Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ದ. ಆಫ್ರಿಕಾ: ರೋಹಿತ್ ಶರ್ಮಾ ಮೈಲಿಗಲ್ಲು ಹಿಂದಿಕ್ಕಲು ಸಜ್ಜಾದ ಶ್ರೇಯಸ್ ಐಯ್ಯರ್

Ind vs SA T20I series: Shreyas Iyer eye on overtake Rohit Sharma 1000-run landmark

ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯವಾಗಿದ್ದು ಈಗ ಎಲ್ಲರ ಗಮನ ಅಂತಾರಾಷ್ಟ್ರೀಯ ಕ್ರಿಕೆಟ್‌ನತ್ತ ನೆಟ್ಟಿದೆ. ಎರಡು ತಿಂಗಳ ಬಳಿಕ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಸಜ್ಜಾಗುತ್ತಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ 5 ಟಿ20 ಪಂದ್ಯಗಳ ಸರಣಿಗೆ ದಿನಗಣನೆ ಆರಂಭವಾಗಿದ್ದು ಜೂನ್ 9ರಂದು ದೆಹಲಿಯಲ್ಲಿ ಮೊದಲ ಪಂದ್ಯ ನಡೆಯಲಿದೆ.

ಇನ್ನು ಈ ಸರಣಿಯಲ್ಲಿ ಭಾರತ ತಂಡವನ್ನು ಕೆಎಲ್ ರಾಹುಲ್ ಮುನ್ನಡೆಸಲಿದ್ದು ದಿಗ್ಗಜ ಆಟಗಾರರು ಸರಣಿಯಿಂದ ಹೊರಗುಳಿದಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರೀತ್ ಬೂಮ್ರಾ ಅವರಂತಾ ಆಟಗಾರರಿಗೆ ವಿಶ್ರಾಂತಿ ನೀಡಿರುವ ಕಾರಣ ಶ್ರೇಯಸ್ ಐಯ್ಯರ್, ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ ಮತ್ತು ದಿನೇಶ್ ಕಾರ್ತಿಕ್ ಮೇಲೆ ಜವಾಬ್ಧಾರಿ ಹೆಚ್ಚಾಗಿದೆ. ಈ ಎಲ್ಲಾ ಆಟಗಾರರು ಐಪಿಎಲ್‌ನ್ಲಲಿ ಉತ್ತಮ ಪ್ರದರ್ಶನ ನಿಡಿ ಗಮನಸೆಳೆದಿದ್ದಾರೆ.

ಇನ್ನು ಭಾರತದ ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್ ಕೂಡ ಗಾಯದಿಂದಾಗಿ ಹೊರಗುಳಿದಿರುವ ಕಾರಣ ಶ್ರೇಯಸ್ ಐಯ್ಯರ್ ನಿರ್ನಾಯಕ ಪಾತ್ರವನ್ನು ವಹಿಸಬೇಕಿದೆ. ಐಪಿಎಲ್‌ನಲ್ಲಿ ಕೆಕೆಆರ್ ತಂಡವನ್ನು ಮುನ್ನ ನಡೆಸಿರುವ ಶ್ರೇಯಸ್ ಐಯ್ಯರ್ ವಿಶ್ವಕಪ್ ದೃಷ್ಟಿಯಿಂದ ತನ್ನ ಬ್ಯಾಟಿಂಗ್‌ಅನ್ನು ಮತ್ತಷ್ಟು ಚುರುಕುಗೊಳಿಸಬೇಕಿದೆ. ಮುಂಬೈ ಮೂಲದ ಈ ಆಟಗಾರ ಟಿ20 ಕ್ರಿಕೆಟ್‌ನಲ್ಲಿ ಪ್ರಮುಖ ಮೈಲಿಗಲ್ಲೊಂದರ ಸನಿಹದಲ್ಲಿದ್ದಾರೆ.

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 1000 ರನ್‌ಗಳಿಸಿದ ಆಟಗಾರೆ ಪಟ್ಟಿಗೆ ಸೇರಲು ಶ್ರೇಯಸ್ ಐಯ್ಯರ್ ಇನ್ನು 191 ರನ್‌ಗಳಷ್ಟು ಹಿಂದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಐದು ಪಂದ್ಯಗಳು ಇರುವ ಕಾರಣ ಈ ಮೊತ್ತವನ್ನು ತಲುಪುವ ಅವಕಾಶವಿದೆ. ಇದು ಸಾಧ್ಯವಾದರೆ ಈ ಸಾಧನೆ ಮಾಡಿದ 8ನೇ ಭಾರತೀಯ ಎನಿಸಿಕೊಳ್ಳಲಿದ್ದಾರೆ ಶ್ರೇಯಸ್ ಐಯ್ಯರ್. ಅಲ್ಲದೆ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ಶಿಖರ್ ಧವನ್, ಎಂಎಸ್ ಧೋನಿ, ಸುರೇಶ್ ರೈನಾ ಹಾಗೂ ಯುವರಾಜ್ ಸಿಂಗ್ ಅವರ ಪಟ್ಟಿಗೆ ಸೇರಿಕೊಳ್ಳಲಿದ್ದಾರೆ.

ಇದಕ್ಕಿಂತ ಹೆಚ್ಚಾಗಿ ಟಿ20Iನಲ್ಲಿ ರೋಹಿತ್ ಶರ್ಮಾಗೆ ಅತಿ ವೇಗವಾಗಿ 1000 ರನ್‌ಗಳನ್ನು ಪೂರೈಸಿದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರುವ ಅವಕಾಶವಿದೆ. 36 ಪಂದ್ಯಗಳಲ್ಲಿ 36.77ರ ಸರಾಸರಿಯಲ್ಲಿ 809 ರನ್‌ಗಳಿಸಿರುವ ಐಯ್ಯರ್ 140ಕ್ಕೂ ಅಧಿಕ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. 47 ಪಂದ್ಯಗಳಲ್ಲಿ ರೋಹಿತ್ ಶರ್ಮಾ ಈ ಸಾಧನೆ ಮಾಡಿದ್ದು ಶ್ರೇಯಸ್ ಐಯ್ಯರ್‌ಗೆ ಅವರನ್ನು ಹಿಂದಿಕ್ಕುವ ಅವಕಾವಿದೆ.

ಟಿ20Iನಲ್ಲಿ ವೇಗವಾಗಿ 1000 ರನ್‌ಗಳಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಮೊದಲ ಸ್ಥಾನದಲ್ಲಿದ್ದು 29 ಪಂದ್ಯಗಳಲ್ಲಿ ಈ ದಾಖಲೆ ಹೊಂದಿದ್ದಾರೆ. ಎರಡನೇ ಸ್ಥಾನದಲ್ಲಿ ಕೆಎಲ್ ರಾಹುಲ್ ಇದ್ದು ಇದಕ್ಕಾಗಿ ಅವರು 32 ಪಂದ್ಯಗಳನ್ನು ಬಳಸಿಕೊಂಡಿದ್ದಾರೆ. ಮೂರನೇ ಸ್ಥಾನದಲ್ಲಿ ರೋಹಿತ್ ಶರ್ಮಾ 47 ಪಂದ್ಯಗಳಲ್ಲಿ ಈ ಮೈಲಿಗಲ್ಲು ತಲುಪಿದ್ದಾರೆ.

ಇನ್ನು ಕಳೆದ ಫೆಬ್ರವರಿಯಲ್ಲಿ ಶ್ರೀಲಂಕಾ ವಿರುದ್ಧ ನಡೆದ ಟಿ20 ಸರಣಿಯಲ್ಲಿ ಶ್ರೇಯಸ್ ಐಯ್ಯರ್ ಅಮೋಘ ಫಾರ್ಮ್‌ನಲ್ಲಿದ್ದರು. ಸತತ ಮೂರು ಅರ್ಧ ಶತಕ ಸಿಡಿಸಿ ಮಿಂಚಿದ್ದರು ಐಯ್ಯರ್. ಮೂರು ಪಂದ್ಯದಲ್ಲಿಯೂ ಐಯ್ಯರ್ ಅಜೇಯವಾಗುಳಿದಿದ್ದು 57, 74, 73 ರನ್‌ಗಳನ್ನು ಬಾರಿಸಿದ್ದರು. ಈ ಪ್ರದರ್ಶನದಿಂದಾಗಿ ಭಾರತ ಶ್ರೀಲಂಕಾ ವಿರುದ್ಧ 3-0 ಅಂತರದಿಂದ ಸರಣಿಯನ್ನು ವೈಟ್‌ವಾಶ್ ಮಾಡಿತ್ತು. ಹೀಗಾಘಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೇಲೆಯೂ ಅಂಥಾದ್ದೇ ನಿರೀಕ್ಷೆಯಿದೆ.

Story first published: Tuesday, June 7, 2022, 9:38 [IST]
Other articles published on Jun 7, 2022
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+