IND vs SA: ಸರಣಿಗೂ ಮುನ್ನವೇ ಭಾರತಕ್ಕೆ ತೀವ್ರ ಆಘಾತ; ರಾಹುಲ್ ಔಟ್, ನೂತನ ನಾಯಕನ ನೇಮಕ!

ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯದ ಬೆನ್ನಲ್ಲೇ ಟೀಮ್ ಇಂಡಿಯಾ ಅಂತರರಾಷ್ಟ್ರೀಯ ಕ್ರಿಕೆಟ್‌ನತ್ತ ಮುಖ ಮಾಡಿದ್ದು, ಮೊದಲಿಗೆ ದಕ್ಷಿಣ ಆಫ್ರಿಕಾ ವಿರುದ್ಧ ಐದು ಪಂದ್ಯಗಳ ಟಿ ಟ್ವೆಂಟಿ ಸರಣಿಯಲ್ಲಿ ಕಣಕ್ಕಿಳಿಯುತ್ತಿದೆ. ಇನ್ನು ನಾಳೆಯಿಂದ ( ಜೂನ್ 9 ) ಇತ್ತಂಡಗಳ ನಡುವಿನ ಈ ಸರಣಿ ಆರಂಭವಾಗಲಿದ್ದು, ಮೊದಲ ಪಂದ್ಯ ದೆಹಲಿಯ ಅರುಣ್ ಜೇಟ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಇನ್ನು ಎರಡೂ ತಂಡಗಳ ಆಟಗಾರರೂ ಸಹ ದೆಹಲಿ ತಲುಪಿ ಈಗಾಗಲೇ ಮೈದಾನಕ್ಕಿಳಿದು ಅಭ್ಯಾಸ ನಡೆಸುತ್ತಿದ್ದು, ಪಂದ್ಯ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ.
ಇನ್ನು ಈ ಸರಣಿಯಲ್ಲಿ ರೋಹಿತ್ ಶರ್ಮಾ ಅಲಭ್ಯರಾಗಿದ್ದ ಕಾರಣ ನಾಯಕತ್ವದ ಜವಾಬ್ದಾರಿಯನ್ನು ಸ್ವೀಕರಿಸಿದ್ದರು. ಆದರೆ, ಇದೀಗ ಈ ಕುರಿತಾಗಿ ಆಘಾತಕಾರಿ ಸುದ್ದಿಯೊಂದು ಬಿಸಿಸಿಐ ಪಾಳಯದಿಂದ ಹೊರಬಿದ್ದಿದ್ದು, ನಾಯಕ ಕೆಎಲ್ ರಾಹುಲ್ ಸ್ನಾಯು ಸೆಳೆತದ ಕಾರಣದಿಂದ ಇಡೀ ಸರಣಿಯಿಂದಲೇ ಹೊರಬಿದ್ದಿದ್ದಾರೆ ಎಂದು ಬಿಸಿಸಿಐ ಸ್ವತಃ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದೆ.

ಬದಲಿ ನಾಯಕನ ನೇಮಕ
ಕೆಎಲ್ ರಾಹುಲ್ ಬಲ ತೊಡೆ ಸಂದಿನ ಗಾಯದಿಂದ ಬಳಲುತ್ತಿರುವ ಕಾರಣ ಚಿಕಿತ್ಸೆಗಾಗಿ ಸರಣಿಯಿಂದ ಹೊರಬಿದ್ದಿದ್ದು, ನೂತನ ನಾಯಕನಾಗಿ ರಿಷಭ್ ಪಂತ್ ಅವರನ್ನು ನೇಮಿಸಲಾಗಿದೆ. ಇನ್ನು ರಿಷಭ್ ಪಂತ್ ಈ ಸರಣಿಗೆ ಪ್ರಕಟವಾಗಿದ್ದ ತಂಡದಲ್ಲಿ ಉಪನಾಯಕನಾಗಿ ಸ್ಥಾನ ಪಡೆದುಕೊಂಡಿದ್ದರು ಹಾಗೂ ಇದೀಗ ರಾಹುಲ್ ಅಲಭ್ಯತೆಯಾದ ಕಾರಣ ನಾಯಕನಾಗಿ ಸರಣಿಯಲ್ಲಿ ಬಡ್ತಿ ಪಡೆದಿದ್ದಾರೆ. ಇನ್ನು ಹಾರ್ದಿಕ್ ಪಾಂಡ್ಯಗೆ ಉಪನಾಯಕನ ಸ್ಥಾನ ನೀಡಲಾಗಿದೆ.

ಅಭ್ಯಾಸದ ವೇಳೆ ಗಾಯಕ್ಕೊಳಗಾಗಿದ್ದ ರಾಹುಲ್
ಕೆಎಲ್ ರಾಹುಲ್ ಟೀಮ್ ಇಂಡಿಯಾವನ್ನು ಈ ಸರಣಿಯಲ್ಲಿ ಮುನ್ನಡೆಸಿ ಯಶಸ್ವಿಯಾಗಿ ಗೆಲುವನ್ನು ಕಾಣುವತ್ತ ಚಿತ್ತ ನೆಟ್ಟು ಅರುಣ್ ಜೇಟ್ಲಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಅಭ್ಯಾಸ ಆರಂಭಿಸಿದ್ದರು. ಆದರೆ, ಕಳೆದ ಸಂಜೆ ಅಭ್ಯಾಸದ ವೇಳೆ ಗಾಯಕ್ಕೊಳಗಾದ ಕೆಎಲ್ ರಾಹುಲ್ ಸರಣಿಯಿಂದ ಹೊರಬಿದ್ದಿದ್ದಾರೆ. ಕೆಎಲ್ ರಾಹುಲ್‌ಗೆ ಬಲ ತೊಡೆ ಸಂದುಗೆ ತೀವ್ರ ಪೆಟ್ಟು ಬಿದ್ದಿದ್ದು, ಮತ್ತೋರ್ವ ಆಟಗಾರ ಕುಲ್‌ದೀಪ್ ಯಾದವ್ ಕೂಡ ಗಾಯದ ಸಮಸ್ಯೆಗೊಳಗಾಗಿ ಸರಣಿಯಿಂದ ಹೊರಬಿದ್ದಿದ್ದಾರೆ.

ಬದಲಾದ ಭಾರತ ತಂಡ
ರುತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ನಾಯಕ, ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ ( ಉಪನಾಯಕ ), ವೆಂಕಟೇಶ್ ಅಯ್ಯರ್, ವೈ ಚಾಹಲ್, ಅಕ್ಷರ್ ಪಟೇಲ್, ಆರ್ ಬಿಷ್ಣೋಯ್ , ಭುವನೇಶ್ವರ್, ಹರ್ಷಲ್ ಪಟೇಲ್, ಅವೇಶ್ ಖಾನ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್
ದ.ಆಫ್ರಿಕಾ ತಂಡ: ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಹೆನ್ರಿಚ್ ಕ್ಲಾಸೆನ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಆನ್ರಿಚ್ ನಾರ್ಟ್ಜೆ, ವೇಯ್ನ್ ಪಾರ್ನೆಲ್, ಡ್ವೈನ್ ಪ್ರಿಟೋರಿಯಸ್, ಕಗಿಸೊ ರಬಾಡ, ತಬ್ರೈಜ್ ಶಂಬ್ಡರ್, ಟ್ರೈಸ್ಸೆ ಸ್ಟಬ್ಡರ್, ರಸ್ಸಿ ವಾನ್‌ಡರ್ ಡಸೆನ್ , ಮಾರ್ಕೊ ಜಾನ್ಸೆನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications