IND vs SL ODI: ರೋಹಿತ್ ಪಡೆಗೆ ಮುಖಭಂಗ: ಶ್ರೀಲಂಕಾಕ್ಕೆ ಏಕದಿನ ಸರಣಿ
ಶ್ರೀಲಂಕಾ ಪ್ರವಾಸದಲ್ಲಿ ಭಾರತ ಏಕದಿನ ಸರಣಿಯಲ್ಲಿ ನಿರಾಸೆ ಅನುಭವಿಸಿದೆ. ಬುಧವಾರ ನಡೆದ ಮೂರನೇ ಏಕದಿನ ಪಂದ್ಯದಲ್ಲೂ ರೋಹಿತ್ ಪಡೆ ಮತ್ತೊಂದು ಸೋಲು ಕಂಡಿದೆ. ಈ ಮೂಲಕ ಆತಿಥೇಯ ತಂಡ, ಟಿ20 ಸರಣಿಯಲ್ಲಿ ಕಂಡಿದ್ದ ಸೋಲಿಗೆ, ಖಡಕ ಉತ್ತರ ನೀಡಿದೆ. ಶ್ರೀಲಂಕಾ ಮೂರನೇ ಏಕದಿನ ಪಂದ್ಯವನ್ನು 110 ರನ್‌ಗಳ ಅಂತರದಿಂದ ಗೆದ್ದು ಬೀಗಿದೆ.
ಭಾರತದ ಸ್ಟಾರ್ ಬ್ಯಾಟರ್‌ಗಳಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರು ಕೊಲಂಬೊದಲ್ಲಿ ರನ್‌ಗಳಿಸಲು ಪರದಾಡಿದರು. ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಯುವ ಆಟಗಾರರು ಸಹ ವಿಫಲರಾದರು. ಪರಿಣಾಮ ಭಾರತ ಮೂರನೇ ಏಕದಿನ ಪಂದ್ಯದಲ್ಲಿ ಆಘಾತ ಅನುಭವಿಸಿದೆ. ಗುರಿಯನ್ನು ಬೆನಟ್ಟಿದ ಟೀಮ್ ಇಂಡಿಯಾ 26.1 ಓವರ್‌ಗಳಲ್ಲಿ 138 ರನ್‌ಗಳಿಗೆ ಆಲೌಟ್ ಆಗಿದೆ.

ಕಳಪೆ ಆರಂಭ
ಶ್ರೀಲಂಕಾ ನೀಡಿದ್ದ 249 ರನ್‌ಗಳ ಗುರಿಯನ್ನು ಬೆನ್ನಟ್ಟಿದ್ದ ಭಾರತದ ಆರಂಭ ಕಳಪೆಯಾಗಿತ್ತು. ಟೀಮ್ ಇಂಡಿಯಾ ಪವರ್ ಪ್ಲೇನಲ್ಲೇ ಯುವ ಆಟಗಾರ ಶುಭಮನ್ ಗಿಲ್ (6) ಅವರ ವಿಕೆಟ್ ಕಳೆದುಕೊಂಡಿತು. ಉತ್ತಮ ಲಯದಲ್ಲಿ ಕಂಡು ಬಂದಿದ್ದ ರೋಹಿತ್ ಶರ್ಮಾ ಸಹ ಹೆಚ್ಚು ಹೊತ್ತು ಶ್ರೀಲಂಕಾ ಬೌಲರ್‌ಗಳಿಗೆ ಕಾಡುವಲ್ಲಿ ವಿಫಲರಾದರು. ರೋಹಿತ್ 6 ಬೌಂಡರಿ, 1 ಸಿಕ್ಸರ್ ಸಹಾಯದಿಂದ 35 ರನ್ ಬಾರಿಸಿ ಪೆವಿಲಿಯನ್ ಸೇರಿದರು.
ಭರವಸೆ ಮೂಡಿಸಿದ ಕೊಹ್ಲಿ
ಇನ್ನು ಟೀಮ್ ಇಂಡಿಯಾದ ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ ಸಹ ತಮ್ಮ ಘನತೆಗೆ ತಕ್ಕ ಆಟವನ್ನು ಆಡುವಲ್ಲಿ ಎಡವಿದರು. ಚೇಸಿಂಗ್ ಮಾಸ್ಟರ್ ಎಂದು ಕರೆಸಿಕೊಳ್ಳುವ ವಿರಾಟ್, ಗುರಿ ಬೆನ್ನಟ್ಟಿದಾಗ ಕೇವಲ 20 ರನ್‌ಗಳಿಗೆ ಆಟ ಮುಗಿಸಿದರು.
ಸಿಂಗಲ್ ಡಿಜಿಟ್
ಯುವ ಭರವಸೆಯ ಆಟಗಾರರಾದ ರಿಷಭ್ ಪಂತ್ (6), ಶ್ರೇಯಸ್ ಅಯ್ಯರ್ (8), ಆಲ್‌ರೌಂಡರ್ ಅಕ್ಷರ್ ಪಟೇಲ್(2), ರಿಯನ್ ಪರಾಗ್ (15), ಶಿವಂ ದುಬೆ (9) ರನ್ ಕಲೆ ಹಾಕುವಲ್ಲಿ ವಿಫಲರಾದರು.ವಾಶಿಂಗ್ಟನ್ ಸುಂದರ್ 30 ರನ್ ಬಾರಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು.
ದುನಿತ್ ಪಂಚ್
ಶ್ರೀಲಂಕಾ ಪರ ದುನಿತ್ ವೆಲ್ಲಲಾಗೆ ಅವರು ಪ್ರಮುಖ ಐದು ವಿಕೆಟ್ ಕಬಳಿಸಿ ಮಿಂಚಿದರು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಅಕ್ಷರ್ ಪಟೇಲ್, ಶ್ರೇಯಸ್ ಅಯ್ಯರ್, ಕುಲ್ದೀಪ್ ಯಾದವ್ ಅವರ ವಿಕೆಟ್ ಪಡೆದು ಅಬ್ಬರಿಸಿದರು. ಜೆಫ್ರಿ ವಾಂಡರ್ಸೆ ಹಾಗೂ ಮಹೇಶ್ ತೀಕ್ಷಣ ತಲಾ ಎರಡು ವಿಕೆಟ್ ಪಡೆದರು.

ಟಾಪ್ ಆರ್ಡರ್ ಬ್ಯಾಟರ್‌ಗಳ ಅಬ್ಬರ
ಶ್ರೀಲಂಕಾ ಪರ ಆರಂಭಿಕ ಬ್ಯಾಟರ್‌ಗಳು ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಇವರು ಟೀಮ್ ಇಂಡಿಯಾ ಬೌಲರ್‌ಗಳ ರಣ ತಂತ್ರವನ್ನು ಮೆಟ್ಟಿನಿಂತು ರನ್‌ಕಲೆ ಹಾಕುತ್ತಾ ಸಾಗಿದರು. ಎಚ್ಚರಿಕೆಯ ಆಟಕ್ಕೆ ಮಣೆ ಹಾಕಿದ ಇವರು ರನ್ ಕಲೆ ಹಾಕುತ್ತಾ ಸಾಗಿದರು. ಮೊದಲ ವಿಕೆಟ್‌ಗೆ ಪಾತುಂ ನಿಸ್ಸಾಂಕ (45) ಹಾಗೂ ಅವಿಷ್ಕಾ ಫರ್ನಾಂಡೋ ಜೋಡಿ 19.5 ಓವರ್‌ಗಳಲ್ಲಿ 89 ರನ್ ಸೇರಿಸಿತು.
ಅವಿಷ್ಕಾ 96
ಅಬ್ಬರದ ಆಟವನ್ನು ಆಡುತ್ತಿದ್ದ ಅವಿಷ್ಕಾ ಫರ್ನಾಂಡೋ 102 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್ ಸೇರಿದಂತೆ 96 ರನ್ ಬಾರಿಸಿ ರಿಯನ್ ಪರಾಗ್ ಅವರಿಗೆ ವಿಕೆಟ್ ಒಪ್ಪಿಸಿದರು.
ಉಳಿದಂತೆ ಶ್ರೀಲಂಕಾ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದರು. ಆದರೆ ಒಂದು ತುದಿಯಲ್ಲಿ ನಿಂತು ಕುಸಾಲ್ ಮೆಂಡಿಸ್ ರನ್‌ಗಳನ್ನು ಗುಡ್ಡೆ ಹಾಕುತ್ತಾ ಸಾಗಿದರು. ಇವರು 59 ರನ್ ಬಾರಿಸಿ ಔಟ್ ಆದರು. ಅಂತಿಮವಾಗಿ ಲಂಕಾ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 248 ರನ್ ಕಲೆ ಹಾಕಿತು.
ಭಾರತದ ಪರ ರಿಯಾನ್ ಪರಾಗ್ 3, ಕುಲ್ದೀಪ್ ಯಾದವ್, ವಾಶಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಮೊಹಮ್ಮದ್ ಸಿರಾಜ್ ತಲಾ ಒಂದು ವಿಕೆಟ್ ಕಬಳಿಸಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications