ಡರ್ಬನ್‌ನಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ20 ಅಂತಾರಾಷ್ಟ್ರೀಯ ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ಟಾಸ್ ಇಲ್ಲದೇ ರದ್ದಾಗಿದೆ. ಭಾರತದ ಸ್ಟಾರ್ ವೇಗದ ಬೌಲರ್ ದೀಪಕ್ ಚಹಾರ್ ಮೊದಲ ಟಿ20ಯಲ್ಲಿ ಭಾರತದ ತಂಡದ ಭಾಗವಾಗಿರಲಿಲ್ಲ. ಇದೀಗ ಸಂಪೂರ್ಣ ಟಿ20 ಹೊರತಾಗಿ ಏಕದಿನ ಸರಣಿಯನ್ನೂ ದೀಪಕ್ ಮಿಸ್ ಮಾಡಿಕೊಳ್ಳಬಹುದು ಎಂಬ ಮಾಹಿತಿ ಹೊರಬಿದ್ದಿದೆ.
ತನ್ನ ತಂದೆಯ ಹಠಾತ್ ಅನಾರೋಗ್ಯದ ಕಾರಣ, ದೀಪಕ್ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20ಯಿಂದ ಹೊರಗುಳಿಯಲು ನಿರ್ಧರಿಸಿದ್ದರು. ಆದರೆ ಈಗ 'ಟೆಲಿಗ್ರಾಫ್ ಇಂಡಿಯಾ' ಪ್ರಕಾರ, ದೀಪಕ್ ಏಕದಿನ ಸರಣಿಯಿಂದ ಹೊರಗುಳಿಯಬಹುದು. ದೀಪಕ್ ಇನ್ನೂ ಡರ್ಬನ್‌ನಲ್ಲಿರುವ ಟೀಮ್ ಇಂಡಿಯಾಗೆ ಸೇರ್ಪಡೆಗೊಂಡಿಲ್ಲ, ಏಕೆಂದರೆ ಅವರ ಹತ್ತಿರದ ಕುಟುಂಬ ಸದಸ್ಯರು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಕುಟುಂಬ ಸದಸ್ಯರ ಸಲುವಾಗಿ ಅವರು ವಿರಾಮ ತೆಗೆದುಕೊಂಡಿದ್ದಾರೆ. ಅವರು ಮುಂದಿನ ದಿನಗಳಲ್ಲಿ ತಂಡವನ್ನು ಸೇರಿಕೊಳ್ಳುತ್ತಾರೆ. ಕುಟುಂಬದ ಸದಸ್ಯರ ಪರಿಸ್ಥಿತಿಯ ಮೇಲೆ, ಅವರು ತಂಡಕ್ಕೆ ಸೇರಿಕೊಳ್ಳುವ ಹಾಗೂ ಸೇರಿಕೊಳ್ಳದಿರಲು ನಿರ್ಧಾರವಾಗುತ್ತದೆ.

ಡಿಸೆಂಬರ್ 5 ರಂದು 'ಸ್ಪೋರ್ಟ್ಸ್ ತಕ್' ಜೊತೆ ಮಾತನಾಡಿದ್ದ ಟೀಮ್ ಇಂಡಿಯಾದ ವೇಗಿ ದೀಪಕ್ ಚಹಾರ್, ನಾನು ಇಂದು ಈ ಮಟ್ಟಕ್ಕೆ ಬೆಳೆದಿದ್ದರೆ, ತನ್ನ ತಂದೆಯೇ ತನ್ನನ್ನು ತಯಾರಿಸಿದ್ದೇ ಕಾರಣ.. ತನ್ನ ತಂದೆ ನನಗೆ ಬಹಳ ಮುಖ್ಯ ಎಂದು ಹೇಳಿದ್ದರು. ಇಂತಹ ಸ್ಥಿತಿಯಲ್ಲಿ ಅವರನ್ನು ಬಿಟ್ಟು ಅವರು ಎಲ್ಲಿಗೂ ಹೋಗಲು ಸಾಧ್ಯವಿಲ್ಲ. ಸಮಯಕ್ಕೆ ಸರಿಯಾಗಿ ತಂದೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದೆ, ಇಲ್ಲದಿದ್ದರೆ ಏನಾದರೂ ಆಗಬಹುದಿತ್ತು ಎಂದು ಹೇಳಿದ್ದರು. ಕೊನೆಗೆ ಆಫ್ರಿಕಾದಲ್ಲಿ ಟೀಂ ಇಂಡಿಯಾ ಸೇರುವುದು ತಂದೆಯ ಆರೋಗ್ಯದ ಮೇಲೆ ಅವಲಂಬಿತವಾಗಿದೆ ಎಂದು ಸಹ ಹೇಳಿದ್ದರು.

ದೀಪಕ್ ಇದುವರೆಗೆ ಟೀಂ ಇಂಡಿಯಾ ಪರ 13 ಏಕದಿನ ಹಾಗೂ 25 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ದೀಪಕ್ ತಮ್ಮ ವೃತ್ತಿಜೀವನದಲ್ಲಿ ಇದುವರೆಗೆ ಅನೇಕ ಗಾಯಗಳನ್ನು ಎದುರಿಸಿದ್ದಾರೆ, ಇದರಿಂದಾಗಿ ಅವರು ಆಗಾಗ್ಗೆ ತಂಡದಿಂದ ಹೊರಗುಳಿಯುತ್ತಿದ್ದಾರೆ. 13 ODI ಪಂದ್ಯಗಳಲ್ಲಿ, ಅವರು 30.56 ರ ಸರಾಸರಿಯಲ್ಲಿ 16 ವಿಕೆಟ್‌ಗಳನ್ನು ಮತ್ತು 25 T20I ಪಂದ್ಯಗಳಲ್ಲಿ, ಅವರು 24.09 ರ ಸರಾಸರಿಯಲ್ಲಿ 31 ವಿಕೆಟ್‌ಗಳನ್ನು ಪಡೆದಿದ್ದಾರೆ.