IND vs SA Super 8: ಪಂದ್ಯದ ಸಮಯ, ನೇರಪ್ರಸಾರ, ಪಿಚ್ ವರದಿ, ಪ್ಲೇಯಿಂಗ್ 11 ಮಾಹಿತಿ
ಅಹಮದಾಬಾದ್: ಕಳೆದ ಬಾರಿ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಕಾದಟ ನಡೆಸಿದ್ದ ಟೀಮ್ ಇಂಡಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಈ ಬಾರಿ ಸೂಪರ್ 8 ಹಂತದಲ್ಲಿ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಗೆಲುವು ದಾಖಲಿಸುವ ಇರಾದೆ ಭಾರತ ತಂಡದ್ದಾಗಿದೆ. ಇನ್ನು ಉಭಯ ತಂಡಗಳು ಲೀಗ್ ಹಂತದಲ್ಲಿ ಅಜೇಯ ಓಟವನ್ನು ಕಂಡಿವೆ. ಹೀಗಾಗಿ ಬಲಿಷ್ಠ ತಂಡಗಳ ಕಾದಾಟವನ್ನು ಕಣ್ಣು ತುಂಬಿಕೊಳ್ಳಲು ಅಭಿಮಾನಿಗಳು ಸಹ ತಯಾರಾಗಿದ್ದಾರೆ.
ಟೀಮ್ ಇಂಡಿಯಾದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ರನ್ ಕಲೆ ಹಾಕುವಲ್ಲಿ ವಿಫಲರಾಗುತ್ತಿರುವುದು ತಂಡದ ಚಿಂತೆಯನ್ನು ದ್ವಿಗುಣ ಮಾಡಿದೆ. ಇವರು ಭಾರತದ ಪರ ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಬಾರಿ ಸೊನ್ನೆ ಸುತ್ತಿದ ದಾಖಲೆ ಬರೆದಿದ್ದಾರೆ. ಅಭಿಷೇಕ್ ಮಹತ್ವದ ಪಂದ್ಯದಲ್ಲಿ ಬಿಗ್ ಇನಿಂಗ್ಸ್ ಕಟ್ಟುವ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಈ ಪಂದ್ಯದ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಇಶಾನ್, ಐಡನ್ ಮೇಲೆ ಹೆಚ್ಚಿದ ಭರವಸೆ
ಟೀಮ್ ಇಂಡಿಯಾದ ಆರಂಭಿಕ ಆಟಗಾರ ಇಶಾನ್ ಕಿಶನ್ ಆರ್ಭಟ ಪ್ರಸಕ್ತ ಟಿ20 ವಿಶ್ವಕಪ್‌ನಲ್ಲಿ ಜೋರಾಗಿದೆ. ಇವರು ದೇಶೀಯ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಆಡಿದ ರೀತಿಯಲ್ಲಿ ರನ್ ಕಲೆ ಹಾಕುತ್ತಿದ್ದಾರೆ. ಇವರು ಭಾರತದ ಪರ ಭರವಸೆ ಮೂಡಿಸಿದ್ದಾರೆ. ದಕ್ಷಿಣ ಆಫ್ರಿಕಾದ ನಾಯಕ ಐಡನ್ ಮಾರ್ಕ್ರಾಮ್ ಮಧ್ಯಮ ಕ್ರಮಾಂಕದಿಂದ ಆರಂಭಿಕರಾಗಿ ಬಡ್ತಿ ಪಡೆದ ಮೇಲೆ ರನ್‌ಗಳನ್ನು ವೇಗವಾಗಿ ಕಲೆ ಹಾಕುತ್ತಿದ್ದಾರೆ. ಇವರು ದಕ್ಷಿಣ ಆಫ್ರಿಕಾ ಪರ ಗರಿಷ್ಠ ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಾರೆ.
ಯಾರಿಗೆ ಪಿಚ್ ಸಹಾಯ ಮಾಡಲಿದೆ?
ಅಹಮದಾಬಾದ್ ಪಿಚ್ ಬ್ಯಾಟರ್‌ಗಳಿಗೆ ಹೆಚ್ಚಿನ ನೆರವು ನೀಡುವ ಸಾಧ್ಯತೆ ಇದೆ. ಹೀಗಾಗಿ ಈ ಪಿಚ್‌ನಲ್ಲಿ ಟಾಸ್ ಗೆದ್ದ ತಂಡ ಚೇಸ್ ಮಾಡಲು ಇಷ್ಟ ಪಡುತ್ತದೆ. ಈ ಪಿಚ್ ಮೇಲೆ ಬ್ಯಾಟರ್‌ಗಳ ಆರ್ಭಟ ಜೋರಾಗಿರುತ್ತದೆ. ಸ್ಪಿನ್ ಬೌಲರ್‌ಗಳು ಸಹ ವಾತಾವರಣದ ಲಾಭ ಪಡೆಯಬಹುದು. ಎರಡನೇ ಇನಿಂಗ್ಸ್ ವೇಳೆ ಇಬ್ಬನಿ ಬೀಳುವ ಸಾಧ್ಯತೆ ಇದೆ.
ವಾತಾವರಣ ಹೇಗಿರಲಿದೆ?
ವಾತಾವರಣ ಕ್ರಿಕೆಟ್ ಆಡಲು ಅನುಕೂಲಕರವಾಗಿದ್ದು, ಪಂದ್ಯಕ್ಕೆ ಮಳೆ ಕಾಟ ನೀಡುವುದಿಲ್ಲ ಎಂದು ತಿಳಿದು ಬಂದಿದೆ.
ಟಿ20 ವಿಶ್ವಕಪ್ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಎಷ್ಟು ಬಾರಿ ಮುಖಾಮುಖಿಯಾಗಿವೆ?
ಟಿ20 ವಿಶ್ವಕಪ್‌ನಲ್ಲಿ ಒಟ್ಟಾರೆ ಭಾರತ, ದಕ್ಷಿಣ ಆಫ್ರಿಕಾ ತಂಡಗಳು 7 ಬಾರಿ ಮುಖಾಮುಖಿಯಾಗಿದ್ದು, ಭಾರತ 5 ಪಂದ್ಯಗಳನ್ನು ಗೆದ್ದರೆ, ದಕ್ಷಿಣ ಆಫ್ರಿಕಾ 2 ಪಂದ್ಯದಲ್ಲಿ ಜಯ ಸಾಧಿಸಿದೆ.
ಹೇಗಿರಲಿದೆ ಭಾರತದ ಪ್ಲೇಯಿಂಗ್ ಇಲೆವೆನ್?
ಅಭಿಷೇಕ್ ಶರ್ಮಾ, ಇಶಾನ್ ಕಿಶನ್, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರಿಂಕು ಸಿಂಗ್, ಶಿವಂ ದುಬೆ, ಅಕ್ಷರ್ ಪಟೇಲ್, ಅರ್ಶದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ.
ದಕ್ಷಿಣ ಆಫ್ರಿಕಾ ತಂಡದಲ್ಲಿ ಯಾರಿಗೆಲ್ಲಾ ಸಿಗುತ್ತೆ ಅವಕಾಶ?
ಏಡನ್ ಮಾರ್ಕ್ರಾಮ್, ಕ್ವಿಂಟನ್ ಡಿ ಕಾಕ್, ರಿಯಾನ್ ರಿಕೆಲ್ಟನ್, ಡೆವಾಲ್ಡ್ ಬ್ರೆವಿಸ್, ಟ್ರಿಸ್ಟಾನ್ ಸ್ಟಬ್ಸ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಕಾರ್ಬಿನ್ ಬಾಷ್, ಕೇಶವ್ ಮಹಾರಾಜ್, ಕಗಿಸೊ ರಬಾಡ/ಆನ್ರಿಚ್ ನಾರ್ಟ್ಜೆ, ಲುಂಗಿ ಎನ್ಗಿಡಿ.
ಭಾರತ, ದಕ್ಷಿಣ ಆಫ್ರಿಕಾ ಪಂದ್ಯ ನೋಡುವುದು ಎಲ್ಲಿ?
ಟಿ20 ವಿಶ್ವಕಪ್‌ನ ಸೂಪರ್ 8 ಹಂತದ ಮೂರನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಕಾದಾಟ ನಡೆಸಲಿದ್ದು, ಈ ಪಂದ್ಯವನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ವೀಕ್ಷಿಸಬಹುದಾಗಿದೆ. ಇನ್ನು ಆನ್‌ಲೈನ್‌ನಲ್ಲಿ ಈ ಪಂದ್ಯವನ್ನು ಜಿಯೋಹಾಟ್‌ಸ್ಟಾರ್‌ನಲ್ಲಿ ನೋಡಬಹುದಾಗಿದೆ.
ಪಂದ್ಯ ನಡೆಯುವ ಸಮಯ ಯಾವಾಗ?
ಸೂಪರ್ 8 ಹಂತದ ಪಂದ್ಯ ಸಂಜೆ 7ಕ್ಕೆ ಆರಂಭವಾಗಲಿದೆ. ಪಂದ್ಯಕ್ಕೂ ಅರ್ಧಗಂಟೆ ಮುನ್ನ ಟಾಸ್ ನಡೆಯಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications