IND vs SA Test: 500 ವಿಕೆಟ್‌ಗಳ ಎಲೈಟ್ ಕ್ಲಬ್ ಸೇರುವ ಸನಿಹದಲ್ಲಿ ಅಶ್ವಿನ್
ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿಯ ವೇಳೆ ಟೀಮ್ ಇಂಡಿಯಾದ ಕೇರಂ ಬೌಲ್ ಸ್ಪೆಷಲಿಸ್ಟ್ ರವಿಚಂದ್ರನ್ ಅಶ್ವಿನ್, ವಿಶಿಷ್ಠ ದಾಖಲೆಯನ್ನು ಬರೆಯಲಿದ್ದಾರೆ.
ಅಶ್ವಿನ್ ಶೀಘ್ರದಲ್ಲೇ ನಾಥನ್ ಲಿಯಾನ್ ಅವರ ದಾಖಲೆ ಮುರಿಯಲಿದ್ದಾರೆ. ಆಸ್ಟ್ರೇಲಿಯಾದ ನಾಥನ್ ಲಿಯಾನ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 500 ಕ್ಕೂ ಹೆಚ್ಚು ವಿಕೆಟ್‌ಗಳನ್ನು ಹೊಂದಿರುವ ಬೌಲರ್‌ಗಳ ಎಲೈಟ್ ಕ್ಲಬ್‌ಗೆ ಸೇರಿಕೊಂಡಿದ್ದಾರೆ. ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಆಫ್ ಸ್ಪಿನ್ನರ್ ನಾಥನ್ ಲಿಯಾನ್ 5 ವಿಕೆಟ್ ಪಡೆದರು.

ನಾಥನ್ ಲಿಯಾನ್ 123 ಟೆಸ್ಟ್ ಪಂದ್ಯಗಳಲ್ಲಿ 500 ವಿಕೆಟ್ ಪಡೆದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ 500ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆದಿರುವ ವಿಶ್ವದ 8 ಬೌಲರ್‌ಗಳಲ್ಲಿ ಇವರಿಗೂ ಸ್ಥಾನ ಸಿಕ್ಕಿದೆ. ಆದರೆ ಭಾರತೀಯ ಬೌಲರ್ ನಾಥನ್ ಲಿಯಾನ್ ಅವರನ್ನು ಹಿಂದಿಕ್ಕುವ ಸಾಧ್ಯತೆ ಇದೆ.
ಅಶ್ವಿನ್ ಹೆಚ್ಚು ವಿಕೆಟ್ ಪಡೆಯುವ ವಿಷಯದಲ್ಲಿ ಮಾತ್ರವಲ್ಲದೆ, ಅತಿವೇಗವಾಗಿ 500 ವಿಕೆಟ್ ಕಬಳಿಸುವ ವಿಚಾರದಲ್ಲೂ ಕೂಡ, ನಾಥನ್ ಲಿಯಾನ್ ಬೆನ್ನು ಹತ್ತಿದ್ದಾರೆ.
ಚೆನ್ನೈ ಬೌಲರ್‌ಗೆ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ವಿಶೇಷವಾಗಿದೆ. ಅಶ್ವಿನ್ ದಕ್ಷಿಣ ಆಫ್ರಿಕಾ ವಿರುದ್ಧ 500 ವಿಕೆಟ್ ಪಡೆಯುವ ಹೊಸ್ತಿಲಲ್ಲಿ ನಿಂತಿದ್ದಾರೆ. ಎರಡು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಅಶ್ವಿನ್ 11 ವಿಕೆಟ್‌ಗಳನ್ನು ಪಡೆದಿದ್ದೇ ಆದಲ್ಲಿ ಅವರು ಈ ಎಲೈಟ್ ಕ್ಲಬ್ ಸೇರಬಹುದು.

ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಅಶ್ವಿನ್ ಟೆಸ್ಟ್ ಪಂದ್ಯಗಳನ್ನು ಆಡಬೇಕಿದೆ. ಈ ಆಫ್ರಿಕಾ ಪ್ರವಾಸದಲ್ಲಿ ಅಶ್ವಿನ್ 500 ವಿಕೆಟ್ ಪೂರೈಸಿದರೆ ಅಚ್ಚರಿ ಪಡಬೇಕಿಲ್ಲ. 500 ವಿಕೆಟ್ ಪಡೆದ ದಾಖಲೆಗೆ ಟೆಸ್ಟ್ ಸರಣಿ ಸಾಕ್ಷಿಯಾಗಲಿದೆ.
ಬರೀ 500 ವಿಕೆಟ್ ಪಡೆಯುವುದಷ್ಟೇ ಅಲ್ಲ ಅಶ್ವಿನ್, ಕಡಿಮೆ ಟೆಸ್ಟ್ ಪಂದ್ಯಗಳಲ್ಲಿ ಈ ದಾಖಲೆ ಬರೆಯಲು ಸನ್ನದ್ಧರಾಗಿದ್ದಾರೆ. ಅಶ್ವಿನ್ 11 ವಿಕೆಟ್ ಗಳನ್ನು ಪಡೆದರೆ, ವೇಗವಾಗಿ ಈ ಕ್ಲಬ್ ಸೇರಿದ ಎರಡನೇ ಬೌಲರ್ ಆಗುತ್ತಾರೆ.
ನಾಥನ್ ಲಿಯಾನ್ ಅವರು 500 ಟೆಸ್ಟ್ ವಿಕೆಟ್‌ಗಳನ್ನು ತಲುಪಲು 123 ಟೆಸ್ಟ್ ಪಂದ್ಯಗಳನ್ನು ಆಡಬೇಕಾಗಿತ್ತು. ರವಿಚಂದ್ರನ್ ಅಶ್ವಿನ್ 96 ಅಥವಾ 97 ಟೆಸ್ಟ್ ಪಂದ್ಯಗಳಲ್ಲಿ ಮಾತ್ರ ಈ ದೊಡ್ಡ ಮೈಲುಗಲ್ಲು ಮುಟ್ಟಬಹುದು. ಅಥವಾ ಅದಕ್ಕೂ ಮುಂಚೆಯೇ. ಸದ್ಯ ಅಶ್ವಿನ್ 94 ಟೆಸ್ಟ್ ಪಂದ್ಯಗಳಲ್ಲಿ 489 ವಿಕೆಟ್ ಪಡೆದಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ 2 ಟೆಸ್ಟ್ ಪಂದ್ಯಗಳಲ್ಲಿ ಅಶ್ವಿನ್ 11 ವಿಕೆಟ್ ಪಡೆದರೆ 500ರ ಗಡಿ ಮುಟ್ಟಲಿದ್ದಾರೆ. ವೇಗವಾಗಿ 500 ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಶ್ರೀಲಂಕಾದ ಸ್ಪಿನ್ನ ಮಾಂತ್ರಿಕ ಮುತ್ತಯ್ಯ ಮುರುಳಿಧರನ್ ಮೊದಲ ಸ್ಥಾನದಲ್ಲಿದ್ದಾರೆ. ಇವರು ಈ ಸಾಧನೆ ಮಾಡಲು 87 ಟೆಸ್ಟ್ ಪಂದ್ಯ ಆಡಿದ್ದಾರೆ. 105ನೇ ಟೆಸ್ಟ್‌ನಲ್ಲಿ ಅನಿಲ್ ಕುಂಬ್ಳೆ ಮತ್ತು 108ನೇ ಟೆಸ್ಟ್ ಪಂದ್ಯದಲ್ಲಿ ಶೇನ್ ವಾರ್ನ್ 500 ವಿಕೆಟ್‌ಗಳ ಗಡಿ ದಾಟಿದ್ದರು. ಅವರ ನಂತರ ಗ್ಲೆನ್ ಮೆಕ್‌ಗ್ರಾತ್ (110) ಮತ್ತು ನಾಥನ್ ಲಿಯಾನ್ (123) ಬಂದಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ 500ಕ್ಕೂ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳೆಂದರೆ, ಮುತ್ತಯ್ಯ ಮುರಳೀಧರನ್ ಅವರು 800 ಟೆಸ್ಟ್ ವಿಕೆಟ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಶೇನ್ ವಾರ್ನ್ (708) ಎರಡನೇ ಸ್ಥಾನದಲ್ಲಿದ್ದರೆ, ಜೇಮ್ಸ್ ಆಂಡರ್ಸನ್ (690) ಮೂರನೇ ಸ್ಥಾನದಲ್ಲಿದ್ದಾರೆ. ಭಾರತದ ಅನಿಲ್ ಕುಂಬ್ಳೆ 619 ವಿಕೆಟ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಕುಂಬ್ಳೆ ನಂತರ ಸ್ಟುವರ್ಟ್ ಬ್ರಾಡ್ (604), ಗ್ಲೆನ್ ಮೆಕ್‌ಗ್ರಾತ್ (563), ಕರ್ಟ್ನಿ ವಾಲ್ಷ್ (519) ಮತ್ತು ನಾಥನ್ ಲಿಯಾನ್ (501) ಇದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications