ಭಾರತ vs ದ. ಆಫ್ರಿಕಾ: ಟ್ರೋಫಿ ಗೆಲುವಿನ ಮೇಲೆ ಹರಿಣ ಪಡೆ ಕಣ್ಣು: ಸರಣಿ ಸಮಬಲಗೊಳಿಸಲು ಭಾರತ ಪ್ರಯತ್ನ

ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧಧ ಟಿ20 ಸರಣಿ ನಾಲ್ಕನೇ ಪಂದ್ಯ ರಾಜ್‌ಕೋಟ್‌ನಲ್ಲಿ ಇಂದು ನಡೆಯಲಿದೆ. ಎರಡು ತಂಡಗಳು ಕೂಡ ಈಗಾಗಲೇ ರಾಜ್‌ಕೋಟ್ ತಲುಪಿದ್ದು ಅಭ್ಯಾಸವನ್ನು ನಡೆಸಿದೆ. ದಕ್ಷಿಣ ಆಫ್ರಿಕಾ ತಂಡ ಈ ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆ ಸಾಧಿಸಿದ್ದು ಈ ಪಂದ್ಯದಲ್ಲಿ ಗೆದ್ದು ಸರಣಿ ವಶಕ್ಕೆ ಪಡೆಯುವ ಉತ್ಸಾಹದಲ್ಲಿದೆ. ಕಳೆದ ಪಂದ್ಯದ ಸೋಲಿನಿಂದ ಹೊರಗೆ ಬರಲು ಟೆಂಬಾ ಬವುಮಾ ಪಡೆ ಸರ್ವ ಪ್ರಯತ್ನ ನಡೆಸಲಿದೆ.
ವೈಜಾಗ್‌ನಲ್ಲಿ ನಡೆದ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡ ಗೆಲುವು ಸಾಧಿಸಿತ್ತು. ಈ ಮೂಲಕ ಹರಿಣಗಳ ವಿರುದ್ಧದ ಸತತ ಸೋಲಿನ ಸರಪಳಿಯನ್ನು ಕಳಚಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಹಾಗಿದ್ದರೂ ಸರಣಿ ವಶಕ್ಕೆ ಪಡೆಯಬೇಕಿದ್ದರೆ ಉಳಿದ ಎರಡು ಪಂದ್ಯಗಳನ್ನು ಕೂಡ ಭಾರತ ಗೆಲ್ಲಬೇಕಿದೆ. ಹಾಗಾಗಿ ರಾಜ್‌ಕೋಟ್‌ನಲ್ಲಿ ನಡೆಯಲಿರುವ ಪಂದ್ಯದಲ್ಲಿ ಕೂಡ ಭಾರತ ಗೆದ್ದರೆ ಮಾತ್ರವೇ ಸರಣಿ ಸಮಬಲಗೊಳ್ಳಲು ಸಾಧ್ಯವಿದೆ.

ಕಮ್‌ಬ್ಯಾಕ್ ಮಾಡಿದ ಬೌಲಿಂಗ್ ವಿಭಾಗ
ಮೊದಲ ಎರಡು ಪಂದ್ಯಗಳಲ್ಲಿ ಭಾರತದ ಬೌಲಿಂಗ್ ಪ್ರದರ್ಶನ ಕಳವಳಕಾರಿಯಾಗಿತ್ತು. ಆರಂಭಿಕ ಹಂತದಲ್ಲಿ ದಕ್ಷಿಣ ಆಫ್ರಿಕಾ ತಂಡದ ಆಟಗಾರರನ್ನು ಔಟ್ ಮಾಡುವಲ್ಲಿ ಯಶಸ್ವಿಯಾಗಿದ್ದರೂ ನಂತರ ಈ ಯಶಸ್ಸಿನ ಲಾಭ ಪಡೆಯಲು ಭಾರತ ಬೌಲರ್‌ಗಳಿಗೆ ಸಾಧ್ಯವಾಗಿರಲಿಲ್ಲ. ಆದರೆ ಮೂರನೇ ಪಂದ್ಯದಲ್ಲಿ ಭಾರತ ತಂಡ ಅದ್ಭುತವಾಗಿ ಕಮ್‌ಬ್ಯಾಕ್ ಮಾಡಿದೆ. ಭಾರತದ ಬೌಲರ್‌ಗಳು ಕೂಡ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅದ್ಭುತ ಫಾರ್ಮ್‌ನಲ್ಲಿರುವ ಭುವನೇಶ್ವರ್ ಕುಮಾರ್‌ಗೆ ಸ್ಪಿನ್ನರ್ ಯುಜುವೇಂದ್ರ ಚಾಹಲ್ ಹಾಗೂ ಹರ್ಷಲ್ ಪಟೇಲ್ ಸಾಥ್ ನೀಡಿದ್ದಾರೆ. ಹೀಗಾಗಿ ಭಾರತೀಯ ತಂಡದ ಆತ್ಮವಿಶ್ವಾಸ ಹೆಚ್ಚಾಗಿದೆ.

ಲಯಕ್ಕೆ ಮರಳಿದ ಗಾಯಕ್ವಾಡ್
ಭಾರತ ತಂಡಕ್ಕೆ ಮತ್ತೊಂದು ಸಕಾರಾತ್ಮಕ ಸಂಗತಿಯೆಂದರೆ ಯುವ ಆಟಗಾರ ಋತುರಾಜ್ ಗಾಯಕ್ವಾಡ್ ಫಾರ್ಮ್. ಐಪಿಎಲ್‌ನಲ್ಲಿ ಹಾಗೂ ದೇಶೀಯ ಕ್ರಿಕೆಟ್‌ನಲ್ಲಿ ತಾನೆಂಥಾ ಅದ್ಭುತ ಆಟಗಾರ ಎಂಬುದನ್ನು ಅನೇಕ ಸಂದರ್ಭಗಳಲ್ಲಿ ಸಾಬೀತುಪಡಿಸಿದ್ದ ಗಾಯಕ್ವಾಡ್ ರಾಷ್ಟ್ರೀಯ ತಂಡದ ಪರವಾಗಿ ಮಿಂಚಲು ಸತತವಾಗಿ ವಿಫಲವಾಗಿದ್ದರು. ಹೀಗಾಗಿ ಅವರ ಭವಿಷ್ಯದ ಮೇಲೆಯೂ ಪ್ರಶ್ನೆಗಳು ಎದ್ದಿತ್ತು. ಆದರೆ ವಿಜಾಗ್‌ನಲ್ಲಿ ನಡೆದ ಪಂದ್ಯದಲ್ಲಿ ಗಾಯಕ್ವಾಡ್ ಅದ್ಭುತವಾದ ಪ್ರದರ್ಶನ ನೀಡಿದ್ದಾರೆ. ಸ್ಪೋಟಕವಾಗಿ ಬ್ಯಾಟಿಂಗ್ ಮಾಡಿದ ಗಾಯಕ್ವಾಡ್ ಅರ್ಧ ಶತಕವನ್ನು ಕೂಡ ಗಳಿಸಿದರು. ಇನ್ನು ಇಶಾನ್ ಕಿಶನ್ ಅವರ ಫಾರ್ಮ್ ಕೂಡ ಮುಂದುವರಿದಿದೆ.

ವೈಫಲ್ಯ ಅನುಭವಿಸುತ್ತಿರುವ ಪಂತ್
ಆದರೆ ನಾಯಕ ಪಂತ್ ಮಾತ್ರ ಸತತವಾಗಿ ವೈಫಲ್ಯವನ್ನು ಅನುಭವಿಸುತ್ತಿದ್ದಾರೆ. ಈ ಸರಣಿಯಲ್ಲಿಯೂ ಪಂತ್ ಬ್ಯಾಟ್‌ನಿಂದ ನಿರೀಕ್ಷಿತ ರನ್‌ಗಳು ಹರಿದು ಬರುತ್ತಿಲ್ಲ. ನಾಯಕನಾಗಿ ಜವಾಬ್ಧಾರಿ ಬಹಿಸಿಕೊಂಡಿದ್ದರೂ ಪಂತ್ ಕೆಟ್ಟ ಹೊಡೆತಗಳನ್ನು ಬಾರಿಸಿ ವಿಕೆಟ್ ಕಳೆದುಕೊಳ್ಳುತ್ತಿರುವುದು ತಂಡಕ್ಕೆ ಹಿನ್ನಡೆಯಾಗಿದೆ. ಪಂತ್ ವಿಕೆಟ್ ಪಡೆಯಲು ಯಾವ ರೀತಿ ಕಾರ್ಯತಂತ್ರವನ್ನು ಹೆಣೆಯಬೇಕೆಂದು ಎದುರಾಳಿಗಳು ಸಂಪೂರ್ಣ ಯೋಜನೆಗಳೊಂದಿಗೆ ಸಜ್ಜಾಗಿದ್ದರೂ ಅದಕ್ಕೆ ಕೌಂಟರ್ ದಾಳಿಯಿಲ್ಲದೆ ಪಂತ್ ಎಡವುತ್ತಿರುವುದು ಸ್ಪಷ್ಟವಾಗಿದೆ.

ಸ್ಕ್ವಾಡ್‌ಗಳು ಹೀಗಿದೆ
ಭಾರತ: ಋತುರಾಜ್ ಗಾಯಕ್‌ವಾಡ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ & ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಾಹಲ್, ಅವೇಶ್ ಖಾನ್, ರವಿ ಬಿಷ್ಣೋಯ್, ದೀಪಕ್ ಹೂಡಾ, ವೆಂಕಟೇಶ್ ಸಿಂಗ್, ಅರ್ಶ್‌ದೀಪ್ ಸಿಂಗ್, ಉಮ್ರಾನ್ ಮಲಿಕ್
ದಕ್ಷಿಣ ಆಫ್ರಿಕಾ: ಟೆಂಬಾ ಬವುಮಾ (ನಾಯಕ), ರೀಜಾ ಹೆಂಡ್ರಿಕ್ಸ್, ಡ್ವೈನ್ ಪ್ರಿಟೋರಿಯಸ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಹೆನ್ರಿಕ್ ಕ್ಲಾಸೆನ್ (ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ವೇಯ್ನ್ ಪಾರ್ನೆಲ್, ಕಗಿಸೊ ರಬಾಡ, ಕೇಶವ್ ಮಹಾರಾಜ್, ತಬ್ರೈಜ್ ಶಮ್ಸಿ, ಅನ್ರಿಚ್ ನಾರ್ಟ್ಜೆ, ಟ್ರಿಸ್ಟಾನ್ ಸ್ಟಬ್ಸ್, ಲುಂಗಿ ನ್ಗಿಡಿ, ಲುಂಗಿ ಕ್ವಿಂಟನ್ ಡಿ ಕಾಕ್, ಐಡೆನ್ ಮಾರ್ಕ್ರಾಮ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications