ಎಲ್ಲಾ ಶ್ರೇಯಸ್ಸು ಅವರಿಬ್ಬರಿಗೆ ಸಲ್ಲಬೇಕು: ಮ್ಯಾಚ್ ವಿನ್ನಿಂಗ್ ಪ್ರದರ್ಶನದ ಬಳಿಕ ದಿನೇಶ್ ಕಾರ್ತಿಕ್ ಮಾತು!

ಭಾರತ ಹಾಗೂ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ವೆಸ್ಟ್ ಇಂಡೀಸ್ ವಿರುದ್ಧ ಎಲ್ಲಾ ವಿಭಾಗಗಳಲ್ಲಿಯೂ ಅಮೋಘ ಪ್ರದರ್ಶನ ನೀಡಿ ಸುಲಭ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಭಾರತದ ಪರವಾಗಿ ಅಮೋಘ ಪ್ರದರ್ಶನ ನೀಡಿ ಮತ್ತೊಮ್ಮೆ ಮಿಂಚಿದ್ದು ಅನುಭವಿ ಆಟಗಾರ ದಿನೇಶ್ ಕಾರ್ತಿಕ್. ಈ ಪ್ರದರ್ಶನದಿಂದ ಸಹಜವಾಗಿಯೇ ದಿನೇಶ್ ಕಾರ್ತಿಕ್ ಹರ್ಷಗೊಂಡಿದ್ದು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಅಂತಿಮ ಹಂತದಲ್ಲಿ ಬ್ಯಾಟಿಂಗ್‌ಗೆ ಇಳಿದ ದಿನೇಶ್ ಕಾರ್ತಿಕ್ ಸ್ಪೋಟಕವಾಗಿ ಬ್ಯಾಟಿಂಗ್ ನಡೆಸಿದರು. ಇದರ ಪರಿಣಾಮವಾಗಿ ಭಾರತ 190 ರನ್‌ಗಳ ಬೃಹತ್ ಮೊತ್ತ ಗಳಿಸಲು ಸಾಧ್ಯವಾಯಿತು. ಈ ಬಗ್ಗೆ ಮಾತನಾಡಿದ ದಿನೇಶ್ ಕಾರ್ತಿಕ್ ಡ್ರೆಸ್ಸಿಂಗ್‌ರೂಮ್‌ನ ವಾತಾವರಣವನ್ನು ಉಲ್ಲೇಖಿಸಿದ್ದು ಈ ರೀತಿಯ ವಾತಾವರಣದಿಂದಾಗಿಯೇ ತಮ್ಮಿಂದ ಇಂಥಾ ಪ್ರದರ್ಶನ ಬರಲು ಸಾಧ್ಯವಾಗಿದೆ ಎಂದಿದ್ದಾರೆ.

ನಾಯಕ, ಕೋಚ್ ಬಗ್ಗೆ ಹೊಗಳಿದ ಡಿಕೆ
ದಿನೇಶ್ ಕಾರ್ತಿಕ್ ಪ್ರಸ್ತುತ ಭಾರತೀಯ ತಂಡದಲ್ಲಿರುವ ವಾತಾವರಣ ಬಹಳಷ್ಟು ಅದ್ಭುತವಾಗಿದೆ ಎಂದಿದ್ದು ಈ ವಾತಾವರಣಕ್ಕೆ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ಕೋಚ್ ರಾಹುಲ್ ದ್ರಾವಿಡ್ ಕಾರಣ ಎಂದಿದ್ದಾರೆ. "ಇದು ಬಹಳ ಭಿನ್ನವಾದ ತಂಡವಾಗಿದೆ. ಈ ವಾತಾವರಣವನ್ನು ನಾನು ಬಹಳಷ್ಟು ಆನಂದಿಸುತ್ತಿದ್ದೇನೆ. ತಂಡ ಸಾಕಷ್ಟು ನಿರಾಳತೆ ಹಾಗೂ ತಾಳ್ಮೆಯಿಂದ ಕೂಡ ಇದರ ಎಲ್ಲಾ ಶ್ರೇಯಸ್ಸು ನಾಯಕ ಹಾಗೂ ಕೋಚ್‌ಗೆ ಸಲ್ಲಬೇಕು. ಯಾಕೆಂದರೆ ವೈಫಲ್ಯವನ್ನು ಕೂಡ ಅವರು ತರ್ಕವದ್ಧವಾದ ರೀತಿಯಲ್ಲಿ ನಿಭಾಯಿಸುವ ವಾತಾವರಣವನ್ನು ನಿರ್ಮಿಸಿದ್ದಾರೆ. ಇದರ ಸಂಪೂರ್ಣ ಶ್ರೇಯಸ್ಸು ಅವರಿಗೆ" ಎಂದಿದ್ದಾರೆ ದಿನೇಶ್ ಕಾರ್ತಿಕ್.

ಚೆನ್ನಾಗಿ ಆಡದಿದ್ದರೂ ಒಂದೇ ರೀತಿಯ ವಾತಾವರಣ
ದಿನೇಶ್ ಕಾರ್ತಿಕ್ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದ ಸಂದರ್ಭದಲ್ಲಿಯೂ ಒಂದೇ ರೀತಿಯ ವಾತಾವರಣ ತಂಡದಲ್ಲಿದೆ ಎಂದಿದ್ದಾರೆ. "ಉತ್ತಮವಾಗಿ ಪ್ರದರ್ಶನ ನಿಡದ ಸಂದರ್ಭದಲ್ಲಿಯೂ ಒಂದೇ ರೀತಿಯಾದ ಸ್ಪಂದನೆ ದೊರೆಯುತ್ತದೆ. ಡ್ರೆಸ್ಸಿಂಗ್‌ರೂಮ್‌ನ ವಾತಾವರಣ ತಾಳ್ಮೆಯಿಂದಿದ್ದು ಉತ್ತಮವಾಗಿದೆ. ಈ ಹಂತದಲ್ಲಿ ನಾವು ಇಂಥಾ ವಾತಾವರಣವನ್ನು ಬಯಸುತ್ತೇವೆ" ಎಂದಿದ್ದಾರೆ ಭಾರತದ ಅನುಭವಿ ಆಟಗಾರ ದಿನೇಶ್ ಕಾರ್ತಿಕ್. ಈ ಬಾರಿಯ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನಿಡಿದ ಬಳಿಕ ಡಿಕೆ ಭಾರತೀಯ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದು ಭಾರತ ತಮಡದ ಪರವಾಗಿಯೂ ಅದ್ಭುತವಾದ ಪ್ರದರ್ಶನ ನೀಡುತ್ತಿದ್ದಾರೆ.

ಮತ್ತೆ ಫಿನಿಷರ್ ಆಗಿ ಮಿಂಚಿದ ದಿನೇಶ್ ಕಾರ್ತಿಕ್
ವೆಸ್ಟ್ ಇಮಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ತಮ್ಮ ಅಬ್ಬರದ ಶೈಲಿಯ ಬ್ಯಾಟಿಂಗ್ ಮೂಲಕ ಮತ್ತೊಮ್ಮೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಡಿಕೆ ಹಾಗೂ ಅಶ್ವಿನ್ ಜೋಡಿ ಅಂತಿಮ ನಾಲ್ಕು ಓವರ್‌ಗಳಲ್ಲಿ ಬರೊಬ್ಬರಿ 52 ರನ್‌ಗಳನ್ನು ಕಲೆಹಾಕುವಲ್ಲಿ ಯಶಸ್ವಿಯಾದರು. ದಿನೇಶ್ ಕಾರ್ತಿಕ್ 19 ಎಸೆತಗಳಲ್ಲಿ 41 ರನ್ ಬಾರಿಸುವ ಮೂಲಕ ತಮ್ಮ ಮೇಲಿನ ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ. ಹೀಗಾಗಿ ಭಾರತ 191 ರನ್‌ಗಳ ಬೃಹತ್ ಗುರಿಯನ್ನು ವಿಂಡೀಸ್ ತಂಡಕ್ಕೆ ನೀಡಿತು. ಆದರೆ ವೆಸ್ಟ್ ಇಂಡೀಸ್ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 122 ರನ್‌ಗಳನ್ನು ಮಾತ್ರವೇ ಗಳಿಸಲು ಯಶಸ್ವಿಯಾಗಿದ್ದು ಭಾರೀ ಅಂತರದ ಸೋಲು ಅನುಭವಿಸಿದೆ. ದಿನೇಶ್ ಕಾರ್ತಿಕ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಭಾರತ ಮತ್ತು ವೆಸ್ಟ್ ಇಂಡೀಸ್ ಆಡುವ 11ರ ಬಳಗ
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ರವಿ ಬಿಷ್ಣೋಯಿ, ರವಿಚಂದ್ರನ್ ಅಶ್ವಿನ್, ಭುವನೇಶ್ವರ್ ಕುಮಾರ್, ಅರ್ಷದೀಪ್ ಸಿಂಗ್.
ವೆಸ್ಟ್ ಇಂಡೀಸ್ ತಂಡ: ಶಮರ್ಹ್ ಬ್ರೂಕ್ಸ್, ಶಿಮ್ರಾನ್ ಹೆಟ್ಮೆಯರ್, ರೋವ್ಮನ್ ಪೊವೆಲ್, ನಿಕೋಲಸ್ ಪೂರನ್ (ನಾಯಕ/ವಿಕೆಟ್ ಕೀಪರ್), ಕೈಲ್ ಮೇಯರ್ಸ್, ಜೇಸನ್ ಹೋಲ್ಡರ್, ಅಕೇಲ್ ಹೊಸೈನ್, ಓಡಿಯನ್ ಸ್ಮಿತ್, ಅಲ್ಜಾರಿ ಜೋಸೆಫ್, ಓಬೆಡ್ ಮೆಕಾಯ್, ಕೀಮೋ ಪಾಲ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications