
ಜಿಂಬಾಬ್ವೆ ವಿರುದ್ಧದ ಏಕದಿನ ಸರನಿಯ ಮೂರನೇ ಪಂದ್ಯದಲ್ಲಿ ಔಆರತದ ಯುವ ಆಟಗಾರ ಶುಬ್ಮನ್ ಗಿಲ್ ಭರ್ಜರಿ ಪ್ರದರ್ಶನ ನೀಡಿದ್ದು ಶತಕವನ್ನು ಸಿಡಿಸಿದ್ದಾರೆ. 22 ಹರೆಯದ ಯುವ ದಾಂಡಿಗ ಕೇವಲ 82 ಎಸೆತಗಳಲ್ಲಿ ಶತಕ ಸಿಡಿಸಿದ್ದು 12 ಬೌಂಡರಿ ಸಿಡಿಸಿದ್ದಾರೆ. ಭಾರತದ ಯುವ ಆಟಗಾರನ ಈ ಪ್ರದರ್ಶನಕ್ಕೆ ಅಭಿಮಾನಿಗಳು ಮಾತ್ರವಲ್ಲದೆ ಮಾಜಿ ಕ್ರಿಕೆಟಿಗರಿಂದಲೂ ಪ್ರಶಂಸೆಗಳು ಹರಿದು ಬಂದಿದೆ.
ಶುಬ್ಮನ್ ಗಿಲ್ ಇತ್ತೀಚೆಗೆ ಅತ್ಯದ್ಭುತ ಫಾರ್ಮ್‌ನಲ್ಲಿದ್ದು ಸ್ಥಿರ ಪ್ರದರ್ಶನವನ್ನು ನೀಡಿಕೊಂಡು ಬಂದಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿಯೂ ಅವರಿಂದ ಇಂತಾದ್ದೇ ಪ್ರದರ್ಶನ ಬಂದಿತ್ತು. ಅದರಲ್ಲೂ ಒಂದು ಪಂದ್ಯದಲ್ಲಿ ಕೇವಲ ಎರಡು ರನ್‌ಗಳಿಂದ ಶತಕ ವಂಚಿತವಾಗಿದ್ದರು ಗಿಲ್. ಇದೀಗ ಕಡೆಗೂ ತಮ್ಮ ಚೊಚ್ಚಲ ಶತಕದ ಕನಸನ್ನು ನನಸುಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಭಾರತದ ಯುವ ಆಟಗಾರನ ಪ್ರದರ್ಶನಕ್ಕೆ ದಾಕಷ್ಟು ಪ್ರಶಂಸೆಗಳು ಹರಿದುಬರುತ್ತಿದೆ. ದಿಗ್ಗಜ ಆಟಗಾರ ಯುವರಾಜ್ ಸಿಂಗ್ ಟ್ವಿಟ್ಟರ್‌ನಲ್ಲಿ ಶುಬ್ಮನ್ ಗಿಲ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. "ಅದ್ಭುತವಾಗಿ ಆಡಿದ್ದೀರಿ ಶುಬ್ಮನ್ ಗಿಲ್. ನಿಜವಾಗಿಯೂ ನೀವು ಈ ಶತಕಕ್ಕೆ ಅರ್ಹರು. ನಿಮ್ಮ ಮೊದಲ ಶತಕಕ್ಕೆ ಅಭಿನಂದನೆಗಳು. ಇನ್ನು ಸಾಕಷ್ಟು ಬರಲಿದ್ದು ಇದು ಕೇವಲ ಆರಂಭ" ಎಂದಿದ್ದಾರೆ ಯುವರಾಜ್ ಸಿಂಗ್. ಇನ್ನು ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಹಾಗೂ ಕನ್ನಡಿಗ ರಾಬಿನ್ ಉತ್ತಪ್ಪ ಕೂಡ ಟ್ವೀಟ್ ಮೂಲಕ ಅಭಿನಂದಿಸಿದ್ದಾರೆ.
ಟಾಸ್ ಗೆದ್ದು ಮೊದಲಿಗೆ ಬ್ಯಾಟಿಂಗ್ ಮಾಡಿದ ಭಾರತ ಉತ್ತಮ ಪ್ರದರ್ಶನ ನೀಡಿತು. ಟೀಮ್ ಇಂಡಿಯಾ ಪರ ಆರಂಭಿಕರಾಗಿ ಕೆಎಲ್ ರಾಹುಲ್ ಹಾಗೂ ಶಿಖರ್ ಧವನ್ ಕಣಕ್ಕಿಳಿದು ಧವನ್ 40 ರನ್ ಕಲೆಹಾಕಿದರೆ, ಕೆಎಲ್ ರಾಹುಲ್ 30 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಶುಬ್‌ಮನ್ ಗಿಲ್ 97 ಎಸೆತಗಳಲ್ಲಿ 130 ರನ್ ಸಿಡಿಸಿ ತಮ್ಮ ಚೊಚ್ಚಲ ಶತಕ ಸಿಡಿಸಿದ್ದಾರೆ. ಈ ಮೂಲಕ ಗಿಲ್ ಹೊಸ ಮೈಲಿಗಲ್ಲನ್ನು ನೆಟ್ಟರು.
ಏಕಾಂಗಿಯಾಗಿ ಹೋರಾಡಿದ ಸಿಕಂದರ್ ರಾಜಾ: ಬಾಂಗ್ಲಾದೇಶದ ವಿರುದ್ಧದ ಸರಣಿಯಲ್ಲಿ ಮಿಂಚಿದ್ದ ಸಿಕಂದರ್ ರಾಜಾ ಭಾರತದ ವಿರುದ್ಧದ ಅಂತಿಮ ಪಂದ್ಯದಲ್ಲಿಯೂ ಅಮೋಘ ಪ್ರದರ್ಶನ ನಿಡಿದ್ದು ಭರ್ಜರಿ ಶತಕ ಸಿಡಿಸಿದರು. 95 ಎಸೆತಗಳನ್ನು ಎದುರಿಸಿದ ರಾಜಾ ಭರ್ಜರಿ 115 ರನ್‌ಗಳನ್ನು ಗಳಿಸಿದರು. ಅವರಿಗೆ ಸಾಥ್ ನೀಡಿದ ಸೀನ್ ವಿಲಿಯಮ್ಸ್ 45 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು. ಅಂತಿಮ ಹಂತದವರೆಗೂ ಹೋರಾಡಿದ ಸಿಕಂದರ್ ರಾಜಾ ತಂಡದ ಮೊತ್ತ 275 ರನ್‌ಗಳಿದ್ದಾಗ 9 ವಿಕೆಟ್ ರೂಪದಲ್ಲಿ ಫೆವಿಲಿಯನ್‌ಗೆ ಸೇರಿಕೊಂಡರು. ಈ ಮೂಲಕ ಜಿಂಬಾಬ್ವೆ ತಂಡದ ಹೋರಾಟ ಅಂತ್ಯವಾಯಿತು. ಅಂತಿಮವಾಗಿ 276 ರನ್‌ಗಳಿಗೆ ಆಲೌಟ್ ಆದ ಜಿಂಬಾಬ್ವೆ 13 ರನ್‌ಗಳ ಅಂತರದಿಂದ ಸೋಲು ಅನುಭವಿಸಿದೆ.
ಜಿಂಬಾಬ್ವೆ ಮತ್ತು ಭಾರತ ತಂಡದ ಆಡುವ 11ರ ಬಳಗ
ಭಾರತ: ಶಿಖರ್ ಧವನ್, ಶುಬ್‌ಮನ್ ಗಿಲ್, ಇಶಾನ್ ಕಿಶನ್, ಕೆಎಲ್ ರಾಹುಲ್(ನಾಯಕ), ದೀಪಕ್ ಹೂಡಾ, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ದೀಪಕ್ ಚಹಾರ್, ಅವೇಶ್ ಖಾನ್ಜಿಂಬಾಬ್ವೆ: ತಕುದ್ಜ್ವಾನಾಶೆ ಕೈಟಾನೊ, ಇನೊಸೆಂಟ್ ಕೈಯಾ, ಟೋನಿ ಮುನ್ಯೊಂಗಾ, ರೆಗಿಸ್ ಚಕಬ್ವಾ (ನಾಯಕ/ ವಿಕೆಟ್ ಕೀಪರ್), ಸಿಕಂದರ್ ರಜಾ, ಸೀನ್ ವಿಲಿಯಮ್ಸ್, ರಿಯಾನ್ ಬರ್ಲ್, ಲ್ಯೂಕ್ ಜೊಂಗ್ವೆ, ಬ್ರಾಡ್ ಇವಾನ್ಸ್, ವಿಕ್ಟರ್ ನ್ಯಾಯುಚಿ, ರಿಚರ್ಡ್ ನ್ಗರವ