ಭಾರತ vs ಶ್ರೀಲಂಕಾ: ಆಸ್ಪತ್ರೆಯಿಂದ ಇಶಾನ್ ಕಿಶನ್ ಡಿಸ್ಚಾರ್ಜ್: ಅಂತಿಮ ಪಂದ್ಯಕ್ಕೆ ವಿಶ್ರಾಂತಿ ಸಾಧ್ಯತೆ

ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ತಲೆಗೆ ಚೆಂಡು ಬಡಿದ ಪರಿಣಾಮ ಆಸ್ಪತ್ರೆಗೆ ದಾಖಲಾಗಿದ್ದ ಇಶಾನ್ ಕಿಶನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಎರಡನೇ ಪಂದ್ಯದಲ್ಲಿ ರನ್ ಬೆನ್ನಟ್ಟುವ ಸಂದರ್ಭದಲ್ಲಿ ಇಶಾನ್ ಕಿಶನ್ ಚೆಂಡಿನ ಏಟು ತಿಂದಿದ್ದರು. ತಕ್ಷಣವೇ ಕನ್ಕೂಶನ್ ನಡೆಸಿ ನಂತರ ಇಶಾನ್ ಕಿಶನ್ ಆಟವನ್ನು ಮುಂದುವರಿಸಿದ್ದರೂ ನಂತರ ಪಂದ್ಯ ಮುಗಿದ ಬಳಿಕ ಮುನ್ನೆಚ್ಚರಿಕಾ ಕ್ರಮವಾಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಬಿಸಿಸಿಐ ಮೂಲಗಳು ಈ ಬಗ್ಗೆ ಮಾಹಿತಿಯನ್ನು ನೀಡಿದ್ದು ಇಶಾನ್ ಕಿಶನ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆದರೆ ಇಂದು ನಡೆಯಲಿರುವ ಮೂರನೇ ಪಂದ್ಯದಲ್ಲಿ ಟೀಮ್ ಇಂಡಿಯಾದ ಈ ಯುವ ಆಟಗಾರ ಆಡುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ಹೀಗಾಗಿ ತಂಡದ ಆರಂಭೀಕರಾಗಿ ಯಾರು ಕಣಕ್ಕಿಳಿಯಲಿದ್ದಾರೆ ಎಂಬುದು ಕೂಡ ಸದ್ಯಕ್ಕೆ ಕುತೂಹಲ ಮೂಡಿಸಿದೆ. ಕನ್ನಡಿಗ ಮಯಾಂಕ್ ಅಗರ್ವಾಲ್ ಟಿ20 ಸ್ಕ್ವಾಡ್ ಸೇರಿಕೊಂಡಿದ್ದು ಆಡುವ ಅವಕಾಶ ಗಳಿಸಿದರೆ ಅಚ್ಚರಿಯಿಲ್ಲ.
ಟೀಮ್ ಇಂಡಿಯಾದ ಯುವ ಆಟಗಾರ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ 2ನೇ ಪಂದ್ಯದ 3ನೇ ಓವರ್‌ನಲ್ಲಿ ಚೆಂಡು ತಲೆಗೆ ಬಡಿದಿದೆ. ತಕ್ಷಣವೇ ಮೈದಾನಕ್ಕೆ ತೆರಳಿದ ವೈದ್ಯಕೀಯ ಸಿಬ್ಬಂದಿಗಳು ಇಶಾನ್ ಕಿಶನ್ ಅವರ ಕನ್ಕೂಶನ್ ನಡೆಸಿ ನಂತರ ಪಂದ್ಯದಲ್ಲಿ ಮುಂದುವರಿಯಲು ಅನುಮತಿ ನೀಡಿದ್ದರು. ಆದರೆ ಪಂದ್ಯದ ಮುಕ್ತಾಯದ ಬಳಿಕ ಇಶಾನ್ ಕಿಶನ್ ಆಸ್ಪತ್ರೆಗೆ ದಾಖಲಾಗಿದ್ದರು ಎಂಬ ಮಾಹಿತಿ ಲಭ್ಯವಾಯಿತು. ಕಿಮಾಚಲ ಪ್ರದೇಶದ ಕಾಂಗ್ರಾದ ಆಸ್ಪತ್ರೆಗೆ ಇಶಾನ್ ಕಿಶನ್ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ.
ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಭಾರತ ಹಾಗೂ ಶ್ರೀಲಂಕಾ ನಡುವಿನ ಟಿ20 ಸರಣಿಯ ಎರಡನೇ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ 184 ರನ್‌ಗಳಿಸಿತ್ತು. ಈ ರನ್ ಬೆನ್ನಟ್ಟುವ ಸಂದರ್ಭದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಇಶಾನ್ ಕಿಶನ್ ತಲೆಗೆ ಚೆಂಡು ಬಡಿದಿದೆ. ಶ್ರೀಲಂಕಾ ವೇಗಿ ಲಹಿರು ಕುಮಾರ ಎಸೆತವನ್ನು ಪುಲ್ ಮಾಡಲು ಹೋದ ಇಶಾನ್ ಕಿಶನ್ ಚೆಂಡನ್ನು ಗುರುತಿಸುವಲ್ಲಿ ವಿಫಲವಾಗಿದ್ದರು. ಈ ಸಂದರ್ಭದಲ್ಲಿ ಚೆಂಡು ಹೆಲ್ಮೆಟ್‌ಗೆ ಬಡಿದಿದೆ. ತಕ್ಷಣವೇ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು ನಂತರ ಇಶಾನ್ ಕಿಶನ್ ಬ್ಯಾಟಿಂಗ್ ಮುಂದುವರಿಸಿದ್ದಾರೆ. ನಂತರ ಪಂದ್ಯದ 6ನೆ ಓವರ್‌ನಲ್ಲಿ ಇಶಾನ್ ಕಿಶನ್ 16 ರನ್‌ಗಳಿಸಿದ್ದಾಗ ಇಶಾನ್ ಕಿಶನ್ ವಿಕೆಟ್ ಕಳೆದುಕೊಂಡಿದ್ದಾರೆ.
ಇನ್ನು ಭಾರತ ಹಾಗೂ ಶ್ರೀಲಂಕಾ ನಡುವಿನ ಎರಡನೇ ಪಂದ್ಯದಲ್ಲಿ ಮೊದಲಿಗೆ ಬ್ಯಾಟಿಂಗ್ ಮಾಡಿದ ಶ್ರೀಲಂಕಾ ತಂಡ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದೆ. ಆರಂಭಿಕ ಆಟಗಾರ ಫಾತುಮ್ ನಿಸ್ಸಾಂಕ ಹಾಗೂ ಸಿಡಿಸಿದ ಭರ್ಜರಿ 75 ರನ್‌ಗಳ ಕೊಡುಗೆ ಹಾಗೂ ನಾಯಕ ದಸುನ್ ಶನಕಾ ಕೇವಲ 19 ಎಸೆತಗಳಲ್ಲಿ 47 ರನ್ ಸಿಡಿಸಿ 183 ರನ್‌ಗಳ ಸವಾಲಿನ ಮೊತ್ತವನ್ನು ಪೇರಿಸಿತು.
ಶ್ರೀಲಂಕಾ ನೀಡಿದ ಈ ಗುರಿಯನ್ನು ಬೆನ್ನಟ್ಟಿದ ಬಾರತ ತಂಡ ಆರಂಭಿಕ ಆಟಗಾರರಾದ ನಾಯಕ ರೋಹಿತ್ ಶರ್ಮಾ ಹಾಗೂ ಇಶಾನ್ ಕಿಶನ್ ಅವರನ್ನು 44 ರನ್‌ಗಳಿಸುವಷ್ಟರಲ್ಲಿ ಕಳೆದುಕೊಂಡಿತ್ತು. ಆದರೆ ನಂತರ ಜೊತೆಯಾದ ಶ್ರೇಯಸ್ ಐಯ್ಯರ್ ಹಾಗೂ ಸಂಜು ಸ್ಯಾಮ್ಸನ್ ಅದ್ಭುತ ಜೊತೆಯಾಟವನ್ನು ಪ್ರದರ್ಶಿಸಿದರು. ಸಂಜು ಸ್ಯಾಮ್ಸನ್ 25 ಎಸೆತಗಳಲ್ಲಿ 39 ರನ್‌ಗಳಿಸಿ ಔಟಾದರೆ ಶ್ರೇಯಸ್ ಐಯ್ಯರ್ ಹಾಗೂ ರವೀಂದ್ರ ಜಡೇಜಾ ಭಾರತವನ್ನು ಗೆಲುವಿನ ದಡ ಸೇರಿಸಿದರು. ಮೂರನೇ ಕ್ರಮಾಂಖದಲ್ಲಿ ಕಣಕ್ಕಿಳಿದ ಶ್ರೇಯಸ್ ಐಯ್ಯರ್ 44 ಎಸೆತಗಳನ್ನು ಎದುರಿಸಿ 74 ರನ್ ಸಿಡಿಸಿದರೆ, ಕೇವಲ 18 ಎಸೆತ ಎದುರಿಸಿದ ರವೀಂದ್ರ ಜಡೇಜಾ 45 ರನ್‌ಗಳಿಸಿ ಅಜೇಯವಾಗುಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications