ಭಾರತ vs ದ. ಆಫ್ರಿಕಾ: ಮಹತ್ವದ ಮೈಲಿಗಲ್ಲು ಸಾಧಿಸಲು ಸಜ್ಜಾದ ಇಶಾನ್ ಕಿಶನ್

ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ನಾಲ್ಕನೇ ಟಿ20 ಪಂದ್ಯ ರಾಜ್‌ಕೋಟ್‌ನಲ್ಲಿ ಆರಂಭವಾಗಲು ಕ್ಷಣಗಣನೆ ಶುರುವಾಗಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಆರಂಬಿಕ ಆಟಗಾರ ಇಶಾನ್ ಕಿಶನ್ ಮಹತ್ವದ ಮೈಲಿಗಲ್ಲೊಂದನ್ನು ಸಾಧಿಸುವ ಅವಕಾಶ ಹೊಂದಿದ್ದಾರೆ. ದಕ್ಷಿಣ ಆಪ್ರಿಕಾ ವಿರುದ್ಧ ಟೂರ್ನಿಯುದ್ದಕ್ಕೂ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಇಶಾನ್ ಕಿಶನ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 500 ರನ್‌ಗಳನ್ನು ಗಳಿಸುವ ಸನಿಹದಲ್ಲಿದ್ದಾರೆ.
ದಕ್ಷಿಣ ಆಪ್ರಿಕಾ ವಿರುದ್ಧದ ನಾಲ್ಕನೇ ಟಿ20 ಪಂದ್ಯದಲ್ಲಿ ಇಶಾನ್ ಕಿಶನ್ 47 ರನ್‌ಗಳಿಸಿದರೆ ಈ ಮೈಲಿಗಲ್ಲನ್ನು ಸಾಧಿಸಲಿದ್ದಾರೆ. ಇದು ಸಾಧ್ಯವಾದರೆ ವೇಗವಾಗಿ 500 ರನ್‌ಗಳ ಮೈಲಿಗಲ್ಲು ದಾಟಿದ ಭಾರತದ ಎರಡನೇ ಆಟಗಾರ ಎನಿಸಿಕೊಳ್ಳಲಿದ್ದಾರೆ ಯುವ ಸ್ಪೋಟಕ ಆರಂಭಿಕ ಆಟಗಾರ.

ಮೈಲಿಗಲ್ಲಿನ ಮೇಲೆ ಇಶಾನ್ ಕಿಶನ್ ಕಣ್ಣು
ಇಶಾನ್ ಕಿಶನ್ ಸದ್ಯ 13 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ 37.75 ಸರಾಸರಿಯಲ್ಲಿ 453 ರನ್‌ಗಳನ್ನು ಗಳಿಸಿದ್ದಾರೆ. 132.45ರ ಸ್ಟ್ರೈಕ್ ರೇಟ್‌ನಲ್ಲಿ ಅವರು ನಾಲ್ಕು ಅರ್ಧಶತಕಗಳೊಂದಿಗೆ ಮಹತ್ವದ ಮೈಲಿಗಲ್ಲು ಸಾಧಿಸುವ ಅವಕಾಶ ಹೊಂದಿದ್ದಾರೆ. ಗಾಯದ ಸಮಸ್ಯೆಯಿಂದಾಗಿ ಸರಣಿಯಿಂದ ಹೊರಗುಳಿದಿರುವ ಕೆಎಲ್ ರಾಹುಲ್ ಟಿ20ಯಲ್ಲಿ ಭಾರತದ ಪರವಾಗಿ ಅತಿವೇಗದ 500 ರನ್‌ಗಳನ್ನು ಗಳಿಸಿದ ದಾಖಲೆ ಹೊಂದಿದ್ದಾರೆ.
ಜನಾಂಗೀಯ ನಿಂದನೆ: ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಸೇರಿ 4 ಆಟಗಾರರ ಮೇಲೆ ಆರೋಪ

ಸರಣಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿರುವ ಕಿಶನ್
ಈ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಇಶಾನ್ ಕಿಶನ್ ಪ್ರಸ್ತುತ ಸರಣಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಬ್ಯಾಟರ್ ಆಗಿದ್ದಾರೆ. ಮೂರು ಪಂದ್ಯಗಳಲ್ಲಿ 54.66 ಸರಾಸರಿಯಲ್ಲಿ 164 ರನ್‌ಗಳಿಸಿರುವ ಇಶಾನ್ ಕಿಶನ್ 157.69ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ್ದಾರೆ. ಎರಡು ಅರ್ಧ ಶತಕಗಳನ್ನು ಈ ಸರಣಿಯಲ್ಲಿ ಸಿಡಿಸಿದ್ದಾರೆ ಕಿಶನ್. ದೆಹಲಿಯ ಅರುಣ್ ಜೇಟ್ಲಿ ಕ್ರಿಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಇಶಾನ್ ಕಿಶನ್ 76 ರನ್ ಸಿಡಿಸಿದ್ದರೆ ವೈಜಾಗ್‌ನಲ್ಲಿ ನಡೆದ ಮೂರನೇ ಪಂದ್ಯದಲ್ಲಿಯೂ ಅದ್ಭುತ ಅರ್ಧ ಶತಕವನ್ನು ಸಿಡಿಸಿದ್ದಾರೆ. ಮೂರನೇ ಪಂದ್ಯದಲ್ಲಿ ಭಾರತ 48 ರನ್‌ಗಳ ಅಂತರದಿಂದ ಗೆಲುವು ಸಾಧಿಸಿತ್ತು.

ಸಮಬಲ ಸಾಧಿಸುವತ್ತ ಭಾರತದ ಚಿತ್ತ
ಮೂರನೇ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸುವ ಮೂಲಕ ಈ ಸರಣಿಯಲ್ಲಿ ಜೀವಂತವಾಗುಳಿದಿದೆ. ಈ ಮೂಲಕ ನಾಯಕನಾಗಿ ರಿಷಭ್ ಪಂತ್ ಮೊದಲ ಪಂದ್ಯವನ್ನು ಗೆದ್ದುಕೊಂಡಂತಾಗಿದೆ. ರಾಜ್‌ಕೋಟ್‌ನಲ್ಲಿ ನಾಲ್ಕನೇ ಪಂದ್ಯ ನಡೆಯಲಿದ್ದು ಈ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದರೆ ಸರಣಿಯಲ್ಲಿ ಸಮಬಲ ಸಾಧಿಸಿದಂತಾಗುತ್ತದೆ.
ಉಮ್ರಾನ್ ಮಲಿಕ್ ಕುರಿತು ಹೇಳಿಕೆ ನೀಡಿದ್ದ ಹರ್ಷಲ್ ಪಟೇಲ್: 'ಆತನ ಮೇಲೆ ನಿನಗೆ ಹೊಟ್ಟೆಕಿಚ್ಚು' ಎಂದು ಟ್ರೋಲ್

ಸ್ಕ್ವಾಡ್‌ಗಳು ಹೀಗಿದೆ
ಭಾರತ: ಋತುರಾಜ್ ಗಾಯಕ್‌ವಾಡ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ & ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಾಹಲ್, ಅವೇಶ್ ಖಾನ್, ರವಿ ಬಿಷ್ಣೋಯ್, ದೀಪಕ್ ಹೂಡಾ, ವೆಂಕಟೇಶ್ ಸಿಂಗ್, ಅರ್ಶ್‌ದೀಪ್ ಸಿಂಗ್, ಉಮ್ರಾನ್ ಮಲಿಕ್
ದಕ್ಷಿಣ ಆಫ್ರಿಕಾ: ಟೆಂಬಾ ಬವುಮಾ (ನಾಯಕ), ರೀಜಾ ಹೆಂಡ್ರಿಕ್ಸ್, ಡ್ವೈನ್ ಪ್ರಿಟೋರಿಯಸ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಹೆನ್ರಿಕ್ ಕ್ಲಾಸೆನ್ (ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ವೇಯ್ನ್ ಪಾರ್ನೆಲ್, ಕಗಿಸೊ ರಬಾಡ, ಕೇಶವ್ ಮಹಾರಾಜ್, ತಬ್ರೈಜ್ ಶಮ್ಸಿ, ಅನ್ರಿಚ್ ನಾರ್ಟ್ಜೆ, ಟ್ರಿಸ್ಟಾನ್ ಸ್ಟಬ್ಸ್, ಲುಂಗಿ ಎನ್‌ಗಿಡಿ, ಕ್ವಿಂಟನ್ ಡಿ ಕಾಕ್, ಐಡೆನ್ ಮಾರ್ಕ್ರಾಮ್ .
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications