IND W vs AUS W: 4 ರನ್‌ಗಳಿಂದ ಶತಕ ವಂಚಿತ ರಿಚಾ ಘೋಷ್ ಹೋರಾಟ ವ್ಯರ್ಥ; ಸರಣಿ ಗೆದ್ದ ಆಸೀಸ್
ಏಕೈಕ ಪಂದ್ಯದ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ ಮಹಿಳಾ ತಂಡಕ್ಕೆ ಆಘಾತಕಾರಿ ಸೋಲು ನೀಡಿದ್ದ ಭಾರತ ಮಹಿಳಾ ತಂಡವು ಏಕದಿನ ಸರಣಿಯಲ್ಲಿ ತನ್ನ ಪ್ರಾಬಲ್ಯ ಕಾಯ್ದುಕೊಳ್ಳಲು ಎಡವಿತು ಮತ್ತು ಅಲಿಸ್ಸಾ ಹೀಲಿ ನಾಯಕತ್ವದ ತಂಡಕ್ಕೆ ಸರಣಿ ಬಿಟ್ಟುಕೊಟ್ಟಿತು.
ಶನಿವಾರ, ಡಿಸೆಂಬರ್ 30ರಂದು ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಆತಿಥೇಯ ಭಾರತ ತಂಡದ ವಿರುದ್ಧ ಪ್ರವಾಸಿ ಆಸ್ಟ್ರೇಲಿಯಾ ಮಹಿಳಾ ತಂಡವು ಏಕದಿನ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಂಡಿತು.
ರೋಚಕ ಪಂದ್ಯದಲ್ಲಿ ಭಾರತ ತಂಡ 3 ರನ್‌ಗಳಿಂದ ಸೋತಿತು. ಒಟ್ಟು 8 ವಿಕೆಟ್‌ಗೆ 258 ರನ್ ಕಲೆಹಾಕಿದ ನಂತರ, ಆಸ್ಟ್ರೇಲಿಯಾ ತನ್ನ ಬೌಲಿಂಗ್ ಸ್ಪೆಲ್‌ನಲ್ಲಿ ಅಂತಿಮ ಹಂತದಲ್ಲಿ ಪಂದ್ಯವನ್ನು ತಿರುಗಿಸಿ ಸರಣಿ-ಗೆಲುವಿನ ನಗೆ ಬೀರಿತು. ಕೊನೆಯ ಓವರ್‌ಗಳಲ್ಲಿ ಎಡವಿದ ಭಾರತ ಸೋಲು ಅನುಭವಿಸಬೇಕಾಯಿತು.

259 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ ಮಹಿಳಾ ತಂಡವು 50 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 255 ರನ್ ಗಳಿಸಿ ತನ್ನ ಇನ್ನಿಂಗ್ಸ್ ಮುಗಿಸಿತು.
ಭಾರತ ತಂಡವು ಕೇವಲ 25 ರನ್‌ಗಳ ಅಂತರದಲ್ಲಿ ತನ್ನ ಕೊನೆಯ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತು, ಮೈದಾನದಲ್ಲಿ ನಿಜವಾಗಿಯೂ ಕಳಪೆ ಬ್ಯಾಟಿಂಗ್‌ಗೆ ಬೆಲೆ ತೆತ್ತಿತು.
259 ರನ್‌ಗಳ ಚೇಸಿಂಗ್‌ನಲ್ಲಿ ಭಾರತ ವನಿತೆಯರು ಚುರುಕಾಗಿ ರನ್‌ಗಳನ್ನು ಪ್ರಾರಂಭಿಸಿದರು. ಆದರೆ 7ನೇ ಓವರ್‌ನಲ್ಲಿ ಯಾಸ್ತಿಕಾ ಭಾಟಿಯಾ ಅವರ ವಿಕೆಟ್ ಕಳೆದುಕೊಂಡಿತು. ನಂತರ, ಸ್ಮೃತಿ ಮಂಧಾನ (34), ರಿಚಾ ಘೋಷ್ (96) ಮತ್ತು ಜೆಮಿಮಾ ರೋಡ್ರಿಗಸ್ (44) ಮಧ್ಯಮ ಓವರ್‌ನಲ್ಲಿ ಭಾರತೀಯ ಇನ್ನಿಂಗ್ಸ್ ಮೇಲೆತ್ತಿದರು ಮತ್ತು 6ರ ರನ್ ರೇಟ್ ಅನ್ನು ಕಾಯ್ದುಕೊಂಡರು.

ರಿಚಾ ಘೋಷ್ ವೀರೋಚಿತ ಬ್ಯಾಟಿಂಗ್ ಪ್ರದರ್ಶನ
ಭಾರತದ ವಿಕೆಟ್ ಕೀಪರ್-ಬ್ಯಾಟರ್ ರಿಚಾ ಘೋಷ್ ಡಿಸೆಂಬರ್ 30ರಂದು ಮುಂಬೈನ ವಾಂಖೆಡೆಯಲ್ಲಿ ಪ್ರಚಂಡ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ರಿಚಾ ಘೋಷ್ ಮೊಣಕಾಲು ಸೆಳೆತದ ಸಮಸ್ಯೆಗಳ ನಡುವೆಯೂ 96 ರನ್‌ಗಳ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು ಮತ್ತು ಭಾರತ ತಂಡವನ್ನು ಗುರಿಯತ್ತ ಹತ್ತಿರವಾಗಲು ಸಹಾಯ ಮಾಡಿದರು.
ಒಂದು ಕಡೆ ರಿಚಾ ಘೋಷ್ ನೆಲಕಚ್ಚಿ ಆಡುತ್ತಿದ್ದರೆ, ಮತ್ತೊಂದೆಡೆ ವಿಕೆಟ್‌ಗಳು ಬೀಳುತ್ತಿದ್ದವು. ರಿಚಾ ಘೋಷ್ ಮಾತ್ರ ರನ್ ಗಳಿಸುವ ಮಾರ್ಗಗಳನ್ನು ಕಂಡುಕೊಂಡರು.
ತಾಳ್ಮೆಯ ಆಟದಲ್ಲಿ ರಿಚಾ ಘೋಷ್ ತಮ್ಮ ದಿನದಂದು 13 ಬೌಂಡರಿಗಳನ್ನು ಬಾರಿಸಿದರು. ತನ್ನ ಚೊಚ್ಚಲ ಶತಕ ಬಾರಿಸುತ್ತಾಳೆ ಎಂದು ಎಲ್ಲರೂ ಅಂದುಕೊಳ್ಳುತ್ತಿರುವಾಗ ಕವರ್‌ನಲ್ಲಿ ಕ್ಯಾಚ್ ನೀಡಿ ಔಟಾದರು. ಇದಕ್ಕೂ ಮುನ್ನ 117 ಎಸೆತಗಳಲ್ಲಿ 96 ರನ್ ಗಳಿಸಿದಳು ಮತ್ತು ಕೇವಲ 4 ರನ್‌ಗಳಿಂದ ಶತಕ ವಂಚಿತಳಾದಳು.

ದೀಪ್ತಿ ಶರ್ಮಾ 5 ವಿಕೆಟ್ ಸಾಧನೆ
ಇದಕ್ಕೂ ಮುನ್ನ ಪಂದ್ಯದ ಆರಂಭಿಕ ಇನ್ನಿಂಗ್ಸ್‌ನಲ್ಲಿ ದೀಪ್ತಿ ಶರ್ಮಾ ಮತ್ತೊಮ್ಮೆ ಬೌಲಿಂಗ್‌ನಲ್ಲಿ 5 ವಿಕೆಟ್ ಸಾಧನೆಯೊಂದಿಗೆ ಮಿಂಚಿದರು. ವಾಸ್ತವವಾಗಿ, ಏಕದಿನ ಸ್ವರೂಪದಲ್ಲಿ ಆಸ್ಟ್ರೇಲಿಯ ಮಹಿಳಾ ತಂಡದ ವಿರುದ್ಧ 5 ವಿಕೆಟ್ ಸಾಧನೆ ಮಾಡಿದ ಮೊದಲ ಭಾರತೀಯ ಬೌಲರ್ ಎನಿಸಿದರು.
ದೀಪ್ತಿ ಶರ್ಮಾ 10 ಓವರ್‌ಗಳಲ್ಲಿ 38 ರನ್ ನೀಡಿ 5 ವಿಕೆಟ್‌ಗಳೊಂದಿಗೆ ನೂಶಿನ್ ಅಲ್ ಖದೀರ್ ಅವರ ದಾಖಲೆಯನ್ನು ಮುರಿದರು.
2006ರಲ್ಲಿ ಅಡಿಲೇಡ್‌ನ ಸೇಂಟ್ ಪೀಟರ್ಸ್ ಕಾಲೇಜಿನಲ್ಲಿ 10 ಓವರ್‌ಗಳಲ್ಲಿ 41 ರನ್ ನೀಡಿ 4 ವಿಕೆಟ್‌ಗಳನ್ನು ದಾಖಲಿಸಿದಾಗ ನೂಶಿನ್ ಅಲ್ ಖದೀರ್ ಆಸ್ಟ್ರೇಲಿಯಾ ವಿರುದ್ಧದ ಮಹಿಳಾ ಏಕದಿನ ಪಂದ್ಯಗಳಲ್ಲಿ ಭಾರತೀಯ ಬೌಲರ್‌ನ ಅತ್ಯುತ್ತಮ ಅಂಕಿಅಂಶ ದಾಖಲಿಸಿದ್ದರು.
7 ಜೀವದಾನ ನೀಡಿದ ಭಾರತೀಯ ಆಟಗಾರ್ತಿಯರು
ಭಾರತ ಮಹಿಳಾ ತಂಡವು ಬಿಟ್ಟ್ ತಮ್ಮ 7 ಕ್ಯಾಚ್‌ಗಳಲ್ಲಿ ಕನಿಷ್ಠ ಎರಡನ್ನಾದರೂ ತೆಗೆದುಕೊಂಡಿದ್ದರೆ, ಆಸ್ಟ್ರೇಲಿಯಾದ ಗುರಿಯನ್ನು ಕಡಿಮೆ ಮಾಡಬಹುದಿತ್ತು. ಭಾರತ ತಂಡವು ಆಸ್ಟ್ರೇಲಿಯಾ ತಂಡದ ವಿರುದ್ಧ ಮೈದಾನದಲ್ಲಿ ಫೀಲ್ಡಿಂಗ್‌ನಲ್ಲಿ ಶೋಚನೀಯ ಪ್ರದರ್ಶನವನ್ನು ತೋರಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications