Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Ind vs SL 1st T20I : ಭಾರತ vs ಶ್ರೀಲಂಕಾ ಮೊದಲ ಟಿ20: ಪಿಚ್ ರಿಪೋರ್ಟ್, ಹವಾಮಾನ ವರದಿ ಹಾಗೂ ಆಡುವ ಬಳಗ

Ind vs SL 1st T20I Probable Playing 11, Pitch Report and Weather Forecast

ಟೀಮ್ ಇಂಡಿಯಾ ಹಾಗೂ ಶ್ರೀಲಂಕಾ ತಂಡಗಳ ನಡುವಿನ ವೈಟ್‌ಬಾಲ್ ಸರಣಿ ಮಂಗಳವಾರದಿಂದ ಆರಂಭವಾಗಲಿದ್ದು ಮುಂಬೈನ ವಾಂಖೆಡೆ ಕ್ರೀಡಾಣಗಣದಲ್ಲಿ ಮೊದಲ ಟಿ20 ಪಂದ್ಯ ನಡೆಯಲಿದೆ. ಈ ಮೂಲಕ ಭಾರತ ಹಾಗೂ ಶ್ರೀಲಂಕಾ ಎರಡು ತಂಡಗಳು ಕೂಡ 2023ರ ಕ್ಯಾಲೆಂಡರ್ ವರ್ಷದ ಅಭಿಯಾನ ಆರಂಭಿಸಲಿದೆ.

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆಎಲ್ ರಾಹುಲ್‌ಗೆ ಟಿ20 ಸರಣಿಯಿಂದ ವಿಶ್ರಾಂತಿ ನೀಡಲಾಗಿದ್ದು ಹಾರ್ದಿಕ್ ಪಾಂಡ್ಯ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಮುಕೇಶ್ ಕುಮಾರ್, ಶಿವಮ್ ಮಾವಿಯಂತಾ ಯುವ ಆಟಗಾರರು ಈ ಸರಣಿಯಲ್ಲಿ ಮೊದಲ ಬಾರಿಗೆ ಭಾರತ ತಂಡದಲ್ಲಿ ಅವಕಾಶ ಪಡೆದುಕೊಂಡಿದ್ದು ಋತುರಾಜ್ ಗಾಯಕ್ವಾಡ್, ಶುಬ್ಮನ್ ಗಿಲ್ ಮತ್ತು ಹರ್ಷಲ್ ಪಟೇಲ್ ಕೂಡ ತಂಡದಲ್ಲಿದ್ದಾರೆ. ಇನ್ನು ಸೂರ್ಯಕುಮಾರ್ ಯಾದವ್‌ಗೆ ಉಪನಾಯಕನ ಹೊಣೆಗಾರಿಕೆ ವಹಿಸಲಾಗಿದೆ. ಇತ್ತ ಏಷ್ಯಾ ಕಪ್ ಚಾಂಪಿಯನ್ ಆಗಿರುವ ಶ್ರೀಲಂಕಾ ತಂಡ ಭಾರತಕ್ಕೆ ಪುರ್ಣ ಸಾಮರ್ಥ್ಯದ ಪಡೆಯೊಂದಿಗೆ ಕಣಕ್ಕಿಳಿಯುತ್ತಿದ್ದು ಭಾರತಕ್ಕೆ ಕಠಿಣ ಸವಾಲು ಎದುರಾಗುವ ನಿರೀಕ್ಷೆಯಿದೆ.

ವಾಂಖೆಡೆ ಕ್ರೀಡಾಂಗಣದ ಪಿಚ್ ರಿಪೋರ್ಟ್

ವಾಂಖೆಡೆ ಕ್ರೀಡಾಂಗಣದ ಪಿಚ್ ರಿಪೋರ್ಟ್

ವಾಂಖೆಡೆ ಕ್ರೀಡಾಂಗಣ ವೇಗಿಗಳು ಹಾಗೂ ಸ್ಪಿನ್ ಇಬ್ಬರಿಗೂ ಸಮನಾಗಿ ಬೆಂಬಲವನ್ನು ನೀಡಲಿದೆ. ಆದರೆ ವೈಟ್‌ಬಾಲ್ ಕ್ರಿಕೆಟ್ ಆಗಿರುವ ಕಾರಣ ಇಲ್ಲಿ ಬ್ಯಾಟರ್‌ಗಳಿಗೆ ರನ್‌ಗಳಿಸಲು ಪಿಚ್ ಹೆಚ್ಚು ನೆರವಾಗಲಿದೆ. ಹೀಗಾಗಿ ಅಭಿಮಾನಿಗಳಿಗೆ ಉತ್ತಮ ಮನರಂಜನೆ ದೊರೆಯುವ ನಿರೀಕ್ಷೆಯಿದೆ. ಇಲ್ಲಿ ಇಬ್ಬನಿ ಪರಿಣಾಮ ಬೀರುವ ಕಾರಣದಿಂದಾಗಿ ಟಾಸ್ ಗೆದ್ದ ತಂಡ ರನ್ ಬೆನ್ನಟ್ಟುವುದನ್ನು ಬಯಸುತ್ತವೆ. ಇಲ್ಲಿ ಆಡಿರುವ 7 ಪಂದ್ಯಗಳ ಪೈಕಿ 5ರಲ್ಲಿ ರನ್ ಬೆನ್ನಟ್ಟಿದ ತಂಡಗಳು ಗೆದ್ದಿದೆ.

ಹವಾಮಾನ ವರದಿ ಹಾಗೂ ನೇರಪ್ರಸಾರದ ಮಾಹಿತಿ

ಹವಾಮಾನ ವರದಿ ಹಾಗೂ ನೇರಪ್ರಸಾರದ ಮಾಹಿತಿ

ಪಂದ್ಯ ನಡೆಯುವ ದಿನವಾದ ಮಂಗಳವಾರ ಮುಂಬೈನಲ್ಲಿ ಮಳೆಯಾಗುವ ಸಾಧ್ಯತೆಯಿಲ್ಲ. ಹೀಗಾಗಿ ಪಂದ್ಯ ನಿರಾತಂಕವಾಗಿ ಸಾಗಲಿದೆ. ವಾತಾವರಣ ಆರ್ದ್ರತೆಯಿಂದ ಕೂಡಿರಲಿದ್ದು ತಾಪಮಾನ ಗರಿಷ್ಠ 28 ಡಿಗ್ರಿ ಸೆಲ್ಸಿಯಸ್‌ನಿಂದ ಕನಿಷ್ಠ 24 ಡಿಗ್ರಿ ಸೆಲ್ಸಿಯಸ್‌ನಷ್ಟಿರುವ ಸಾಧ್ಯತೆಯಿದೆ.
ಪಂದ್ಯ ಸಂಜೆ 7 ಗಂಟೆಗೆ ಆರಂಭವಾಗಲಿದ್ದು 6:30ಕ್ಕೆ ಟಾಸ್ ಪ್ರಕ್ರಿಯೆ ನಡೆಯಲಿದೆ. ಸ್ಟಾರ್‌ ಸ್ಪೋರ್ಟ್ಸ್ ಹಾಗೂ ಹಾಟ್‌ಸ್ಟಾರ್‌ನಲ್ಲಿ ಈ ಪಂದ್ಯಗಳನ್ನು ವೀಕ್ಷಿಸಬಹುದು.

ಇತ್ತಂಡಗಳ ಸಂಭಾವ್ಯ ಆಡುವ ಬಳಗ

ಇತ್ತಂಡಗಳ ಸಂಭಾವ್ಯ ಆಡುವ ಬಳಗ

ಶ್ರೀಲಂಕಾ: ಪಾತುಮ್ ನಿಸ್ಸಾಂಕ, ಕುಸಲ್ ಮೆಂಡಿಸ್ (ವಿಕೆಟ್ ಕೀಪರ್), ಅವಿಷ್ಕಾ ಫೆರ್ನಾಂಡೋ, ಚರಿತ್ ಅಸಲಂಕಾ, ಭಾನುಕಾ ರಾಜಪಕ್ಸೆ, ದಾಸುನ್ ಶನಕ (ನಾಯಕ), ವನಿಂದು ಹಸರಂಗ, ಚಾಮಿಕ ಕರುಣರತ್ನ, ಮಹೇಶ್ ತೀಕ್ಷಣ, ಲಹಿರು ಕುಮಾರ, ದಿಲ್ಶನ್ ಮಧುಶಂಕ

ಭಾರತ: ಶುಬ್ಮನ್ ಗಿಲ್, ಇಶಾನ್ ಕಿಶನ್, ಋತುರಾಜ್ ಗಾಯಕ್ವಾಡ್, ಸೂರ್ಯಕುಮಾರ್ ಯಾದವ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ನಾಯಕ), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್/ಅಕ್ಸರ್ ಪಟೇಲ್, ಯುಜ್ವೇಂದ್ರ ಚಾಹಲ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್

Story first published: Monday, January 2, 2023, 19:49 [IST]
Other articles published on Jan 2, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+