"ಭಾರತಕ್ಕಿರುವ ಸವಾಲು ಅದೊಂದೆ": ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಬಗ್ಗೆ ಜಾಫರ್ ಹೇಳಿದ್ದಿಷ್ಟು!

ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಮೇಲೆ ಕ್ರಿಕೆಟ್ ಅಭಿಮಾನಿಗಳ ಚಿತ್ತ ನೆಟ್ಟಿದೆ. ವಿಶ್ವದ ಎಲ್ಲಾ ಟೆಸ್ಟ್ ಆಡುವ ತಂಡಗಳನ್ನು ಅದರದ್ದೇ ನೆಲದಲ್ಲಿ ಮಣಿಸಿದ್ದರೂ ಭಾರತಕ್ಕೆ ದಕ್ಷಿಣ ಆಫ್ರಿಕಾ ತಂಡ ಮಾತ್ರ ಇನ್ನೂ ಕಗ್ಗಂಟಾಗಿಯೇ ಉಳಿದುಕೊಂಡಿದೆ. ಹೀಗಾಗಿ ದಕ್ಷಿಣ ಆಫ್ರಿಕಾ ವಿರುದ್ಧದ ಈ ಸರಣಿಯನ್ನು ಭಾರತ ಜಯಿಸಲು ಸರ್ವ ಸಿದ್ಧತೆಯನ್ನು ಕೂಡ ನಡೆಸುತ್ತಿದೆ. ಈ ಎರಡು ತಂಡಗಳ ಮುಖಾಮುಖಿಯ ಬಗ್ಗೆ ಅನೇಕ ಕ್ರಿಕೆಟ್ ವಿಶ್ಲೇಷಕರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈಗ ಟೀಮ್ ಇಂಡಿಯಾದ ಮಾಜಿ ಆಟಗಾರ ವಾಸಿಂ ಜಾಫರ್ ಕೂಡ ಈ ಸರಣಿಯ ಬಗ್ಗೆ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ವಾಸಿಂ ಜಾಫರ್ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೀಮ್ ಇಂಡಿಯಾಕ್ಕಿರುವ ಸವಾಲವನ್ನು ವಿವರಿಸಿದ್ದಾರೆ. ಟೀಮ್ ಇಂಡಿಯಾದ ದಾಂಡಿಗರಿಗೆ ದಕ್ಷಿಣ ಆಫ್ರಿಕಾದ ವೇಗದ ಬೌಲಿಂಗ್ ವಿಭಾಗ ಖಂಡಿತವಾಗಿಯೂ ಭಾರೀ ಸವಾಲನ್ನು ಒಡ್ಡಲಿದೆ ಎಂದಿದ್ದಾರೆ ವಾಸಿಂ ಜಾಫರ್. ಅದರಲ್ಲೂ ಕಗಿಸೋ ರಬಾಡ ಅವರಂತಾ ಬೌಲರ್ ಈ ಸರಣಿಯಲ್ಲಿ ಭಾರತ ತಂಡದ ಬ್ಯಾಟರ್‌ಗಳಿಗೆ ಬಹಳ ಕಾಡಲಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಬಾರಿಯ ಸರಣಿಗೂ ಮುನ್ನ ದಕ್ಷಿಣ ಆಫ್ರಿಕಾ ತಮಡದ ವೇಗದ ಬೌಲರ್ ಅನ್ರಹ್ ನಾರ್ಕಿಯಾ ಗಾಯದಿಂದಾಗಿ ಸರಣಿಯಿಂದ ಹೊರಬಿದ್ದಿದ್ದಾರೆ. ಹಾಗಿದ್ದರು ಕೂಡ ತಂಡದಲ್ಲಿ ಕಗಿಸೋ ರಬಾಡ, ಲುಂಗಿ ಎನ್‌ಗಿಡಿ, ಡುವಾನ್ನೆ ಒಲಿವರ್, ಮಾಕ್ರೋ ಜಾನ್ಸನ್, ಬೌರನ್ ಹೆಂಡ್ರಕ್ಸ್ ಅವರಂತಾ ವೇಗಿಗಳಿದ್ದಾರೆ. ಇವರು ಭಾರತೀಯ ತಂಡವನ್ನು ಭಾರೀ ಸವಾಲೊಡ್ಡಲಿದ್ದಾರೆ.

ವಿರಾಟ್ ಪಡೆಗೆ ತೊಂದರೆ ನೀಡಲಿದ್ದಾರೆ ರಬಾಡ
ಇನ್ನು ಈ ಸಂದರ್ಭದಲ್ಲಿ ವಾಸಿಂ ಜಾಫರ್ ಟೀಮ್ ಇಂಡಿಯಾದ ಬ್ಯಾಟಿಂಗ್ ವಿಭಾಗಕ್ಕೆ ವೇಗಿ ಕಗಿಸೋ ರಬಾಡ ಬಹಳಷ್ಟು ತೊಂದರೆಯನ್ನು ನೀಡಲಿದ್ದಾರೆ ಎಂದಿದ್ದಾರೆ. ಅನುಭವಿಗಳಾದ ಚೇತೇಶ್ವರ್ ಪೂಜಾರ, ಫಾರ್ಮ್ ಕಳೆದುಕೊಂಡಿರುವ ಅಜಿಂಕ್ಯಾ ರಹಾನೆ ಅವರಂತಾ ಆಟಗಾರರಿದ್ದರೂ ಈ ವೇಗಿ ಭಾರತಕ್ಕೆ ಹೆಚ್ಚು ಅಪಾಯಕಾರಿಯಾಗಲಿದ್ದಾರೆ ಎಂದು ಜಾಫರ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಭಾರತಕ್ಕೆ ಸವಾಲಿನ ಪ್ರವಾಸ
"ದಕ್ಷಿಣ ಆಫ್ರಿಕಾ ತಂಡ ಅತ್ಯುತ್ತಮವಾದ ವೇಗದ ಬೌಲಿಂಗ್ ವಿಭಾಗವನ್ನು ಹೊಂದಿದೆ ಎಂಬುದಲ್ಲಿ ಯಾವುದೇ ಅನುಮಾನವಿಲ್ಲ. ಅದರಲ್ಲೂ ರಬಾಡ ಅತ್ಯುತ್ತಮ ಆಟಗಾರ. ಭಾರತೀಯ ಬ್ಯಾಟರ್‌ಗಳಿಗೆ ಅವರು ಸವಾಲೊಡ್ಡಲಿದ್ದಾರೆ. ಅವರ ದಾಳಿಯಲ್ಲಿ ಅತ್ಯುತ್ತಮ ಗುಣಮಟ್ಟವಿದೆ. ಆದರೆ ಅವರ ಬ್ಯಾಟಿಂಗ್ ವಿಭಾಗ ಈ ಹಿಂದಿನಂತಿಲ್ಲ. ಹಾಗಿದ್ದರೂ ಕೂಡ ಈ ಸರಣಿ ಭಾರತದ ಪಾಲಿಗೆ ಅತ್ಯಂತ ಸವಾಲಿನದ್ದಾಗಿದೆ" ಎಂದಿದ್ದಾರೆ ವಾಸಿಂ ಜಾಫರ್.

ಭಾರತವನ್ನು ಬೌಲರ್‌ಗಳು ಕಾಪಾಡಲಿದ್ದಾರೆ
ಇನ್ನು ಈ ಸರಣಿಯಲ್ಲಿ ಭಾರತದ ಬೌಲಿಂಗ್ ವಿಭಾಗದ ಪಾತ್ರ ನಿರ್ಣಾಯಕವಹಿಸುತ್ತದೆ ಎಂದು ವಾಸಿಂ ಜಾಫರ್ ಅಭಿಪ್ರಾಯಪಟ್ಟಿದ್ದಾರೆ. "ಟೀಮ್ ಇಂಡಿಯಾದ ಬೌಲರ್‌ಗಳು ಈ ಸರಣಿಯಲ್ಲಿ ಭಾರತಕ್ಕೆ ಉತ್ತಮ ಪ್ರಮಾಣದಲ್ಲಿ ನೆರವಾಗಲಿದ್ದಾರೆ. ಭಾರತದ ಬೌಲಿಂಗ್ ವಿಭಾಗ ಈಗ ಸಾಕಷ್ಟು ಅನುಭವವನ್ನು ಹೊಂದಿದೆ. ಮೊಹಮ್ಮದ್ ಶಮಿ, ಜಸ್ಪ್ರೀತ್ ಬೂಮ್ರಾ ಸಾಕಷ್ಟು ಅನುಭವವನ್ನು ಪಡೆದುಕೊಂಡಿದ್ದಾರೆ. ಭಾರತ ಎಲ್ಲಾ ವಿಭಾಗದಲ್ಲಿಯೂ ಉತ್ತಮವಾದ ಪ್ರದರ್ಶನ ನೀಡಲಿದೆ" ಎಂದು ವಾಸಿಂ ಜಾಫರ್ ಅಭಿಪ್ರಾಯಪಟ್ಟಿದ್ದಾರೆ.
ಟೀಮ್ ಇಂಡಿಯಾ ಸ್ಕ್ವಾಡ್: ವಿರಾಟ್ ಕೊಹ್ಲಿ (ನಾಯಕ), ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ್ ಪೂಜಾರ, ಪ್ರಿಯಾಂಕ್ ಪಾಂಚಾಲ್, ಶ್ರೇಯಸ್ ಅಯ್ಯರ್, ಅಜಿಂಕ್ಯ ರಹಾನೆ, ಹನುಮ ವಿಹಾರಿ, ರಿಷಬ್ ಪಂತ್ (ವಿಕೆಟ್ ಕೀಪರ್), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಆರ್ ಅಶ್ವಿನ್, ಜಯಂತ್ ಯಾದವ್, ಇಶಾಂತ್ ಶರ್ಮಾ, ಮೊಹಮ್ಮದ್. ಶಮಿ, ಉಮೇಶ್ ಯಾದವ್, ಜಸ್ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್,
ಮೀಸಲು ಆಟಗಾರರು: ನವದೀಪ್ ಸೈನಿ, ಸೌರಭ್ ಕುಮಾರ್, ಅರ್ಜನ್ ನಾಗ್ವಾಸ್ವಾಲ್ಲಾ, ದೀಪಕ್ ಚಾಹರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications