For Quick Alerts
ALLOW NOTIFICATIONS  
For Daily Alerts
 

IND vs SA: ಟೆಸ್ಟ್ ಕ್ರಿಕೆಟ್‌ನಲ್ಲಿ ಪಾಕಿಸ್ತಾನದ ಇಬ್ಬರು ಶ್ರೇಷ್ಠರನ್ನು ಹಿಂದಿಕ್ಕಿದ ವಿರಾಟ್ ಕೊಹ್ಲಿ

ಬುಧವಾರ, ಜನವರಿ 3ರಂದು ಕೇಪ್‌ಟೌನ್‌ನ ನ್ಯೂಲ್ಯಾಂಡ್ಸ್‌ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ ಪಂದ್ಯದ ಮೊದಲ ದಿನದಂದು ಪ್ರವಾಸಿ ಭಾರತ ತಂಡವು ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು ಕೇವಲ 55 ರನ್‌ಗಳಿಗೆ ಕಟ್ಟಿಹಾಕಿತು.

ನಾಯಕ ಡೀನ್ ಎಲ್ಗರ್ ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ಆಯ್ಕೆ ಮಾಡಿದ ನಂತರ, ದಕ್ಷಿಣ ಆಫ್ರಿಕಾ 23.2 ಓವರ್‌ಗಳಲ್ಲಿ 55 ರನ್‌ಗಳಿಗೆ ಆಲೌಟ್ ಆಯಿತು. ನಂತರ ತನ್ನ ಮೊದಲ ಇನ್ನಿಂಗ್ಸ್ ಆರಂಭಿಸಿದ ಭಾರತ ತಂಡ 34.5 ಓವರ್‌ಗಳಲ್ಲಿ 153 ರನ್‌ಗಳಿಗೆ ಸರ್ವಪತನ ಕಂಡಿತು ಮತ್ತು 98 ರನ್‌ಗಳ ಮುನ್ನಡೆ ಸಾಧಿಸಿತು.

ಇದೇ ವೇಳೆ ವಿರಾಟ್ ಕೊಹ್ಲಿ 46 ರನ್ ಗಳಿಸಿ ಭಾರತ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿದರು. ಉಳಿದಂತೆ ನಾಯಕ ರೋಹಿತ್ ಶರ್ಮಾ 39 ರನ್, ಶುಭ್ಮನ್ ಗಿಲ್ 36 ರನ್ ಗಳಿಸಿದರು.

IND vs SA: Virat Kohli Overtakes 2 Pakistan Legends in Test Crickets All-time Run Scorers List

ಇನ್ನು ಭಾರತ ಕ್ರಿಕೆಟ್ ತಂಡದ ಸೂಪರ್‌ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಸಾರ್ವಕಾಲಿಕ ಟೆಸ್ಟ್ ರನ್ ಗಳಿಸಿದವರ ಪಟ್ಟಿಯಲ್ಲಿ ಪಾಕಿಸ್ತಾನದ ಇಬ್ಬರು ಮಾಜಿ ಶ್ರೇಷ್ಠರನ್ನು ಹಿಂದಿಕ್ಕಿದರು.

ಇನ್ನು ಕೇಪ್ ಟೌನ್‌ನ ನ್ಯೂಲ್ಯಾಂಡ್ಸ್ ಕ್ರಿಕೆಟ್ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಮತ್ತು ಅಂತಿಮ ಟೆಸ್ಟ್‌ ಪಂದ್ಯದಲ್ಲಿ ವಿರಾಟ್ ಕೊಹ್ಲಿ 19ನೇ ಸಾರ್ವಕಾಲಿಕ ಟೆಸ್ಟ್ ರನ್ ಗಳಿಸಿದ ಆಟಗಾರರಾದರು.

ಸಾರ್ವಕಾಲಿಕ ಟೆಸ್ಟ್ ರನ್ ಗಳಿಸಿದವರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ ಪಾಕಿಸ್ತಾನದ ಮಾಜಿ ನಾಯಕರಾದ ಇಂಜಮಾಮ್-ಉಲ್-ಹಕ್ ಮತ್ತು ಜಾವೇದ್ ಮಿಯಾಂದಾದ್ ಅವರನ್ನು ಹಿಂದಿಕ್ಕಿದ್ದಾರೆ.

ಸೆಂಚುರಿಯನ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ವಿವಿಎಸ್ ಲಕ್ಷ್ಮಣ್ ಅವರನ್ನು ಹಿಂದಿಕ್ಕಿದ ವಿರಾಟ್ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತದ ಪರ ನಾಲ್ಕನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.

ಇಂಜಮಾಮ್-ಉಲ್-ಹಕ್ ಅವರು ಪಾಕಿಸ್ತಾನದ ಪರ 120 ಟೆಸ್ಟ್ ಪಂದ್ಯಗಳಲ್ಲಿ 49.60ರ ಸರಾಸರಿಯಲ್ಲಿ 8,830 ರನ್ ಗಳಿಸಿದ್ದಾರೆ ಮತ್ತು 46 ಅರ್ಧಶತಕ ಮತ್ತು 25 ಶತಕಗಳನ್ನು ಬಾರಿಸಿದ್ದಾರೆ.

ಇನ್ನು ಜಾವೇದ್ ಮಿಯಾಂದಾದ್ 124 ಟೆಸ್ಟ್ ಪಂದ್ಯಗಳಲ್ಲಿ 8,832 ರನ್ ಗಳಿಸಿದರು. 52.57ರ ಸರಾಸರಿಯಲ್ಲಿ 43 ಅರ್ಧಶತಕ ಮತ್ತು 23 ಶತಕಗಳನ್ನು ಸಿಡಿಸಿದ್ದಾರೆ.

IND vs SA: Virat Kohli Overtakes 2 Pakistan Legends in Test Crickets All-time Run Scorers List

ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಸೆಷನ್‌ನಲ್ಲಿ ವಿರಾಟ್ ಕೊಹ್ಲಿ ಇಬ್ಬರು ಪಾಕಿಸ್ತಾನದ ಲೆಜೆಂಡ್‌ಗಳನ್ನು ಹಿಂದಿಕ್ಕಿದರು. ಇದೇ ವೇಳೆ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ 98 ರನ್‌ಗಳ ಮುನ್ನಡೆ ಸಾಧಿಸಿತು.

ಮೊದಲ ಇನ್ನಿಂಗ್ಸ್‌ನಲ್ಲಿ ಮೊಹಮ್ಮದ್ ಸಿರಾಜ್ ಆತಿಥೇಯ ತಂಡವನ್ನು ಕೇವಲ 55 ರನ್‌ಗಳಿಗೆ ಆಲೌಟ್ ಮಾಡಲು ಆರು ವಿಕೆಟ್‌ಗಳನ್ನು ಪಡೆದರು.

ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ ಟೆಸ್ಟ್ ಆಡುವ ಯಾವುದೇ ತಂಡದ ಅತ್ಯಂತ ಕಡಿಮೆ ಇನ್ನಿಂಗ್ಸ್ ಮೊತ್ತವಾಗಿದೆ. ಮೊಹಮ್ಮದ್ ಸಿರಾಜ್ 15 ರನ್ ನೀಡಿ 6 ವಿಕೆಟ್ ಕಬಳಿಸಿದರೆ, ಜಸ್ಪ್ರೀತ್ ಬುಮ್ರಾ ಮತ್ತು ಮುಖೇಶ್ ಕುಮಾರ್ ತಲಾ 2 ವಿಕೆಟ್ ಕಬಳಿಸಿದರು.

ಮೊದಲ ಟೆಸ್ಟ್‌ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಧಶತಕ ಬಾರಿಸಿದರು. ಆದರೆ ಸೆಂಚುರಿಯನ್‌ನಲ್ಲಿ ಇನ್ನಿಂಗ್ಸ್ ಹಾಗೂ 32 ರನ್‌ಗಳ ಸೋಲಿಗೆ ಭಾರತ ತಂಡವನ್ನು ತಡೆಯಲು ಸಾಧ್ಯವಾಗಲಿಲ್ಲ.

ಸೆಂಚುರಿಯನ್‌ನ ಸೂಪರ್‌ಸ್ಪೋರ್ಟ್ ಪಾರ್ಕ್‌ನಲ್ಲಿ ನಡೆದ ಮೊದಲ ಟೆಸ್ಟ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗೆದ್ದು ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಆ ಗೆಲುವಿನೊಂದಿಗೆ ಭಾರತದ ಭರವಸೆಯನ್ನು ಹರಿಣ ಪಡೆ ನುಚ್ಚುನೂರು ಮಾಡಿತು. ದಕ್ಷಿಣ ಆಫ್ರಿಕಾದಲ್ಲಿ ದ್ವಿಪಕ್ಷೀಯ ಟೆಸ್ಟ್ ಸರಣಿಯನ್ನು ಎಂದಿಗೂ ಗೆಲ್ಲಲು ಸಾಧ್ಯವಾಗಿಲ್ಲ.

ಆದರೆ, ರೋಹಿತ್ ಶರ್ಮಾ ಮತ್ತು ಸಹ ಆಟಗಾರರಿಗೆ ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿಯ ಸೋಲನ್ನು ತಪ್ಪಿಸಿಕೊಳ್ಳುವ ಎರಡನೇ ಭಾರತೀಯ ತಂಡವಾಗಲು ಅವಕಾಶವಿದೆ. 2010/11 ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಮೊದಲನೆಯ ಬಾರಿಗೆ ಟೆಸ್ಟ್ ಸರಣಿ ಸೋಲಿನಿಂದ ತಪ್ಪಿಸಿಕೊಂಡಿತ್ತು.

Story first published: Wednesday, January 3, 2024, 20:58 [IST]
Other articles published on Jan 3, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+