IND vs SA ಅಂತಿಮ ಟಿ20: ಈ ಮೈಲಿಗಲ್ಲುಗಳ ಮೇಲೆ ಪಾಂಡ್ಯ, ಇಶಾನ್ ಕಿಶನ್ ಮತ್ತು ದಿನೇಶ್ ಕಾರ್ತಿಕ್ ಕಣ್ಣು

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರಿಕೆಟ್ ಕ್ರೀಡಾಂಗಣ ಇಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ನಡೆಯಲಿರುವ 5 ಪಂದ್ಯಗಳ ಟಿ ಟ್ವೆಂಟಿ ಸರಣಿಯ ಅಂತಿಮ ಪಂದ್ಯಕ್ಕೆ ಸಾಕ್ಷಿಯಾಗಲಿದೆ.
ಭಾರತ ಪ್ರವಾಸವನ್ನು ಕೈಗೊಂಡಿರುವ ದಕ್ಷಿಣ ಆಫ್ರಿಕಾ ಟೀಮ್ ಇಂಡಿಯಾ ವಿರುದ್ಧ ಈ ಟಿ ಟ್ವೆಂಟಿ ಸರಣಿಯಲ್ಲಿ ಕಣಕ್ಕಿಳಿದು ಮೊದಲೆರಡು ಪಂದ್ಯಗಳಲ್ಲಿ ತವರಿನಲ್ಲಿಯೇ ಟೀಮ್ ಇಂಡಿಯಾವನ್ನು ಸೋಲಿಸಿ ಸರಣಿಯಲ್ಲಿ 2-0 ಅಂತರದ ಮುನ್ನಡೆ ಕಾಯ್ದುಕೊಂಡಿತ್ತು. ಆದರೆ ನಂತರ ವಿಶಾಖಪಟ್ಟಣ ಮತ್ತು ರಾಜ್ ಕೋಟ್ ಕ್ರೀಡಾಂಗಣಗಳಲ್ಲಿ ನಡೆದ 3 ಮತ್ತು 4ನೇ ಪಂದ್ಯಗಳಲ್ಲಿ ಬೃಹತ್ ರನ್‌ಗಳ ಅಂತರದ ಗೆಲುವನ್ನು ದಾಖಲಿಸಿದ ಟೀಮ್ ಇಂಡಿಯಾ ಸರಣಿಯನ್ನು ಸಮಬಲ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಹೀಗೆ ಇತ್ತಂಡಗಳ ನಡುವಿನ ಟಿ ಟ್ವೆಂಟಿ ಸರಣಿಯ 4 ಪಂದ್ಯಗಳು ಮುಕ್ತಾಯವಾಗಿದ್ದು, ಎರಡೂ ತಂಡಗಳು ತಲಾ 2 ಪಂದ್ಯಗಳಲ್ಲಿ ಗೆದ್ದಿವೆ. ಹೀಗಾಗಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆಯಲಿರುವ ಅಂತಿಮ ಪಂದ್ಯ ಸರಣಿಯಲ್ಲಿ ಯಾವ ತಂಡ ವಿಜೇತ ಎಂಬುದನ್ನು ಬಿಚ್ಚಿಡಲಿದ್ದು, ಇದೊಂದು ರೀತಿಯ ಫೈನಲ್ ಪಂದ್ಯವಾಗಿ ಪರಿಣಮಿಸಿದೆ. ಇನ್ನು ತವರಿನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಇದುವರೆಗೂ ಯಾವುದೇ ಟಿ ಟ್ವೆಂಟಿ ಸರಣಿಯಲ್ಲಿಯೂ ಸೋಲಿಸಲು ಆಗದೇ ಇರುವ ಟೀಮ್ ಇಂಡಿಯಾಗೆ ಈ ಬಾರಿ ಹರಿಣಗಳನ್ನು ತವರಿನಲ್ಲಿ ಸೋಲಿಸಿ ನೂತನ ಇತಿಹಾಸ ಬರೆಯುವ ಅವಕಾಶ ಒದಗಿಬಂದಿದೆ. ಅತ್ತ ಟೀಮ್ ಇಂಡಿಯಾ ವಿರುದ್ಧ ಭಾರತದ ನೆಲದಲ್ಲಿ ಒಮ್ಮೆಯೂ ಟಿ ಟ್ವೆಂಟಿ ಸರಣಿ ಸೋಲದೇ ಇರುವ ದಕ್ಷಿಣ ಆಫ್ರಿಕಾ ತನ್ನ ಈ ವಿಶಿಷ್ಟ ದಾಖಲೆಯನ್ನು ಮುಂದುವರಿಸುವ ಯೋಚನೆಯಲ್ಲಿದೆ. ಹೀಗಾಗಿ 2 ತಂಡಗಳಿಗೂ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಈ ಮಹತ್ವದ ಪಂದ್ಯದಲ್ಲಿ ತಂಡಗಳ ಕೆಲ ಆಟಗಾರರು ವಿಶಿಷ್ಟ ಮೈಲಿಗಲ್ಲುಗಳನ್ನು ಮುಟ್ಟುವ ಸಾಧ್ಯತೆಗಳು ಕೂಡ ಇವೆ. ಆ ಮೈಲಿಗಲ್ಲುಗಳ ಪಟ್ಟಿ ಕೆಳಕಂಡಂತಿದೆ.

ಈ ಮೈಲಿಗಲ್ಲುಗಳ ಮೇಲೆ ಪಂತ್, ಇಶಾನ್ ಕಿಶನ್ ಮತ್ತು ದಿನೇಶ್ ಕಾರ್ತಿಕ್ ಕಣ್ಣು
• ರಿಷಭ್ ಪಂತ್ ಎಲ್ಲಾ ಮಾದರಿಯ ಕ್ರಿಕೆಟ್ ಸೇರಿ 99 ಸಿಕ್ಸರ್ ಬಾರಿಸಿದ್ದು, 100 ಸಿಕ್ಸರ್ ಮೈಲುಗಲ್ಲನ್ನು ಮುಟ್ಟಲು ಈ ಪಂದ್ಯದಲ್ಲಿ ಇನ್ನೂ 1 ಸಿಕ್ಸರ್ ಬಾರಿಸಬೇಕಾದ ಅಗತ್ಯವಿದೆ.
• ಇಶಾನ್ ಕಿಶನ್ ಅಂತರರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್‍ನಲ್ಲಿ 480 ರನ್ ಕಲೆ ಹಾಕಿದ್ದು, ಈ ಪಂದ್ಯದಲ್ಲಿ 20 ರನ್ ಗಳಿಸಿದರೆ 500 ರನ್ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
• ದಿನೇಶ್ ಕಾರ್ತಿಕ್ ಅಂತರರಾಷ್ಟ್ರೀಯ ಟಿ ಟ್ವೆಂಟಿ ಕ್ರಿಕೆಟ್‍ನಲ್ಲಿ 491 ರನ್ ಕಲೆ ಹಾಕಿದ್ದು, ಈ ಪಂದ್ಯದಲ್ಲಿ 9 ರನ್ ಕಲೆಹಾಕಿದರೆ 500 ರನ್ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.

ಈ ಮೈಲಿಗಲ್ಲುಗಳತ್ತ ಡಿ ಕಾಕ್ ಚಿತ್ತ
• 1863 ರನ್ ಗಳಿಸಿರುವ ಕ್ವಿಂಟನ್ ಡಿ ಕಾಕ್ 72 ರನ್ ಬಾರಿಸಿದರೆ 1934 ರನ್ ಗಳಿಸಿರುವ ಜೆಪಿ ಡುಮಿನಿ ಅವರನ್ನು ಹಿಂದಿಕ್ಕಿ ದಕ್ಷಿಣ ಆಫ್ರಿಕದ ಪರ ಟಿ ಟ್ವೆಂಟಿ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆ ಬರೆಯಲಿದ್ದಾರೆ.
• 194 ಬೌಂಡರಿಗಳನ್ನು ಕಲೆಹಾಕಿರುವ ಕ್ವಿಂಟನ್ ಡಿ ಕಾಕ್ ಈ ಪಂದ್ಯದಲ್ಲಿ 6 ಬೌಂಡರಿ ಬಾರಿಸಿದರೆ 200 ಟಿ ಟ್ವೆಂಟಿ ಬೌಂಡರಿಗಳನ್ನು ಬಾರಿಸಿದ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.

ಪಾಂಡ್ಯ ಮುಟ್ಟಬಹುದಾದ ಮೈಲಿಗಲ್ಲುಗಳು
• 44 ಬೌಂಡರಿಗಳನ್ನು ಬಾರಿಸಿರುವ ಹಾರ್ದಿಕ್ ಪಾಂಡ್ಯ ಈ ಪಂದ್ಯದಲ್ಲಿ 6 ಬೌಂಡರಿ ಬಾರಿಸಿದರೆ 50 ಬೌಂಡರಿಗಳನ್ನು ಬಾರಿಸಿದ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
• ಎಲ್ಲಾ ಮಾದರಿಯ ಕ್ರಿಕೆಟ್‍ನಲ್ಲಿ 2488 ರನ್ ಬಾರಿಸಿರುವ ಟೀಮ್ ಇಂಡಿಯಾ ಉಪನಾಯಕ ಹಾರ್ದಿಕ್ ಪಾಂಡ್ಯ ಈ ಪಂದ್ಯದಲ್ಲಿ 12 ರನ್ ಬಾರಿಸಿದರೆ 2500 ರನ್ ಬಾರಿಸಿದ ಮೈಲಿಗಲ್ಲನ್ನು ಮುಟ್ಟಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications