IND vs SA Test: ವಿರಾಟ್‌ರನ್ನು ಔಟ್ ಮಾಡಲು ಒಂದೇ ಮಾರ್ಗ: ಎಬಿಡಿ
ಡಿಸೆಂಬರ್ 26ರಿಂದ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಭಾರತ ಮೊದಲ ಟೆಸ್ಟ್ ಆಡಲಿದೆ. ಈ ಟೆಸ್ಟ್ ಸರಣಿಯ ವೇಳೆ ಎಲ್ಲರ ಚಿತ್ತವೂ ಟೀಮ್ ಇಂಡಿಯಾ ಸ್ಟಾರ್ ಪ್ಲೇಯರ್ ವಿರಾಟ್ ಕೊಹ್ಲಿ ಅವರ ಮೇಲೆ ನೆಟ್ಟಿರುತ್ತದೆ. ಇವರು ದಕ್ಷಿಣ ಆಫ್ರಿಕಾದಲ್ಲಿ ಅಮೋಘ ಬ್ಯಾಟಿಂಗ್ ನಡೆಸಿದ ದಾಖಲೆಯನ್ನು ಹೊಂದಿದ್ದಾರೆ. ಇವರನ್ನು ಔಟ್ ಹೇಗೆ ಮಾಡಬೇಕು ಎಂಬುದೇ ಈಗ ದೊಡ್ಡ ಚಿಂತೆಯಾಗಿದೆ. ಇದಕ್ಕೆ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿವಿಲಿಯರ್ಸ್ ಉತ್ತರ ನೀಡಿದ್ದಾರೆ.
ಭಾರತ ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತೆರಳಿದ್ದು, ಅಲ್ಲಿ ಟೀಮ್ ಇಂಡಿಯಾ ಟಿ20 ಮತ್ತು ODI ಸರಣಿಗಳನ್ನು ಆಡಿದೆ. ಇದೀಗ ಟೆಸ್ಟ್ ಸರಣಿಯನ್ನು ಉಭಯ ತಂಡಗಳು ಎದುರು ನೋಡುತ್ತಿವೆ.

ಈ ಸರಣಿಯಲ್ಲಿ ದಕ್ಷಿಣ ಆಫ್ರಿಕಾದ ಬೌಲರ್‌ಗಳಿಗೆ ದೊಡ್ಡ ಸವಾಲು ಎಂದರೆ ವಿರಾಟ್ ಕೊಹ್ಲಿಯವರನ್ನು ಔಟ್ ಮಾಡುವುದು. ಏಕೆಂದರೆ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾದಲ್ಲಿ ಆಡಿದ ಪ್ರತಿ ಟೆಸ್ಟ್ ಸರಣಿಯಲ್ಲಿ ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾದ ಬೌನ್ಸ್ ಮತ್ತು ಸ್ವಿಂಗ್ ಪಿಚ್ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಒಂದೆಡೆ, ಇಡೀ ಭಾರತ ತಂಡವು ಪ್ರತಿ ರನ್‌ಗಾಗಿ ಹೆಣಗಾಡುತ್ತಾ ಸಾಗಿದರೆ, ಇನ್ನೊಂದೆಡೆ ವಿರಾಟ್ ಕೊಹ್ಲಿ ಕ್ರೀಸ್‌ಗೆ ಊರಿ ನಿಂತು ಶತಕ ಗಳಿಸುತ್ತಾರೆ.
ಇದೇ ವಿಷಯವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಎಬಿಡಿ ತಮ್ಮ ತಂಡದ ಬೌಲರ್‌ಗಳಿಗೆ ಸಲಹೆ ನೀಡಿದ್ದಾರೆ. ಪಿಟಿಐ ಜೊತೆ ಮಾತನಾಡಿರುವ ಡಿವಿಲಿಯರ್ಸ್, ಕೊಹ್ಲಿಯನ್ನು ಔಟ್ ಮಾಡು ಬಗ್ಗೆ ಬೌಲರ್‌ಗಳಿಗೆ ಸಲಹೆ ನೀಡಿದ್ದಾರೆ.
"ವಿರಾಟ್ ಕೊಹ್ಲಿಯಂತಹ ಬ್ಯಾಟ್ಸ್‌ಮನ್‌ರನ್ನು ಔಟ್ ಮಾಡಲು ಒಂದು ಮಾರ್ಗವಿದೆ. ಅವರು ನಾಲ್ಕನೇ ಸ್ಟಂಪ್‌ನಲ್ಲಿ ಪದೆ ಪದೇ ಬೌಲಿಂಗ್ ಮಾಡಬೇಕು. ಇದೇ ಲೈನ್ ಹಾಗೂ ಲೆಂಥ್‌ನಲ್ಲಿ ಬೌಲಿಂಗ್ ಮಾಡಬೇಕು. ಈ ತಂತ್ರ ಫಲಿಸದೇ ಇದ್ದರೂ ಬೌಲರ್‌ಗಳು ಇದನ್ನೇ ಟ್ರೈ ಮಾಡಬೇಕು. ಒಂದು ತುದಿಯಲ್ಲಿ ಬೌಲರ್ ಇದ್ದನೇ ಮಾಡಬೇಕು. ವಿರಾಟ್ ತಪ್ಪು ಮಾಡಲು ಪ್ರೇರಿಪಿಸಬೇಕು. ಅವರು ತಪ್ಪು ಹೆಜ್ಜೆ ಇಟ್ಟು ಅವರ ವಿಕೆಟ್‌ಗಾಗಿ ಕಾಯಬೇಕು ಎಂದು ತಿಳಿಸಿದ್ದಾರೆ.

ಹಿಂದಿ ಸರಣಿಯನ್ನು ಮೆಲುಕು ಹಾಕಿರುವ ಅವರು, 'ಸಚಿನ್‌ನ ವಿಷಯದಲ್ಲೂ ಅದೇ ಆಗಿತ್ತು. ಅವರು ಸ್ಟಂಪ್‌ನಲ್ಲಿ ಎಲ್‌ಬಿಡಬ್ಲ್ಯೂ ಬೌಲ್ಡ್ ಆಗುವವರೆಗೆ ಕಾಯುವುದು ಮೂರ್ಖತನವಾಗಿತ್ತು. ಏಕೆಂದರೆ ಅವರು ಮಿಡ್-ವಿಕೆಟ್‌ನಲ್ಲಿ ಶಾಟ್‌ಗಳನ್ನು ಹೊಡೆಯುತ್ತಲೇ ಇರುತ್ತಾರೆ. ಆದ್ದರಿಂದ ಆ ಚೆಂಡುಗಳನ್ನು ಆಫ್‌ಸ್ಟಂಪ್‌ನ ಹೊರಗೆ ಎಸೆಯಲಾಯಿತು ಎಂದು ಹಿಂದಿನ ಪಂದ್ಯಗಳನ್ನು ಸಹ ನೆನಪಿಸಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications