IND vs SA: ನ್ಯೂಲೆಂಡ್ಸ್ ಪಿಚ್‌ನಲ್ಲಿ ಕೆಂಪು ಚೆಂಡಿನ ನರ್ತನ, ಇಂದೇ ಫಲಿತಾಂಶ ಬರುವ ಸಾಧ್ಯತೆ
ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಲ್ಲಿ ವಿಕೆಟ್‌ಗಳು ಪಟಪಟನೆ ಬಿದ್ದಿವೆ. ಈ ವಿಕೆಟ್‌ನಲ್ಲಿ ಬೌಲರ್‌ಗಳು ಬ್ಯಾಟ್ಸ್‌ಮನ್‌ಗಳ ಮೇಲೆ ಸಂಪೂರ್ಣ ಪ್ರಾಬಲ್ಯ ಸಾಧಿಸಿದ್ದಾರೆ. ಈ ಮೂಲಕ ಈ ಪಿಚ್ ಹಲವು ಪ್ರಶ್ನೆಗಳನ್ನು ಏಳುವಂತೆ ಮಾಡಿದೆ. ಎರಡನೇ ಟೆಸ್ಟ್ ಪಂದ್ಯದ ಫಲಿತಾಂಶ ಎರಡನೇ ದಿನಕ್ಕೆ ಬರುವ ಸಾಧ್ಯತೆ ಇದೆ.
ಕೆಂಪು ಕೂಕಬುರ್ರಾ ಚೆಂಡು 'ಜೆಟ್ ವಿಮಾನದಂತೆ' ಹಾರುತ್ತಿರುವುದು ಕಂಡುಬಂತು. ಮೊದಲ ದಿನ ವೇಗದ ಬೌಲರ್‌ಗಳು ಪ್ರಾಬಲ್ಯ ಮೆರೆದರು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ ದಕ್ಷಿಣ ಆಫ್ರಿಕಾದ ನಾಯಕ ಡೀನ್ ಎಲ್ಗರ್ ಅವರ ನಿರ್ಧಾರ ತಪ್ಪಾಗಿದೆ ಎಂದು ಭಾರತೀಯ ಬೌಲರ್‌ಗಳು ಸಾಬೀತುಪಡಿಸಿದರು. ವೇಗಿ ಮೊಹಮ್ಮದ್ ಸಿರಾಜ್ ಅವರ ಕರಾರುವಕ್ ದಾಳಿಗೆ ಆತಿಥೇಯ ತಂಡ 55 ರನ್ ಗಳಿಗೆ ಕುಸಿದಿತ್ತು. ಅಷ್ಟೇ ಅಲ್ಲ, ಮೊದಲ ದಿನವೇ ಉಭಯ ತಂಡಗಳು ಮೊದಲ ಇನಿಂಗ್ಸ್ ಮಕ್ತಾಯಗೊಂಡಿತು.
ದಿನದಾಟದ ಮುಕ್ತಾಯದ ವೇಳೆಗೆ, ದಕ್ಷಿಣ ಆಫ್ರಿಕಾ ಎರಡನೇ ಇನ್ನಿಂಗ್ಸ್‌ನಲ್ಲಿ ತನ್ನ 3 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಒಟ್ಟಾರೆ, ಈ ಟೆಸ್ಟ್ ರೋಚಕ ಘಟ್ಟ ತಲುಪಿದೆ. ಈ ಟೆಸ್ಟ್ ಪಂದ್ಯದಲ್ಲಿ ಎರಡನೇ ದಿನವಷ್ಟೇ ಫಲಿತಾಂಶ ಬರಬಹುದು.

ಮೊಹಮ್ಮದ್ ಸಿರಾಜ್ ಸತತ 9 ಓವರ್‌ಗಳ ಮೊದಲ ಸ್ಪೆಲ್‌ನಲ್ಲಿ 15 ರನ್‌ಗಳಿಗೆ 6 ವಿಕೆಟ್ ಪಡೆಯುವ ಮೂಲಕ ತಮ್ಮ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನ ನೀಡಿದರು. ಇದು 1991 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿದ ನಂತರ ಟೆಸ್ಟ್ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾದ ಅತ್ಯಂತ ಕಡಿಮೆ ಸ್ಕೋರ್ ಆಗಿದೆ.
ಭಾರತ 153 ರನ್ ಗಳಿಗೆ ಆಲೌಟ್ ಆಯಿತು. ಅಲ್ಲದೆ 98 ರನ್‌ಗಳ ಮುನ್ನಡೆ ಸಾಧಿಸಿತು. ಆದರೆ 11 ಎಸೆತಗಳಲ್ಲಿ ಒಂದು ರನ್ ಸೇರಿಸದೆ ಟೀಮ್ ಇಂಡಿಯಾದ ಕೆಳ ಕ್ರಮಾಂಕದ ಬ್ಯಾಟರ್‌ಗಳು ಪೆವಿಲಿಯನ್ ಸೇರಿದರು. ಭಾರತದ ಆರು ಬ್ಯಾಟ್ಸ್‌ಮನ್‌ಗಳು ತಮ್ಮ ಖಾತೆಯನ್ನು ತೆರೆಯಲು ಸಾಧ್ಯವಾಗಲಿಲ್ಲ ಮತ್ತು ಅಜೇಯರಾಗಿ ಉಳಿದ ಆಟಗಾರ ಕೂಡ ತಮ್ಮ ಖಾತೆಯನ್ನು ತೆರೆಯಲಿಲ್ಲ.
ವೇಗದ ಬೌಲರ್‌ಗಳ ಅಬ್ಬರ
ವೇಗಿಗಳಾದ ಲುಂಗಿ ಎನ್‌ಗಿಡಿ ಮತ್ತು ಕಗಿಸೊ ರಬಾಡ ತಲಾ 3 ವಿಕೆಟ್ ಪಡೆದರು. ಮೊದಲ ದಿನವೇ ಈ ವಿಕೆಟ್‌ನಲ್ಲಿ 23 ವಿಕೆಟ್‌ಗಳು ಬಿದ್ದವು. ದಕ್ಷಿಣ ಆಫ್ರಿಕಾ ಎರಡನೇ ಇನ್ನಿಂಗ್ಸ್‌ನಲ್ಲಿ ಎಚ್ಚರಿಕೆ ಆಟಕ್ಕೆ ಮಣೆ ಹಾಕಿದೆ. ಇದರಿಂದಾಗಿ ದಿನದಾಟದ ಮುಕ್ತಾಯದ ವೇಳೆಗೆ 3 ವಿಕೆಟ್‌ಗಳನ್ನು ಕಳೆದುಕೊಂಡು 62 ರನ್ ಗಳಿಸಿತು. ಮತ್ತು ಆತಿಥೇಯ ತಂಡ ಇನ್ನೂ 36 ರನ್‌ಗಳಿಂದ ಹಿಂದುಳಿದಿದೆ. ಏಡೆನ್ ಮಾರ್ಕ್ರಾಮ್ 32 ರನ್ ಗಳಿಸಿ ಅಜೇಯರಾಗಿದ್ದಾರೆ. ಟೆಸ್ಟ್‌ನಲ್ಲಿ ಮೊದಲ ದಿನದಲ್ಲಿ ಗರಿಷ್ಠ 25 ವಿಕೆಟ್‌ಗಳ ಪತನದ ದಾಖಲೆಯು 1902 ರಲ್ಲಿ ಆಶಸ್ ಟೆಸ್ಟ್ ಸರಣಿಯಲ್ಲಿ ನಡೆದಿತ್ತು.
ಒಂದೇ ದಿನ ಎರಡು ಬಾರಿ ಔಟ್
ಡೀನ್ ಎಲ್ಗರ್ ಅವರು ಎರಡನೇ ಟೆಸ್ಟ್ ಪಂದ್ಯದ ಒಂದೇ ದಿನ ಎರಡು ಬಾರಿ ಔಟಾದ ಕಾರಣ ಅವರ ವಿದಾಯ ಟೆಸ್ಟ್ ಪ್ರದರ್ಶನವನ್ನು ಸ್ಮರಣೀಯ ವಾಗಿಸುವ ಆಸೆ ಫಲಿಸಲಿಲ್ಲ. ಈ ಪಂದ್ಯ ಮೂರನೇ ದಿನದವರೆಗೂ ಮುಂದುವರಿಯುವ ಸಾಧ್ಯತೆ ಕಡಿಮೆ. ನ್ಯೂಲ್ಯಾಂಡ್ಸ್ ಪಿಚ್‌ನಲ್ಲಿ ತುಂಬಾ ಬೌನ್ಸ್ ಇತ್ತು, ಅದು ಖಂಡಿತವಾಗಿಯೂ ಐಸಿಸಿ ಮ್ಯಾಚ್ ರೆಫರಿ ಕ್ರಿಸ್ ಬ್ರಾಡ್ ಅವರ ರೇಡಾರ್ ಅಡಿಯಲ್ಲಿ ಬರುತ್ತದೆ.
ಕೆಂಪು ಬಣ್ಣದ ಕೂಕಬುರ್ರಾ ಚೆಂಡಿನ ವಯ್ಯಾರದ ನೃತ್ಯದ ಮುಂದೆ ಬ್ಯಾಟರ್‌ಗಳು ಬ್ಯಾಟ್ ಬೀಸುವುದನ್ನೇ ಮರೆತರು. ದಿನ ಕಳೆದಂತೆ ಬೌನ್ಸ್ ಕಡಿಮೆ ಆಯಿತು.
ಎರಡಂಕಿ ದಾಟಿದ 5 ಆಟಗಾರರು
ದಕ್ಷಿಣ ಆಫ್ರಿಕಾದ ಇಬ್ಬರು ಬ್ಯಾಟ್ಸ್‌ಮನ್‌ಗಳು ಮಾತ್ರ ಮೊದಲ ಇನ್ನಿಂಗ್ಸ್‌ನಲ್ಲಿ ಎರಡಂಕಿ ತಲುಪಲು ಸಾಧ್ಯವಾಯಿತು. ವಿಕೆಟ್ ಕೀಪರ್ ಕೈಲ್ ವೆರೆನ್ 15 ರನ್ ಗಳಿಸಿದರೆ, ಡೇವಿಡ್ ವೆಡ್ಡಿಂಗ್ ಹ್ಯಾಮ್ 12 ರನ್ ಕೊಡುಗೆ ನೀಡಿದರು. ಭಾರತದ ಪರ ಮೊದಲ ಇನ್ನಿಂಗ್ಸ್‌ನಲ್ಲಿ ಸಿರಾಜ್ 6 ವಿಕೆಟ್ ಪಡೆದರೆ, ಬುಮ್ರಾ ಮತ್ತು ಮುಖೇಶ್ ಕುಮಾರ್ ತಲಾ 2 ವಿಕೆಟ್ ಪಡೆದರು.
ಭಾರತ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ವಿರಾಟ್ ಕೊಹ್ಲಿ ಅವರ 46 ರನ್, ರೋಹಿತ್ ಶರ್ಮಾ ಅವರ 39 ರನ್ ಮತ್ತು ಶುಭಮನ್ ಗಿಲ್ ಅವರ 36 ರನ್‌ಗಳ ಆಧಾರದ ಮೇಲೆ 153 ರನ್ ಗಳಿಸಿತು. ಭಾರತದ 8 ಬ್ಯಾಟ್ಸ್‌ಮನ್‌ಗಳು ಎರಡಂಕಿ ಮುಟ್ಟಲು ಸಾಧ್ಯವಾಗಲಿಲ್ಲ. ದಕ್ಷಿಣ ಆಫ್ರಿಕಾದ ಎರಡನೇ ಇನ್ನಿಂಗ್ಸ್ ಕೂಡ ತತ್ತರಿಸಿದೆ. ಟೀಂ ಇಂಡಿಯಾ ಪರವಾಗಿ ವೇಗದ ಬೌಲರ್ ಮುಖೇಶ್ ಕುಮಾರ್ ದಕ್ಷಿಣ ಆಫ್ರಿಕಾದ ಎರಡನೇ ಇನ್ನಿಂಗ್ಸ್‌ನಲ್ಲಿ 2 ವಿಕೆಟ್ ಪಡೆದರೆ, ಬುಮ್ರಾ ತಮ್ಮ ಖಾತೆಯಲ್ಲಿ ಒಂದು ವಿಕೆಟ್ ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications