For Quick Alerts
ALLOW NOTIFICATIONS  
For Daily Alerts
 

ಭಾರತ vs ದ. ಆಫ್ರಿಕಾ: 3ನೇ ಪಂದ್ಯ ಗೆದ್ದಿದ್ದು ಇವರಿಂದ; ನಾಯಕ ಪಂತ್ ಹೊಗಳಿದ್ದು ಯಾರನ್ನು?

Ind vs SA: Team India skipper Rishabh Pant Praises bowlers said they dis fantastic job
IND vs RSA ಮೂರನೇ ಪಂದ್ಯದಲ್ಲಿ ಏನೆಲ್ಲಾ ವಿಶೇಷತೆಗಳಿದ್ದವು? | OneIndia Kannada

ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ 3ನೇ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಭಾರತ ಸರಣಿಯಲ್ಲಿ ಜೀವಂತವಾಗುಳಿಯಲು ಸಾಧ್ಯವಾಗಿದೆ. ಮೊದಲ ಎರಡು ಪಂದ್ಯಗಳಲ್ಲಿ ಸೋಲು ಅನುಭವಿಸಿದ್ದ ಭಾರತ ಸರಣಿಯಲ್ಲಿ ಉಳಿದ ಮೂರು ಪಂದ್ಯಗಳನ್ನು ಗೆದ್ದರೆ ಮಾತ್ರವೇ ಸರಣಿ ಗೆಲುವು ಸಾಧ್ಯ. ಹೀಗಾಗಿ ವಿಶಾಖಪಟ್ಟಣಂನ ಈ ಗೆಲುವು ಭಾರತ ತಂಡಕ್ಕೆ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಈ ಪಂದ್ಯದಲ್ಲಿ ಗೆದ್ದ ಬಳಿಕ ನಾಯಕ ರಿಷಭ್ ಪಂತ್ ತಂಡದ ಪ್ರದರ್ಶನದ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ಮೊದಲ ಎರಡು ಪಂದ್ಯಗಳಲ್ಲಿ ಭಾರತದ ಬೌಲಿಂಗ್ ವಿಭಾಗದಿಂದ ನೀರಸ ಪ್ರದರ್ಶನ ಬಂದಿತ್ತು. ಆದರೆ ಈ ಪಂದ್ಯದಲ್ಲಿ ಭಾರತ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಭಾರತದ ನಾಯಕ ರಿಷಬ್ ಪಂತ್ ಯೋಚನೆಯಲ್ಲಿ ಅದ್ಭುತವಾಗಿ ಕಾರ್ಯಗತಗೊಳಿಸಿದ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ.

ಬೌಲಿಂಗ್ ವಿಭಾಗವನ್ನು ಹೊಗಳಿದ ಪಂತ್

ಬೌಲಿಂಗ್ ವಿಭಾಗವನ್ನು ಹೊಗಳಿದ ಪಂತ್

ಈ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಬೌಲಿಂಗ್ ವಿಭಾಗದ ಬಗ್ಗೆ ನಾಯಕ ರಿಷಭ್ ಪಂತ್ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ತಮ್ಮ ಯೋಜನೆಯಂತೆಯೇ ಬೌಲರ್‌ಗಳು ಬೌಲಿಂಗ್ ದಾಳಿ ನಡೆಸಿದ್ದು ಇದರಿಂದಾಗಿ ತಂಡದ ಗೆಲುವು ಸಾಧ್ಯವಾಗಿದೆ ಎಂದಿದ್ದಾರೆ. "ಇಂದಿನ ಪಂದ್ಯದಲ್ಲಿ ಯೋಜನೆಗಳ ಕಾರ್ಯರೂಪದ ಬಗ್ಗೆ ಹೆಚ್ಚಿನ ಗಮನಹರಿಸಲಾಯಿತು. ಅದು ಅದ್ಭುತವಾಗಿ ಕಾರ್ಯರೂಪಕ್ಕೆ ಬಂದಿದೆ. ಅದರ ಪರಿಣಾಮವಾಗಿ ನಾವು ಈ ಗೆಲುವು ಸಾಧಿಸಿದ್ದೇವೆ" ಎಂದಿದ್ದಾರೆ ರಿಷಭ್ ಪಂತ್

15 ರನ್‌ ಕಡಿಮೆಯಾಯಿತು ಎನಿಸಿತ್ತು

15 ರನ್‌ ಕಡಿಮೆಯಾಯಿತು ಎನಿಸಿತ್ತು

ಇನ್ನು ಮುಂದುವರಿಸು ಮಾತನಾಡಿದ ಪಂತ್ ಬ್ಯಾಟಿಂಗ್‌ನಲ್ಲಿ ಸುಮಾರು 15 ರನ್‌ಗಳಷ್ಟು ಕೊರತೆಯಾಯಿತು ಎನಿಸಿತ್ತು ಎಂದಿದ್ದಾರೆ. "ನಾವು ಬ್ಯಾಟಿಂಗ್‌ನಲ್ಲಿ 15 ರನ್‌ಗಳನ್ನು ಕಡಿಮೆಯಾಯಿತೇನೋ ಎಂದು ಕೊಂಡಿದ್ದೆವು. ಆದರೆ ಆ ಬಗ್ಗೆ ಹೆಚ್ಚು ಚಿಂತಿಸಲಿಲ್ಲ. ಬೌಲರ್‌ಗಳು ಅದ್ಭುತವಾಗಿ ಕಾರ್ಯವನ್ನು ನಿರ್ವಹಿಸಿದರು. ಅದರಲ್ಲೂ ಮಧ್ಯಮ ಓವರ್‌ಗಳಲ್ಲಿ ಸ್ಪಿನ್ನರ್‌ಗಳು ಅದ್ಭುತವಾಗಿ ತಮ್ಮ ಪಾತ್ರವನ್ನು ನಿರ್ವಹಿಸಿದರು" ಎಂದಿದ್ದಾರೆ ನಾಯಕ ರಿಷಭ್ ಪಂತ್.

ಮೋಡಿ ಮಾಡಿದ ಚಾಹಲ್- ಹರ್ಷಲ್

ಮೋಡಿ ಮಾಡಿದ ಚಾಹಲ್- ಹರ್ಷಲ್

ಇನ್ನು ಭಾರತದ ಬೌಲಿಂಗ್ ವಿಭಾಗದಲ್ಲಿ ಸ್ಪಿನ್ನರ್‌ಗಳು ಪಿಚ್‌ನ ಲಾಭವನ್ನು ಅದ್ಭುತವಾಗಿ ಬಳಸಿಕೊಂಡಿದ್ದಾರೆ. ಇನ್ನು ವೇಗಿ ಹರ್ಷಲ್ ಪಟೇಲ್ ಕೂಡ ಈ ಪಂದ್ಯದಲ್ಲಿ ಮಿಂಚುವಲ್ಲಿ ಯಶಸ್ವಿಯಾದರು. ಹರ್ಷಲ್ ಪಟೇಲ್ ನಾಲ್ಕು ವಿಕೆಟ್ ಕಬಳಿಸಿದರೆ ಯುಜುವೇಂದ್ರ ಚಾಹಲ್ ಮೂರು ವಿಕೆಟ್ ಪಡೆದುಕೊಂಡರು. ಅಕ್ಷರ್ ಹಾಗೂ ಭುವನೇಶ್ವರ್ ಕುಮಾರ್ ತಲಾ ಒಂದು ವಿಕೆಟ್ ಪಡೆದಿದ್ದಾರೆ. ಇನ್ನು ಕೇವಲ 20 ರನ್‌ ನೀಡಿ ಪ್ರಮುಖ ಮೂವರು ಆಟಗಾರರನ್ನು ಬಲಿ ಪಡೆದ ಚಾಹಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

ಪ್ಲೇಯಿಂಗ್ XI ಮಾಹಿತಿ

ಪ್ಲೇಯಿಂಗ್ XI ಮಾಹಿತಿ

ಭಾರತ ತಂಡ: ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ & ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಾಹಲ್, ಅವೇಶ್ ಖಾನ್
ಬೆಂಚ್: ರವಿ ಬಿಷ್ಣೋಯ್, ದೀಪಕ್ ಹೂಡಾ, ವೆಂಕಟೇಶ್ ಅಯ್ಯರ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್

ದಕ್ಷಿಣ ಆಫ್ರಿಕಾ: ಟೆಂಬಾ ಬವುಮಾ (ನಾಯಕ), ರೀಜಾ ಹೆಂಡ್ರಿಕ್ಸ್, ಡ್ವೈನ್ ಪ್ರಿಟೋರಿಯಸ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಹೆನ್ರಿಕ್ ಕ್ಲಾಸೆನ್ (ವಿಕೆಟ್ ಕೀಪರ್), ಡೇವಿಡ್ ಮಿಲ್ಲರ್, ವೇಯ್ನ್ ಪಾರ್ನೆಲ್, ಕಗಿಸೊ ರಬಾಡಾ, ಕೇಶವ್ ಮಹಾರಾಜ್, ತಬ್ರೈಜ್ ಶಮ್ಸಿ, ಅನ್ರಿಚ್ ನಾರ್ಕಿಯಾ
ಬೆಂಚ್: ಟ್ರಿಸ್ಟಾನ್ ಸ್ಟಬ್ಸ್, ಲುಂಗಿ ಎನ್ಗಿಡಿ, ಮಾರ್ಕೊ ಜಾನ್ಸೆನ್, ಕ್ವಿಂಟನ್ ಡಿ ಕಾಕ್, ಐಡೆನ್ ಮಾರ್ಕ್ರಾಮ್

Story first published: Wednesday, June 15, 2022, 9:54 [IST]
Other articles published on Jun 15, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+