IND vs SA Test: ಭಾರತ ಪಾಂಡವರ ಸಹಾಯದಿಂದ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆಲ್ಲಬಹುದು
ಭಾರತ ಈಗ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದೆ. ಈಗಾಗಲೇ ಟಿ20 ಹಾಗೂ ಏಕದಿನ ಸರಣಿಯನ್ನು ಆಡಿರುವ ಟೀಮ್ ಇಂಡಿಯಾ, ಟೆಸ್ಟ್ ಸರಣಿಯನ್ನು ಎದುರು ನೋಡುತ್ತಿದೆ. ಡಿಸೆಂಬರ್ 26ರಿಂದ ಆರಂಭವಾಗಲಿರುವ ಮೊದಲ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ಗೆಲುವಿನ ವಿಶ್ವಾಸವನ್ನು ಹೊಂದಿದೆ. ಆದರೆ ಅಂಕಿ ಅಂಶಗಳ ಲೆಕ್ಕಾಚಾರಾದಲ್ಲಿ ದಕ್ಷಿಣ ಆಫ್ರಿಕಾ ಬಲಿಷ್ಠವಾಗಿದೆ.
ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿ ಗೆಲುವು ಟೀಮ್ ಇಂಡಿಯಾಕ್ಕೆ ಕಬ್ಬಿಣದ ಕಡಲೆಯಂತಾಗಿದೆ. ಈ ಬಾರಿ ಬಲಿಷ್ಠ ತಂಡವನ್ನು ಹೊಂದಿರುವ ಟೀಮ್ ಇಂಡಿಯಾ ಸರಣಿ ಗೆಲುವಿನ ಬರವನ್ನು ನೀಗಿಸಬೇಕಿದೆ. 2012ರ ಪ್ರವಾಸದಲ್ಲಿ ಟೀಮ್ ಇಂಡಿಯಾ ಮೊದಲ ಟೆಸ್ಟ್‌ನಲ್ಲಿ ಗೆಲುವು ಸಾಧಿಸಿದರೂ, ಸರಣಿಯನ್ನು ಕೈ ಚೆಲ್ಲಿತ್ತು. ಈ ಬಾರಿ ಟೀಮ್ ಇಂಡಿಯಾಕ್ಕೆ ಸರಣಿ ಗೆಲುವಿನ ಆಸೆ ಈಡೆರಿಸಿಕೊಳ್ಳಬಹುದು.
ಟೀಮ್ ಇಂಡಿಯಾ ಈ ಸರಣಿಯಲ್ಲಿ ಭರ್ಜರಿ ಪ್ರದರ್ಶನ ನೀಡಬೇಕಾದರೆ, ಸ್ಟಾರ್ ಐವರು ಆಟಗಾರರು ಮಿಂಚಿದಲ್ಲಿ ಗೆಲುವಿನ ಆಸೆ ಫಲಿಸಬಹುದು. ವಿರಾಟ್ ಕೊಹ್ಲಿ, ಕೆಎಲ್ ರಾಹುಲ್, ರವೀಂದ್ರ ಜಡೇಜಾ ಮತ್ತು ಜಸ್ಪ್ರೀತ್ ಬುಮ್ರಾ ಆಟಗಾರರ ಮೇಲೆ ದೊಡ್ಡ ಜವಾಬ್ದಾರಿಯನ್ನು ಹೊರಿಸಲಾಗಿದೆ. ಪ್ರವಾಸದಲ್ಲಿ ಟೀಮ್ ಇಂಡಿಯಾ ಗೆಲುವು ಸಾಧಿಸಬೇಕಾದಲ್ಲಿ ಈ ಪ್ಲೇಯರ್‌ಗಳು ಅಬ್ಬರಿಸಬೇಕಿದೆ.

ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ ಒತ್ತಡದಲ್ಲಿ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಅವರು ಪಿಚ್‌ಗೆ ಹೊಂದಿಕೊಳ್ಳುತ್ತಾರೆ. ಆಫ್ರಿಕಾದ ಪಿಚ್‌ಗಳಲ್ಲಿ ಆಡಿದ ಅನುಭವ ಅವರಿಗಿದೆ. ಆಫ್ರಿಕಾದ ಬೌನ್ಸಿ ಪಿಚ್‌ಗಳಲ್ಲಿ ವಿರಾಟ್ ಭಾರತದ ಬ್ಯಾಟಿಂಗ್‌ನ ಪ್ರಮುಖ ಭಾಗ. ದಕ್ಷಿಣ ಆಫ್ರಿಕಾದಲ್ಲಿ ಆಡಿದ 7 ಪಂದ್ಯಗಳಲ್ಲಿ ಕೊಹ್ಲಿ 51.35 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಅವರು 2 ಶತಕ ಮತ್ತು 3 ಅರ್ಧ ಶತಕ ಸೇರಿದಂತೆ 719 ರನ್ ಗಳಿಸಿದ್ದಾರೆ. ಅವರು ಆಫ್ರಿಕಾದಲ್ಲಿ ಭಾರತದ ಎರಡನೇ ಟಾಪ್ ಸ್ಕೋರರ್ ಆಗಿದ್ದಾರೆ.

ಕೆಎಲ್ ರಾಹುಲ್
ಕೆಳ ಮಧ್ಯಮ ಕ್ರಮಾಂಕದ ಜವಾಬ್ದಾರಿಯನ್ನು ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಹೊತ್ತಿದ್ದಾರೆ. ಅವರು 7ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಾರೆ. ಟಾಪ್ ಅಥವಾ ಮಧ್ಯಮ ಕ್ರಮಾಂಕದ ವೈಫಲ್ಯದ ಸಂದರ್ಭದಲ್ಲಿ, ರಾಹುಲ್ ತಂಡಕ್ಕೆ ನೆರವಾಗಬಲ್ಲ ಪ್ಲೇಯರ್. ರಾಹುಲ್ ಆಡಿದ 5 ಪಂದ್ಯಗಳಲ್ಲಿ 256 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಮತ್ತು ಒಂದು ಅರ್ಧ ಶತಕ ಸೇರಿದೆ. ಆಫ್ರಿಕಾದಲ್ಲಿ ಶತಕ ಬಾರಿಸಿದ ಮೊದಲ ಭಾರತೀಯ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆ ಕೆ.ಎಲ್ ಅವರದ್ದಾಗಿದೆ.

ರವೀಂದ್ರ ಜಡೇಜಾ
ಎಡಗೈ ಸ್ಪಿನ್ ಆಲ್ ರೌಂಡರ್ ರವೀಂದ್ರ ಜಡೇಜಾ ಬ್ಯಾಟ್ ಮತ್ತು ಬಾಲ್ ಜೊತೆಗೆ ಫೀಲ್ಡಿಂಗ್ ಮಾಡುವ ಮೂಲಕ ಪಂದ್ಯದ ಗತಿಯನ್ನೇ ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ. ಎಡಗೈ ಬ್ಯಾಟ್ಸ್‌ಮನ್ ಆಗಿರುವ ಅವರು ಬ್ಯಾಟಿಂಗ್ ಕ್ರಮಾಂಕಕ್ಕೆ ಬಲ ನೀಡಬಲ್ಲರು. ಇವರು ದಕ್ಷಿಣ ಆಫ್ರಿಕಾದಲ್ಲಿ ಆಡಿರುವ 3 ಪಂದ್ಯಗಳಲ್ಲಿ 99 ರನ್ ಮತ್ತು 6 ವಿಕೆಟ್ ಪಡೆದಿದ್ದಾರೆ. ಅಲ್ಲದೆ ಜಡೇಜಾ 16 ಕ್ಯಾಚ್‌ಗಳನ್ನೂ ಪಡೆದಿದ್ದಾರೆ.

ಜಸ್ಪ್ರೀತ್ ಬುಮ್ರಾ
ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಯಾರ್ಕರ್‌ಗೆ ಹೆಸರುವಾಸಿ. ಅವರ ವೇಗ ಮತ್ತು ಸ್ವಿಂಗ್ ನಿಂದ ವಿಕೆಟ್ ಪಡೆಯಬಲ್ಲರು. ಆಫ್ರಿಕಾದ ವೇಗದ ಮತ್ತು ಬೌನ್ಸಿ ಪಿಚ್‌ಗಳಲ್ಲಿ ಬುಮ್ರಾ ಟೀಮ್ ಇಂಡಿಯಾದ ಟ್ರಂಪ್ ಕಾರ್ಡ್ ಬೌಲರ್. ದಕ್ಷಿಣ ಆಫ್ರಿಕಾದಲ್ಲಿ ಅವರು 6 ಪಂದ್ಯಗಳಲ್ಲಿ 26 ವಿಕೆಟ್ ಪಡೆದಿದ್ದಾರೆ. ಇದರಲ್ಲಿ ಎರಡು ಬಾರಿ 5 ವಿಕೆಟ್‌ಗಳು ಸೇರಿವೆ.
ಮೊಹಮ್ಮದ್ ಸಿರಾಜ್
ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಸೀಮ್ ಮತ್ತು ಬೌನ್ಸಿ ಬೌಲಿಂಗ್‌ಗೆ ಹೆಸರುವಾಸಿ. ಅವರು ತನ್ನ ವೇಗ ಮತ್ತು ಸ್ವಿಂಗ್‌ನಿಂದ ಯಾವುದೇ ಬ್ಯಾಟ್ಸ್‌ಮನ್‌ಗೆ ಕಾಟ ನೀಡಬಲ್ಲರು. ದ.ಆಫ್ರಿಕಾದಲ್ಲಿ ಸಿರಾಜ್ 2 ಪಂದ್ಯಗಳಲ್ಲಿ ಕೇವಲ 3 ವಿಕೆಟ್‌ಗಳನ್ನು ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications