Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿಶ್ವಕಪ್ ದೃಷ್ಟಿಯಿಂದ ಈ ಪ್ರವಾಸ ನಮಗೆ ಬಹಳ ಮುಖ್ಯ: ದಸುನ್ ಶನಕ ಹೇಳಿಕೆ

IND vs SL: Sri Lanka skipper Dasun Shanaka said this tour will be very important

ಈ ವರ್ಷಾಂತ್ಯದಲ್ಲಿ ಏಕದಿನ ವಿಶ್ವಕಪ್ ಭಾರತದಲ್ಲಿ ನಡೆಯಲಿರುವ ಕಾರಣದಿಂದಾಗಿ ಭಾರತದಲ್ಲಿ ನಡೆಯಲಿರುವ ಟಿ20 ಹಾಗೂ ಏಕದಿನ ಸರಣಿ ತಮಗೆ ಬಹಳ ಮುಖ್ಯವಾಗಲಿದೆ ಎಂದು ಶ್ರೀಲಂಕಾ ತಂಡದ ನಾಯಕ ದಸುನ್ ಶನಕ ಹೇಳಿಕೆ ನೀಡಿದ್ದಾರೆ. ಶ್ರೀಲಂಕಾದ ಯುವ ಆಟಗಾರರು ಭಾರತದಲ್ಲಿ ಸಾಕಷ್ಟು ಆಡಿದ ಅನುಭವ ಹೊಂದಿಲ್ಲದ ಕಾರಣ ಈ ಸರಣಿ ಆಟಗಾರರಿಗೆ ಸಹಕಾರಿಯಾಗಲಿದೆ ಎಂದಿದ್ದಾರೆ.

ಭಾರತ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಆರಂಭಕ್ಕೂ ಮುನ್ನ ದಸುನ್ ಶನಕ ಪ್ರತಿಕ್ರಿಯೆ ನೀಡಿದ್ದಾರೆ. ಮುಂದಿನ ಅಕ್ಟೋಬರ್‌ನಲ್ಲಿ ಇದೇ ಪರಿಸ್ಥಿತಿಯಲ್ಲಿ ವಿಶ್ವಕಪ್ ಟೂರ್ನಿ ನಡೆಯಲಿರುವ ಕಾರಣ ಈ ಪ್ರವಾಸ ಬಹಳ ಮಹತ್ವ ಪಡೆದುಕೊಳ್ಳಲಿದೆ. ಖಂಡಿತವಾಗಿಯೂ ಈ ಪ್ರವಾಸ ಭಾರತದ ಹಲವು ಕ್ರೀಡಾಂಗಣಗಳ ಪರಿಚಯವನ್ನು ತಮ್ಮ ತಂಡದ ಆಟಗಾರರಿಗೆ ಮಾಡಲಿದೆ. ಹೀಗಾಗಿ ಇದು ವಿಶ್ವಕಪ್‌ಗೆ ಉತ್ತಮ ಸಿದ್ಧತೆಯಾಗಿರಲಿದೆ ಎಂದಿದ್ದಾರೆ.

ಇನ್ನು ಮುಂದುವರಿದು ಮಾತನಾಡಿದ ಶನಕ, "ಸರಣಿಯ ಮೊದಲ ಪಂದ್ಯ ಬಹಳ ಮುಖ್ಯವಾಗಿರಲಿದೆ. ಭಾರತ ತನ್ನ ಲೈನ್‌ಅಪ್‌ ಅನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಇನ್ನು ನಾವು ಕೂಡ ನಮ್ಮ ಲೈನ್‌ಅಪ್‌ನನ್ನು ಹೆಚ್ಚುನ ಅನುಭವ ಹೊಂದಿದ್ದೇವೆ. ಮೊದಲ ಪಂದ್ಯಕ್ಕಾಗಿ ನಾವು ಈಗ ಎದುರು ನೋಡುತ್ತಿದ್ದೇವೆ. ಮೊದಲ ಪಂದ್ಯದಲ್ಲಿ ಉತ್ತಮ ಆಟವಾಡಿ ಪಂದ್ಯ ಗೆದ್ದುಕೊಂಡರೆ ಮುಂದಿನ ಪಂದ್ಯಗಳಿಗೆ ಅದು ಬುನಾದಿ ಒದಗಿಸಲಿದೆ" ಎಂದಿದ್ದಾರೆ ದಸುನ್ ಶನಕ.

ನಾವು ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಹಾಗಾಗಿ ತಂಡವನ್ನು ಬಲಿಷ್ಠಗೊಳಿಸಬೇಕಿದ್ದು ಈ ಸರಣಿಯಲ್ಲಿ ಉತ್ತಮವಾಗಿ ಪ್ರದರ್ಶನ ನೀಡಬೇಕು. ನಮ್ಮ ತಂಡದ ಬಹಳ ಸ್ಟಾ್ ಆಟಗಾರರು ಆಸ್ಟ್ರೇಲಿಯಾದಲ್ಲಿ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಆದರೆ ಏಷ್ಯಾಗೆ ಬಂದರೆ ನಮಗೆ ಇಲ್ಲಿನ ಪರಿಸ್ಥಿತಿ ಹಾಗೂ ಪಿಚ್‌ಗಳ ಅರಿವಿದೆ. ಹಾಗಾಗಿ ಉತ್ತಮ ಆರಂಬ ಪಡೆಯುವುದು ಇಲ್ಲಿ ಬಹಳ ಮುಖ್ಯವಾಗುತ್ತದೆ" ಎಂದಿದ್ದಾರೆ ದಸುನ್ ಶನಕ.

Story first published: Monday, January 2, 2023, 23:53 [IST]
Other articles published on Jan 2, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+