For Quick Alerts
ALLOW NOTIFICATIONS  
For Daily Alerts
 

IND vs SA Test: ಆಟಗಾರರಿಗೆ ಗೆಲುವಿನ ಮಂತ್ರ ಬೋಧಿಸಿದ ರಾಹುಲ್ ದ್ರಾವಿಡ್, ರೋಹಿತ್‌ ಪಡೆಗೆ ಜಯವೊಂದೆ ಟಾರ್ಗೆಟ್

ಟೀಮ್ ಇಂಡಿಯಾ ಸದ್ಯ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿದೆ. ಈಗಾಗಲೇ ಟೀಮ್ ಇಂಡಿಯಾ ಪ್ರವಾಸದಲ್ಲಿ ಆಡಿದ ಮೊದಲ ಟೆಸ್ಟ್‌ನಲ್ಲಿ ಸೋಲು ಕಂಡಿದೆ. ಬುಧವಾರದಿಂದ ಎರಡನೇ ಟೆಸ್ಟ್‌ ಪಂದ್ಯ ಕೇಪ್ ಟೌನ್‌ನಲ್ಲಿ ನಡೆಯಲಿದ್ದು, ಈ ಪಂದ್ಯವನ್ನು ಗೆದ್ದು ಸರಣಿಯನ್ನು ಸಮಬಲಗೊಳಿಸುವ ವಿಶ್ವಾಸದಲ್ಲಿ ರೋಹಿತ್ ಶರ್ಮಾ ಪಡೆ ಇದೆ.

ಆದರೆ ಟೀಮ್ ಇಂಡಿಯಾದ ಗೆಲುವಿನ ಆಸೆಗೆ ಕೇಪ್‌ಟೌನ್‌ ಪಿಚ್ ಕೆಸರು ಎರೆಚುವ ಲಕ್ಷಣಗಳು ತೋರುತ್ತಿವೆ. ನ್ಯೂಲ್ಯಾಂಡ್ಸ್‌ನ ಈ ಪಿಚ್‌ ಬೌಲರ್‌ಗಳ ಸ್ವರ್ಗ ಎಂದೇ ಕರೆಸಿಕೊಳ್ಳುತ್ತಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಕೇಪ್ ಟೌನ್ ಪಿಚ್ ನ ಚಿತ್ರಗಳು ಟೀಂ ಇಂಡಿಯಾಗೆ ಭಯ ಹುಟ್ಟಿಸಲಿವೆ.

IND vs SA Test: Rahul Dravid taught formula to players, Rohit team target is victory

ಕೇಪ್ ಟೌನ್ ಪಿಚ್‌ನ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಈ ವೈರಲ್ ಚಿತ್ರದಲ್ಲಿ ಕೇಪ್ ಟೌನ್ ಪಿಚ್‌ನಲ್ಲಿ ಹುಲ್ಲು ಗೋಚರಿಸುವುದನ್ನು ಕಾಣಬಹುದು.ಈ ಪಿಚ್‌ನಲ್ಲಿ ವೇಗದ ಬೌಲರ್‌ಗಳು ಅಬ್ಬರಿಸುವ ಅವಶ್ಯಕತೆ ಇದೆ.

ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಗೆಲುವು ಸಾಧಿಸುವ ಇರಾದೆಯನ್ನು ಹೊಂದಿದೆ. ಆದರೆ, ಈ ಅಂಗಳದಲ್ಲಿ ಭಾರತ ಇದುವರೆಗೆಯೂ ಒಂದೆ ಒಂದು ಪಂದ್ಯವನ್ನು ಗೆದ್ದಿಲ್ಲ. ಹೀಗಾಗಿ ಈ ಅಂಗಳದಲ್ಲಿ ಇತಿಹಾಸ ಸೃಷ್ಟಿಸುವ ಕನಸಿನೊಂದಿಗೆ ಟೀಮ್ ಇಂಡಿಯಾ ಕಣಕ್ಕೆ ಇಳಿಯಲಿದೆ.

ಗುರು ಮಂತ್ರ

ಟೀಮ್ ಇಂಡಿಯಾದ ಕೋಚ್‌ ರಾಹುಲ್ ದ್ರಾವಿಡ್, ಟೀಮ್ ಇಂಡಿಯಾ ಬ್ಯಾಟರ್‌ಗಳಿಗೆ ಗುರು ಮಂತ್ರದ ಉಪದೇಶ ನೀಡಿದ್ದಾರೆ. ಹೆಚ್ಚು ಹೊತ್ತು ಕ್ರಿಸ್‌ನಲ್ಲಿ ಟೈಮ್‌ ಸ್ಪೆಂಡ್ ಮಾಡಿ, ಚೆಂಡನ್ನು ಹಳೆಯದಾಗಿ ಮಾಡಿ, ದೊಡ್ಡ ಇನ್ನಿಂಗ್ಸ್ ಕಟ್ಟಬೇಕು. ಕೆಟ್ಟ ಎಸೆತಗಳಿಗೆ ಮಾತ್ರ ಟೀಮ್ ಇಂಡಿಯಾ ಬ್ಯಾಟರ್‌ಗಳು ಬಿಗ್ ಶಾಟ್‌ಗಳನ್ನು ಪ್ರಯೋಗಿಸಬೇಕು ಎಂದು ಕಿವಿ ಮಾತು ಹೇಳಿದ್ದಾರೆ.

IND vs SA Test: Rahul Dravid taught formula to players, Rohit team target is victory

ಅಸಲಿಗೆ ಟೀಮ್ ಇಂಡಿಯಾದಲ್ಲಿ ಯಾವೊಬ್ಬ ಟೆಸ್ಟ್ ಸ್ಪೆಷಲಿಸ್ಟ್ ಬ್ಯಾಟರ್‌ ಇಲ್ಲದೇ ಇರುವುದು ನಿಜಕ್ಕೂ ಚಿಂತೆಯನ್ನು ದುಪಟ್ಟು ಮಾಡಿದೆ. ಬೌನ್ಸಿ ಪಿಚ್‌ನಲ್ಲಿ ವೇಗವಾಗಿ ಬರುವ ಚೆಂಡನ್ನು ತಡೆದು ಆಡುವ ಕಲೆಯನ್ನು ಯುವ ಆಟಗಾರರು ಕರಗತ ಮಾಡಿಕೊಳ್ಳುವ ಅವಶ್ಯಕತೆ ಇದೆ. ಅಂದಾಗ ಮಾತ್ರ ಬಿಗ್ ಟೋಟಲ್‌ ಕಲೆ ಹಾಕುವ ಕನಸು ಫಲಿಸುತ್ತದೆ.

ಜವಾಬ್ದಾರಿ ಅರಿಯಬೇಕಿದೆ ಓಪನರ್ಸ್‌

ಟೀಮ್ ಇಂಡಿಯಾದ ಓಪನರ್‌ ನಾಯಕ ರೋಹಿತ್ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್‌ ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಬೇಕಿದೆ. ಈ ಸ್ಟಾರ್ ಆಟಗರರು ಮೈದಾನದಲ್ಲಿ ಕೊಂಚ ಟೈಮ್‌ ಸ್ಪೆಂಡ್ ಮಾಡಿದರೆ, ಬಿಗ್‌ ಇನ್ನಿಂಗ್ಸ್ ಕಟ್ಟಬಹುದು. ವೇಗದ ಬೌಲರ್‌ಗಳ ರಣ ತಂತ್ರವನ್ನು ಮೆಟ್ಟಿನಿಂತರೆ ಈ ವರ್ಷವನ್ನು ನಗುವಿನಿಂದ ಬರಮಾಡಿಕೊಳ್ಳಬಹುದು.

ಶ್ರೇಯಸ್ ಮೇಲಿದೆ ಒತ್ತಡ

ಇನ್ನು ಮೂರನೇ ಕ್ರಮಾಂಕದಲ್ಲಿ ಆಡುವ ಶುಭಮನ್‌ ಗಿಲ್‌ ದೊಡ್ಡ ಇನ್ನಿಂಗ್ಸ್ ಕಟ್ಟುವ ಅನಿವಾರ್ಯತೆ ಇದೆ. ಒಂದು ವೇಳೆ ಅವರು ಈ ಅವಕಾಶದಲ್ಲಿ ಫೇಲ್ ಆದಲ್ಲಿ ಮುಂದಿನ ಸರಣಿಗೆ ಇವರನ್ನು ಪರಿಗಣಿಸುವ ಸಾಧ್ಯತೆ ಕಡಿಮೆ ಇರುತ್ತದೆ.

IND vs SA Test: Rahul Dravid taught formula to players, Rohit team target is victory

ಇನ್ನು ಮಾಜಿ ನಾಯಕ ವಿರಾಟ್ ಕೊಹ್ಲಿ ಉತ್ತಮ ಲಯದಲ್ಲಿ ಕಾಣಿಸಿಕೊಂಡಿದ್ದಾರೆ. ಇವರು ಅಬ್ಬರಿಸುವ ಅವಶ್ಯಕತೆ ಇದೆ.

ಟೀಮ್ ಇಂಡಿಯಾದ ಭರವಸೆಯ ಮಿಡ್ಲ್ ಆರ್ಡರ್‌ ಬ್ಯಾಟರ್‌ ಶ್ರೇಯಸ್ ಅಯ್ಯರ್‌ ತಂಡ ತಮ್ಮ ಮೇಲೆ ಇಟ್ಟ ವಿಶ್ವಾಸವನ್ನು ಉಳಿಸಿಕೊಳ್ಳಬೇಕಿದೆ. ಇವರು ಶಾರ್ಟ್‌ ಎಸೆತಗಳನ್ನು ಗಮನಿಸಿ ಅವುಗಳನ್ನು ಬಿಟ್ಟು ಆಡಬೇಕು. ಇಲ್ಲದೆ ಹೋದಲ್ಲಿ ಮತ್ತೆ ಇವರು ಶಾಟ್‌ ಎಸೆತಗಳಿಗೆ ಕುತ್ತು ತರುತ್ತದೆ.

ಆಲ್‌ರೌಂಡರ್‌ ರೂಪದಲ್ಲಿ ಕಾಣಿಸಿಕೊಳ್ಳಲಿರುವ ರವೀಂದ್ರ ಜಡೇಜಾ ಬ್ಯಾಟಿಂಗ್ ಹಾಗೂ ಬೌಲಿಂಗ್ ಮೂಲಕ ತಂಡಕ್ಕೆ ನೆರವಾಗಬೇಕಿದೆ. ಇನ್ನೊಂದು ಆಲ್‌ ರೌಂಡರ್‌ ಸ್ಥಾನಕ್ಕಾಗಿ ಶಾರ್ದೂಲ್ ಠಾಕೂರ್ ಹಾಗೂ ಆರ್ ಅಶ್ವಿನ್ ಪೈಪೋಟಿ ನಡೆಸಲಿದ್ದಾರೆ. ಪಿಚ್‌ ಮರ್ಮ ಅರಿತು ನಾಯಕ ಒಬ್ಬ ಆಟಗಾರನಿಗೆ ಮಣೆ ಹಾಕುವ ಸಾಧ್ಯತೆ ಇದೆ.

ಮೊದಲ ಪಂದ್ಯದಲ್ಲಿ ಜಸ್ಪ್ರಿತ್ ಬುಮ್ರಾ ಹಾಗೂ ಮೊಹಮ್ಮದ್ ಸಿರಾಜ್ ರನ್ ಗಳಿಗೆ ಕಡಿವಾಣ ಹಾಕುವಲ್ಲಿ ವಿಫಲರಾಗಿದ್ದರು. ಅಲ್ಲದೆ ಆರಂಭದಲ್ಲಿ ವಿಕೆಟ್‌ ಪಡೆಯುವಲ್ಲಿ ಹಿಂದೆ ಬಿದ್ದಿದ್ದರು. ಎರಡನೇ ಟೆಸ್ಟ್‌ನಲ್ಲಿ ವಿಕೆಟ್‌ಗಳನ್ನು ಸರಿಯಾದ ಸಮಯದಲ್ಲಿ ಕಬಳಿಸಿ ತಂಡಕ್ಕೆ ನೀಡಿದರೆ, ಗೆಲುವಿನ ಆಸೆ ಫಲಿಸುತ್ತದೆ. ಪ್ರಸಿದ್ಧ ಕೃಷ್ಣ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುತ್ತಾರಾ ಎಂಬ ಪ್ರಶ್ನೆ ಎದ್ದಿದೆ.

ಸರಣಿ ವಶದ ಕನಸು

ಇನ್ನು ಆತಿಥೇಯ ದಕ್ಷಿಣ ಆಫ್ರಿಕಾ ಭರ್ಜರಿ ಫಾರ್ಮ್‌ನಲ್ಲಿದೆ. ತವರಿನಲ್ಲಿ ಮತ್ತೊಮ್ಮೆ ಭಾರತ ತಂಡವನ್ನು ಮಣಿಸಿ, ಟೆಸ್ಟ್ ಸರಣಿಯನ್ನು ಕೈ ವಶಕ್ಕೆ ಮಾಡಿಕೊಳ್ಳುವ ಆಸೆಯನ್ನು ಹೊಂದಿದೆ. ಡೀನ್ ಎಲ್ಗರ್ ಭರ್ಜರಿ ಲಯಕ್ಕೆ ಮರಳಿರುವುದು ತಂಡಕ್ಕೆ ಬೂಸ್ಟ್ ನೀಡಿದಂತೆ ಆಗಿದೆ. ಕಗಿಸೊ ರಬಾಡ ಸಾರಥ್ಯದಲ್ಲಿ ದಕ್ಷಿಣ ಆಫ್ರಿಕಾ ಬಿಗುವಿನ ದಾಳಿ ನಡೆಸಿ ಎದುರಾಳಿ ತಂಡಕ್ಕೆ ಕಾಡಲು ಪ್ಲ್ಯಾನ್ ಮಾಡಿಕೊಂಡಿದೆ.

Story first published: Tuesday, January 2, 2024, 19:00 [IST]
Other articles published on Jan 2, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+