Ind Vs SL 3rd ODI: ಕೊಹ್ಲಿಯ ಶತಕದ ಬಳಿಕ ಅನುಷ್ಕಾ ಶರ್ಮಾ ಪ್ರತಿಕ್ರಿಯೆ ವೈರಲ್

ರನ್ ಮೆಷಿನ್, ಕಿಂಗ್ ಕೊಹ್ಲಿ ಮತ್ತೆ ಗತವೈಭವಕ್ಕೆ ಮರಳಿದ್ದಾರೆ. ಮೂರು ವರ್ಷಗಳ ಕಾಲ ಒಂದು ಶತಕ ಗಳಿಸಲು ಪರದಾಡಿದ್ದ ವಿರಾಟ್, ಈಗ ಮೂರೇ ದಿನದ ಅಂತರದಲ್ಲಿ ಎರಡು ಶತಕ ದಾಖಲಿಸಿದ್ದಾರೆ.
ತಿರುವನಂತರಪುರದ ಗ್ರೀನ್‌ಫೀಲ್ಡ್‌ನಲ್ಲಿ ಕೊಹ್ಲಿ ಅಕ್ಷರಶಃ ಆರ್ಭಟಿಸಿದರು. ಶತಕ ಗಳಿಸುವವರೆಗೆ ತಾಳ್ಮೆಯಿಂದ ಆಡಿದ ಕೊಹ್ಲಿ, ಶತಕ ಗಳಿಸಿದ ನಂತರ ಅಂತಿಮ ಓವರ್ ಗಳಲ್ಲಿ ಬೌಂಡರಿಗಳ ಸುರಮಳೆಗೈದರು. 110 ಎಸೆತಗಳಲ್ಲಿ 13 ಬೌಂಡರಿ, 8 ಸಿಕ್ಸರ್ ಸಹಿತ ಅಜೇಯ 166 ರನ್ ಗಳಿಸಿ ಮಿಂಚಿದರು.
ಕೊಹ್ಲಿ ಶತಕ ಗಳಿಸುತ್ತಿದ್ದಂತೆ ವಿಶ್ವದ ಮೂಲೆ ಮೂಲೆಯಿಂದ ಕೊಹ್ಲಿಯ ಗುಣಗಾನ ನಡೆಯುತ್ತಿದೆ. ಮಾಜಿ ಕ್ರಿಕೆಟಿಗರು, ಹಾಲಿ ಕ್ರಿಕೆಟಿಗರು ಅವರನ್ನು ಹೊಗಳುತ್ತಿದ್ದಾರೆ. ರನ್ ಗಳಿಸದೇ ಇದ್ದಾಗ ಕೊಹ್ಲಿ ನಿವೃತ್ತಿಯಾಗಲಿ ಎಂದವರೆಲ್ಲ ಇಂದು ಕೊಹ್ಲಿಯನ್ನು ಮನಸಾರೆ ಅಭಿನಂದಿಸಿದ್ದಾರೆ.
ಇನ್ನೂ, ಕೊಹ್ಲಿಯ ಬಾಳ ಸಂಗಾತಿ ಅನುಷ್ಕಾ ಶರ್ಮಾ ಪತಿಯ ಶತಕ ಕಂಡು ಫುಲ್ ಖುಷ್ ಆಗಿದ್ದಾರೆ. ಕೊಹ್ಲಿ 46ನೇ ಏಕದಿನ ಶತಕ ಸಿಡಿಸುತ್ತಿದ್ದಂತೆ ಅನುಷ್ಕಾ ಶರ್ಮಾ, ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ.

ಎಂತಹ ಇನ್ನಿಂಗ್ಸ್ ಎಂದ ಅನುಷ್ಕಾ
ಇನ್‌ಸ್ಟಾಗ್ರಾಂ ಖಾತೆಯ ಸ್ಟೋರಿಯಲ್ಲಿ ವಿರಾಟ್ ಕೊಹ್ಲಿ ಭಾವಚಿತ್ರ ಹಂಚಿಕೊಂಡ ಅನುಷ್ಕಾ ಶರ್ಮಾ, "ಎಂತಹ ಹುಡುಗ ನೀನು" ಎಂದು ಬರೆದುಕೊಂಡಿದ್ದಾರೆ. ಮುಂದುವರೆದು ಎಂತಹ ಅತ್ಯುತ್ತಮ ಇನ್ನಿಂಗ್ಸ್ ಎಂದು ಹೇಳುವ ಮೂಲಕ ಕೊಹ್ಲಿಯ ಆಟವನ್ನು ಮನಸಾರೆ ಮೆಚ್ಚಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಪ್ರತಿ ಬಾರಿ ರನ್ ಗಳಿಸಿದಾಗಲೂ ಅನುಷ್ಕಾ ಶರ್ಮಾ ಕೊಹ್ಲಿಯನ್ನು ಅಭಿನಂದಿಸುತ್ತಾರೆ. ಕೊಹ್ಲಿ ಸಾಧನೆಯನ್ನು ಸಂಭ್ರಮಿಸಿದ್ದಾರೆ. ಕೊಹ್ಲಿ ಕೂಡ ತಮ್ಮ ಯಶಸ್ಸನ್ನು ಅನುಷ್ಕಾ ಜೊತೆ ಹಂಚಿಕೊಳ್ಳಲು ಹೆಚ್ಚು ಇಷ್ಟ ಪಡುತ್ತಾರೆ.

ಕಷ್ಟದ ದಿನಗಳಲ್ಲಿ ಧೈರ್ಯ ತುಂಬಿದ್ದೇ ಅನುಷ್ಕಾ
2019ರಿಂದ ಮೂರು ವರ್ಷಗಳ ಕಾಲ ಬರೀ ಟೀಕೆ, ಅವಮಾನಗಳನ್ನೇ ಎದುರಿಸಿದ್ದ ಕೊಹ್ಲಿಗೆ ಜೊತೆಯಾಗಿ ನಿಂತಿದ್ದು ಅನುಷ್ಕಾ ಶರ್ಮಾ. ಪತ್ನಿ, ಮಗಳು ಎಂದರೆ ಕೊಹ್ಲಿಗೆ ಎಲ್ಲಕ್ಕಿಂತ ಹೆಚ್ಚು. ತಮ್ಮ ಕಷ್ಟದ ದಿನಗಳಲ್ಲಿ ಅವರು ಕುಟುಂಬದ ಜೊತೆ ಇದ್ದು ಆತ್ಮವಿಶ್ವಾಸವನ್ನು ಮರಳಿ ಪಡೆಯಲು ಯತ್ನಿಸಿದರು.
ಮೂರು ವರ್ಷಗಳ ಕಾಲ ಕಷ್ಟಪಟ್ಟ ಕೊಹ್ಲಿ ತಮ್ಮ ಬ್ಯಾಟಿಂಗ್ ಗತವೈಭವವನ್ನು ಮರಳಿ ತಂದಿದ್ದಾರೆ. 2023ರ ಏಕದಿನ ವಿಶ್ವಕಪ್‌ಗಾಗಿ ಈಗಷ್ಟೇ ಕೆಲಸ ಆರಂಭವಾಗಿದೆ, ಇದಿನ್ನೂ ಟ್ರೈಲರ್ ಅಷ್ಟೇ ಪಿಚ್ಚರ್ ಇನ್ನೂ ಮುಂದಿದೆ ಎನ್ನುತ್ತಾ ಸಂಭ್ರಮಿಸುತ್ತಿದ್ದಾರೆ ಅಭಿಮಾನಿಗಳು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications