IND vs SA: ಟೀಮ್ ಇಂಡಿಯಾ ಗೆಲುವಿನಲ್ಲಿ ಮಿಂಚಿದ ಯಂಗ್ ಸ್ಟಾರ್ಸ್
ದಕ್ಷಿಣ ಆಫ್ರಿಕಾದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾದ ಯುವ ಆಟಗಾರರು ಅಮೋಘ ಪ್ರದರ್ಶನ ನೀಡಿದ್ದಾರೆ. ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡ ಯುವ ಪಡೆ, ಏಕದಿನ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ.
ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರವನ್ನು ಕೈಗೊಂಡಿತು. ಟೀಮ್ ಇಂಡಿಯಾದ ಯುವ ವೇಗಿಗಳ ದಾಳಿಗೆ ದಕ್ಷಿಣ ಆಫ್ರಿಕಾ ಹೈರಾಣಾಯಿತು. 117 ರನ್ ಗಳ ಗುರಿಯನ್ನು ಬೆನ್ನಟ್ಟಿದ ಭಾರತ 16.4 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ನಿಗದಿತ ಗುರಿಯನ್ನು ಮುಟ್ಟಿತು, ಈ ಗೆಲುವಿನ ಮೂಲಕ ಟೀಮ್ ಇಂಡಿಯಾ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ಗುರಿಯನ್ನು ಹಿಂಬಾಲಿಸಿದ ಟೀಮ್ ಇಂಡಿಯಾದ ಆರಂಭ ಸಾಧಾರಣವಾಗಿತ್ತು. ಟೀಮ್ ಇಂಡಿಯಾದ ಪರ ಋತುರಾಜ್ ಗಾಯಕ್ವಾಡ್ 5 ರನ್ ಗಳಿಗೆ ಆಟ ಮುಗಿಸಿದರು, ಎರಡನೇ ವಿಕೆಟ್‌ಗೆ ಪದಾರ್ಪಣೆ ಪದ್ಯ ಆಡಿದ ಸಾಯಿ ಸುದರ್ಶನ ಹಾಗೂ ಶ್ರೇಯಸ್ ಅಯ್ಯರ್ ಜೊತೆಗೂಡಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಈ ಜೋಡಿ 73 ಎಸೆತಗಳಲ್ಲಿ 88 ರನ್ ಸೇರಿಸಿತು. ಶ್ರೇಯಸ್ ಅಯ್ಯರ್ 52 ರನ್ ಬಾರಿಸಿ ಮುನ್ನಗುತ್ತಿದ್ದಾಗ ಇಲ್ಲದ ಶಾಟ್ ಹೊಡೆಯಲು ಹೋಗಿ ಔಟ್ ಆದರು.
ಚೊಚ್ಚಲ ಪಂದ್ಯವನ್ನು ಆಡಿದ ಸಾಯಿ ಸುದರ್ಶನ 43 ಎಸೆತಗಳಲ್ಲಿ 9 ಬೌಂಡರಿ ಸೇರಿದಂತೆ 55 ರನ್ ಬಾರಿಸಿ ಅಜೇಯರಾಗುಳಿದರು.

ಯುವ ವೇಗಿಗಳ ಅಬ್ಬರ
ಟೀಮ್ ಇಂಡಿಯಾದ ಯುವ ಬಾಲರುಗಳು ತಮಗೆ ಸಿಕ್ಕ ಅವಕಾಶವನ್ನು ಭರ್ಜರಿಯಾಗಿ ಬಳಸಿಕೊಂಡರು. ಮೊಲೆಚಾದ ಬೌಲಿಂಗ್ ದಾಳಿಯನ್ನು ಉನ್ನದಿಸಿದ ಆವಿಷ್ ಖಾನ್ ಹಾಗೂ ಅರ್ಷದೀಪ್ ಸಿಂಗ್ ಹಿರೋಗಳಂತೆ ಕಂಡು ಬಂದರು. ವೇಗದ ಬೌಲರ್ ಗಳಿಗೆ ನೆರವಾಗುವ ಪಿಚ್ ನಲ್ಲಿ ಭಾರತದ ವೇಗಿಗಳು ಅಬ್ಬರಿಸಿದರು.
ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌ಗಳಾದ ರೀಜಾ ಹೆಂಡ್ರಿಕ್ಸ್ ಮತ್ತು ರಾಸ್ಸಿ ವ್ಯಾನ್ ಡೆರ್ ಡಸ್ಸೆನ್ ಯಾವುದೇ ರನ್ ಗಳಿಸದೆ ಪೆವಿಲಿಯನ್‌ಗೆ ತೆರಳಿದರು. ಟೋನಿ ಡಿ ಜಾರ್ಗಿ ಬಿರುಸಿನ ಬ್ಯಾಟಿಂಗ್ ಮಾಡುತ್ತಿದ್ದರೂ, ಕೆಎಲ್ ರಾಹುಲ್ ಅವರು ಅರ್ಷದೀಪ್ ಸಿಂಗ್ ಅವರ ಬೌನ್ಸರ್‌ನಲ್ಲಿ ಅತ್ಯುತ್ತಮ ಕ್ಯಾಚ್ ಪಡೆದರು. ಟೋನಿ ಡಿಜಾರ್ಜ್ 22 ಎಸೆತಗಳಲ್ಲಿ 28 ರನ್ ಗಳಿಸಿದರು.

ಏಡನ್ ಮಾರ್ಕ್ರಾಮ್ ತಂಡದ ಬ್ಯಾಟ್ಸ್‌ಮನ್‌ಗಳು ನಿರಂತರವಾಗಿ ಪೆವಿಲಿಯನ್‌ಗೆ ಮರಳುತ್ತಲೇ ಇದ್ದರು. ಅರ್ಷದೀಪ್ ಸಿಂಗ್ ಎಸೆತದಲ್ಲಿ ರೀಜಾ ಹೆಂಡ್ರಿಕ್ಸ್ ಯಾವುದೇ ರನ್ ಗಳಿಸದೆ ಔಟಾದರು.
ಯುವ ವೇಗ್ ಬೌಲರ್ ಆವಿಶ್ ಖಾನ್ 8 ಓವರ್ ಗಳಲ್ಲಿ 27 ರನ್ ನೀಡಿ 4 ವಿಕೆಟ್ ಕಬಳಿಸಿ ಅಬ್ಬರಿಸಿದರು. ಆರ್ಷದೀಪ್ ಸಿಂಗ್ 37 ರನ್ 5 ವಿಕೆಟ್ ಪಡೆದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications