For Quick Alerts
ALLOW NOTIFICATIONS  
For Daily Alerts
 

ವಿಂಡೀಸ್ ಪ್ರವಾಸ ಹಿನ್ನೆಲೆ: NCAನತ್ತ ಮುಖಮಾಡಿದ ಟೀಮ್ ಇಂಡಿಯಾ ಸ್ಟಾರ್

ಟೀಮ್ ಇಂಡಿಯಾ ಆಟಗಾರರು ಸದ್ಯ ವಿಶ್ರಾಂತಿಯಲ್ಲಿದ್ದು ಮುಂದಿನ ಸತತ ಕ್ರಿಕೆಟ್ ಚಟುವಟಿಕೆಗಳಿಗೆ ಸಿದ್ಧತೆ ನಡೆಸುತ್ತಿದ್ದಾರೆ. ಸದ್ಯ ಮುಂದಿನ ತಿಂಗಳು ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳುತ್ತಿದ್ದು ಮೂರು ಮಾದರಿಯಲ್ಲಿಯೂ ಕಣಕ್ಕಿಳಿಯಲಿದೆ. ಈ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾದ ಯುವ ಕ್ರಿಕೆಟಿಗ ಇಶಾನ್ ಕಿಶನ್ ಬೆಂಗಳೂರಿನ ಎನ್‌ಸಿಎಗೆ ತೆರಳಲಿ ಪೂರ್ವಸಿದ್ಧತೆ ಮಾಡಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ.

ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಟೀಮ್ ಇಂಡಿಯಾದ ಆಟಗಾರರ ಪಡೆಯನ್ನು ಬಿಸಿಸಿಐ ಇನ್ನಷ್ಟೇ ಪ್ರಕಟಿಸಬೇಕಿದೆ. ಅನುಭವಿ ಆಟಗಾರರಿಗೆ ವಿಶ್ರಾಂತಿ ನಿಡುವ ಸಾಧ್ಯತೆಯಿದ್ದು ಯುವ ಆಟಗಾರರನ್ನು ಒಳಗೊಂಡ ಈ ಪ್ರವಾಸಕ್ಕೆ ತೆರಳುವ ಸಾಧ್ಯತೆಯಿದೆ. ಹೀಗಾಗಿ ಯಾವೆಲ್ಲಾ ಆಟಗಾರರಿಗೆ ವಿಶ್ರಾಂತಿ ನಿಡಲಾಗುತ್ತದೆ ಹಾಗೂ ಯಾವ ಯುವ ಆಟಗಾರರು ಭಾರತ ತಂಡದಲ್ಲಿ ಸ್ಥಾನ ಪಡೆದುಕೊಳ್ಳಲಿದ್ದಾರೆ ಎಂಬುದನ್ನು ಕಾದುನೊಡಬೇಕಿದೆ.

IND vs WI: Indian star Ishan Kishan head to NCA Ahead of West Indies tour

ಟೀಮ್ ಇಂಡಿಯಾದ ಯುವ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಸೇರಿದಂತೆ ಇನ್ನೂ ಕೆಲ ಆಟಗಾರರು ಎನ್‌ಸಿಎಗೆ ತೆರಳಿ ವೆಸ್ಟ್ ಇಂಡೀಸ್ ಪ್ರವಾಸಕ್ಕೂ ಮುನ್ನ ಸ್ಟ್ರೆಂತ್ ಹಾಗೂ ಕಂಡೀಶನಿಂಗ್‌ಗೆ ಒಳಗಾಗಲಿದ್ದಾರೆ. ಇಶಾನ್ ಕಿಶನ್ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್ ಪಂದ್ಯದಲ್ಲಿ ಟೀಮ್ ಇಂಡಿಯಾದ ಭಾಗವಾಗಿದ್ದರು. ಆದರೆ ಆಡುವ ಬಳಗದಲ್ಲಿ ಕೆಎಸ್ ಭರತ್‌ಗೆ ಅವಕಾಶ ದೊರೆತ ಕಾರಣ ಬೆಂಚ್ ಕಾದಿದ್ದರು ಇಶಾನ್ ಕಿಶನ್.

ಇನ್ನು ಮುಂಬರುವ ದುಲೀಪ್ ಟ್ರೋಫಿಯಲ್ಲಿ ಪೂರ್ವ ವಿಭಾಗದ ನಾಯಕತ್ವವನ್ನು ವಹಿಸಿಕೊಳ್ಳುವಂತೆ ಇಶಾನ್ ಕಿಶನ್ ಅವರಲ್ಲಿ ಕೇಳಲಾಗಿತ್ತು. ಆದರೆ ಸತತ ಕ್ರಿಕೆಟ್ ಚಟುವಟಿಕೆಯ ಕಾರಣದಿಂದಾಗಿ ಇಶಾನ್ ಕಿಶನ್ ವಿಶ್ರಾಂತಿಯ ಮೊರೆ ಹೋಗಲು ನಿರ್ಧರಿಸಿದ್ದು ದುಲೀಪ್ ಟ್ರೋಪಿಯಲ್ಲಿ ಆಡಲು ನಿರಾಕರಿಸಿದ್ದಾರೆ. "ಕಳೆದ ಡಿಸೆಂಬರ್‌ನಿಂದ ಇಶಾನ್ ಭಾರತೀಯ ತಂಡದ ಭಾಗವಾಗಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ ಮುಗಿಸಿ ಇಂಗ್ಲೆಂಡ್‌ನಿಂದ ಆಗಮಿಸಿದ ಬಳಿಕ ಅವರು ಸ್ವಲ್ಪ ವಿರಾಮ ತೆಗೆದುಕೊಂಡಿದ್ದಾರೆ" ಎಂದು ಇಶಾನ್ ಕಿಶನ್ ಅವರ ಆಪ್ತ ಮೂಲಗಳು ಮಾಹಿತಿ ನೀಡಿದೆ.

ಇಂಡೀಸ್ ಪ್ರವಾಸದ ವೇಳಾ ಪಟ್ಟಿ ಹೀಗಿದೆ.
ಮೊದಲನೇ ಟೆಸ್ಟ್: ಜುಲೈ 12-16 ಡೊಮಿನಿಕಾದ ವಿಂಡ್ಸರ್ ಪಾರ್ಕ್‌ (ಆರಂಭ: ಭಾರತೀಯ ಕಾಲಮಾನ, ಸಂಜೆ 7:30)
ಎರಡನೇ ಟೆಸ್ಟ್ ಪಂದ್ಯ: ಜುಲೈ 20-24 ಕ್ವೀನ್ಸ್ ಪಾರ್ಕ್ ಓವಲ್, ಟ್ರಿನಿಡಾಡ್ (ಆರಂಭ: ಭಾರತೀಯ ಕಾಲಮಾನ, ಸಂಜೆ 7:30)
ಏಕದಿನ ಸರಣಿಯ ವೇಳಾಪಟ್ಟಿ
1ನೇ ODI: ಜುಲೈ 27, ಕೆನ್ಸಿಂಗ್ಟನ್ ಓವಲ್, ಬಾರ್ಬಡೋಸ್ (ಆರಂಭ: ಭಾರತೀಯ ಕಾಲಮಾನ, ಸಂಜೆ 7:00)
2ನೇ ODI: ಜುಲೈ 29, ಕೆನ್ಸಿಂಗ್ಟನ್ ಓವಲ್, ಬಾರ್ಬಡೋಸ್ (ಆರಂಭ: ಭಾರತೀಯ ಕಾಲಮಾನ, ಸಂಜೆ 7:00)
3ನೇ ODI: ಆಗಸ್ಟ್ 1, ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿ, ಟ್ರಿನಿಡಾಡ್ (ಆರಂಭ: ಭಾರತೀಯ ಕಾಲಮಾನ, ಸಂಜೆ 7:00)
ಟಿ20 ಸರಣಿಯ ವೇಳಾಪಟ್ಟಿ
ಮೊದಲನೇ T20I: ಆಗಸ್ಟ್ 3, ಬ್ರಿಯಾನ್ ಲಾರಾ ಕ್ರಿಕೆಟ್ ಅಕಾಡೆಮಿ, ಟ್ರಿನಿಡಾಡ್ (ಆರಂಭ: ಭಾರತೀಯ ಕಾಲಮಾನ, ಸಂಜೆ 7:00)
ಎರಡನೇ T20I: ಆಗಸ್ಟ್ 6, ರಾಷ್ಟ್ರೀಯ ಕ್ರೀಡಾಂಗಣ, ಗಯಾನಾ (ಆರಂಭ: ಭಾರತೀಯ ಕಾಲಮಾನ, ಸಂಜೆ 7:00)
ಮೂರನೇ T20I: ಆಗಸ್ಟ್ 8, ರಾಷ್ಟ್ರೀಯ ಕ್ರೀಡಾಂಗಣ ಗಯಾನಾ (ಆರಂಭ: ಭಾರತೀಯ ಕಾಲಮಾನ, ಸಂಜೆ 7:00)
4ನೇ T20I: ಆಗಸ್ಟ್ 12, ಬ್ರೋವರ್ಡ್ ಕೌಂಟಿ ಸ್ಟೇಡಿಯಂ, ಲಾಡರ್‌ಹಿಲ್, ಫ್ಲೋರಿಡಾ (ಆರಂಭ: ಭಾರತೀಯ ಕಾಲಮಾನ, ಸಂಜೆ 7:00)
5ನೇ T20I: ಆಗಸ್ಟ್ 13, ಬ್ರೋವರ್ಡ್ ಕೌಂಟಿ ಸ್ಟೇಡಿಯಂ, ಲಾಡರ್‌ಹಿಲ್, ಫ್ಲೋರಿಡಾ (ಆರಂಭ: ಭಾರತೀಯ ಕಾಲಮಾನ, ಸಂಜೆ 7:00)

Story first published: Sunday, June 18, 2023, 15:30 [IST]
Other articles published on Jun 18, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+