ಚೆಂಡು ಸ್ಟೇಡಿಯಂ ದಾಟಬೇಕಿಲ್ಲ, ಬೌಂಡರಿ ಗೆರೆ ದಾಟಿದರೆ ಸಾಕು: ಭಾರತೀಯ ಆಟಗಾರನ ಆಟಕ್ಕೆ ಪಾರ್ಥಿವ್ ಕಿಡಿ

ಮಳೆಯಿಂದಾಗಿ ಐದನೇ ಮತ್ತು ನಿರ್ಣಾಯಕ ಟಿ20 ಪಂದ್ಯ ರದ್ದುಗೊಂಡ ಬಳಿಕ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಟಿ20 ಸರಣಿ 2-2 ಸಮಬಲದೊಂದಿಗೆ ಅಂತ್ಯವಾಗಿದೆ. ಐದು ಪಂದ್ಯಗಳ ಸರಣಿಯಲ್ಲಿ ಮೊದಲ ಎರಡು ಪಂದ್ಯಗಳಲ್ಲಿ ಭಾರತ ತಂಡ ಸೋಲು ಅನುಭವಿಸಿದ್ದರು ನಂತರದ ಎರಡು ಪಂದ್ಯಗಳಲ್ಲಿ ಅಮೋಘ ಪ್ರದರ್ಶನದೊಂದಿಗೆ ಭಾರತ ಸಮಬಲ ಸಾಧಿಸುವಲ್ಲಿ ಯಶಸ್ವಿಯಾಗಿತ್ತು. ಈ ಸರಣಿಯಲ್ಲಿ ರಿಷಭ್ ಪಂತ್ ಭಾರತ ತಂಡದ ನಾಯಕತ್ವ ವಹಿಸಿಕೊಂಡಿದ್ದರು.
ಈ ಸರಣಿಯಲ್ಲಿ ರಿಷಬ್ ಪಂತ್ ಪಂತ್ ನಾಯಕನಾಗಿ ಉತ್ತಮ ಪ್ರದರ್ಶನ ನೀಡಿದರೂ ಕಳಪೆ ಬ್ಯಾಟಿಂಗ್ ಪ್ರದರ್ಶನದ ಕಾರಣದಿಂದಾಗಿ ಸಾಕಷ್ಟು ಟೀಕೆಗೆ ಗುರಿಯಾಗಿದ್ದಾರೆ. ಸತತವಾಗಿ ಒಂದೇ ರೀತಿಯಾಗಿ ವಿಕೆಟ್ ಕಳೆದುಕೊಂಡ ರಿಷಭ್ ಪಂತ್ ರನ್ ಗಳಿಸಲು ಅಕ್ಷರಶಃ ಹೆಣಗಾಡಿದ್ದಾರೆ. ಈ ಮೂಲಕ ಚುಟುಕು ಕ್ರಿಕೆಟ್ ಮಾದರಿಯಲ್ಲಿ ಪಂತ್ ಪರದಾಟ ಮುಂದುವರಿದಿದೆ. ಪಂತ್ ಅವರ ಈ ಬ್ಯಾಟಿಂಗ್ ಪ್ರದರ್ಶನದ ಕಾರಣಕ್ಕೆ ಮಾಜಿ ಕ್ರಿಕೆಟಿಗ ಪಾರ್ಥಿವ್ ಪಟೇಲ್ ಕಟು ಟೀಕೆಯನ್ನು ಮಾಡಿದ್ದಾರೆ.

ಬೇಕಾದಷ್ಟು ಆಯ್ಕೆ ಮ್ಯಾನೇಜ್‌ಮೆಂಟ್ ಮುಂದಿದೆ
ರಿಷಬ್ ಪಂತ್ ಪ್ರದರ್ಶನದ ಬಗ್ಗೆ ಮಾತನಾಡಿದ ಪಾರ್ಥಿವ್ ಪಟೇಲ್" ಕೊಹ್ಲಿ, ರೋಹಿತ್ ಮತ್ತು ರಾಹುಲ್ ಅವರಂತಹ ದಿಗ್ಗಜರು ತಂಡಕ್ಕೆ ಮರಳಿದಾಗ ಪಂತ್ ಮೇಲೆ ಒತ್ತಡ ಹೆಚ್ಚಾಗುತ್ತದೆ. ಅಲ್ಲದೆ ಇಂಗ್ಲೆಂಡ್ ಪ್ರವಾಸ ಆರಂಭಕ್ಕೂ ಮುನ್ನ ಐರ್ಲೆಂಡ್ ವಿರುದ್ಧ ಟಿ20 ಸರಣಿ ನಡೆಯಲಿದೆ. ಈ ಸರಣಿಯಲ್ಲಿ ಸಂಜು ಸ್ಯಾಮ್ಸನ್ ಆಡಲಿದ್ದು ಅವರು ಉತ್ತಮ ಪ್ರದರ್ಶನ ನೀಡುವ ಅವಕಾಶವನ್ನು ಹೊಂದಿದ್ದಾರೆ. ಅಲ್ಲದೆ ಇಶಾನ್ ಕಿಶನ್ ಮತ್ತು ದಿನೇಶ್ ಕಾರ್ತಿಕ್ ಅವರಂತಹ ಆಯ್ಕೆಗಳು ಕೂಡ ಮ್ಯಾನೇಜ್‌ಮೆಂಟ್ ಮುಂದಿದೆ" ಎಂದಿದ್ದಾರೆ ಪಾರ್ಥಿವ್ ಪಟೇಲ್.
8 ತಿಂಗಳಿನಲ್ಲಿ 6 ನಾಯಕರು ನನ್ನ ಪ್ಲಾನ್ ಅಲ್ಲ; ಪದೇಪದೇ ನಾಯಕತ್ವ ಬದಲಾವಣೆ ಬಗ್ಗೆ ದ್ರಾವಿಡ್ ಮಾತು

ಸಿಕ್ಸರ್ ಬಾರಿಸಲು ಬೌಂಡರಿ ಗೆರೆ ದಾಟಿದರೆ ಸಾಕು
ಮುಂದುವರಿದು ಮಾತನಾಡಿದ ಪಾರ್ಥಿವ್ ಪಟೇಲ್ "ಪಂತ್ ಅವರು ಪ್ರತಿಶತ ನೂರರಷ್ಟು ಪರಿಶ್ರಮವನ್ನು ನೀಡುವುದಾಗಿ ಪ್ರತಿ ಬಾರಿಯೂ ಹೇಳುತ್ತಾರೆ. ಆದರೆ ಅದನ್ನು ಪ್ರತಿಯೊಬ್ಬ ಆಟಗಾರನೂ ಮಾಡುತ್ತಾನೆ. ಅವರ ಹೊಡೆತಗಳ ಆಯ್ಕೆಯ ವಿಚಾರಕ್ಕೆ ಬಂದರೆ ಚೆಂಡನ್ನು ಕ್ರೀಡಾಂಗಣದಿಂದ ಹೊರಗೆ ಹೊಡೆಯುವ ಅನಿವಾರ್ಯತೆಯಿಲ್ಲ. ಚೆಂಡು ಬೌಂಡರಿ ಗೆರೆ ದಾಟಿದರೆ ಸಾಕು ಅದು ಸಿಕ್ಸರ್ ಆಗುತ್ತದೆ" ಎಂದು ಪಾರ್ಥಿವ್ ಪಟೇಲ್ ಪಂತ್ ಬ್ಯಾಟಿಂಗ್ ಶೈಲಿ ಬಗ್ಗೆ ಟೀಕಿಸಿದ್ದಾರೆ.

ಚುಟುಕು ಕ್ರಿಕೆಟ್‌ನಲ್ಲಿ ಪಂತ್ ಮತ್ತೆ ವೈಫಲ್ಯ
ದಕ್ಷಿಣ ಆಪ್ರಿಕಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ರಿಷಬ್ ಪಂತ್ ನಾಲ್ಕು ಇನ್ನಿಂಗ್ಸ್‌ಗಳಿಂದ ಕೇವಲ 58 ರನ್ ಮಾತ್ರವೇ ಗಳಿಸಿದ್ದಾರೆ. ಹೀಗಾಗಿ ಪಂತ್ ಮುಂದಿನ ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಪಡೆಯುವ ಬಗ್ಗೆ ಪ್ರಶ್ನೆಗಳು ಎದ್ದಿದೆ. ಪಂತ್ ಇಂಥಾ ಫಾರ್ಮ್‌ನಲ್ಲಿದ್ದುಕೊಂಡು ಟಿ20 ವಿಶ್ವಕಪ್‌ನಲ್ಲಿ ಸ್ಥಾನ ಪಡೆಯುವುದು ಅಸಾಧ್ಯ ಎಂಬ ಅಭಿಪ್ರಾಯಗಳು ವ್ಯಕ್ತವಾಗಿದೆ.

ಪಾಠ ಕಲಿಯುತ್ತಿಲ್ಲ ಎಂದ ದಿಗ್ಗಜರು
ಡೇಲ್ ಸ್ಟೇಯ್ನ್ ಮತ್ತು ಸುನಿಲ್ ಗವಾಸ್ಕರ್ ಅವರಂತಹ ದಿಗ್ಗಜ ಕ್ರಿಕೆಟಿಗರು ಸೇರಿದಂತೆ ಹಲವು ವಿಶ್ಲೇಷಕರು ಪಂತ್ ಅವರ ಬ್ಯಾಟಿಂಗ್ ರೀತಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಂತ್ ತನ್ನ ತಪ್ಪುಗಳಿಂದ ಕಲಿತಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications