ಭಾರತ ವಿರುದ್ಧದ 3 ಪಂದ್ಯಗಳ ಟಿ20 ಸರಣಿಗೆ 18 ಆಟಗಾರರ ಶ್ರೀಲಂಕಾ ತಂಡ ಪ್ರಕಟ

ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿ ಅಂತ್ಯವಾಗಿದ್ದು ಇದೀಗ ಭಾರತ ಶ್ರೀಲಂಕಾ ವಿರುದ್ಧ ಟಿ20 ಸರಣಿಗೆ ಸಜ್ಜಾಗುತ್ತಿದೆ. ಶ್ರೀಲಂಕಾ ತಂಡ ಕೂಡ ಆಸ್ಟ್ರೇಲಿಯಾ ಪ್ರವಾಸವನ್ನು ಭಾನುವಾರವಷ್ಟೇ ಮುಗಿಸಿದ್ದು ಆಸಿಸ್ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯ ನಂತರ ಇದೀಗ ಭಾರತ ಪ್ರವಾಸ ಕೈಗೊಂಡು ಮೊದಲಿಗೆ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಆಡಲಿದೆ. ಈ ಸರಣಿಗಾಗಿ 18 ಆಟಗಾರರ ಲಂಕಾ ಪಡೆಯನ್ನು ಶ್ರೀಲಂಕಾ ಕ್ರಿಕೆಟ್ ಸೋಮವಾರ ಘೋಷಣೆ ಮಾಡಿದೆ.
ಭಾರತ ವಿರುದ್ಧದ ಟಿ20 ಸರಣಿಗೂ ದಸುನ್ ಶನಕಾ ಶ್ರೀಲಂಕಾ ತಂಡವನ್ನು ಮುನ್ನಡೆಸಲಿದ್ದಾರೆ. ಆದರೆ ಈ ಸರಣಿಗೆ ಗಾಯಗೊಂಡಿರುವ ಆವಿಷ್ಕಾ ಫೆರ್ನಾಂಡೋ, ನುವಾನ್ ತುಷಾರ ಮತ್ತು ರಮೇಶ್ ಮೆಂಡಿಸ್ ಅಲಭ್ತವಾಗಿದ್ದಾರೆ. ಚರಿತ್ ಅಸಲಂಕಾ ಲಂಕಾ ತಂಡದ ಉಪನಾಯಕನಾಗಿರಲಿದ್ದು ಕುಸಲ್ ಮೆಂಡಿಸ್, ಫಾತುಮ್ ನಿಸ್ಸಾಂಕ, ದಿನೇಶ್ ಚಾಂಡಿಮಲ್ ಹಾಗೂ ದನುಷ್ಕಾ ಗುಣತಿಲಕ ಈ ತಂಡದ ಭಾಗವಾಗಿದ್ದಾರೆ. ಭಾರತ ಪ್ರವಾಸ ಕೈಗೊಳ್ಳಲಿರುವ ಈ ತಂಡಕ್ಕೆ ಶ್ರೀಲಂಕಾದ ಯುವ ಮತ್ತು ಕ್ರೀಡಾ ಸಚಿವ ನಮಲ್ ರಾಜಪಕ್ಸ ಅನುಮೋದನೆ ನೀಡಿದ್ದಾರೆ ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಟಿ20 ಹಾಗೂ ಟೆಸ್ಟ್ ಸರಣಿಯಲ್ಲಿ ಭಾರತ ಲಂಕಾ ಮುಖಾಮುಖಿ
ಭಾರತ ಹಾಗೂ ಶ್ರೀಲಂಕಾ ತಂಡಗಳು ಮೊದಲಿಗೆ ಟಿ20 ಸರಣಿಯಲ್ಲಿ ಮುಖಾಮುಖಿಯಾಗಲಿದ್ದು ಈ ಸರಣಿಯ ಮೂರು ಪಂದ್ಯಗಳು ಫೆಬ್ರವರಿ 24ರಿಂದ 27ರವರೆಗೆ ನಡೆಯಲಿದೆ. ಮೊದಲ ಪಂದ್ಯದ ಆತಿಥ್ಯವನ್ನು ಲಕ್ನೋ ವಹಿಸಿಕೊಂಡಿದ್ದರೆ ಎರಡನೇ ಹಾಗೂ ಅಂತಿಮ ಪಂದ್ಯ ಧರ್ಮಶಾಲಾದಲ್ಲಿ ಆಯೋಜನೆಯಾಗಲಿದೆ. ಈ ಟಿ20 ಸರಣಿಯ ಬಳಿಕ ಎರಡು ಪಂದ್ಯಗಳ ಟೆಸ್ಟ್ ಸರಣಿ ನಡೆಯಲಿದೆ.

ಬಲಿಷ್ಠ ಸ್ಪಿನ್ ಪಡೆ
ಈ ಟಿ20 ಸರಣಿಗೆ ಶ್ರೀಲಂಕಾ ಬಲಿಷ್ಠ ಸ್ಪಿನ್ ಬೌಲಿಂಗ್ ಪಡೆಯನ್ನು ಹೊಂದಿದ್ದು ಚುಟುಕು ಮಾದರಿಯ ನಂಬರ್ 1 ಬೌಲರ್ ವನಿಂದು ಹಸರಂಗಾ ನೇತೃತ್ವದ ಸ್ಪಿನ್ ಪಡೆ ಭಾರತಕ್ಕೆ ಸವಾಲಾಗಲಿದೆ. ವನಿಂದು ಹಸರಂಗಾ ಅವರನ್ನು ಐಪಿಎಲ್‌ನಲ್ಲಿ ಆರ್‌ಸಿಬಿ ತಂಡ 10.75 ಕೋಟಿಗೆ ತಂಡಕ್ಕೆ ಸೇರ್ಪಡೆಗೊಳಿಸಿದ್ದು ಭಾರತದಲ್ಲಿ ಹಸರಂಗ ನೀಡುವ ಪ್ರದರ್ಶನ ಈ ಹಿನ್ನೆಲೆಯಲ್ಲಿಯೂ ಕುತೂಹಲಕ್ಕೆ ಕಾರಣವಾಗಿದೆ. ಹಸರಂಗಾ ಹೊರತುಪಡಿಸಿ ಮಹೇಶ್ ತೀಕ್ಷಣ, ಜೆಫ್ರೀ ವಂಡರ್ಸೆ ಹಾಗೂ ಏಷಿಯನ್ ಡೇನಿಯಲ್ ಕೂಡ ಸ್ಪಿನ್ ಬೌಲಿಂಗ್ ವಿಭಾಗದ ಭಾಗವಾಗಿದ್ದಾರೆ.

ಭಾರತದ ವಿರುದ್ಧ ಕಣಕ್ಕಿಳಿಯಲಿರುವ ಶ್ರೀಲಂಕಾ ತಂಡ
ಶ್ರೀಲಂಕಾ ಸ್ಕ್ವಾಡ್: ದಸುನ್ ಶನಕಾ (ನಾಯಕ), ಪಾತುಮ್ ನಿಸ್ಸಾಂಕ, ಕುಸಾಲ್ ಮೆಂಡಿಸ್, ಚರಿತ್ ಅಸಲಂಕ (ಉಪನಾಯಕ), ದಿನೇಶ್ ಚಾಂಡಿಮಾಲ್, ದನುಷ್ಕ ಗುಣತಿಲಕ, ಕಮಿಲ್ ಮಿಶ್ರಾ, ಜನಿತ್ ಲಿಯಾನಗೆ, ವನಿಂದು ಹಸರಂಗ, ಚಾಮಿಕ ಕರುಣಾರತ್ನೆ, ದುಷ್ಮಂತ ಚಮೀರ, ಲಹಿರು ಎಫ್ ಕುಮಾರ, ಲಹಿರು ಎಫ್ ಕುಮಾರ, ಮಹೇಶ್ ತೀಕ್ಷಣ, ಜೆಫ್ರಿ ವಾಂಡರ್ಸೆ, ಪ್ರವೀಣ್ ಜಯವಿಕ್ರಮ, ಆಶಿಯನ್ ಡೇನಿಯಲ್

ಆಸಿಸ್ ವಿರುದ್ಧ ಸರಣಿ ಸೋಲು
ಇನ್ನು ಭಾರತ ಪ್ರವಾಸಕ್ಕೂ ಮುನ್ನ ಆಸ್ಟ್ರೇಲಿಯಾ ಪ್ರವಾಸಕೈಗೊಂಡಿದ್ದ ಶ್ರೀಲಂಕಾ ತಂಡ ಟಿ20 ಸರಣಿಯನ್ನು 4-1 ಅಂತರದಿಂದ ಆತಿಥೆಯ ಆಸಿಸ್ ಪಡೆಗೆ ಒಪ್ಪಿಸಿದೆ. ಸರಣಿಯ ಅಂತಿಮ ಪಂದ್ಯದಲ್ಲಿ ಲಂಕಾ ತಂಡ ನೀಡಿದ ಭರ್ಜರಿ ಪ್ರದರ್ಶನ ಭಾರತ ಪ್ರವಾಸ ಕೈಗೊಳ್ಳುವ ಮುನ್ನ ಆತ್ಮವಿಶ್ವಾಸ ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ. ಅಲ್ಲದೆ ಸರಣಿಯ ಎರಡನೇ ಪಂದ್ಯದಲ್ಲಿಯೂ ಶ್ರೀಲಂಕಾ ತಂಡ ಅದ್ಭುತ ಪ್ರದರ್ಶನ ನೀಡಿ ಪಂದ್ಯವನ್ನು ಟೈ ಮಾಡುವಲ್ಲಿ ಯಶಸ್ವಿಯಾಗಿತ್ತು. ನಂತರ ಸೂಪರ್ ಓವರ್‌ನಲ್ಲಿ ಈ ಪಂದ್ಯವನ್ನು ಆಸ್ಟ್ರೇಲಿಯಾ ಗೆದ್ದುಕೊಂಡಿತ್ತು. ಉಳಿದಂತೆ ಎಲ್ಲಾ ಪಂದ್ಯದಲ್ಲಿಯೂ ಆಸ್ಟ್ರೇಲಿಯಾಗೆ ಶ್ರೀಲಂಕಾ ಸುಲಭ ಸವಾಲಾಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications