ಭಾರತ vs ದ. ಆಫ್ರಿಕಾ: ಸ್ಪಿನ್ ದಾಳಿಗೆ ಬೆದರಿದ ಬವುಬಾ ಪಡೆ: ವೈಜಾಗ್‌ನಲ್ಲಿ ವಿಜಯ ಪತಾಕೆ ಹಾರಿಸಿದ ಭಾರತ

ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಟಿ20 ಸರಣಿಯಲ್ಲಿ ಭಾರತ ಮೊದಲ ಗೆಲುವು ದಾಖಲಿಸಿದೆ. ಈ ಗೆಲುವಿನೊಂದಿಗೆ ರಿಷಬ್ ಪಂತ್ ಪಡೆ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಜೀವಂತವಾಗುಳಿದಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿಯೂ ಮಿಂಚಿದ ಭಾರತ ತಂಡ 48 ರನ್‌ಗಳ ಗೆಲುವು ಸಾಧಿಸಿ ಸಂಭ್ರಮಿಸಿದೆ.
ಸರಣಿಯ ಮೊದಲ ಎರಡು ಪಂದ್ಯಗಳಲ್ಲಿಯೂ ಭಾರತದ ಬೌಲಿಂಗ್ ವಿಭಾಗ ನಿರಾಸೆ ಮೂಡಿಸಿತ್ತು. ಆರಂಬದಲ್ಲಿ ಸಾಧಿಸಿದ ಯಶಸ್ಸನ್ನು ಮುಂದುವರಿಸಲು ವಿಫಲವಾಗಿತ್ತು. ಆದರೆ ವಿಶಾಕಪಟ್ಟಣಂನಲ್ಲಿ ಬೌಲಿಂಗ್ ವಿಭಾಗ ತನ್ನ ಜವಾಬ್ಧಾರಿಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಯಶಸ್ವಿಯಾಗಿದೆ. ದಕ್ಷಿಣ ಆಫ್ರಿಕಾ ತಂಡವನ್ನು ಆಲೌಟ್ ಮಾಡಿ ತಂಡಕ್ಕೆ ಗೆಲುವನ್ನು ತಂದಿತ್ತಿದೆ.

180 ರನ್‌ಗಳ ಗುರಿ ನೀಡಿದ ಭಾರತ
ಈ ಪಂದ್ಯದಲ್ಲಿಯೂ ಭಾರತದ ನಾಯಕ ರಿಷಭ್ ಪಂತ್ ಟಾಸ್ ಸೋತರು. ಹೀಗಾಗಿ ಮೊದಲಿಗೆ ಬ್ಯಾಟಿಂಗ್ ನಡೆಸುವ ಸವಾಲು ಭಾರತಕ್ಕೆ ಮತ್ತೆ ದೊರೆಯಿತು. ಈ ಪಂದ್ಯದಲ್ಲಿ ಭಾರತ ತಂಡ ಅದ್ಭುತ ಆರಂಭವನ್ನು ಪಡೆಯುವಲಲಿ ಯಶಸ್ವಿಯಾಯಿತು. ಮೊದಲ ಎರಡು ಪಂದ್ಯಗಳಲ್ಲಿ ವಿಫಲವಾದರೂ ಋತುರಾಜ್ ಗಾಯಕ್ವಾಡ್‌ಗೆ ಮತ್ತೊಂದು ಅವಕಾಶವನ್ನು ನೀಡಲಾಗಿತ್ತು. ಈ ಅವಕಾಶವನ್ನು ಋತು ಎರಡೂ ಕೈಗಳಿಂದ ಬಾಚಿಕೊಂಡು ಮಿಂಚಿದ್ದಾರೆ. ಮನಮೋಹಕ ಪ್ರದರ್ಶನ ನೀಡಿದ ಗಾಯಕ್ವಾಡ್ ಭರ್ಜರಿ 57 ರನ್‌ಗಳನ್ನು ಸಿಡಿಸಿದರು. ಮತ್ತೋರ್ವ ಆರಂಭಿಕ ಆಟಗಾರ ಇಶಾನ್ ಕಿಶನ್ ಕೂಡ ಅರ್ಧ ಶತಕ ಸಿಡಿಸಿದ್ದಾರೆ.

ತಿರುಗಿ ಬಿದ್ದ ಆಫ್ರಿಕಾ ಬೌಲರ್‌ಗಳು
ಈ ಜೋಡಿ ಮೊದಲ ವಿಕೆಟ್‌ಗೆ 10 ಓವರ್‌ಗಳಲ್ಲಿ 97 ರನ್‌ಗಳ ಜೊತೆಯಾಟವನ್ನು ನೀಡಿತು. ಈ ಜೋಡಿ ಬೇರ್ಪಟ್ಟ ಬಳಿಕ ಭಾರತ ತಂಡ ಬ್ಯಾಟಿಂಗ್‌ನಲ್ಲಿ ಹಿನ್ನಡೆ ಅನುಭವಿಸಿತು. ನಂತರ ಬಂದ ಆಟಗಾರರಿಂದ ಉತ್ತಮ ಪ್ರದರ್ಶನ ಬಾರಲಿಲ್ಲ. ಶ್ರೇಯಸ್ ಐಯ್ಯರ್ 14 ರನ್ ಬಾರಿಸಿ ಔಟಾದರೆ ಹಾರ್ದಿಕ್ ಪಾಂಡ್ಯ 31 ರನ್‌ಗಳ ಕೊಡುಗೆ ನೀಡಿದರು. ರಿಷಬ್ ಪಂತ್ ಕೇವಲ 6 ರನ್‌ಗಳಿಸಿ ವಿಕೆಟ್ ಕಳೆದುಕೊಂಡರೆ ದಿನೇಶ್ ಕಾರ್ತಿಕ್ ಅವರಿಂದಲೂ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ದ್ವಿತಿಯಾರ್ಧದಲ್ಲಿ ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿದ ದಕ್ಷಿಣ ಆಫ್ರಿಕಾ ಬೌಲರ್‌ಗಳಿ ಭಾರತ ತಂಡವನ್ನು 179 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು.

ನಡೆಯಲಿಲ್ಲ ಹರಿಣ ಪಡೆಯ ದಾಂಡಿಗರ ಆಟ
ಇನ್ನು ಈ ಸರಣಿಯಲ್ಲಿ ಮೊದಲ ಎರಡು ಪಂದ್ಯಗಳಲ್ಲಿಯೂ ಅದ್ಭುತವಾದ ಪ್ರದರ್ಶನ ನೀಡಿ ಮಿಂಚುಹರಿಸಿದ ದಕ್ಷಿಣ ಆಫ್ರಿಕಾ ಬ್ಯಾಟರ್‌ಗಳು ಭಾರತಕ್ಕೆ ಸತತ ಎರಡು ಸೋಲಿನ ಕಹಿ ನೀಡಿದ್ದರು. ಆದರೆ ಈ ಪ್ರದರ್ಶನವನ್ನು ಮೂರನೇ ಪಂದ್ಯದಲ್ಲಿ ಪ್ರದರ್ಶಿಸಲು ಸಾಧ್ಯವಾಗಲಿಲ್ಲ. ಭಾರತದ ಬೌಲರ್‌ಗಳ ಬಿಗು ದಾಳಿಯಿಂದಾಗಿ ಯಾವ ಆಟಗಾರ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲೊ ನೆಲೆಯೂರಲು ಸಾಧ್ಯವಾಗಲಿಲ್ಲ. ಉತ್ತಮ ಜೊತೆಯಾಟ ಬಾರದಂತೆ ತಡೆಯಲು ಭಾರತೀಯ ಬೌಲರ್‌ಗಳು ಯಶಸ್ವಿಯಾದರು. ಹೆನ್ರಿಕ್ ಕ್ಲಾಸನ್ ಅವರ 29 ರನ್ ತಂಡದ ಪರವಾಗಿ ದಾಖಲಾದ ಹೆಚ್ಚಿನ ಸ್ಕೋರ್ ಎನಿಸಿಕೊಂಡಿದೆ.

ಮೋಡಿ ಮಾಡಿದ ಚಾಹಲ್- ಹರ್ಷಲ್
ಇನ್ನು ಭಾರತದ ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್‌ಗಳು ಪಿಚ್‌ನ ಲಾಭವನ್ನು ಅದ್ಭುತವಾಗಿ ಬಳಸಿಕೊಂಡರು. ಇನ್ನು ವೇಗಿ ಹರ್ಷಲ್ ಪಟೇಲ್ ಕೂಡ ಈ ಪಂದ್ಯದಲ್ಲಿ ಮಿಂಚಿದ್ದಾರೆ. ಹರ್ಷಲ್ ಪಟೇಲ್ ನಾಲ್ಕು ವಿಕೆಟ್ ಕಬಳಿಸಿದರೆ ಯುಜುವೇಂದ್ರ ಚಾಹಲ್ ಮೂರು ವಿಕೆಟ್ ಸಂಪಾದಿಸಿದರು. ಅಕ್ಷರ್ ಹಾಗೂ ಭುವನೇಶ್ವರ್ ಕುಮಾರ್ ತಲಾ ಒಂದು ವಿಕೆಟ್ ಪಡೆದರು.
ಆಡುವ ಬಳಗ ಹೀಗಿದೆ:
ಭಾರತ ತಂಡ: ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ & ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಾಹಲ್, ಅವೇಶ್ ಖಾನ್
ಬೆಂಚ್: ರವಿ ಬಿಷ್ಣೋಯ್, ದೀಪಕ್ ಹೂಡಾ, ವೆಂಕಟೇಶ್ ಅಯ್ಯರ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್
ದಕ್ಷಿಣ ಆಫ್ರಿಕಾ: ಟೆಂಬಾ ಬವುಮಾ (ನಾಯಕ), ರೀಜಾ ಹೆಂಡ್ರಿಕ್ಸ್, ಡ್ವೈನ್ ಪ್ರಿಟೋರಿಯಸ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಹೆನ್ರಿಕ್ ಕ್ಲಾಸೆನ್ (ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ವೇಯ್ನ್ ಪಾರ್ನೆಲ್, ಕಗಿಸೊ ರಬಾಡಾ, ಕೇಶವ್ ಮಹಾರಾಜ್, ತಬ್ರೈಜ್ ಶಮ್ಸಿ, ಅನ್ರಿಚ್ ನಾರ್ಕಿಯಾ
ಬೆಂಚ್: ಟ್ರಿಸ್ಟಾನ್ ಸ್ಟಬ್ಸ್, ಲುಂಗಿ ಎನ್ಗಿಡಿ, ಮಾರ್ಕೊ ಜಾನ್ಸೆನ್, ಕ್ವಿಂಟನ್ ಡಿ ಕಾಕ್, ಐಡೆನ್ ಮಾರ್ಕ್ರಾಮ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications