ಭಾರತ vs ಶ್ರೀಲಂಕಾ 2ನೇ ಟಿ20: ಧರ್ಮಶಾಲಾದಲ್ಲಿ ಅಡ್ಡಿಯಾಗಲಿದೆಯಾ ಮಳೆ? ಹೇಗಿದೆ ಪಿಚ್ ರಿಪೋರ್ಟ್?

ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿಮೊದಲ ಪಂದ್ಯ ಮುಕ್ತಾಯವಾಗಿದ್ದು ಭಾರತ ಭರ್ಜರಿ ಗೆಲುವಿನೊಂದಿಗೆ ಮುನ್ನಡೆಯನ್ನು ಸಾಧಿಸಿದೆ. ಇದೀಗ ಎರಡನೇ ಪಂದ್ಯವನ್ನಾಡಲು ಭಾರತ ಹಾಗೂ ಶ್ರೀಲಂಕಾ ಎರಡೂ ತಂಡಗಳು ಸಜ್ಜಾಗಿದೆ. ವೆಸ್ಟ್ ಇಂಡೀಸ್ ವಿರುದ್ಧದ ಟಿ0 ಸರಣಿಯನ್ನು ವೈಟ್‌ವಾಶ್ ಮಾಡಿದ ಉತ್ಸಾಹದಲ್ಲಿರುವ ಭಾರತ ಶ್ರೀಲಂಕಾ ವಿರುದ್ಧವೂ ಅಂತಾದ್ದೇ ಸಾಧನೆಗೆ ಸಜ್ಜಾಗಿದೆ. ಮೊದಲ ಪಂದ್ಯದಲ್ಲಿ ಭಾರೀ ಅಂತರದ ಸೋಲು ಕಂಡಿರುವ ಶ್ರೀಲಂಕಾ ಸಮರ್ಥ ಪೈಪೋಟಿ ನಡೆಸಲು ಹವಣಿಸುತ್ತಿದೆ.
ಮೊದಲ ಪಂದ್ಯ ಲಕ್ನೋದಲ್ಲಿ ನಡೆದ ಬಳಿಕ ಮುಂದಿನ ಎರಡು ಪಂದ್ಯಗಳು ಧರ್ಮಶಾಲಾದಲ್ಲಿ ಆಯೋಜನೆಯಾಗಲಿದೆ. ಈ ಪಂದ್ಯಕ್ಕಾಗಿ ಎರೂ ತಮಡಗಳು ಈಗ ಧರ್ಮಶಾಲಾ ತಲುಪಿದೆ. ಈ ಎರಡನೇ ಪಂದ್ಯವನ್ನು ಆಯೋಜಿಸುತ್ತಿರುವ ಧರ್ಮಶಾಲಾದ ಹೆಚ್‌ಪಿಸಿಎ ಕ್ರೀಡಾಂಗಣದ ಪಿಚ್ ರಿಪೋರ್ಟ್, ಹವಾಮಾನ ವರದಿ ಹಾಗೂ ಕೆಲ ಕುತೂಹಲಕಾರಿ ಅಂಕಿಅಂಶಗಳನ್ನು ನೋಡೋಣ.

ಧರ್ಮಶಾಲಾ ಹವಾಮಾನ ವರದಿ
ಹಿಮಾಚಲ ಪ್ರದೇಶದ ನಗರವಾಗಿರುವ ಧರ್ಮಶಾಲಾ ಟಿ20 ಸರಣಿಯ ಅಂತಿಮ ಎರಡು ಪಂದ್ಯಗಳು ಆಯೋಜನೆಯಾಗಲಿದ್ದು ಶನಿವಾರ ಹಾಗೂ ಭಾನುವಾರ ಈ ಪಂದ್ಯಗಳು ನಡೆಯಲಿದೆ. ಆದರೆ ಈಗಿನ ಹವಾಮಾನ ವರದಿಯ ಪ್ರಕಾರ ಶನಿವಾರ ನಡೆಯಲಿರುವ ಪಂದ್ಯಕ್ಕೆ ಹವಾಮಾನ ಅಡ್ಡಿಯಾಗುವ ಸಾಧ್ಯತೆಯಿದೆ. ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿಗಳು ಹೇಳುತ್ತಿವೆ. ಇನ್ನು ಉಷ್ಣಾಂಶ 10 ಡಿಗ್ರಿ ಸೆಲ್ಸಿಯಸ್‌ಗೆ ಕುಸಿಯುವ ಸಾಧ್ಯತೆಯಿದೆ.

ಧರ್ಮಶಾಲಾ ಪಿಚ್ ರಿಪೋರ್ಟ್
ಧರ್ಮಶಾಲಾದ ಹೆಚ್‌ಪಿಸಿಎ ಕ್ರೀಡಾಂಗಣ ವೇಗದ ಬೌಲರ್‌ಗಳಿಗೆ ಹೆಚ್ಚಿನ ನೆರವು ನೀಡುವ ಸಾಧ್ಯತೆಯಿದೆ. ಇದಕ್ಕೆ ಹವಾಮಾನ ಕೂಡ ಕಾರಣವಾಗಬಹುದು ಎನ್ನಲಾಗಿದೆ. ಆದರೆ ದೊಡ್ಡ ಮೊತ್ತದ ಪಂದ್ಯ ನಡೆಯುವ ಸಾಧ್ಯತೆ ಕಡಿಮೆಯಿದೆ. ಮೊದಲು ಬ್ಯಾಟಿಂಗ್ ಮಾಡಿದ ತಂಡ 160 ರನ್‌ಗಳಿಸಿದರೆ ರಕ್ಷಣೆ ಮಾಡಿಕೊಳ್ಳುವ ಅವಕಾಶ ದೊರೆಯಬಹುದು.

ಧರ್ಮಶಾಲಾ ಕ್ರೀಡಾಂಗಣದ T20 ಅಂಕಿಅಂಶಗಳು
ಆಡಿದ ಒಟ್ಟು ಟಿ20I ಪಂದ್ಯಗಳು: 7
ಮೊದಲು ಬ್ಯಾಟಿಂಗ್ ಮಾಡಿದ ತಂಡದ ಗೆಲವು ಗೆಲುವು: 4
ಎರಡನೇ ಬ್ಯಾಟಿಂಗ್ ಮಾಡಿದ ತಂಡದ ಗೆಲುವು ಗೆಲುವು: 2
ಫಲಿತಾಂಶವಿಲ್ಲದ ಪಂದ್ಯ: 1
1ನೇ ಇನಿಂಗ್ಸ್‌ನ ಸರಾಸರಿ ಸ್ಕೋರ್: 140
2ನೇ ಇನಿಂಗ್ಸ್‌ನ ಸರಾಸರಿ ಸ್ಕೋರ್: 124
ಗರಿಷ್ಠ ಮೊತ್ತ: ಭಾರತದ ವಿರುದ್ಧ ದಕ್ಷಿಣ ಆಫ್ರಿಕಾ 200/3

ಭಾರತ ಹಾಗೂ ಶ್ರೀಲಂಕಾ ಸ್ಕ್ವಾಡ್
ಶ್ರೀಲಂಕಾ ಸ್ಕ್ವಾಡ್: ದಸುನ್ ಶನಕಾ (ನಾಯಕ), ಪಾತುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್, ಚರಿತ್ ಅಸಲಂಕ (ಉಪನಾಯಕ), ದಿನೇಶ್ ಚಾಂಡಿಮಾಲ್, ದನುಷ್ಕ ಗುಣತಿಲಕ, ಕಮಿಲ್ ಮಿಶ್ರಾ, ಜನಿತ್ ಲಿಯಾನಗೆ, ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ದುಷ್ಮಂತ ಚಮೀರ, ಲಹಿರು ಎಫ್ ಕುಮಾರ, ಲಹಿರು ಎಫ್ ಕುಮಾರ, ಮಹೀಶ್ ತೀಕ್ಷಣ, ಜೆಫ್ರಿ ವಾಂಡರ್ಸೆ, ಪ್ರವೀಣ್ ಜಯವಿಕ್ರಮ, ಆಶಿಯನ್ ಡೇನಿಯಲ್
ಭಾರತ ಸ್ಕ್ವಾಡ್: ರೋಹಿತ್ ಶರ್ಮಾ (ನಾಯಕ), ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಸಂಜು ಸ್ಯಾಮ್ಸನ್, ರವೀಂದ್ರ ಜಡೇಜಾ, ಯುಜುವೇಂದ್ರ ಚಾಹಲ್, ರವಿ ಬಿಷ್ಣೋಯ್, ಕುಲದೀಪ್ ಯಾದವ್, ಅವೇಶ್ ಖಾನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications