88 ವರ್ಷಗಳಲ್ಲಿ 2ನೇ ಬಾರಿ; ಅಪರೂಪದ ಸಾಧನೆ ಮಾಡಿದ ಭಾರತೀಯ ಮಹಿಳಾ ಕ್ರಿಕೆಟ್ ತಂಡ!
ಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಮೊದಲ ದಿನದಂದು ಭಾರತೀಯ ಕ್ರಿಕೆಟ್‌ಗೆ, ವಿಶೇಷವಾಗಿ ಮಹಿಳಾ ಕ್ರಿಕೆಟ್‌ಗೆ ಸ್ಮರಣೀಯವಾಗಿದೆ. ಭಾರತ ಮಹಿಳಾ ತಂಡವು ಟೆಸ್ಟ್ ಪಂದ್ಯದ ಒಂದೇ ದಿನದಲ್ಲಿ 400ಕ್ಕೂ ಅಧಿಕ ರನ್ ಗಳಿಸಿದ ಎರಡನೇ ತಂಡವಾಯಿತು ಮತ್ತು ದಾಖಲೆ ಪುಸ್ತಕದಲ್ಲಿ ತನ್ನ ಬರೆದುಕೊಂಡಿತು.
ಭಾರತ ಮಹಿಳಾ ಕ್ರಿಕೆಟ್ ತಂಡವು 1935ರಲ್ಲಿ ದಾಖಲೆ ನಿರ್ಮಿಸಿದ ಇಂಗ್ಲೆಂಡ್ ಸಾಲಿಗೆ ಸೇರಿಕೊಂಡರು. ಮೊದಲ ದಿನದ ಸ್ಟಂಪ್ ಬಂತರ, ಭಾರತ 7 ವಿಕೆಟ್‌ಗೆ 410 ರನ್‌ಗಳನ್ನು ಕಲೆಹಾಕಿದೆ.

ನಾಲ್ಕು ಆಟಗಾರ್ತಿಯರ ಅರ್ಧಶತಕ ಮತ್ತು ಮೂರು ದೊಡ್ಡ ಜೊತೆಯಾಟಗಳು ಬಂದವು. ದೀಪ್ತಿ ಶರ್ಮಾ 60 ರನ್ ಮತ್ತು ಪೂಜಾ ವಸ್ತ್ರಾಕರ್ 4 ರನ್ ಗಳಿಸಿ ಅಜೇಯರಾಗುಳಿದಿದ್ದು, ಎರಡನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನದೊಂದಿಗೆ, ಭಾರತ ಮಹಿಳಾ ಕ್ರಿಕೆಟ್ ತಂಡವು ತವರಿನಲ್ಲಿ ತಮ್ಮ ಹಿಂದಿನ ಗರಿಷ್ಠ ಮೊತ್ತವನ್ನು ಮೀರಿಸಿತು. 2014ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 9 ವಿಕೆಟ್‌ಗೆ 400 ರನ್‌ಗಳ ಹಿಂದಿನ ದಾಖಲೆಯನ್ನು ಅಳಿಸಿಹಾಕಿತು.
ಭಾರತ ತಂಡದ ಇನ್ನಿಂಗ್ಸ್ ಆರಂಭಿಸಿದ ಸ್ಮೃತಿ ಮಂಧಾನ (17) ಮತ್ತು ಶಫಾಲಿ ವರ್ಮಾ (19) ಮೊದಲ ವಿಕೆಟ್‌ಗೆ 25 ರನ್ ಗಳಿಸಿದರು. 47 ರನ್‌ಗಳಾಗುವಷ್ಟರಲ್ಲಿ ಆರಂಭಿಕರನ್ನು ಕಳೆದುಕೊಂಡ ಬಳಿಕ ಶುಭಾ ಸತೀಶ್ ಮತ್ತು ಜೆಮಿಮಾ ರೋಡ್ರಿಗಸ್ ಮೂರನೇ ವಿಕೆಟ್‌ಗೆ ಶತಕದ ಜೊತೆಯಾಟವಾಡಿದರು.

ಶುಭಾ ಸತೀಶ್ 76 ಎಸೆತಗಳಲ್ಲಿ 13 ಬೌಂಡರಿ ಸಮೇತ 69 ರನ್ ಗಳಿಸಿದರೆ, ಜೆಮಿಮಾ ರೋಡ್ರಿಗಸ್ 99 ಎಸೆತಗಳಲ್ಲಿ 11 ಬೌಂಡರಿ ಮೂಲಕ 68 ರನ್ ಬಾರಿಸಿ ಔಟಾದರು.
ನಂತರ ಬಂದ ನಾಯಕಿ ಹರ್ಮನ್‌ಪ್ರೀತ್ ಕೌರ್ 86 ಎಸೆತಗಳನ್ನು ಎದುರಿಸಿ 6 ಬೌಂಡರಿ ನೆರವಿನಿಂದ 49 ರನ್ ಗಳಿಸಿ ವಿಚಿತ್ರ ರೀತಿಯಲ್ಲಿ ರನೌಟ್ ಆದರೆ, ಯಾಸ್ತಿಕಾ ಭಾಟಿಯಾ 88 ಎಸೆತಗಳಲ್ಲಿ 10 ಬೌಂಡರಿ ಹಾಗೂ 1 ಸಿಕ್ಸರ್ ಸಹಾಯದಿಂದ 66 ರನ್ ಬಾರಿಸಿದರೆ, ದೀಪ್ತಿ ಶರ್ಮಾ 95 ಎಸೆತಗಳಲ್ಲಿ 9 ಬೌಂಡರಿ ಹಾಗೂ 1 ಸಿಕ್ಸರ್ ಸಹಾಯದಿಂದ ಅಜೇಯ 60 ರನ್ ಗಳಿಸಿದ್ದಾರೆ. ಸ್ನೇಹ್ ರಾಣಾ 30 ರನ್ ಗಳಿಸಿ ಔಟಾದರು.
88 ವರ್ಷಗಳಲ್ಲಿ ಮಹಿಳಾ ಟೆಸ್ಟ್ ತಂಡವೊಂದು ಒಂದೇ ದಿನದಲ್ಲಿ 400ಕ್ಕೂ ಹೆಚ್ಚು ರನ್ ಗಳಿಸಿದ್ದು ಇದೇ ಮೊದಲು. 1935ರಲ್ಲಿ ಕ್ರೈಸ್ಟ್‌ಚರ್ಚ್‌ನ ಲ್ಯಾಂಕಾಸ್ಟರ್ ಪಾರ್ಕ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ 431 ರನ್ ಗಳಿಸಿದ ಇಂಗ್ಲೆಂಡ್ ತಂಡದ ಒಟ್ಟಾರೆ ದಾಖಲೆಯಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications