IND Vs SA ODI: ದೀಪಕ್ ಚಾಹರ್ ಬದಲಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದ ಮಾಜಿ ಆರ್ಸಿಬಿ ಆಟಗಾರ

ಗಾಯದ ಸಮಸ್ಯೆಯಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ದೀಪಕ್ ಚಾಹರ್ ಹೊರಬಿದ್ದಿದ್ದಾರೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಆಲ್‌ರೌಂಡರ್ ವಾಷಿಂಗ್ಟನ್ ಸುಂದರ್ ಅವರನ್ನು ದಕ್ಷಿಣ ಆಫ್ರಿಕಾ ವಿರುದ್ಧದ ಉಳಿದ ಎರಡು ಏಕದಿನ ಪಂದ್ಯಗಳಿಗೆ ದೀಪಕ್ ಚಾಹರ್ ಸ್ಥಾನಕ್ಕೆ ಹೆಸರಿಸಿದೆ.
ಮಾಜಿ ಆರ್ ಸಿಬಿ ಆಟಗಾರ, ಸ್ಪಿನ್-ಬೌಲಿಂಗ್ ಆಲ್-ರೌಂಡರ್ ಫೆಬ್ರವರಿ 2022 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಸರಣಿಯಲ್ಲಿ ಆಡಿದ ನಂತರ ಮತ್ತೊಮ್ಮೆ ರಾಷ್ಟ್ರೀಯ ತಂಡಕ್ಕೆ ಮರಳಿದ್ದಾರೆ.
ಭಾರತದ ಟಿ20 ವಿಶ್ವಕಪ್ ತಂಡದಲ್ಲಿರುವ ಮೂವರು ಮೀಸಲು ಆಟಗಾರರಲ್ಲಿ ಒಬ್ಬರಾದ ದೀಪಕ್ ಚಾಹರ್, ಇಂದೋರ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20 ಪಂದ್ಯದ ಮುಕ್ತಾಯದ ನಂತರ ಬೆನ್ನಿನಲ್ಲಿ ನೋವು ಕಾಣಿಸಿಕೊಂಡಿದೆ.
ಬಲಗೈ ಸೀಮರ್ ಈಗ ವೈದ್ಯಕೀಯ ತಂಡದಿಂದ ನಿಗಾವಹಿಸಲು ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (NCA) ಮರಳಲಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟಿ20 ಪಂದ್ಯನಲ್ಲಿ ಚಹಾರ್ 4 ಓವರ್ ಗಳಲ್ಲಿ 48 ರನ್ ನೀಡಿ ಒಂದು ವಿಕೆಟ್ ಪಡೆದಿದ್ದರು.

ಗಾಯದಿಂದ ವಾಷಿಂಗ್ಟನ್ ಸುಂದರ್ ಚೇತರಿಕೆ
ಆಗಸ್ಟ್‌ನಲ್ಲಿ ನಡೆದ ರಾಯಲ್ ಲಂಡನ್ ಏಕದಿನ ಕಪ್‌ನಲ್ಲಿ ಲಂಕಾಶೈರ್ ತಂಡದ ಪರವಾಗಿ ಆಡಿದ್ದ ವಾಷಿಂಗ್ಟನ್ ಸುಂದರ್, ಎಡ ಭುಜಕ್ಕೆ ಗಾಯ ಮಾಡಿಕೊಂಡಿದ್ದರು. ಏಷ್ಯಾಕಪ್‌ಗೆ ಮುನ್ನ ಟೀಂ ಇಂಡಿಯಾ ಜಂಬಾಬ್ವೆಗೆ ತೆರಳಿದ ಏಕದಿನ ಸರಣಿಯ ತಂಡದಲ್ಲಿ ಇದ್ದರು.
ಆದರೆ, ಭುಜದ ಗಾಯದ ಸಮಸ್ಯೆಯಿಂದಾಗಿ ಅವರು ತಂಡದಲ್ಲಿ ಆಡುವ ಅವಕಾಶವನ್ನು ಕಳೆದುಕೊಂಡರು. ಇದುವರೆಗೆ ಭಾರತದ ಪರವಾಗಿ 4 ಏಕದಿನ ಪಂದ್ಯಗಳನ್ನಾಡಿರುವ ವಾಷಿಂಗ್ಟನ್ ಸುಂದರ್, 28ರ ಸರಾಸರಿಯಲ್ಲಿ 5 ವಿಕೆಟ್ ಪಡೆದಿದ್ದಾರೆ, 57 ರನ್‌ಗಳನ್ನು ಕೂಡ ಕಲೆ ಹಾಕಿದ್ದಾರೆ.
ಟಿ20 ವಿಶ್ವಕಪ್ 2022: ನಾನು ಭಾರತದ ಈ ಆಟಗಾರನ ದೊಡ್ಡ ಅಭಿಮಾನಿ; ವಿವಿಯನ್ ರಿಚರ್ಡ್ಸ್

ಫಿಟ್ನೆಸ್ ಸಾಬೀತು ಪಡಿಸಿದರೆ ಮುಂದಿನ ಅವಕಾಶ
ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಜಸ್ಪ್ರೀತ್ ಬುಮ್ರಾ ಬದಲಿಗೆ ತಂಡದಲ್ಲಿ ಸ್ಥಾನ ಪಡೆಯುವ ಆಟಗಾರರಲ್ಲಿ ಮುಂಚೂಣಿಯಲ್ಲಿದ್ದ ದೀಪಕ್ ಚಾಹರ್ ಗೆ ಈ ಗಾಯ ದೊಡ್ಡ ತಡೆಯಾಗಿದೆ.
ಅವರು ಟಿ20 ವಿಶ್ವಕಪ್‌ನಲ್ಲಿ ಮೀಸಲು ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ನಂತರ ಆಸ್ಟ್ರೇಲಿಯಾಕ್ಕೆ ತೆರಳಬೇಕಾಗಿತ್ತು. ಆದರೆ, ಈಗ ಗಾಯಗೊಂಡಿರುವ ಕಾರಣ, ತಮ್ಮ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕವೇ ಅವರಿಗೆ ಆಸ್ಟ್ರೇಲಿಯಾಕ್ಕೆ ತೆರಳಲು ಅನುಮತಿ ಸಿಗಲಿದೆ.

ಬುಮ್ರಾ ಬದಲಿಗೆ ಶಮಿಗೆ ಅವಕಾಶ ಸಾಧ್ಯತೆ
ಸದ್ಯದ ಬೆಳವಣಿಗೆಗಳನ್ನು ಗಮನಿಸಿದರೆ ಜಸ್ಪ್ರೀತ್ ಬುಮ್ರಾ ಬದಲಿಗೆ 15ರ ಸದಸ್ಯರ ತಂಡದಲ್ಲಿ ಮೊಹಮ್ಮದ್ ಶಮಿಗೆ ಅವಕಾಶ ಸಿಗುವುದು ಖಚಿತವಾಗಿದೆ. ಅವರು, ಶೀಘ್ರದಲ್ಲೇ ಆಸ್ಟ್ರೇಲಿಯಾಗೆ ಪ್ರಯಾಣಿಸುವ ಸಿದ್ಧತೆಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜಸ್ಪ್ರೀತ್ ಬುಮ್ರಾ ಬದಲಿ ಆಟಗಾರನನ್ನು ಬಿಸಿಸಿಐ ಇನ್ನೂ ಹೆಸರಿಸಿಲ್ಲ. ಅಕ್ಟೋಬರ್ 15ರಂದು ಬದಲಿ ಆಟಗಾರನನ್ನು ಹೆಸರಿಸುವ ಸಾಧ್ಯತೆ ಇದೆ. ಆ ವೇಳೆಗೆ ಮೊಹಮ್ಮದ್ ಶಮಿ ಆಸ್ಟ್ರೇಲಿಯಾದಲ್ಲಿ ರೋಹಿತ್ ಶರ್ಮಾ ಬಳಗವನ್ನು ಸೇರಿಕೊಂಡಿರುತ್ತಾರೆ ಎಂದು ಹೇಳಲಾಗಿದೆ.

ಏಕದಿನ ಸರಣಿಗೆ ಟೀಂ ಇಂಡಿಯಾ
ಶಿಖರ್ ಧವನ್ (ನಾಯಕ), ಶುಭಮನ್ ಗಿಲ್, ರುತುರಾಜ್ ಗಾಯಕ್ವಾಡ್, ಶ್ರೇಯಸ್ ಅಯ್ಯರ್, ರಾಹುಲ್ ತ್ರಿಪಾಠಿ, ರಜತ್ ಪಾಟೀದಾರ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ಕುಲ್‌ದೀಪ್ ಯಾದವ್, ರವಿ ಬಿಷ್ಣೋಯಿ, ಮುಕೇಶ್ ಕುಮಾರ್, ಅವೇಶ್ ಖಾನ್, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications