ಭಾರತದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಏಕದಿನ ಶತಕಗಳ ದಾಖಲೆಯನ್ನು ವೇಗವಾಗಿ ಸರಿಗಟ್ಟಲು ಆಧುನಿಕ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ತಮ್ಮ 49ನೇ ಏಕದಿನ ಶತಕ ಬಾರಿಸಿದ ಬಳಿಕ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಅವರು ಬ್ಯಾಟಿಂಗ್ ಪರಾಕ್ರಮದ ಬಗ್ಗೆ ಆಶ್ಚರ್ಯಚಕಿತರಾಗಿದ್ದಾರೆ.
2023ರ ಏಕದಿನ ವಿಶ್ವಕಪ್‌ನ ನಾಕೌಟ್ ಹಂತ ಸಮೀಪಿಸುತ್ತಿದ್ದಂತೆ, ವಿರಾಟ್ ಕೊಹ್ಲಿ ತಮ್ಮ ಶತಕದ ಮೂಲಕ ತಂಡದ ಭಾರವನ್ನು ಹೆಗಲ ಮೇಲೆ ಹೊತ್ತುಕೊಂಡು ಸಾಗಿದರು ಎಂದು ರಿಕಿ ಪಾಂಟಿಂಗ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ವಿರಾಟ್ ಕೊಹ್ಲಿ ತಮ್ಮ 35ನೇ ಜನ್ಮದಿನದಂದು ದಕ್ಷಿಣ ಆಫ್ರಿಕಾ ವಿರುದ್ಧ ಅಮೋಘ ಶತಕದೊಂದಿಗೆ ಸಚಿನ್ ತೆಂಡೂಲ್ಕರ್ ಅವರ 49 ಏಕದಿನ ಅಂತಾರಾಷ್ಟ್ರೀಯ ಶತಕಗಳ ದಾಖಲೆಯನ್ನು ಸರಿಗಟ್ಟುವ ಮೂಲಕ ಗಮನಾರ್ಹ ಮೈಲಿಗಲ್ಲು ಸಾಧಿಸಿದರು.
2023ರ ವಿಶ್ವಕಪ್‌ನಲ್ಲಿ ಭಾರತೀಯ ಬ್ಯಾಟಿಂಗ್ ಮಾಂತ್ರಿಕ ಒಟ್ಟು 543 ರನ್‌ಗಳನ್ನು ಕಲೆಹಾಕಿದ್ದಾರೆ ಮತ್ತು ಇದು ಈ ಆವೃತ್ತಿಯ ಪಂದ್ಯಾವಳಿಯಲ್ಲಿ 108.60ರ ಸರಾಸರಿಯನ್ನು ಹೊಂದಿದ್ದಾರೆ.

ಡಿಜಿಟಲ್ ಡೈಲಿಯ ಇತ್ತೀಚಿನ ಸಂಚಿಕೆಯಲ್ಲಿ ಐಸಿಸಿ ಡಿಜಿಟಲ್ ಇನ್‌ಸೈಡರ್ ತನ್ವಿ ಶಾ ಅವರೊಂದಿಗೆ ಮಾತನಾಡಿದ ರಿಕಿ ಪಾಂಟಿಂಗ್, ವಿರಾಟ್ ಕೊಹ್ಲಿಯ ಇನ್ನಿಂಗ್ಸ್‌ನ ಬಗ್ಗೆ "ಅದು ಅವರ ಹೇಗಲ ಮೇಲಿದ್ದ ಭಾರವಾಗಿರಬಹುದು' ಎಂದು ಹೇಳಿದರು.
"ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಸರಿಗಟ್ಟಲು ವಿರಾಟ್ ಕೊಹ್ಲಿ ಹೆಚ್ಚು ಶ್ರಮಿಸುತ್ತಿದ್ದಾರೆಂದು ನಾನು ಭಾವಿಸುತ್ತೇನೆ. ಅದು ಈಗ ಸಾಕಾರಗೊಂಡಿದೆ ಮತ್ತು ಇದು ಅವರಿಗೆ ಪಂದ್ಯಾವಳಿಯಲ್ಲಿ ನಿಜವಾಗಿಯೂ ಉತ್ತಮ ಸಮಯದಲ್ಲಿ ಸಂಭವಿಸಿದೆ," ಎಂದರು.

ಭಾರತ ತಂಡಕ್ಕೆ ಇನ್ನೂ ಒಂದು ಲೀಗ್ ಪಂದ್ಯ ಬಾಕಿಯಿದೆ ಮತ್ತು ನಂತರ ನೇರವಾಗಿ ಸೆಮಿಫೈನಲ್‌ಗೆ ಹೋಗಲಿದೆ. ಇದು ವಿರಾಟ್ ಕೊಹ್ಲಿಗೆ ಬಹುತೇಕ ಪರಿಪೂರ್ಣ ದಿನ ಮತ್ತು ಭಾರತಕ್ಕೆ ಉತ್ತಮ ದಿನವಾಗಿತ್ತು.
ದಕ್ಷಿಣ ಆಫ್ರಿಕಾ ವಿರುದ್ಧ ಬಂದ ವಿರಾಟ್ ಕೊಹ್ಲಿಯ ಶತಕವು ಈ ವಿಶ್ವಕಪ್ ಪಂದ್ಯಾವಳಿಯಲ್ಲಿ ಎರಡನೇ ಹಾಗೂ ಒಟ್ಟಾರೆ ನಾಲ್ಕನೇ ವಿಶ್ವಕಪ್ ಶತಕವನ್ನು ಗಳಿಸಿದಂತಾಯಿತು. ಸಮಕಾಲೀನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ತಮ್ಮ ಸ್ಥಾನಮಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡರು.
ಅದೇನೇ ಇದ್ದರೂ, ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರ ಪ್ರಕಾರ, ವಿರಾಟ್ ಕೊಹ್ಲಿ ಈಗಾಗಲೇ ಗಣನೀಯ ಅವಧಿಯವರೆಗೆ ಆ ವ್ಯತ್ಯಾಸವನ್ನು ಹೊಂದಿದ್ದಾರೆ ಮತ್ತು ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್ ಎಂದು ಪರಿಗಣಿಸಲು ಅರ್ಹರಾಗಿದ್ದಾರೆ.
"ವಿರಾಟ್ ಕೊಹ್ಲಿ ಸಂಪೂರ್ಣ ಶ್ರೇಷ್ಠ ಕ್ರಿಕೆಟಿಗ ಎಂಬುದರಲ್ಲಿ ಸಂದೇಹವಿಲ್ಲ ಮತ್ತು ನಾನು ಅದನ್ನು ಬಹಳ ಸಮಯದಿಂದ ಹೇಳಿದ್ದೇನೆ," ಎಂದು ರಿಕಿ ಪಾಂಟಿಂಗ್ ಗಮನಸೆಳೆದರು.
"ವಿರಾಟ್ ಕೊಹ್ಲಿ ಅವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ಸರಿಗಟ್ಟುವ ಅಗತ್ಯವಿಲ್ಲ, ಅವರು ದಾಖಲೆಯನ್ನು ಮುರಿಯುವ ಅಗತ್ಯವಿಲ್ಲ. ಕೊಹ್ಲಿಯ ಒಟ್ಟಾರೆ ಬ್ಯಾಟಿಂಗ್ ದಾಖಲೆ ನೋಡಿದರೆ ನಂಬಲಸಾಧ್ಯವಾಗಿದೆ. ಅವರು 49 ಏಕದಿನ ಶತಕಗಳ ಮೂಲಕ ಸಚಿನ್ ಅವರನ್ನು ಸರಿಗಟ್ಟಿದರು. ಅದು 175 ಕಡಿಮೆ ಇನ್ನಿಂಗ್ಸ್‌ಗಳಲ್ಲಿ ಬಂದಿರುವುದು ನಂಬಲಸಾಧ್ಯವಾಗಿದೆ," ಎಂದು ವಿರಾಟ್ ಕೊಹ್ಲಿ ಬಗ್ಗೆ ರಿಕಿ ಪಾಂಟಿಂಗ್ ಶ್ಲಾಘಿಸಿದರು.