IND Vs SA ODI: ಗಾಯದಿಂದ ಚೇತರಿಸಿಕೊಂಡ ಮೇಲೆ ಲಯ ಕಂಡುಕೊಂಡಿದ್ದೇನೆ ಎಂದ ಕುಲ್ದೀಪ್ ಯಾದವ್

ಟೀಂ ಇಂಡಿಯಾದ ಎಡಗೈ ಸ್ಪಿನ್ನರ್ ಕುಲ್‌ದೀಪ್ ಯಾದವ್ ಕಳೆದ ವರ್ಷ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಂಡಿರುವ ಅವರು ಆಟಕ್ಕೆ ಮರಳಿದ ನಂತರ ಬೌಲಿಂಗ್‌ನಲ್ಲಿ ಉತ್ತಮ ಲಯ ಕಂಡುಕೊಂಡಿರುವುದಾಗಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಯೋಜನೆಗೆ ತಕ್ಕಂತೆ ಬೌಲಿಂಗ್ ಮಾಡುವುದರ ಬಗ್ಗೆ ಗಮನ ಹರಿಸುತ್ತೇನೆ ಎಂದು ಕುಲ್ದೀಪ್ ಯಾದವ್ ಹೇಳಿದ್ದಾರೆ.
ಕಳೆದೆರಡು ಋತುಗಳಲ್ಲಿ ಭಾರತದ ವೈಟ್ ಬಾಲ್ ತಂಡದಲ್ಲಿ ಮತ್ತು ಹೊರಗಿರುವ ಕುಲದೀಪ್, ಲಕ್ನೋದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ 8 ಓವರ್ ಗಳಲ್ಲಿ 39 ರನ್ ನೀಡಿ ಒಂದು ವಿಕೆಟ್ ಪಡೆದರು. ಐಡೆನ್ ಮಾರ್ಕ್ರಾಮ್ ಕ್ಲೀನ್ ಬೌಲ್ಡ್ ಮಾಡಿದ ಕುಲ್‌ದೀಪ್ ಯಾದವ್ ತಮ್ಮ ಹಳೆಯ ದಿನಗಳನ್ನು ನೆನಪಿಸಿದ್ದಾರೆ.
27 ವರ್ಷದ ಕುಲ್ದೀಪ್ ಯಾದವ್ ಭಾನುವಾರ (ಅಕ್ಟೋಬರ್ 9) ರಾಂಚಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯಕ್ಕಾಗಿ ಟೀಮ್ ಇಂಡಿಯಾದ ಆಡುವ ಬಳಗದ ಭಾಗವಾಗಿದ್ದಾರೆ. ಪಂದ್ಯಕ್ಕೂ ಮುನ್ನ ಮಾತನಾಡಿದ ಕುಲದೀಪ್ ತಮ್ಮ ಬೌಲಿಂಗ್ ಬಗ್ಗೆ ಮಾತನಾಡಿದರು.

ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದೇನೆ
"ನಾನು ಚೆನ್ನಾಗಿ ಬೌಲಿಂಗ್ ಮಾಡುತ್ತಿದ್ದೇನೆ. ನಾನು ಗಾಯದಿಂದ ವಾಪಸಾಗಿರುವುದರಿಂದ ಬೌಲಿಂಗ್‌ನಲ್ಲಿ ಲಯ ಚೆನ್ನಾಗಿದೆ. ನಾನು ನನ್ನ ಬೌಲಿಂಗ್ ಅನ್ನು ಆನಂದಿಸುತ್ತಿದ್ದೇನೆ ಮತ್ತು ನನ್ನ ಯೋಜನೆಗಳ ಮೇಲೆ ಕೇಂದ್ರೀಕರಿಸುತ್ತಿದ್ದೇನೆ. ಕಳೆದ ಪಂದ್ಯದಲ್ಲಿ ವಿಕೆಟ್‌ನಲ್ಲಿ ತಿರುವು ಇತ್ತು. ನಾನು ಅದನ್ನೇ ಬಳಸಿಕೊಂಡೆ ಮತ್ತು ಆ ಪಿಚ್‌ನಲ್ಲಿ ಚೆಂಡನ್ನು ತಿರುಗಿಸುವುದರ ಮೇಲೆ ಕೇಂದ್ರೀಕರಿಸಿದೆ." ಎಂದು ಅವರು ಹೇಳಿದ್ದಾರೆ.
ಎಡಗೈ ಸ್ಪಿನ್ನರ್ ವೆಸ್ಟ್ ಇಂಡೀಸ್ ಮತ್ತು ಜಿಂಬಾಬ್ವೆಯ ಸೀಮಿತ ಓವರ್‌ಗಳ ಪ್ರವಾಸಗಳಲ್ಲಿ ಭಾರತ ತಂಡದ ಭಾಗವಾಗಿದ್ದರು. ಆಗಸ್ಟ್‌ನಲ್ಲಿ ಲಾಡರ್‌ಹಿಲ್‌ನಲ್ಲಿ ವಿಂಡೀಸ್ ವಿರುದ್ಧದ ಐದನೇ ಟಿ20 ಪಂದ್ಯದಲ್ಲಿ ಅವರು 12 ರನ್ ನೀಡಿ 3 ವಿಕೆಟ್ ಪಡೆದರು.
ಭಾರತದ ಈತ ಉತ್ತಮ ಬ್ಯಾಟರ್; ನಂ.1 ಟಿ20 ರ್‍ಯಾಂಕಿಂಗ್ ಸ್ಪರ್ಧಿ ಬಗ್ಗೆ ಮೊಹಮ್ಮದ್ ರಿಜ್ವಾನ್ ಮಾತು

ಬೌಲಿಂಗ್ ವೇಗದಲ್ಲಿ ಸುಧಾರಣೆ
ಕುಲ್‌ದೀಪ್ ನಿಧಾನಗತಿಯಲ್ಲಿ ಬೌಲಿಂಗ್ ಮಾಡುತ್ತಾರೆ, ಚೆಂಡು ಗಾಳಿಯಲ್ಲಿ ತುಂಬಾ ಹೊತ್ತು ಇರುವುದರಿಂದ ಬ್ಯಾಟರ್ ದಾಳಿ ಮಾಡಲು ಸಾಕಷ್ಟು ಸಮಯ ಇರುತ್ತದೆ ಎನ್ನುವ ಟೀಕೆ ಅವರ ಮೇಲೆ ಮೊದಲಿನಿಂದಲೂ ಕೇಳಿ ಬರುತ್ತಿತ್ತು.
ಆದರೆ, ಎಡಗೈ ಸ್ಪಿನ್ನರ್ ಗಾಯದಿಂದ ವಾಪಸಾದ ಬಳಿಕ ಅವರ ವೇಗದಲ್ಲಿ ಸುಧಾರಣೆಯಾಗಿದೆ. ಉದ್ದೇಶಪೂರ್ವಕವಾಗಿ ತಮ್ಮ ವೇಗವನ್ನು ಹೆಚ್ಚಿಸಿಕೊಂಡಿರಾ ಎಂದು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, "ಬೌಲಿಂಗ್ ಮಾಡುವಾಗ ನನ್ನ ವೇಗವನ್ನು ಹೆಚ್ಚಿಸಲು ನಾನು ಪ್ರಯತ್ನಿಸುತ್ತಿಲ್ಲ. ಅದಕ್ಕೆ ನನ್ನ ಲಯವೇ ಕಾರಣ. ನನ್ನ ಶಸ್ತ್ರಚಿಕಿತ್ಸೆಯ ನಂತರ ನಾನು ನನ್ನ ಲಯದಲ್ಲಿ ಬಹಳಷ್ಟು ಸುಧಾರಣೆ ಮಾಡಿಕೊಂಡಿದ್ದೇನೆ. ನನ್ನ ವೇಗವನ್ನು ಹೇಗೆ ಸುಧಾರಿಸುವುದು ಎಂದು ನಾನು ತುಂಬಾ ಯೋಚಿಸಿದೆ. ಬಹಳಷ್ಟು ಜನರು ತಮ್ಮ ಕೈಗಳನ್ನು ಬಳಸಿಕೊಂಡು ವೇಗವನ್ನು ಹೆಚ್ಚಿಸಲು ಪ್ರಯತ್ನಿಸುತ್ತಾರೆ, ಆದರೆ ಇದು ಮಣಿಕಟ್ಟಿನ ಸ್ಪಿನ್ನರ್‌ಗೆ ಒಳ್ಳೆಯದಲ್ಲ." ಎಂದು ಅವರು ಹೇಳಿದರು.

ವೇಗದ ಕಡೆ ಗಮನ ನೀಡಿದರೆ ಸ್ಪಿನ್ ಕಡಿಮೆಯಾಗುತ್ತದೆ
ಉದ್ದೇಶಪೂರ್ವಕವಾಗಿ ನಾವು ವೇಗವನ್ನು ಹೆಚ್ಚಿಸಿಕೊಂಡರೆ ಸ್ಪಿನ್ ಮೇಲೆ ಪರಿಣಾಮ ಬೀರುತ್ತದೆ ಎಂದು ಕುಲ್ದೀಪ್ ಯಾದವ್ ಹೇಳಿದ್ದಾರೆ. "ವೇಗದಲ್ಲಿ ಆ ಸುಧಾರಣೆಯು ನಿಮ್ಮ ಲಯದ ಮೂಲಕ ಬಂದರೆ, ನೀವು ಸ್ಪಿನ್‌ನಲ್ಲಿ ರಾಜಿ ಮಾಡಿಕೊಳ್ಳಬೇಕಾಗಿರುವುದಿಲ್ಲ. ಆದರೆ, ಉದ್ದೇಶಪೂರ್ವಕವಾಗಿ ವೇಗ ಹೆಚ್ಚಿಸಿಕೊಂಡರೆ ಸ್ಪಿನ್ ಕಡಿಮೆಯಾಗುತ್ತದೆ. ಈ ವಿಚಾರ ಸ್ಪಿನ್ ಬೌಲರ್‌ಗಳಿಗೆ ವಿಷಯಗಳನ್ನು ತುಂಬಾ ಕಷ್ಟಕರವಾಗಿಸುತ್ತದೆ" ಎಂದು ಕುಲ್ದೀಪ್ ಯಾದವ್ ಹೇಳಿದರು.

ಎರಡನೇ ಪಂದ್ಯದಲ್ಲಿ ಗೆಲ್ಲುವ ವಿಶ್ವಾಸ
ಮೊದಲ ಏಕದಿನ ಪಂದ್ಯದಲ್ಲಿ ಒಂಬತ್ತು ರನ್‌ಗಳಿಂದ ಸೋತಿರುವ ಟೀಮ್ ಇಂಡಿಯಾ ಎರಡನೇ ಪಂದ್ಯದಲ್ಲಿ ರಾಂಚಿಯಲ್ಲಿ ಗೆಲ್ಲಲೇಬೇಕಾದ ಪರಿಸ್ಥಿತಿಯನ್ನು ಎದುರಿಸುತ್ತಿದೆ. ತಂಡ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ ಎಂದು ಕುಲದೀಪ್ ಹೇಳಿದ್ದಾರೆ.
"ಕಳೆದ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ -ಸಂಜು ಸ್ಯಾಮ್ಸನ್ ಬ್ಯಾಟಿಂಗ್ ಮತ್ತು ಶಾರ್ದೂಲ್ ಠಾಕೂರ್ ಆಲ್‌ರೌಂಡರ್ ಪ್ರದರ್ಶನ ಧನಾತ್ಮಕ ಅಂಶಗಳಾಗಿದ್ದವು. ನಾವು ಸಕಾರಾತ್ಮಕ ಕ್ರಿಕೆಟ್ ಆಡುವುದನ್ನು ಮುಂದುವರಿಸುತ್ತೇವೆ ಎಂದು ಅವರು ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications