Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs SA: ಭಾರತ vs ದಕ್ಷಿಣ ಆಫ್ರಿಕಾ ಮೊದಲ ಟಿ20 ಪಂದ್ಯ ರದ್ದು!

ಭಾನುವಾರ, ಡಿಸೆಂಬರ್ 10ರಂದು ಡರ್ಬನ್‌ನಲ್ಲಿ ಭಾರೀ ಮಳೆಯಿಂದಾಗಿ ಪ್ರವಾಸಿ ಭಾರತ ಮತ್ತು ಆತಿಥೇಯ ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವು ಟಾಸ್ ಮಾಡಲು ಸಾಧ್ಯವಾಗದೆ ರದ್ದುಗೊಳಿಸಲಾಗಿದೆ.

ಮೊದಲ ಟಿ20 ಪಂದ್ಯ ರದ್ದಾದ ಕಾರಣ ಉಭಯ ತಂಡಗಳಿಗೆ ಮೂರು ಪಂದ್ಯಗಳ ಸರಣಿಯ ಉಳಿದೆರಡು ಪಂದ್ಯಗಳು ಮಹತ್ವ ಪಡೆದಿವೆ. ಎರಡನೇ ಟಿ20 ಪಂದ್ಯಕ್ಕಾಗಿ ಮಂಗಳವಾರ, ಡಿಸೆಂಬರ್ 12ರಂದು ಗ್ಕೆಬರ್ಹಾದ ಸೇಂಟ್ ಜಾರ್ಜ್ ಪಾರ್ಕ್‌ನಲ್ಲಿ ಮತ್ತೆ ಮುಖಾಮುಖಿಯಾಗಲಿವೆ.

IND vs SA: India vs South Africa First T20 Match Cancelled Due to Rain

ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ 4-1 ಅಂತರದ ಸ್ಮರಣೀಯ ಗೆಲುವಿನ ನಂತರ ಟೀಂ ಇಂಡಿಯಾ ಬಂದಿದೆ. ಇನ್ನು 2023ರ ಏಕದಿನ ವಿಶ್ವಕಪ್ ನಂತರ ದಕ್ಷಿಣ ಆಫ್ರಿಕಾ ತಂಡಕ್ಕೆ ಇದು ಮೊದಲ ಸರಣಿಯಾಗಿದೆ.

ವೆಸ್ಟ್ ಇಂಡೀಸ್ ಮತ್ತು ಯುಎಸ್‌ಎನಲ್ಲಿ ಪ್ರಾರಂಭವಾಗುವ ಐಸಿಸಿ 2024ರ ಟಿ20 ವಿಶ್ವಕಪ್‌ಗೂ ಮುನ್ನ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ತನ್ನ ತಯಾರಿಯನ್ನು ಆರಂಭಿಸಲು ಸಜ್ಜಾಗಿವೆ.

ಭಾರತ vs ದಕ್ಷಿಣ ಆಫ್ರಿಕಾ ಪೂರ್ಣ ತಂಡಗಳು

ಭಾರತ: ಸೂರ್ಯಕುಮಾರ್ ಯಾದವ್ (ನಾಯಕ), ರಿಂಕು ಸಿಂಗ್, ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ಶುಭ್ಮನ್ ಗಿಲ್, ತಿಲಕ್ ವರ್ಮಾ, ಯಶವಿ ಜೈಸ್ವಾಲ್, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಇಶಾನ್ ಕುಶನ್, ಜಿತೇಶ್ ಶರ್ಮಾ, ಅರ್ಶ್‌ದೀಪ್ ಸಿಂಗ್, ದೀಪಕ್ ಚಹಾರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ರವಿ ಬಿಷ್ಣೋಯ್.

ದಕ್ಷಿಣ ಆಫ್ರಿಕಾ: ಡೇವಿಡ್ ಮಿಲ್ಲರ್, ರೀಜಾ ಹೆಂಡ್ರಿಕ್ಸ್, ಟ್ರಿಸ್ಟಾನ್ ಸ್ಟಬ್ಸ್, ಐಡೆನ್ ಮಾರ್ಕ್ರಾಮ್, ಅಡ್ನೈಲ್ ಫೆಹ್ಲುಕ್ವಾಯೊ, ಮಾರ್ಕೊ ಜಾನ್ಸೆನ್, ಡೊನೊವನ್ ಫೆರೆರಾ, ಹೆನ್ರಿಚ್ ಕ್ಲಾಸೆನ್, ಮ್ಯಾಥ್ಯೂ ಬ್ರೀಟ್ಜ್ಕೆ, ಬ್ಯೂರಾನ್ ಹೆಂಡ್ರಿಕ್ಸ್, ಜೆರಾಲ್ಡ್ ಕೋಟ್ಜಿ, ಕೇಶವ್ ಮಹಾರಾಜ್, ಲಿಜಾಡ್ ವಿಲಿಯಮ್ಸ್, ಲುಂಗಿ ಎನ್‌ಗಿಡಿ, ನಾಂದ್ರೆ ಬರ್ಗರ್, ಒಟ್ನಿಯೆಲ್ ಬಾರ್ಟ್ಮನ್, ತಬ್ರೈಜ್ ಶಮ್ಸಿ.

Story first published: Sunday, December 10, 2023, 22:26 [IST]
Other articles published on Dec 10, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+