IND vs SA: ಅಂತಿಮ ಟಿ20 ಪಂದ್ಯದ ಡ್ರೀಮ್ ಟೀಮ್ ಪ್ರೆಡಿಕ್ಷನ್ ಮತ್ತು ಫ್ಯಾಂಟಸಿ ಟಿಪ್ಸ್

ಭಾರತ ಪ್ರವಾಸವನ್ನು ಕೈಗೊಂಡಿರುವ ದಕ್ಷಿಣ ಆಫ್ರಿಕಾ ಟೀಮ್ ಇಂಡಿಯಾ ವಿರುದ್ಧ 5 ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಕಣಕ್ಕಿಳಿದಿದ್ದು, ನಾಳೆ ( ಜೂನ್ 19 ) ನಡೆಯಲಿರುವ ಅಂತಿಮ ಟಿ ಟ್ವೆಂಟಿ ಪಂದ್ಯದ ಮೂಲಕ ತನ್ನ ಪಯಣವನ್ನು ಮುಗಿಸಲಿದೆ.
ಹೌದು, ಇತ್ತಂಡಗಳ ನಡುವಿನ ಈ ಟಿ ಟ್ವೆಂಟಿ ಸರಣಿಯ 4 ಪಂದ್ಯಗಳು ಈಗಾಗಲೇ ಮುಕ್ತಾಯಗೊಂಡಿದ್ದು, ಮೊದಲೆರಡು ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಗೆಲುವು ಸಾಧಿಸಿತ್ತು ಹಾಗೂ ನಂತರ ನಡೆದ 3 ಮತ್ತು ನಾಲ್ಕನೇ ಪಂದ್ಯಗಳಲ್ಲಿ ಆತಿಥೇಯ ಟೀಮ್ ಇಂಡಿಯಾ ಜಯ ಸಾಧಿಸಿ ಸರಣಿಯನ್ನು ಸಮಬಲ ಮಾಡಿಕೊಳ್ಳುವುದರಲ್ಲಿ ಯಶಸ್ವಿಯಾಗಿದೆ.
ಹೀಗಾಗಿ ಇತ್ತಂಡಗಳ ನಡುವಿನ ಈ ಸರಣಿ ಇದೀಗ ಸಾಕಷ್ಟು ಕುತೂಹಲವನ್ನು ಹುಟ್ಟು ಹಾಕಿದ್ದು, ಯಾವ ತಂಡ ಅಂತಿಮ ಪಂದ್ಯದಲ್ಲಿ ಗೆದ್ದು ಸರಣಿಯಲ್ಲಿ ವಿಜೇತರಾಗಿ ಹೊರ ಹೊಮ್ಮಲಿದೆ ಎಂಬ ಪ್ರಶ್ನೆ ಮೂಡಿದೆ. ಇನ್ನು ಟೀಮ್ ಇಂಡಿಯಾ ಇದುವರೆಗೂ ಭಾರತದ ನೆಲದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದಿರುವ ಯಾವುದೇ ಟಿ20 ಸರಣಿಯಲ್ಲಿಯೂ ಕೂಡ ಜಯ ಸಾಧಿಸಿಲ್ಲ. ಹೀಗಾಗಿ ಈ ಸರಣಿಯಲ್ಲಿ ಟೀಮ್ ಇಂಡಿಯಾ ಗೆದ್ದಿದ್ದೇ ಆದರೆ ಇದೇ ಮೊಟ್ಟ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ವಿರುದ್ಧ ತವರು ನೆಲದಲ್ಲಿ ಟಿ ಟ್ವೆಂಟಿ ಸರಣಿ ಜಯ ಸಾಧಿಸಿದ ಸಾಧನೆಯನ್ನು ಮಾಡಲಿದೆ. ಹೀಗೆ ಸಾಕಷ್ಟು ಕುತೂಹಲ ಹುಟ್ಟಿಸಿರುವ ಹಾಗೂ ಮಹತ್ವದ್ದಾಗಿರುವ ಈ ಪಂದ್ಯದಲ್ಲಿ ಯಾವ ತಂಡ ಗೆಲ್ಲಲಿದೆ ಎಂಬ ಊಹೆಯಲ್ಲಿ ಕೆಲ ಕ್ರಿಕೆಟ್ ಪ್ರೇಮಿಗಳು ಇದ್ದರೆ, ಇನ್ನೂ ಕೆಲ ಕ್ರಿಕೆಟ್ ಪ್ರೇಮಿಗಳು ಈ ಪಂದ್ಯಕ್ಕಾಗಿ ಡ್ರೀಮ್ ಟೀಮ್ ರಚಿಸುತ್ತಿದ್ದು ಉತ್ತಮ ಪ್ರದರ್ಶನ ನೀಡಬಹುದಾದ ಆಟಗಾರರನ್ನು ಆಯ್ಕೆ ಮಾಡುವಲ್ಲಿ ನಿರತರಾಗಿದ್ದಾರೆ. ಹೀಗೆ ಡ್ರೀಮ್ ಟೀಮ್ ರಚಿಸುವವರು ಈ ಕೆಳಕಂಡ ಫ್ಯಾಂಟಸಿ ಟಿಪ್ಸ್ ಅನುಸರಿಸಿದರೆ ಉತ್ತಮ ಫ್ಯಾಂಟಸಿ ಅಂಕಗಳನ್ನು ಪಡೆಯಬಹುದಾಗಿದೆ.

ಡ್ರೀಮ್ ಟೀಮ್ 1
1. ಇಶಾನ್ ಕಿಶನ್, 2. ರುತುರಾಜ್ ಗಾಯಕ್ವಾಡ್, 3. ಕ್ವಿಂಟನ್ ಡಿ ಕಾಕ್, 4. ಹಾರ್ದಿಕ್ ಪಾಂಡ್ಯ, 5. ರಿಷಭ್ ಪಂತ್, 6. ದಿನೇಶ್ ಕಾರ್ತಿಕ್, 7. ಅಕ್ಸರ್ ಪಟೇಲ್, 8. ಭುವನೇಶ್ವರ್ ಕುಮಾರ್, 9. ಅವೇಶ್ ಖಾನ್. 10. ಅನ್ರಿಚ್ ನಾರ್ಕಿಯಾ, 11. ಯುಜ್ವೇಂದ್ರ ಚಾಹಲ್.
ನಾಯಕ: ರಿಷಬ್ ಪಂತ್, ಉಪನಾಯಕ: ದಿನೇಶ್ ಕಾರ್ತಿಕ್, ವಿಕೆಟ್ ಕೀಪರ್: ಕ್ವಿಂಟನ್ ಡಿ ಕಾಕ್.

ಡ್ರೀಮ್ ಟೀಮ್ 2
1. ಇಶಾನ್ ಕಿಶನ್, 2. ರುತುರಾಜ್ ಗಾಯಕ್ವಾಡ್, 3. ಹೆನ್ರಿಚ್ ಕ್ಲಾಸೆನ್, 4. ಹಾರ್ದಿಕ್ ಪಾಂಡ್ಯ, 5. ರಿಷಭ್ ಪಂತ್, 6. ದಿನೇಶ್ ಕಾರ್ತಿಕ್, 7. ತಬ್ರೈಜ್ ಶಮ್ಸಿ, 8. ಹರ್ಷಲ್ ಪಟೇಲ್, 9. ಅವೇಶ್ ಖಾನ್. 10. ಅನ್ರಿಚ್ ನಾರ್ಕಿಯಾ, 11. ಯುಜ್ವೇಂದ್ರ ಚಾಹಲ್.
ನಾಯಕ: ರಿಷಬ್ ಪಂತ್, ಉಪನಾಯಕ: ಇಶಾನ್ ಕಿಶನ್, ವಿಕೆಟ್ ಕೀಪರ್: ಹೆನ್ರಿಚ್ ಕ್ಲಾಸೆನ್.

ಸಂಭಾವ್ಯ ತಂಡಗಳು
ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್), ಟೆಂಬಾ ಬಾವುಮಾ ( ನಾಯಕ ), ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಡ್ವೈನ್ ಪ್ರಿಟೋರಿಯಸ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಅನ್ರಿಚ್ ನಾರ್ಕಿಯಾ, ತಬ್ರೈಜ್ ಶಮ್ಸಿ, ಲುಂಗಿ ಎನ್ಗಿಡಿ
ಭಾರತ: ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ ( ವಿಕೆಟ್ ಕೀಪರ್, ನಾಯಕ), ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಅವೇಶ್ ಖಾನ್, ಯುಜ್ವೇಂದ್ರ ಚಾಹಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications