Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಸಂಜು ಸ್ಯಾಮ್ಸನ್‌ಗೆ ಮತ್ತೊಂದು ಅವಕಾಶ ನೀಡಿ ಎಂದ ಆಕಾಶ್ ಚೋಪ್ರ

ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಟೀಮ್ ಇಂಡಿಯಾದ ಆಟಗಾರ ಸಂಜು ಸ್ಯಾಮ್ಸನ್‌ಗೆ ಆಡುವ ಬಳಗದಲ್ಲಿ ಅವಕಾಶ ನೀಡಬೇಕು ಎಂದು ಆಕಾಶ್ ಚೋಪ್ರ ಅಭಿಪ್ರಾಯಪಟ್ಟಿದ್ದಾರೆ. ಒಂದು ಪಂದ್ಯದಲ್ಲಿ ಅವಕಾಶವನ್ನು ನೀಡಿ ಅವರನ್ನು ತಂಡದಿಂದ ಕೈಬಿಡಬಾರದು ಎಂದಿದ್ದಾರೆ ಟೀಮ್ ಇಂಡಿಯಾದ ಮಾಜಿ ಆಟಗಾರ.

ಎರಡನೇ ಏಕದಿನ ಪಂದ್ಯದಲ್ಲಿ ಆಡುವ ಬಳಗದಲ್ಲಿ ಅವಕಾಶ ಪಡೆದುಕೊಂಡ ಸಂಜು ಸ್ಯಾಮ್ಸನ್ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದರು. ಆದರೆ 19 ಎಸೆತಗಳನ್ನು ಎದುರಿಸಿದ ಅವರು ಕೇವಲ 9 ರನ್‌ಗಳನ್ನು ಮಾತ್ರವೇ ಗಳಿಸಿ ನಿರಾಸೆ ಅನುಭವಿಸಿದ್ದರು. ಆದರೆ ಸಂಜುಗೆ ಮತ್ತೊಂದು ಅವಕಾಶ ನಿಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Ind vs WI 3rd ODI: Dont drop him; Aakash Chopra backs Sanju Samson

"ಆರಂಭಿಕನಾಗಿ ಇಶಾನ್ ಕಿಶನ್ ಯಶಸ್ಸು ಕಂಡಿದ್ದಾರೆ. ಆದರೆ ಮಧ್ತಮ ಕ್ರಮಾಂಕದ ಬ್ಯಾಟರ್ ಆಗಿ ನಮಗೆ ತಿಳಿದಿಲ್ಲ. ಸಂಜು ಸ್ಯಾಮ್ಸನ್ ಮೂರನೇ ಕ್ರಮಾಂಕದಲ್ಲಿ ಬಂದು ಆಡಲು ಒಂದು ಅವಕಾಶ ಮಾತ್ರವೇ ಪಡೆದುಕೊಮಡಿದ್ದರು. ಹಾಗಾಗಿ ಅವರನ್ನು ಕೈಬಿಡದೆ ತಂಡದಲ್ಲಿಯೇ ಉಳಿದಿಕೊಳ್ಳಬೇಕು" ಎಂದಿದ್ದಾರೆ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ.

ಸಂಜು ಸ್ಯಾಮ್ಸನ್ ಏಕದಿನ ಮಾದರಿಯಲ್ಲಿ ಭಾರತ ತಂಡದ ಪರವಾಗಿ ಸಿಕ್ಕ ಅವಕಾಶದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡಲು ವಿಫಲವಾಗಿದ್ದಾರೆ. ಆದರೆ ಪ್ರತಿ ಬಾರಿ ಅವರು ವ್ಯಕ್ತಪಡಿಸಿರುವ ಭರವಸೆಯ ಪ್ರದರ್ಶನದಿನದಾಗಿ ಸರಿಯಾದ ಮಾರ್ಗದರ್ಶನದಲ್ಲಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗಮನಾರ್ಹ ಸಾಧನೆ ಮಾಡಬಲ್ಲ ಆಟಗಾರ ಎಂಬ ವಿಶ್ವಾಸವನ್ನು ಮೂಡಿಸಿರುವ ಆಟಗಾರ ಎಂಬುದು ಕೂಡ ನಿಜ. ಆದರೆ ಅವರ ಮೇಲಿನ ನಿರೀಕ್ಷೆಯನ್ನು ಅವರು ನಿಜಗೊಳಿಸುತ್ತಾರೆಯೇ ಎಂಬುದನ್ನು ಸಮಯವೇ ಹೇಳಬೇಕಿದೆ.

"ಇನ್ನು ಇದು ಸೂರ್ಯಕುಮಾರ್ ಯಾದವ್‌ಗೆ ಕುಡ ಬಹಳ ಮುಖ್ಯವಾದ ಪಂದ್ಯವಾಗಿದೆ. ಆತ ಟಿ20 ತಂಡದಲ್ಲಿ ಈಗಾಗಲೇ ಆಡುತ್ತಿದ್ದು ಅದ್ಭುತ ಪ್ರದರ್ಶನ ನೀಡುವ ಕಾರಣ ಆತನ ಬಗ್ಗೆಯೂ ನಮ್ಮ ತಲೆಯಲ್ಲಿ ಅಭಿಪ್ರಾಯಗಳು ಮೂಡುತ್ತದೆ. ಆದರೆ ಟಿ20 ಮಾದರಿಯಲ್ಲಿ ನಿಡಿದ ಉತ್ತಮ ಪ್ರದರ್ಶನವನ್ನು ಅವರು ಏಕದಿನ ಮಾದರಿಯಲ್ಲಿ ನೀಡಲು ಸಾಧ್ಯವಾಗಿಲ್ಲ. ಆತನಲ್ಲಿ ಕೆಲ ಕೊರತೆಗಳು ಗೋಚರಿಸುತ್ತಿದೆ" ಎಂದಿದ್ದಾರೆ ಆಕಾಶ್ ಚೋಪ್ರ.

ಮುಂದುವರಿದು ಆಕಾಶ್ ಚೋಪ್ರ, "ಹಾರ್ದಿಕ್ ಪಾಂಡ್ಯ ರನ್‌ಗಳಿಸುವ ಅಗತ್ಯವಿದೆ. ಹಾರ್ದಿಕ್ ಪಾಂಡ್ ಬೌಲಿಂಗ್ ನಡೆಸುವುದು ಯಾವುದೇ ಸಂದರ್ಭದಲ್ಲಿಯೂ ಮುಖ್ಯವಾಗುತ್ತದೆ. ಆದರೆ ಅವರು ರನ್‌ಗಳಿಸುವುದು ಇನ್ನೂ ಮುಖ್ಯವಾಗುತ್ತದೆ" ಎಂದು ಹಾರ್ದಿಕ್ ಪಾಂಡ್ಯ ಫಾರ್ಮ್ ಬಗ್ಗೆಯೂ ಆಕಾಶ್ ಚೋಪ್ರ ಕಳವಳ ವ್ಯಕ್ತಪಡಿಸಿದ್ದಾರೆ.

ವೆಸ್ಟ್ ಇಂಡೀಸ್ ತಂಡ: ಶಾಯ್ ಹೋಪ್ (ನಾಯಕ & ವಿಕೆಟ್ ಕೀಪರ್), ಬ್ರಾಂಡನ್ ಕಿಂಗ್, ಕೈಲ್ ಮೇಯರ್ಸ್, ಅಲಿಕ್ ಅಥಾನಾಜೆ, ಶಿಮ್ರಾನ್ ಹೆಟ್ಮೆಯರ್, ಕೀಸಿ ಕಾರ್ಟಿ, ರೊಮಾರಿಯೋ ಶೆಫರ್ಡ್, ಯಾನಿಕ್ ಕ್ಯಾರಿಯಾ, ಅಲ್ಜಾರಿ ಜೋಸೆಫ್, ಗುಡಾಕೇಶ್ ಮೋಟಿ, ಜೇಡನ್ ಸೀಲ್ಸ್, ಡೊಮಿನಿಕ್ ಡ್ರೇಕ್ಸ್, ಕೆವಿನ್ ಸಿಂಕ್ಲೇರ್, ರೋವ್‌ಮನ್ ಪೊವೆಲ್, ಓಶೇನ್ ಥಾಮಸ್

ಟೀಮ್ ಇಂಡಿಯಾ ತಂಡ: ಇಶಾನ್ ಕಿಶನ್ (ವಿಕೆಟ್ ಕೀಪರ್), ರೋಹಿತ್ ಶರ್ಮಾ(ನಾಯಕ), ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ಶುಬ್ಮನ್ ಗಿಲ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್, ಕುಲದೀಪ್ ಯಾದವ್, ಜಯದೇವ್ ಉನದ್ಕತ್, ಯುಜ್ವೇಂದ್ರ ಚಾಹಲ್, ರುತುರಾಜ್ ಗಾಯಕ್ವಾಡ್

Story first published: Tuesday, August 1, 2023, 18:02 [IST]
Other articles published on Aug 1, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+