
211 ರನ್ ಡಿಫೆಂಡ್ ಮಾಡಿಕೊಳ್ಳುವಲ್ಲಿ ನಾಯಕತ್ವದ ಕೊರತೆ
ಗುರುವಾರ ನವದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಐದು ಪಂದ್ಯಗಳ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ ಮತ್ತು ಡೇವಿಡ್ ಮಿಲ್ಲರ್ ಜೋಡಿ ದಕ್ಷಿಣ ಆಫ್ರಿಕಾ ತಂಡವನ್ನು ಭಾರತದ ವಿರುದ್ಧ ಏಳು ವಿಕೆಟ್‌ಗಳ ಜಯ ಸಾಧಿಸಲು ನೆರವಾದರು. ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಕೇವಲ ಒಂದು ಓವರ್ ಎಸೆದಿದ್ದನ್ನು ಕಂಡು ಪಾಕಿಸ್ತಾನ ಮಾಜಿ ಸ್ಪಿನ್ನರ್ ದಾನೀಶ್ ಕನೇರಿಯಾ ಕೂಡ ಅಚ್ಚರಿ ವ್ಯಕ್ತಪಡಿಸಿದ್ದಾರೆ.
"ಭಾರತವು ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20 ಸೋತಿದ್ದು, ಗಾಯದ ಕಾರಣದಿಂದಾಗಿ ಸರಣಿಯಿಂದ ಹೊರಗುಳಿದಿರುವ ಕಾರಣ ಕೆಎಲ್ ರಾಹುಲ್ ಅನುಪಸ್ಥಿತಿಯಲ್ಲಿ ರಿಷಭ್ ಪಂತ್ ಅವರು ತಂಡವನ್ನು ಮುನ್ನಡೆಸಿದರು. ರಿಷಭ್ ಪಂತ್ 211 ರನ್‌ಗಳ ಬೃಹತ್ ಮೊತ್ತ ದಾಖಲಿಸಿದ್ದರೂ, ಅದನ್ನು ಡಿಫೆಂಡ್ ಮಾಡಿಕೊಳ್ಳುವಲ್ಲಿ ನಾಯಕತ್ವದ ಕೊರತೆ ಎದ್ದು ಕಂಡಿತು".
Koo AppIndia lost first T/20 against South Africa.Rishab Pant leading the team in absence of KL Rahul as he is out of series due to injury,Pant lacked in captaincy defending 211 Pant rotated the bowlers poorly bringing chahal in power play not good option when Axar better option and rotation of fast bowler overs and giving Hardik just one over.Miller form continues as he was amazing in IPL for Gujrat titans for lifting First trophy - Danish kaneria (kan_261) 10 June 2022
ಹಾರ್ದಿಕ್ ಪಾಂಡ್ಯಗೆ ಕೇವಲ ಒಂದು ಓವರ್ ನೀಡಿದ್ದು ಅಚ್ಚರಿ
"ರಿಷಭ್ ಪಂತ್ ಬೌಲರ್‌ಗಳನ್ನು ಕಳಪೆಯಾಗಿ ಉಪಯೋಗಿಸಿದರು, ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಹಲ್‌ರಿಗೆ ಪವರ್-ಪ್ಲೇನಲ್ಲಿ ಬೌಲ್ ಕೊಡಬೇಕಿತ್ತು. ಅಕ್ಸರ್ ಪಟೇಲ್ ಉತ್ತಮ ಆಯ್ಕೆಯಾಗಿತ್ತು. ವೇಗದ ಬೌಲರ್ ಓವರ್‌ಗಳ ಸರದಿಯಲ್ಲಿ ಹಾರ್ದಿಕ್ ಪಾಂಡ್ಯಗೆ ಕೇವಲ ಒಂದು ಓವರ್ ನೀಡಿದ್ದು ಅಚ್ಚರಿಯನ್ನುಂಟು ಮಾಡಿತು. ಕ್ರೀಸ್‌ನಲ್ಲಿ ಡೇವಿಡ್ ಮಿಲ್ಲರ್ ಅದ್ಭುತ ಫಾರ್ಮ್ ಮುಂದುವರಿಯಿತು. ಏಕೆಂದರೆ ಅವರು ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ತಂಡದ ಮೊದಲ ಟ್ರೋಫಿ ಗೆಲ್ಲಲು ಸಹಾಯ ಮಾಡಿದ್ದರು," ಎಂದು ದಾನೀಶ್ ಕನೇರಿಯಾ ಕೂ ಅಪ್ಲಿಕೇಶನ್‌ನಲ್ಲಿ ಹೇಳಿದ್ದಾರೆ.

ರಿಷಭ್ ಪಂತ್‌ಗೆ ಭಾರತವನ್ನು ಮುನ್ನಡೆಸುವ ಅವಕಾಶ
ಟಿ20 ಸರಣಿಯಲ್ಲಿ ಕೆಎಲ್ ರಾಹುಲ್ ಹೊರಗುಳಿದ ನಂತರ ರಿಷಭ್ ಪಂತ್‌ಗೆ ಭಾರತವನ್ನು ಮುನ್ನಡೆಸುವ ಅವಕಾಶ ಸಿಕ್ಕಿತು. ಆದರೂ, ಈ ವಿಕೆಟ್‌ಕೀಪರ್- ಬ್ಯಾಟರ್ ತಮ್ಮ ನಾಯಕತ್ವದಿಂದ ವಿಮರ್ಶಕರನ್ನು ಮೆಚ್ಚಿಸಲು ವಿಫಲರಾದರು.
212 ರನ್‌ಗಳನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ನಿಯಮಿತ ಅಂತರದಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡಿತು ಮತ್ತು ಮಿಲ್ಲರ್ ಮತ್ತು ವ್ಯಾನ್ ಡೆರ್ ಡಸ್ಸೆನ್ ರಕ್ಷಣೆಗೆ ಬಂದಾಗ 81/3 ಆಗಿತ್ತು. ಇಬ್ಬರು ಬ್ಯಾಟ್ಸ್‌ಮನ್‌ಗಳು ಅಂತಿಮವಾಗಿ ನಾಲ್ಕನೇ ವಿಕೆಟ್‌ಗೆ 131 ರನ್‌ಗಳ ಅಜೇಯ ಜೊತೆಯಾಟವನ್ನು ನಡೆಸಿದರು ಮತ್ತು ಇಬ್ಬರೂ ವೈಯಕ್ತಿಕ ಅರ್ಧಶತಕಗಳನ್ನು ಗಳಿಸಿದರು. ಐದು ಪಂದ್ಯಗಳ ಸರಣಿಯಲ್ಲಿ ದಕ್ಷಿಣ ಆಫ್ರಿಕಾ 1-0 ಮುನ್ನಡೆ ಸಾಧಿಸಿದೆ.

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೊನೆಯ ಪಂದ್ಯ
ಜೂನ್ 19ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣ ಮೊದಲ ಟಿ20 ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದಿದ್ದರೆ, ಎರಡನೇ ಪಂದ್ಯ ಒಡಿಶಾದ ಕಟಕ್‌ನ ಬಾರಾಬತಿ ಸ್ಟೇಡಿಯಂನಲ್ಲಿ ನಡೆಯಲಿದೆ. ಮೂರನೇ ಪಂದ್ಯ ವಿಶಾಖಪಟ್ಟಣದಲ್ಲಿ ನಡೆಯಲಿದ್ದು, ನಾಲ್ಕನೇ ಪಂದ್ಯ ರಾಜ್‌ಕೋಟ್‌ನಲ್ಲಿ ಮತ್ತು ಐದನೇ ಪಂದ್ಯ ಜೂನ್ 19ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಿಗದಿಯಾಗಿದೆ.


Click it and Unblock the Notifications
