ಭಾನುವಾರ, ನವೆಂಬರ್ 5ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ 2023ರ ವಿಶ್ವಕಪ್ ಪಂದ್ಯದಲ್ಲಿ ಭಾರತ ತಂಡದ ವಿರುದ್ಧ ದೋಷಪೂರಿತ ಆರಂಭದೊಂದಿಗೆ ದಕ್ಷಿಣ ಆಫ್ರಿಕಾ ಬೌಲರ್ ಮಾರ್ಕೊ ಜಾನ್ಸೆನ್ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ.
ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ವಿರುದ್ಧದ ತಮ್ಮ ಮೊದಲ ಓವರ್‌ನಲ್ಲಿ ಮಾರ್ಕೊ ಜಾನ್ಸೆನ್ ಸರಿಯಾಗಿ ತನ್ನ ಲೈನ್ ಅಂಡ್ ಲೆಂಗ್ತ್‌ಗಳಲ್ಲಿ ಬಾಲ್ ಎಸೆಯಲು ಹೆಣಗಾಡಿದರು.

ಮಾರ್ಕೊ ಜಾನ್ಸೆನ್ ತಂಡದ ಎರಡನೇ ಹಾಗೂ ತಮ್ಮ ಮೊದಲ ಓವರ್ ಪೂರ್ಣಗೊಳಿಸಲು 10 ಎಸೆತಗಳನ್ನು ಬೌಲ್ ಮಾಡಿದರು. ಏಕೆಂದರೆ ಅವರು 6 ಕಾನೂನುಬದ್ಧ ಎಸೆತಗಳನ್ನು ಬೌಲ್ ಮಾಡಲು ಹೆಣಗಾಡಿದರು. ಅವರು 5 ವೈಡ್ ರನ್‌ಗಳನ್ನು ಒಳಗೊಂಡ 4 ವೈಡ್ ಎಸೆತಗಳನ್ನು ಬೌಲ್ ಮಾಡಿದರು.
ಮಾರ್ಕೊ ಜಾನ್ಸೆನ್ ಎರಡೂ ರೀತಿಯಲ್ಲಿ ಸ್ವಿಂಗ್ ಮಾಡಲು ಪ್ರಯತ್ನಿಸಿದರು. ಆದರೆ ಅವರು ತಮ್ಮ ಮಾರ್ಕ್‌ನಿಂದ ದೂರವಿದ್ದರು.
ರೋಹಿತ್ ಶರ್ಮಾಗೆ ಗುಡ್ ಲೆಂಗ್ತ್ ಬೌಲ್ ಮಾಡುವ ಪ್ರಯತ್ನದಲ್ಲಿ, ಮಾರ್ಕೊ ಜಾನ್ಸೆನ್ ಅದನ್ನು ಹೊಡೆಯುವುದನ್ನು ತಪ್ಪಿಸಲು ಯತ್ನಿಸಿದರು. ಅವರ ಎರಡನೇ ಎಸೆತ ವೈಡ್ ಆಗಿತ್ತು ಮತ್ತು ಅವರ ಮೂರನೇ ಎಸೆತವು ವೈಡ್ ಆಗಿ ಐದು ಇತರೆ ರನ್‌ಗಳಿಗೆ ಕಾರಣವಾಯಿತು.

ತುಂಬಾ ಪಿಚ್ ಮಾಡಿದ ನಂತರ ಚೆಂಡು ಸ್ವಿಂಗ್ ಆಗಿದ್ದರಿಂದ, ಕ್ವಿಂಟನ್ ಡಿ ಕಾಕ್‌ಗೆ ಅದನ್ನು ತಡೆಯಲು ಅವಕಾಶವಿಲ್ಲ. ನಂತರದ ಎಸೆತವು ವೈಡ್‌ನಲ್ಲಿ ಆಫ್‌ಸೈಡ್ ಆಗಿತ್ತು. ಏಕೆಂದರೆ ಮಾರ್ಕೊ ಜಾನ್ಸೆನ್ ತನ್ನ ಲೈನ್ ಅನ್ನು ಮೀರಿಸಿದರು.
ಜಾನ್ಸೆನ್‌ನ ಎಸೆತವು ಕ್ವಿಂಟನ್ ಡಿ ಕಾಕ್‌ಗೂ ಹಿಡಿಯಲು ಸಾಧ್ಯವಾಗದೆ, ಮೊದಲ ಸ್ಲಿಪ್‌ನಲ್ಲಿದ್ದ ಐಡೆನ್ ಮಾರ್ಕ್ರಾಮ್ ತಡೆಯಬೇಕಾಯಿತು. ಈ ಮೂಲಕ ಆ ಎಸೆತವೂ ಬೌಂಡರಿಗೆ ಹೋಗದಂತೆ ನಿಲ್ಲಿಸಿದರು.
ಮಾರ್ಕೊ ಜಾನ್ಸೆನ್ ಒಟ್ಟು 4 ವೈಡ್ ಎಸೆತಗಳನ್ನು ಬೌಲ್ ಮಾಡಿದರು ಹಾಗೂ ತಮ್ಮ ಮೊದಲ ಓವರ್‌ನಲ್ಲಿ 17 ರನ್‌ಗಳನ್ನು ಬಿಟ್ಟುಕೊಟ್ಟರು. ಏಕೆಂದರೆ 2023ರ ವಿಶ್ವಕಪ್‌ನ ಹೈ-ವೋಲ್ಟೇಜ್ ಪಂದ್ಯದಲ್ಲಿ ಸ್ವಲ್ಪ ಆಶ್ಚರ್ಯಚಕಿತರಾದಂತೆ ಕಂಡುಬಂದರು. ಇದು ಏಕದಿನ ವಿಶ್ವಕಪ್ ಪಂದ್ಯವೊಂದರಲ್ಲಿ ದಕ್ಷಿಣ ಆಫ್ರಿಕಾದ ಬೌಲರ್ ಬೌಲ್ ಮಾಡಿದ ಅತಿ ಉದ್ದದ ಓವರ್ ಆಗಿದೆ.

ಮಾರ್ಕೊ ಜಾನ್ಸೆನ್ ಅವರು ತಮ್ಮ ಮೊದಲ 7 ಪಂದ್ಯಗಳಲ್ಲಿ 16 ವಿಕೆಟ್‌ಗಳನ್ನು ಕಬಳಿಸುವ ಮೂಲಕ 2023ರ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ.
ಜಾನ್ಸೆನ್ ದಕ್ಷಿಣ ಆಫ್ರಿಕಾದ ಪವರ್‌ಪ್ಲೇಯಲ್ಲಿ ಸಮೃದ್ಧ ವಿಕೆಟ್ ಟೇಕರ್ ಆಗಿದ್ದಾರೆ. 7 ಪಂದ್ಯಗಳ ಮೊದಲ 10 ಓವರ್‌ಗಳ ಪವರ್ ಪ್ಲೇನಲ್ಲಿ 12 ವಿಕೆಟ್‌ಗಳನ್ನು ಪಡೆದರು.
ಆದರೆ,ಮ ಭಾರತದ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಅವರು ದಕ್ಷಿಣ ಆಫ್ರಿಕಾ ವೇಗದ ಬೌಲರ್‌ಗಳ ಮೇಲೆ ಸವಾರಿ ಮಾಡಿದರು. ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಒತ್ತಡವನ್ನು ಹೇರಿದರು.
ರೋಹಿತ್ ಶರ್ಮಾ ಅವರು ಕೇವಲ 24 ಎಸೆತಗಳಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ಮೂಲಕ 40 ರನ್ ಗಳಿಸಿ ಭಾರತಕ್ಕೆ ಉತ್ತಮ ಆರಂಭ ನೀಡಿ ಔಟಾದರು.
ಇನ್ನು ತಮ್ಮ 35ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ವಿರಾಟ್ ಕೊಹ್ಲಿ, ರೋಹಿತ್ ನಿರ್ಗಮನದ ನಂತರ ಈಡನ್ ಪ್ರೇಕ್ಷಕರಿಂದ ಜೋರಾದ ಹರ್ಷೋದ್ಗಾರದೊಂದಿಗೆ ಕ್ರೀಸ್‌ಗೆ ಬಂದರು ಮತ್ತು ಭರ್ಜರಿ ಅರ್ಧಶತಕ ಬಾರಿಸಿದರು.
ಭಾರತ ಮತ್ತು ದಕ್ಷಿಣ ಆಫ್ರಿಕಾ ಎರಡೂ ತಂಡಗಳು ವಿಶ್ವಕಪ್‌ನ ಸೆಮಿಫೈನಲ್‌ಗೆ ಅರ್ಹತೆ ಪಡೆದಿವೆ ಮತ್ತು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕಾಗಿ ಹೋರಾಡುತ್ತಿವೆ.