
ಟೀಮ್ ಇಂಡಿಯಾದ ಮೂರು ಮಾದರಿಯಲ್ಲಿಯೂ ನಾಯಕತ್ವ ವಹಿಸಿಕೊಂಡಿರುವ ರೋಹಿತ್ ಶರ್ಮಾ ನಾಯಕನಾಗಿಯೂ ಯಶಸ್ಸು ಸಾಧಿಸುತ್ತಾ ಮುನ್ನುಗ್ಗುತ್ತಿದ್ದಾರೆ. ತವರಿನಲ್ಲಿ ನಡೆದ ಸರಣಿಗಳ ಮೇಲೆ ಸರಣಿಯನ್ನು ವಶಕ್ಕೆ ಪಡೆಯುತ್ತಾ ಸಾಗುತ್ತಿರುವ ರೋಹಿತ್ ಬಳಗ ಮತ್ತೊಂದು ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿ ವಶಕ್ಕೆ ಪಡೆದುಕೊಳ್ಳುವ ಲೆಕ್ಕಾಚಾರದಲ್ಲಿದೆ. ಈ ಸಮದರ್ಭದಲ್ಲಿ ಸ್ವಥಹ ನಾಯಕ ರೋಹಿತ್ ಶರ್ಮಾ ಕೂಡ ಉತ್ತಮ ಫಾರ್ಮ್‌ನಲ್ಲಿರುವುದು ತಂಡಕ್ಕೆ ಬಲ ಹೆಚ್ಚಿಸಿದೆ.
ಆದರೆ ಈ ಸಂದರ್ಣದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಸಲಹೆಯೊಂದನ್ನು ನೀಡಿದ್ದಾರೆ. ರೋಹಿತ್ ಶೃ್ಮಾ ಅವರ ನೆಚ್ಚಿನ ಹೊಡೆತವಾದ ಪುಲ್‌ಶಾಟ್ ಬಾರಿಸುವ ವಿಚಾರವಾಗಿ ರೋಹಿತ್ ಶರ್ಮಾ ಒಂದು ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದಿದ್ದಾರೆ. ಈ ಹಿಂದೆ ಪುಲ್‌ಶಾಟ್‌ಗಳನ್ನು ಬಾರಿಸಿ ಅದ್ಭುತ ಯಶಸ್ಸು ಸಾಧಿಸಿರುವ ರೋಹಿತ್ ಶರ್ಮಾ ಇತ್ತೀಚೆಗೆ ವೇಗಿಗಳ ಶಾರ್ಟ್‌ವಾಲ್ ಎಸೆತಗಳನ್ನು ಪುಲ್‌ಶಾಟ್ ಬಾರಿಸಲು ಹೋಗಿ ವಿಕೆಟ್ ಕಳೆದುಕೊಳ್ಳುತ್ತಿರುವುದನ್ನು ಉಲ್ಲೇಖಿಸಿರುವ ಸುನಿಲ್ ಗವಾಸ್ಕರ್ ಅದಕ್ಕಾಗಿ ಸಲಹೆಯೊಂದನ್ನು ನೀಡಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಿಲ್‌ಶಾಟ್ ಬಾರಿಸುವ ಆಟಗಾರರ ಪೈಕಿ ಭಾರತದ ನಾಯಕ ರೋಹಿತ್ ಶರ್ಮಾ ಅತ್ಯುತ್ತಮ ಆಟಗಾರ ಎಂಬುದರಲ್ಲಿ ಅನುಮಾನವಿಲ್ಲ. ಭಾರತದ ಆರಂಭಿಕ ಆಟಗಾರ ಪುಲ್‌ಶಾಟ್‌ಗಳನ್ನು ಬಾರಿಸುವ ಮೂಲಕ ಅದ್ಭುತ ಯಶಸ್ಸು ಸಾಧಿಸಿದ್ದಲ್ಲದೆ ಅಭಿಮಾನಿಗಳಿಗೂ ಈ ಹೊಡೆದ ಸಾಕಷ್ಟು ಮನರಂಜನೆ ನೀಡುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ರೋಹಿತ್ ಶರ್ಮಾಗೆ ಶಾರ್ಟ್‌ಬಾಲ್‌ಗಳನ್ನು ಎಸೆಯುವ ಮೂಲಕ ಪುಲ್‌ಶಾಟ್‌ಗೆ ಪ್ರೇರೇಪಿಸಿ ಔಟ್ ಮಾಡುವ ತಂತ್ರಗಾರಿಕೆಯನ್ನು ಎದುರಾಳಿ ತಂಡಗಳು ರೂಪಿಸಿಕೊಂಡಿವೆ. ಅದೇ ಕಾರಣದಿಂದಾಗಿ ತನ್ನ ನೆಚ್ಚಿನ ಹೊಡೆತಗಳನ್ನು ಬಾರಿಸುವ ಸಂದರ್ಭದಲ್ಲಿ ರೋಹಿತ್ ಶರ್ಮಾ ಬೌಂಡರಿ ಲೈನ್ ಪಕ್ಕದಲ್ಲಿ ಕ್ಯಾಚ್ ನೀಡಿ ನಿರ್ಗಮಿಸುತ್ತಿದ್ದಾರೆ.
ಇದೇ ವಿಚಾರವಾಗಿ ಸುನಿಲ್ ಗವಾಸ್ಕರ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಟೆಸ್ಟ್ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಪುಲ್‌ಶಾಟ್‌ಗಳನ್ನು ಬಾರಿಸಲು ಉತ್ತಮ ಪ್ರಮಾಣದ ಸಮಯವನ್ನು ತೆಗೆದುಕೊಂಡು ಸಿದ್ಧವಾದ ಬಳಿಕ ಈ ಹೊಡೆತಗಳನ್ನು ಬಾರಿಸಬೇಕು ಎಂದಿದ್ದಾರೆ ಸುನಿಲ್ ಗವಾಸ್ಕರ್. ರೋಹಿತ್ ಶರ್ಮಾ ಅವರನ್ನು ಔಟ್ ಮಾಡಲು ಈಗ ಎದುರಾಳಿ ತಂಡಗಳು ಮಾರ್ಗ ಕಂಡುಕೊಂಡಿದೆ. ಹೀಗಾಗಿ ರೋಹಿತ್ ಶರ್ಮಾ ಎದುರಾಳಿಗಳು ಯಾವ ರೀತಿಯ ಯೋಜನೆಗಳನ್ನು ಎದುರಾಳಿಗಳು ಹಾಕಿಕೊಂಡಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಸುನಿಲ್ ಗವಾಸ್ಕರ್ ಸಲಹೆ ನೀಡಿದ್ದಾರೆ.
ಸ್ಟಾರ್‌ಸ್ಪೋರ್ಟ್ಸ್ ಜೊತೆಗೆ ಮಾತನಾಡಿದ ಸುನಿಲ್ ಗವಾಸ್ಕರ್ "ರೋಹಿತ್ ಶರ್ಮಾ ಈ ವಿಚಾರವಾಗಿ ಯೋಚನೆ ಮಾಡಲೇಬೇಕಿದೆ. ಆತನ ಸಾಮರ್ಥ್ಯ ಆ ಶಾಟ್ ಎಂದು ನೀವು ಮಾದ ಮಾಡಬಹುದು. ಆದರೆ ಆತನಲ್ಲಿ ಸಾಕಷ್ಟು ಅಸ್ತ್ರಗಳು ಇವೆ. ಈಗ ಸ್ವಲ್ಪ ವೇಗವನ್ನು ಹೊಂದಿರುವ ಪ್ರತಿಯೊಬ್ಬ ಬೌಲರ್ ತನ್ನ ಮುಂದಿರುವ ಅವಕಾಶವನ್ನು ಬಳಸಿಕೊಳ್ಳಲು ಇಷ್ಟಪಡುತ್ತಾನೆ. ಒಂದೆರಡು ಸಿಕ್ಸರ್‌ಗಳಿ ಹೋದರೂ ಪರವಾಗಿಲ್ಲ. ಚೆಂಡು ಗಾಳಿಯಲ್ಲಿ ಹೋಗುವ ಕಾರಣ ಔಟ್ ಮಾಡುವ ಅವಕಾಶಗಳು ಇದ್ದೇ ಇರುತ್ತದೆ" ಎಂದು ಬೌಲರ್‌ಗಳು ಯೋಚನೆ ಮಾಡುತ್ತಾರೆ" ಎಂದು ಗವಾಸ್ಕರ್ ವಿವರಿಸಿದ್ದಾರೆ.