಹೊಂದಿದೆ. ಐತಿಹಾಸಿಕವಾಗಿ, ಈ ಸ್ಥಳವು 2006ರಲ್ಲಿ ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾದಿಂದ 434 ರನ್‌ಗಳ ಪ್ರಸಿದ್ಧ ಚೇಸ್ ಸೇರಿದಂತೆ ಹೆಚ್ಚಿನ ಸ್ಕೋರಿಂಗ್ ಪಂದ್ಯಗಳಿಗೆ ಸಾಕ್ಷಿಯಾಗಿದೆ.

ಇಲ್ಲಿ ಸರಾಸರಿ ಮೊದಲ ಇನ್ನಿಂಗ್ಸ್ ಸ್ಕೋರ್ 241 ರನ್ ಆಗಿದೆ ಮತ್ತು ಚೇಸಿಂಗ್ ಮಾಡುವ ತಂಡಗಳು 30-23ರ ಗೆಲುವಿನ ಅನುಪಾತದೊಂದಿಗೆ ಪ್ರಯೋಜನವನ್ನು ಹೊಂದಿವೆ.
ಆದಾಗ್ಯೂ, ಇತ್ತೀಚಿನ ಟಿ20 ಪಂದ್ಯದ ಸಮಯದಲ್ಲಿ, ಭಾರತೀಯ ಸ್ಪಿನ್ನರ್‌ಗಳು ಟರ್ನಿಂಗ್‌ನ ಲಾಭ ಪಡೆಯಲು ನೆರವಾಯಿತು. ಈ ಪಿಚ್ ಬೌಲರ್‌ಗಳಿಗೂ ಸಹಾಯಕಾರಿಗೆ ಎಂಬುದನ್ನು ಸೂಚಿಸುತ್ತದೆ.
ಏಕದಿನ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಭಾರತ ತಂಡಗಳು ಒಟ್ಟು 91 ಬಾರಿ ಮುಖಾಮುಖಿಯಾಗಿದ್ದು, ದಕ್ಷಿಣ ಆಫ್ರಿಕಾ 50 ಪಂದ್ಯಗಳನ್ನು ಗೆದ್ದಿದ್ದರೆ, ಭಾರತ 38 ಪಂದ್ಯಗಳಲ್ಲಿ ಗೆಲುವು ಕಂಡಿದೆ ಮತ್ತು ಮೂರು ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿವೆ.
ಎರಡು ತಂಡಗಳ ನಡುವಿನ ಇತ್ತೀಚಿನ ಐದು ಏಕದಿನ ಪಂದ್ಯಗಳಲ್ಲಿ, ದಕ್ಷಿಣ ಆಫ್ರಿಕಾ ಎರಡು ಗೆದ್ದಿದೆ ಮತ್ತು ಭಾರತ ಮೂರು ಬಾರಿ ವಿಜಯಶಾಲಿಯಾಗಿದೆ. ಈ ಐದು ಪಂದ್ಯಗಳಲ್ಲಿ ಗರಿಷ್ಠ ಸ್ಕೋರ್ ಭಾರತ 326 ಆಗಿದ್ದರೆ, ದಕ್ಷಿಣ ಆಫ್ರಿಕಾ ತಂಡದ 83 ರನ್ ಕಡಿಮೆ ಆಗಿದೆ.
ಭಾರತ vs ದಕ್ಷಿಣ ಆಫ್ರಿಕಾ ನಡುವಿನ ಮೊದಲನೇ ಏಕದಿನ ಪಂದ್ಯವು ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ನೇರಪ್ರಸಾರವಾಗಲಿದ್ದರೆ, ಡಿಸ್ನಿ+ ಹಾಟ್ ಸ್ಟಾರ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಆಗಲಿದೆ.
ಮೊದಲನೇ ಏಕದಿನ ಪಂದ್ಯವು ಭಾರತೀಯ ಕಾಲಮಾನ ಮಧ್ಯಾಹ್ನ 1:30ಕ್ಕೆ ಪ್ರಾರಂಭವಾಗುವ ನಿರೀಕ್ಷೆಯಿದೆ ಮತ್ತು 1 ಗಂಟೆಗೆ ಟಾಸ್ ನಡೆಯಲಿದೆ.
2023ರ ಡಿಸೆಂಬರ್ 17ರಂದು ಜೋಹಾನ್ಸ್‌ಬರ್ಗ್‌ನ ವಾಂಡರರ್ಸ್ ಸ್ಟೇಡಿಯಂ ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ.
ಪಂದ್ಯದ ದಿನ ಹವಾಮಾನ ಮುನ್ಸೂಚನೆಯು ಬೆಳಿಗ್ಗೆ ಗುಡುಗು ಸಹಿತ ಬಿರುಗಾಳಿ ಸಾಧ್ಯತೆಯನ್ನು ಸೂಚಿಸುತ್ತದೆ. ವಿಶೇಷವಾಗಿ ಸ್ಥಳೀಯ ಸಮಯ ಸುಮಾರು ಬೆಳಿಗ್ಗೆ 6 ಮತ್ತು 8 ಗಂಟೆಯ ನಡವೆ, ಮಳೆಯಾಗುವ ಸಾಧ್ಯತೆ ಶೇ.51ರಷ್ಟಿದೆ.
ಮಳೆಯ ಭೀತಿಯ ಹೊರತಾಗಿಯೂ, ತಾಪಮಾನವು ಬೆಚ್ಚಗಿರುತ್ತದೆ ಎಂದು ನಿರೀಕ್ಷಿಸಲಾಗಿದೆ,. ಇದು 23 ಡಿಗ್ರಿ ಸೆಲ್ಸಿಯಸ್‌ನಿಂದ ಪ್ರಾರಂಭವಾಗುತ್ತದೆ ಮತ್ತು ದಿನವು ಮುಂದುವರೆದಂತೆ ಸಂಭಾವ್ಯವಾಗಿ 27 ಡಿಗ್ರಿ ಸೆಲ್ಸಿಯಸ್‌ಗೆ ಏರುತ್ತದೆ. ಡಿಸೆಂಬರ್ 17ರಂದು ಜೋಹಾನ್ಸ್‌ಬರ್ಗ್‌ನ ಹವಾಮಾನ ಮುನ್ಸೂಚನೆಯು ಮಳೆಯ ಶೇಕಡಾ ಸೊನ್ನೆಯಷ್ಟು ಸಾಧ್ಯತೆಯನ್ನು ಸೂಚಿಸುತ್ತದೆ.
ದಕ್ಷಿಣ ಆಫ್ರಿಕಾ: ಡೇವಿಡ್ ಮಿಲ್ಲರ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ರೀಜಾ ಹೆಂಡ್ರಿಕ್ಸ್, ಟೋನಿ ಡಿ ಜೊರ್ಜಿ, ಏಡೆನ್ ಮಾರ್ಕ್ರಾಮ್ (ನಾಯಕ), ಆಂಡಿಲ್ ಫೆಹ್ಲುಕ್ವಾಯೊ, ವಿಯಾನ್ ಮುಲ್ಡರ್, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಕೈಲ್ ವೆರ್ರೆನ್ನೆ (ವಿಕೆಟ್ ಕೀಪರ್), ಕೇಶವ್ ಮಹಾರಾಜ್, ಲಿಜಾಡ್ ವಿಲಿಯಮ್ಸ್, ಮಿಹ್ಲಾಲಿ ಎಂಪೊಂಗ್ವಾನಾ, ನಾಂಡ್ರೆ ಬರ್ಗರ್, ಒಟ್ನಿಯೆಲ್ ಬಾರ್ಟ್‌ಮ್ಯಾನ್, ತಬ್ರೈಜ್ ಶಮ್ಸಿ.
ಭಾರತ: ರಜತ್ ಪಾಟಿದಾರ್, ರಿಂಕು ಸಿಂಗ್, ರುತುರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್, ಶ್ರೇಯಸ್ ಅಯ್ಯರ್, ತಿಲಕ್ ವರ್ಮಾ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕೆಎಲ್ ರಾಹುಲ್ (ನಾಯಕ/ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಅರ್ಶ್‌ದೀಪ್ ಸಿಂಗ್, ಅವೇಶ್ ಖಾನ್, ಕುಲದೀಪ್ ಯಾದವ್, ಮುಖೇಶ್ ಕುಮಾರ್, ಯುಜ್ವೇಂದ್ರ ಚಹಾಲ್.