ಭಾರತ vs ದ. ಆಫ್ರಿಕಾ: ಶಾರ್ದೂಲ್ ದಾಳಿಗೆ ಹರಿಣಗಳು ತತ್ತರ: 5 ವಿಕೆಟ್ ಗೊಂಚಲು ಪಡೆದ ಠಾಕೂರ್

ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಬೌಲರ್‌ಗಳ ಪ್ರದರ್ಶನದಿಂದಾಗಿ ದಕ್ಷಿಣ ಆಫ್ರಿಕಾ ತಂಡ ಕೂಡ ಸಂಕಷ್ಟಕ್ಕೆ ಸಿಲುಕಿದೆ. ಅದರಲ್ಲೂ ಎರಡನೇ ದಿನದಾಟದಲ್ಲಿ ಭಾರತದ ವೇಗಿ ಶಾರ್ದೂಲ್ ಠಾಕೂರ್ ದಾಳಿಗೆ ದಕ್ಷಿಣ ಆಫ್ರಿಕಾ ತಂಡ ತತ್ತರಿಸಿ ಹೋಗಿದೆ. ಅದ್ಭುತ ಪ್ರದರ್ಶನ ನೀಡಿದ ಶಾರ್ದೂಲ್ ಠಾಕೂರ್ ವಾಂಡರರ್ಸ್ ಕ್ರೀಡಾಂಗಣದಲ್ಲಿ ಐದು ವಿಕೆಟ್‌ಗಳ ಗೊಂಚಲು ಪಡೆದಿದ್ದಾರೆ. ಇದು ಶಾರ್ದೂಲ್ ಠಾಕೂರ್ ಅವರ ಚೊಚ್ಚಲ ಐದು ವಿಕೆಟ್‌ಗಳ ಗೊಂಚಲು ಎಂಬುದು ಗಮನಾರ್ಹ ಅಂಶ.
ಎರಡನೇ ದಿನದಾಟದ ಶಾರ್ದೂಲ್ ಠಾಕೂರ್ ನೀಡಿದ ಪ್ರದರ್ಶನ ಭಾರತ ತಂಡ ಪಂದ್ಯದಲ್ಲಿ ಹಿಡಿತ ಕಳೆದುಕೊಳ್ಳದಂತೆ ಮಾಡಿದೆ. ಮೊದಲ ದಿನದಾಟದಲ್ಲಿ ದಕ್ಷಿಣ ಆಪ್ರಿಕಾ ಒಂದು ವಿಕೆಟ್ ಕಳೆದುಕೊಂಡಿತ್ತು. ಐಡೆನ್ ಮಾರ್ಕ್ರಮ್ ಮೊಹಮ್ಮದ್ ಶಮಿಗೆ ವಿಕೆಟ್ ಒಪ್ಪಿಸಿದ್ದರು. ಎರಡನೇ ದಿನದಾಟದಲ್ಲಿ ದಕ್ಷಿಣ ಆಫ್ರಿಕಾ ತಂಡ ಕಳೆದುಕೊಂಡ ಮೊದಲ ಐದು ವಿಕೆಟ್‌ಗಳು ಕೂಡ ಶಾರ್ದೂಲ್ ಠಾಕೂರ್ ಪಾಲಾಗಿತ್ತು.
ಮೊದಲಿಗೆ ಎರಡನೇ ವಿಕೆಟ್‌ಗೆ ಅರ್ಧ ಶತಕದ ಜೊತೆಯಾಟವನ್ನು ಆಡಿ ಮುನ್ನುಗ್ಗುತ್ತಿದ್ದ ನಾಯಕ ಡೀನ್ ಎಲ್ಗರ್ ಹಾಗೂ ಕೀಗನ್ ಪೀಟರ್ಸನ್ ಜೋಡಿಯನ್ನು ಶಾರ್ದೂಲ್ ಬೇರ್ಪಡಿಸಿದ್ದರು. ನಾಯಕ ಡೀನ್ ಎಲ್ಗರ್ ವಿಕೆಟ್ ಕೀಪರ್ ಪಂತ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದರು. ನಂತರ ಕೀಗನ್ ಪೀಟರ್ಸನ್ ಕೂಡ ಶಾರ್ದೂಲ್ ಠಾಕೂರ್‌ಗೆ ಬಲಿಯಾದರು. ನಂತರ ರಸ್ಸೀ ವಾನ್ ಡರ್ ರಸ್ಸನ್ ಕೂಡ ಶಾರ್ದೂಲ್ ಠಾಕೂರ್‌ಗೆ ವಿಕೆಟ್ ಒಪ್ಪಿಸಿ ಫೆವಿಲಿಯನ್ ಸೇರಿಕೊಂಡಿದ್ದರು.
ನಂತರ ಟೆಂಬಾ ಬವುಮಾ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಕೈಲ್ ವೆರೈಯ್ನೆ ಅರ್ಧ ಶತಕದ ಜೊತೆಯಾಟವನ್ನು ಆಡಿ ಮುನ್ನುಗ್ಗುವ ನಿರೀಕ್ಷೆ ಹುಟ್ದಟಿಸಿದ್ದರು. ಈ ಜೋಡಿಯನ್ನು ಕೂಡ ಶಾರ್ದೂಲ್ ಠಾಕೂರ್ ಬೇರ್ಪಡಿಸುವಲ್ಲಿ ಯಶಸ್ವಿಯಾದರು. ನಂತರ ಅರ್ಧ ಶತಕದ ಪ್ರದರ್ಶನ ನೀಡಿದ್ದ ಟೆಂಬಾ ಬವುಮಾ 51 ರನ್‌ಗಳಸಿದ್ದ ವೇಳೆ ಮತ್ತೆ ಶಾರ್ದೂಲ್ ಠಾಕೂರ್‌ಗೆ ಬಲಿಯಾದರು. ಈ ಮೂಲಕ ಶಾರ್ದೂಲ್ ಠಾಕೂರ್ ತಮ್ಮ ಅಂತಾರಾಷ್ಟ್ರೀಯ ಟೆಸ್ಟ್ ವೃತ್ತಿ ಜೀವನದಲ್ಲಿ ಮೊದಲ ಐದು ವಿಕೆಟ್‌ಗಳ ಗೊಂಚಲನ್ನು ಸಂಪಾದಿಸಿದ್ದಾರೆ.
ಇದು ವಾಂಡರರ್ಸ್ ಕ್ರೀಡಾಂಗಣದಲ್ಲಿ ಭಾರತೀಯ ಬೌಲರ್‌ಗಳು ಪಡೆದ ಆರನೇ ಐದು ವಿಕೆಟ್‌ಗಳ ಗೊಂಚಲು ಎಂಬುದು ಮತ್ತೊಂದು ಅಂಶ. 1992/93 ರ ಸರಣಿಯಲ್ಲಿ ಇದೇ ಮೈದಾನದಲ್ಲಿ ಪಂದ್ಯ ನಡೆದಿದ್ದಾಗ ಅನಿಲ್ ಕುಂಬ್ಳೆ ಮೊದಲ ಬಾರಿಗೆ ಈ ಸಾಧನೆ ಮಾಡಿದ್ದರು. ಜಾವಗಲ್ ಶ್ರೀನಾಥ್, ಎಸ್ ಶ್ರೀಶಾಂತ್, ಜಸ್ಪ್ರೀತ್ ಬೂಮ್ರಾ, ಮೊಹಮ್ಮದ್ ಶಮಿ ಈ ಮೈದಾನದಲ್ಲಿ ಐದು ವಿಕೆಟ್‌ಗಳ ಗೊಂಚಲು ಪಡೆದ ಇತ್ತರ ಐವರು ಭಾರತೀಯ ಬೌಲರ್‌ಗಳಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications