For Quick Alerts
ALLOW NOTIFICATIONS  
For Daily Alerts
 

IND vs SL 3rd ODI: ಈ ದಾಖಲೆ ಮಾಡಿದ ವಿಶ್ವದ ಮೊದಲ ತಂಡ ಟೀಂ ಇಂಡಿಯಾ!

IND vs SL 3rd ODI: Team India Become First Team To Win 300 Plus Runs Margin In ODI

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ 317 ರನ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಸರಣಿಯನ್ನು ವೈಟ್‌ವಾಶ್ ಮಾಡಿದೆ. ಇದರೊಂದಿಗೆ 2023ರ ಏಕದಿನ ವಿಶ್ವಗಾಗಿ ಭರ್ಜರಿಯಾಗಿಯೇ ತಯಾರಿ ಆರಂಭಿಸಿದೆ.

ತಿರುವನಂತಪುರದ ಗ್ರೀನ್‌ಫೀಲ್ಡ್ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಹಲವು ದಾಖಲೆಗಳು ನಿರ್ಮಾಣವಾದವು. ಮೊದಲ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್‌ ಮೂಲಕ ಮಿಂಚಿದ ಕೊಹ್ಲಿ ಹಲವು ದಾಖಲೆಗಳನ್ನು ಸೃಷ್ಟಿಸಿದರು.

ಭಾರತ ನೆಲದಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅತ್ಯಂತ ವೇಗವಾಗಿ 150 ಕ್ಕೂ ಅಧಿಕ ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಅಲ್ಲದೆ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 5ನೇ ಸ್ಥಾನಕ್ಕೆ ಜಿಗಿದಿದ್ದಾರೆ. ದಿಗ್ಗಜ ಸಚಿನ್‌ ಹೆಸರಿನಲ್ಲಿ ಭಾರತದಲ್ಲಿ ಅತಿ ಹೆಚ್ಚು ಶತಕ ಗಳಿಸಿದ ದಾಖಲೆಯನ್ನು ಕೊಹ್ಲಿ ಮುರಿದರು.

ಸಚಿನ್ ಭಾರತದಲ್ಲಿ ಏಕದಿನ ಮಾದರಿಯಲ್ಲಿ 20 ಶತಕಗಳನ್ನು ಸಿಡಿಸಿದ್ದರೆ, ಕೊಹ್ಲಿ 21 ಶತಕ ಸಿಡಿಸುವ ಮೂಲಕ ಸಚಿನ್‌ರ ದಾಖಲೆಯನ್ನು ಮುರಿದು ತಮ್ಮ ಹೆಸರಿಗೆ ಹೊಸ ದಾಖಲೆ ಬರೆದುಕೊಂಡರು. ಇದು ಕೊಹ್ಲಿಯವರ ವೈಯಕ್ತಿಕ ಸಾಧನೆಯಾದರೆ, ತಂಡವಾಗಿ ಕೂಡ ಭಾರತ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ.

IND vs SL 3rd ODI: Team India Become First Team To Win 300 Plus Runs Margin In ODI

317 ರನ್‌ಗಳ ಅಂತರದ ಬೃಹತ್ ಜಯ

ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ಇದುವರೆಗೆ ಯಾವ ತಂಡ ಕೂಡ 300ಕ್ಕೂ ಅಧಿಕ ರನ್‌ಗಳ ಅಂತರದಿಂದ ಗೆದ್ದಿಲ್ಲ. ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ಶ್ರೀಲಂಕಾ ವಿರುದ್ಧ 317 ರನ್‌ಗಳ ಅಂತರದಲ್ಲಿ ಜಯ ಸಾಧಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ.

ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಇದು ಅತ್ಯಂತ ದೊಡ್ಡ ಅಂತರದ ಜಯ ಎನಿಸಿಕೊಂಡಿದೆ. ಅಲ್ಲದೆ ಇದೇ ಮೊದಲ ಬಾರಿಗೆ ತಂಡವೊಂದು 300ಕ್ಕೂ ಹೆಚ್ಚಿನ ಅಂತರದಲ್ಲಿ ಗೆದ್ದ ದಾಖಲೆ ಬರೆದಿದೆ.

IND vs SL 3rd ODI: Team India Become First Team To Win 300 Plus Runs Margin In ODI

ನ್ಯೂಜಿಲೆಂಡ್ ವಿರುದ್ಧ ಮುಂದಿನ ಸರಣಿ

2023ರ ಅಕ್ಟೋಬರ್ ನವೆಂಬರ್ ತಿಂಗಳಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ಗಾಗಿ ಸಿದ್ಧತೆ ಆರಂಭಿಸಿರುವ ಭಾರತ ತಂಡಕ್ಕೆ ಇದು ಸಾಕಷ್ಟು ಆತ್ಮವಿಶ್ವಾಸವನ್ನು ನೀಡುತ್ತದೆ. ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯನ್ನು 3-0 ಅಂತರದಲ್ಲಿ ಗೆದ್ದಿರುವ ಭಾರತ ತಂಡ ತನ್ನ ಮುಂದಿನ ಏಕದಿನ ಸರಣಿಯನ್ನು ನ್ಯೂಜಿಲೆಂಡ್ ವಿರುದ್ಧ ಆಡಲಿದೆ.

ಜನವರಿ 18 ರಂದು ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಮೊದಲನೇ ಪಂದ್ಯ ಹೈದರಾಬಾದ್‌ನಲ್ಲಿ ನಡೆಯಲಿದೆ. ನ್ಯೂಜಲೆಂಡ್‌ ವಿರುದ್ಧದ ಏಕದಿನ ಸರಣಿಯನ್ನು ಭಾರತ ಕ್ಲೀನ್ ಸ್ವೀಪ್ ಮಾಡಿದರೆ, ಐಸಿಸಿ ಏಕದಿನ ರ್‍ಯಾಂಕಿಂಗ್‌ನಲ್ಲಿ ಭಾರತ ಅಗ್ರಸ್ಥಾನಕ್ಕೇರಲಿದೆ.

Story first published: Sunday, January 15, 2023, 23:12 [IST]
Other articles published on Jan 15, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+