Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs ZIM: 2024ರ ಟಿ20 ವಿಶ್ವಕಪ್ ಮುಗಿಯುತ್ತಿದ್ದಂತೆ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿರುವ ಭಾರತ; ಇಲ್ಲಿದೆ ವೇಳಾಪಟ್ಟಿ

ಮುಂಬರುವ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿ ಮುಗಿಯುತ್ತಿದ್ದಂತೆಯೇ ಭಾರತ ಕ್ರಿಕೆಟ್ ತಂಡ ಟಿ20 ಸರಣಿಗಾಗಿ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ.

ಈ ಕುರಿತು ಜಿಂಬಾಬ್ವೆ ಕ್ರಿಕೆಟ್ ಮಂಡಳಿ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮಂಗಳವಾರ, ಜನವರಿ 6ರಂದು ಘೋಷಿಸಿವೆ. ಜುಲೈನಲ್ಲಿ ಐದು ಪಂದ್ಯಗಳ ಟಿ20 ಅಂತಾರಾಷ್ಟ್ರೀಯ ಸರಣಿಗೆ ಭಾರತ ತಂಡಕ್ಕೆ ಜಿಂಬಾಬ್ವೆ ಆತಿಥ್ಯ ವಹಿಸಲಿದೆ.

ಜೂನ್ ಅಂತ್ಯದಲ್ಲಿ ಮುಕ್ತಾಯಗೊಳ್ಳಲಿರುವ 2024ರ ಟಿ20 ವಿಶ್ವಕಪ್ ನಂತರ, ಐದು ಪಂದ್ಯಗಳ ಟಿ20 ಸರಣಿಯು ಜುಲೈ 6ರಿಂದ 14ರವರೆಗೆ ಹರಾರೆಯಲ್ಲಿ ನಡೆಯಲಿದೆ.

IND vs ZIM: Indian Cricket Team to Tour Zimbabwe After T20 World Cup; Here is the Schedule


ಭಾರತ ಮತ್ತು ಜಿಂಬಾಬ್ವೆ ಕ್ರಿಕೆಟ್‌ನ ದ್ವಿಪಕ್ಷೀಯ ಸಂಬಂಧಗಳನ್ನು ಗಟ್ಟಿಗೊಳಿಸುವ ಮತ್ತು ಹೆಚ್ಚಿನ ಅವಕಾಶಗಳನ್ನು ಒದಗಿಸುವ ಕುರಿತು ಎರಡು ಕ್ರಿಕೆಟ್ ಮಂಡಳಿಗಳ ನಡುವಿನ ಯಶಸ್ವಿ ಚರ್ಚೆಗಳ ನಂತರ ಪ್ರವಾಸವನ್ನು ನಿಗದಿಪಡಿಸಲಾಯಿತು.

ಮುಂಬರುವ ಭಾರತದ ಪ್ರವಾಸದ ಬಗ್ಗೆ ಮಾತನಾಡಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, "ಬಿಸಿಸಿಐ ಯಾವಾಗಲೂ ಜಾಗತಿಕ ಕ್ರಿಕೆಟ್ ಸಮುದಾಯಕ್ಕೆ ಕೊಡುಗೆ ನೀಡುವಲ್ಲಿ ಪ್ರವರ್ತಕ ಪಾತ್ರವನ್ನು ವಹಿಸಿದೆ. ಇದು ಜಿಂಬಾಬ್ವೆಗೆ ಪುನರ್‌ನಿರ್ಮಾಣದ ಅವಧಿ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಈ ಹಂತದಲ್ಲಿ ಜಿಂಬಾಬ್ವೆ ಕ್ರಿಕೆಟ್‌ಗೆ ನಮ್ಮ ಬೆಂಬಲದ ಅಗತ್ಯವಿದೆ".

ದ್ವಿಪಕ್ಷೀಯ ಕ್ರಿಕೆಟ್ ಅನ್ನು ಬಲಿಷ್ಠಗೊಳಿಸಲು ಮತ್ತು ವಾಣಿಜ್ಯಿಕವಾಗಿ ಹೆಚ್ಚು ಕಾರ್ಯಸಾಧ್ಯವಾಗುವಂತೆ ಮಾಡಲು ಬಿಸಿಸಿಐ ತನ್ನ ಅತ್ಯುತ್ತಮ ಪ್ರಯತ್ನ ಮಾಡುತ್ತದೆ ಎಂದು ತಿಳಿಸಿದರು.

"ಜಿಂಬಾಬ್ವೆ ಕ್ರಿಕೆಟ್‌ಗೆ ಬೆಂಬಲ ನೀಡುವ ನಮ್ಮ ಪ್ರತಿಜ್ಞೆಯು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಕ್ರಿಕೆಟ್‌ನ ಬೆಳವಣಿಗೆ ಮತ್ತು ಸಮೃದ್ಧಿಯ ಹಂಚಿಕೆಯ ದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ," ಎಂದು ಜಯ್ ಶಾ ಹೇಳಿದರು.

ಇನ್ನು ತಮ್ಮ ಉತ್ಸಾಹವನ್ನು ವ್ಯಕ್ತಪಡಿಸಿದ ಜಿಂಬಾಬ್ವೆ ಕ್ರಿಕೆಟ್ ಅಧ್ಯಕ್ಷ ತವೆಂಗ್ವಾ ಮುಕುಹ್ಲಾನಿ, ""ಜುಲೈನಲ್ಲಿ ಟಿ20 ಸರಣಿಗಾಗಿ ಭಾರತ ತಂಡಕ್ಕೆ ಅತಿಥ್ಯ ವಹಿಸಲು ನಾವು ಸಂಪೂರ್ಣವಾಗಿ ರೋಮಾಂಚನಗೊಂಡಿದ್ದೇವೆ. ಈ ವರ್ಷ ತವರಿನಲ್ಲಿ ನಮ್ಮ ಅತಿದೊಡ್ಡ ಅಂತಾರಾಷ್ಟ್ರೀಯ ಆಕರ್ಷಣೆಯಾಗಿದೆ''.

"ಕ್ರಿಕೆಟ್ ಆಟವು ಯಾವಾಗಲೂ ಭಾರತದ ಪ್ರಭಾವ ಮತ್ತು ಕ್ರೀಡೆಯ ಮೇಲಿನ ಸಮರ್ಪಣೆಯಿಂದ ಅಪಾರವಾಗಿ ಪ್ರಯೋಜನ ಪಡೆದಿದೆ. ಮತ್ತೊಮ್ಮೆ ಜಿಂಬಾಬ್ವೆ ಪ್ರವಾಸಕ್ಕೆ ಬದ್ಧವಾಗಿರುವ ಬಿಸಿಸಿಐಗೆ ನಾನು ದೊಡ್ಡ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ," ಎಂದರು.

ಭಾರತ ತಂಡದ ಜಿಂಬಾಬ್ವೆ ಪ್ರವಾಸದ ವೇಳಾಪಟ್ಟಿ

  • ಜುಲೈ 6 - ಮೊದಲ ಟಿ20 ಪಂದ್ಯ, ಹರಾರೆ ಸ್ಪೋರ್ಟ್ಸ್ ಕ್ಲಬ್
  • ಜುಲೈ 7 - ಎರಡನೇ ಟಿ20 ಪಂದ್ಯ, ಹರಾರೆ ಸ್ಪೋರ್ಟ್ಸ್ ಕ್ಲಬ್
  • ಜುಲೈ 10 - ಮೂರನೇ ಟಿ20 ಪಂದ್ಯ, ಹರಾರೆ ಸ್ಪೋರ್ಟ್ಸ್ ಕ್ಲಬ್
  • ಜುಲೈ 13 - ನಾಲ್ಕನೇ ಟಿ20 ಪಂದ್ಯ, ಹರಾರೆ ಸ್ಪೋರ್ಟ್ಸ್ ಕ್ಲಬ್
  • ಜುಲೈ 14 - ಐದನೇ ಟಿ20 ಪಂದ್ಯ, ಹರಾರೆ ಸ್ಪೋರ್ಟ್ಸ್ ಕ್ಲಬ್

Story first published: Tuesday, February 6, 2024, 18:49 [IST]
Other articles published on Feb 6, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+