
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾ ಬೌಲರ್‌ಗಳು ಮಿಂಚಿದ್ದಾರೆ. ಭಾರತ ಅಲ್ಪ ಮೊತ್ತಕ್ಕೆ ಆಲೌಟ್ ಆಗಿದ್ದರೂ ಬೌಲಿಂಗ್ ವಿಭಾಗದ ಪ್ರದರ್ಶನ ತಂಡಕ್ಕೆ ನೆರವಾಗಿದೆ. ಎರಡನೇ ದಿನದಾಟದಲ್ಲಿ ದಕ್ಷಿಣ ಆಫ್ರಿಕಾದ ದಾಂಡಿಗರ ವಿರುದ್ಧ ಅದ್ಭುತ ದಾಳಿ ಸಂಘಟಿಸಿದ ಟೀಮ್ ಇಂಡಿಯಾ ವೇಗಿಗಳು ಭಾರೀ ಯಶಸ್ಸು ಸಾಧಿಸಿದ್ದಾರೆ. ದಕ್ಷಿಣ ಆಫ್ರಿಕಾ ತಂಡವನ್ನು ಭಾರತೀಯ ಬೌಲರ್‌ಗಳು 210 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಟೀಮ್ ಇಂಡಿಯಾದ ಎರಡನೇ ದಿನದ ಪ್ರದರ್ಶನದ ಬಗ್ಗೆ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಮಾತನಾಡಿದ್ದಾರೆ. ಅದರಲ್ಲೂ ಭಾರತದ ಓರ್ವ ವೇಗಿಯ ಬಗ್ಗೆ ಗವಾಸ್ಕರ್ ವಿಶೇಷ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಭಾರತದ ತಂಡದ ಓರ್ವ ವೇಗದ ಬೌಲರ್‌ನ ಬಗ್ಗೆ ದಕ್ಷಿಣ ಆಫ್ರಿಕಾ ತಂಡ ಹೆಚ್ಚು ಆತಂಕಗೊಂಡಿದೆ ಎಂದಿದ್ದಾರೆ. ಸುನಿಲ್ ಗವಾಸ್ಕರ್ ಈ ಹೇಳಿಕೆಗೆ ಪೂರಕವಾಗಿಯೇ ಭಾರತದ ಈ ವೇಗಿ ಎರಡನೇ ದಿನ ಅದ್ಭುತ ಯಶಸ್ಸು ಸಾಧಿಸಿದ್ದಾರೆ.
ಗವಾಸ್ಕರ್ ಮೆಚ್ಚುಗೆ ವ್ಯಕ್ತಪಡಿಸಿದ ಬೌಲರ್ ಯಾರು: ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಟೀಮ್ ಇಂಡಿಯಾದ ಪ್ರಮುಖ ವೇಗಿ ಜಸ್ಪ್ರಿತ್ ಬೂಮ್ರಾ ಬೌಲಿಂಗ್ ದಾಳಿಯ ಬಗ್ಗೆ ಸುನಿಲ್ ಗವಾಸ್ಕರ್ ಹೀಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ. "ದಕ್ಷಿಣ ಆಪ್ರಿಕಾ ತಂಡದ ಬೌಲರ್‌ಗಳು ಹೆಚ್ಚು ಆತಂಕಗೊಂಡಿರುವುದು ಜಸ್ಪ್ರಿತ್ ಬೂಮ್ರಾ ಬಗ್ಗೆ. ಆತ ನಿಧಾನಗತಿಯ ಬೌಲಿಂಗ್ ಮಾಡಬಲ್ಲ. ಎಡಗೈ ಆಟಗಾರ ಡೀನ್ ಎಲ್ಗನ್‌ನನ್ನು ಔಟ್ ಮಾಡುವಂತಾ ಎಸೆತವನ್ನು ಎಸೆಯಬಲ್ಲ. ಬಲಗೈ ದಾಂಡಿಗರನ್ನು ಫೆವಿಲಿಯನ್‌ಗೆ ಅಟ್ಟುವಂತಾ ಎಸೆತವನ್ನು ಎಸೆಯಬಲ್ಲ. ಅತ್ಯಂತ ವೇಗದ ಯಾರ್ಕರ್ ಎಸೆಯಬಲ್ಲ. ಅತ್ಯಂತ ತಿಕ್ಷ್ಣವಾದ ಬೌನ್ಸರ್‌ಗಳನ್ನು ಕುಡ ಎಸೆಯಬಲ್ಲ. ಆತನ ಬಳಿ ಎಲ್ಲಾ ಅಸ್ತ್ರಗಳು ಕೂಡ ಇದೆ. ತನ್ನ ಬಳಿಯಿರುವ ಈ ಅಸ್ತ್ರಗಳನ್ನು ಅತ್ಯಂತ ಚಾಣಕ್ಷತನದಿಂದ ಅದ್ಭುತವಾಗಿ ಬಳಸುವ ಜಾಣ್ಮೆ ಕೂಡ ಜಸ್ಪ್ರಿತ್ ಬೂಮ್ರಾ ಅವರಲ್ಲಿದೆ" ಎಂದಿದ್ದಾರೆ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್.
5 ವಿಕೆಟ್ ಗೊಂಚಲು ಪಡೆದ ಬೂಮ್ರಾ: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿ ಟೀಮ್ ಇಂಡಿಯಾದ ಪ್ರಮುಖ ವೇಗಿ ಜಸ್ಪ್ರಿತ್ ಬೂಮ್ರಾ ಅದ್ಭುತವಾದ ಬೌಲಿಂಗ್ ದಾಳಿ ನಡೆಸಿದ್ದಾರೆ. ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಬೂಮ್ರಾ ಐದು ವಿಕೆಟ್‌ಗಳ ಗೊಂಚಲು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಟೀಮ್ ಇಂಡಿಯಾದ ಈ ವೇಗಿಯ ಬೌಲಿಂಗ್ ದಾಳಿಗೆ ವಿಕೆಟ್ ಒಪ್ಪಿಸಿದ ಐವರು ಆಪ್ರಿಕನ್ ಬ್ಯಾಟರ್‌ಗಳ ಪೈಕಿ ನಾಯಕ ಡೀನ್ ಎಲ್ಗರ್, ಮಾರ್ಕ್ರಮ್ ಹಾಗೂ ಕೀಗನ್ ಪೀಟರ್ಸನ್ ಕೂಡ ಸೇರಿದ್ದಾರೆ.
ದಕ್ಷಿಣ ಆಫ್ರಿಕಾ ಆಡುವ ಬಳಗ: ಡೀನ್ ಎಲ್ಗರ್ (ನಾಯಕ), ಐಡೆನ್ ಮಾರ್ಕ್ರಾಮ್, ಕೀಗನ್ ಪೀಟರ್ಸನ್, ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್, ಟೆಂಬಾ ಬವುಮಾ, ಕೈಲ್ ವೆರ್ರೆನ್ನೆ (ವಿಕೆಟ್ ಕೀಪರ್), ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಡುವಾನ್ನೆ ಒಲಿವಿಯರ್, ಕಗಿಸೊ ರಬಾಡಾ, ಲುಂಗಿ ಎನ್ಗಿಡಿ
ಬೆಂಚ್: ಪ್ರೆನೆಲನ್ ಸುಬ್ರಾಯೆನ್, ಬ್ಯೂರಾನ್ ಹೆಂಡ್ರಿಕ್ಸ್, ಸಿಸಂದಾ ಮಗಾಲಾ, ಜಾರ್ಜ್ ಲಿಂಡೆ, ವಿಯಾನ್ ಮುಲ್ಡರ್, ಸರೆಲ್ ಎರ್ವೀ, ರಯಾನ್ ರಿಕೆಲ್ಟನ್, ಗ್ಲೆಂಟನ್ ಸ್ಟೌರ್ಮನ್
ಭಾರತ ಆಡುವ ಬಳಗ: ಆಡುತ್ತಿರುವವರು: ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್
ಬೆಂಚ್ ಜಯಂತ್ ಯಾದವ್, ಪ್ರಿಯಾಂಕ್ ಪಾಂಚಾಲ್, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಮೊಹಮ್ಮದ್ ಸಿರಾಜ್, ವೃದ್ಧಿಮಾನ್ ಸಹಾ, ಇಶಾಂತ್ ಶರ್ಮಾ