For Quick Alerts
ALLOW NOTIFICATIONS  
For Daily Alerts
 

IND vs SA: ಪಾರ್ಲ್‌ನಲ್ಲಿ ಸಿಡಿಸಿದ ಶತಕ ಸಂಜು ಸ್ಯಾಮ್ಸನ್ ವೃತ್ತಿಜೀವನ ಬದಲಿಸುತ್ತಾ?; ಮಾಜಿ ಕ್ರಿಕೆಟಿಗ ಹೇಳಿದ್ದೇನು?

ಗುರುವಾರ, ಡಿಸೆಂಬರ್ 21ರಂದು ಪಾರ್ಲ್‌ನ ಬೋಲ್ಯಾಂಡ್ ಪಾರ್ಕ್‌ನಲ್ಲಿ ನಡೆದ ಆತಿಥೇಯ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ-ನಿರ್ಣಾಯಕ ಮೂರನೇ ಏಕದಿನ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಪಂದ್ಯ-ವಿಜೇತ ಶತಕ ಬಾರಿಸಿದರು.

ಅಲ್ಲದೆ, ಭಾರತದ ಭರವಸೆಯ ಬ್ಯಾಟರ್ ಸಂಜು ಸ್ಯಾಮ್ಸನ್ ತಮ್ಮ ಚೊಚ್ಚಲ ಅಂತಾರಾಷ್ಟ್ರೀಯ ಏಕದಿನ ಶತಕವನ್ನು ಗಳಿಸಿದರು. ಸಂಜು ಸ್ಯಾಮ್ಸನ್ ಜುಲೈ 2015ರಲ್ಲಿ ತಮ್ಮ ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದ್ದರು ಮತ್ತು ತನ್ನ ಚೊಚ್ಚಲ ಶತಕವನ್ನು ಗಳಿಸಲು 8 ವರ್ಷ ಮತ್ತು 4 ತಿಂಗಳು ತೆಗೆದುಕೊಂಡರು.

ಇದೇ ವೇಳೆ 3 ಪಂದ್ಯಗಳ ಸರಣಿಯ 3ನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ಸಂಜು ಸ್ಯಾಮ್ಸನ್ ಸಿಡಿಸಿದ ಶತಕವು ಅವರ ವೃತ್ತಿಜೀವನವನ್ನು ಉತ್ತಮವಾಗಿ ಬದಲಾಯಿಸಬಹುದು ಎಂದು ಲೆಜೆಂಡ್ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಹೇಳಿದರು.

IND vs SA: Sanju Samsons century Against South Africa Will Change his Career Says Sunil Gavaskar

ವಿಕೆಟ್ ಕೀಪರ್-ಬ್ಯಾಟರ್ ಸಂಜು ಸ್ಯಾಮ್ಸನ್ ತನ್ನ 40ನೇ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನ ದೀರ್ಘಾವಧಿಯ ಕಾಯುವಿಕೆಯ ಶತಕದ ಬರವನ್ನು ಕೊನೆಗೊಳಿಸಿದ ನಂತರ, ತನ್ನನ್ನು ತಾನು ಹೆಚ್ಚು ನಂಬಲು ಪ್ರಾರಂಭಿಸುತ್ತಾನೆ ಎಂದು ಮಾಜಿ ಕ್ರಿಕೆಟಿಗ ಹೇಳಿದರು.

ಏಕದಿನ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಹರಿಣ ಪಡೆ ವಿರುದ್ಧ 114 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್‌ಗಳ ನೆರವಿನಿಂದ 108 ರನ್ ಗಳಿಸಿದ ಸಂಜು ಸ್ಯಾಮ್ಸನ್ ಅವರ ಜೀವನಶ್ರೇಷ್ಠ ಪ್ರದರ್ಶನವಾಗಿತ್ತು.

29 ವರ್ಷದ ಸಂಜು ಸ್ಯಾಮ್ಸನ್ ತಮ್ಮ ಸಹಜ ಆಕ್ರಮಣಕಾರಿ ಶೈಲಿ ಬ್ಯಾಟಿಂಗ್ ಅನ್ನು ನಿಗ್ರಹಿಸಿದರು ಮತ್ತು ಪಾರ್ಲ್‌ನಲ್ಲಿನ ಮಂದಗತಿಯ ಪಿಚ್‌ನಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ಆಡಿದರು. ಈ ಮೂಲಕ ಭಾರತೀಯ ತಂಡದ ಆಯ್ಕೆದಾರರು ತಮ್ಮ ಮೇಲೆ ಇಟ್ಟಿದ್ದ ನಂಬಿಕೆಯನ್ನು ಉಳಿಸಿಕೊಂಡರು.

ಭಾರತ ತಂಡ ಆರಂಭಿಕ ಆಟಗಾರ ರಜತ್ ಪಾಟಿದಾರ್ ಅವರ ವಿಕೆಟ್ ಕಳೆದುಕೊಂಡ ನಂತರ, ಹೆಚ್ಚು ಸಂಯಮವನ್ನು ಪ್ರದರ್ಶಿಸಿದ ಸಂಜು ಸ್ಯಾಮ್ಸನ್ ಇನ್ನಿಂಗ್ಸ್ ಕಟ್ಟಲು ಸಮಯವನ್ನು ತೆಗೆದುಕೊಂಡರು.

ಮೊದಲ 10 ಓವರ್‌ಗಳಲ್ಲಿ ತನ್ನ ಜೊತೆಗಾರ ಸಾಯಿ ಸುದರ್ಶನ್ ಅವರ ವಿಕೆಟ್ ಕಳೆದುಕೊಂಡ ಬಳಿಕ, ಕೆಎಲ್ ರಾಹುಲ್ ಅವರೊಂದಿಗೆ 50ಕ್ಕೂ ಅಧಿಕ ರನ್‌ಗಳ ಜೊತೆಯಾಟ ನಿರ್ಮಿಸಿದರು.

ಭಾರತ ತಂಡದ ಹಂಗಾಮಿ ನಾಯಕ ಕೆಎಲ್ ರಾಹುಲ್ 21 ರನ್‌ಗಳಿಗೆ ಔಟಾದರು. ನಂತರ ಸಂಜು ಸ್ಯಾಮ್ಸನ್ ಅವರು ತಿಲಕ್ ವರ್ಮಾ ಜೊತೆಗೂಡಿ 116 ರನ್‌ಗಳ ಜೊತೆಯಾಟ ಬೆಳಿಸಿದರು. ಸಂಜು ಸ್ಯಾಮ್ಸನ್ ತಮ್ಮ ಎಲ್ಲಾ ಅನುಭವವನ್ನು ಧಾರೆ ಎರೆದರು.

ಸಂಜು ಸ್ಯಾಮ್ಸನ್ 44ನೇ ಓವರ್‌ವರೆಗೆ ಕ್ರೀಸ್‌ನಲ್ಲಿಯೇ ಇದ್ದರು ಮತ್ತು ಹೊಸ ಬ್ಯಾಟರ್‌ಗಳು ಬಂದು ಔಟಾಗಿ ಹೋಗುತ್ತಿದ್ದರೂ, ಬ್ಯಾಟಿಂಗ್‌ಗೆ ಕಷ್ಟಕರವಾದ ಪಿಚ್‌ನಲ್ಲಿ ಶತಕ ಗಳಿಸುವುದನ್ನು ಖಚಿತಪಡಿಸಿಕೊಂಡರು.

"ಈ ಇನ್ನಿಂಗ್ಸ್‌ನಿಂದ ನನಗೆ ಎದ್ದುಕಾಣುವ ಅಂಶವೆಂದರೆ ಅವರ ಶಾಟ್ ಆಯ್ಕೆ. ಈ ಹಿಂದೆ, ಅವರು ಉತ್ತಮ ಆರಂಭವನ್ನು ಪಡೆದರೂ ಔಟಾಗಿದ್ದರು. ಮೂರನೇ ಏಕದಿನ ಪಂದ್ಯದಲ್ಲಿ ಅವರು ಯಾವುದೇ ತಪ್ಪು ಮಾಡಲಿಲ್ಲ. ಸಂಜು ಸ್ಯಾಮ್ಸನ್ ಪಿಚ್‌ನಲ್ಲಿ ತಮ್ಮ ಸಮಯವನ್ನು ಕಳೆಯುತ್ತಿದ್ದರು, ಕೆಟ್ಟ ಚೆಂಡಿಗಾಗಿ ಕಾಯುತ್ತಿದ್ದರು ಮತ್ತು ನಂತರ ಶತಕ ಗಳಿಸಿದರು," ಎಂದು ಸುನಿಲ್ ಗವಾಸ್ಕರ್ ಸ್ಟಾರ್ ಸ್ಪೋರ್ಟ್ಸ್‌ಗೆ ತಿಳಿಸಿದರು.

Story first published: Friday, December 22, 2023, 6:30 [IST]
Other articles published on Dec 22, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+