For Quick Alerts
ALLOW NOTIFICATIONS  
For Daily Alerts
 

IND-W vs ENG-W: ಮೊದಲ ಟಿ20 ಪಂದ್ಯದಲ್ಲಿ ಭಾರತ ವನಿತೆಯರಿಗೆ ಸೋಲು

ಬುಧವಾರ, ಡಿಸೆಂಬರ್ 6ರಂದು ಮುಂಬೈನಲ್ಲಿ ನಡೆದ ಮೂರು ಪಂದ್ಯಗಳ ಸರಣಿಯ ಮೊದಲ ಟಿ20 ಪಂದ್ಯದಲ್ಲಿ ಆತಿಥೇಯ ಭಾರತ ಮಹಿಳಾ ತಂಡವು ಪ್ರವಾಸಿ ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧ 38 ರನ್‌ಗಳ ಸೋಲು ಅನುಭವಿಸಿತು.

ಆಲ್‌ರೌಂಡ್ ಪ್ರದರ್ಶನ ನೀಡಿದ ಹೀದರ್ ನೈಟ್ ನಾಯಕತ್ವದ ಇಂಗ್ಲೆಂಡ್ ವನಿತೆಯರು ಮೂರು ಪಂದ್ಯಗಳ ಸರಣಿಯನ್ನು 1-0 ಅಂತರದಲ್ಲಿ ಮುನ್ನಡೆ ಸಾಧಿಸಿದ್ದಾರೆ.

IND-W vs ENG-W: India womens Team Lost Against England Womens team in the 1st T20 Match

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಮಹಿಳಾ ತಂಡ ಡೇನಿಯಲ್ ವ್ಯಾಟ್ ಮತ್ತು ನ್ಯಾಟ್ ಸಿವರ್-ಬ್ರಂಟ್ ಅವರ ಅಮೋಘ ಅರ್ಧಶತಕಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 197 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.

198 ರನ್‌ಗಳ ಬೃಹತ್ ಗುರಿ ಬೆನ್ನಟ್ಟಿದ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ತಂಡ ಶಫಾಲಿ ವರ್ಮಾ ಅವರ ಅರ್ಧಶತಕದ ಹೊರತಾಗಿಯೂ, ಅಗ್ರ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯದಿಂದ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 159 ರನ್‌ಗಳನ್ನಷ್ಟೇ ಗಳಿಸಲು ಶಕ್ತವಾಯಿತು ಮತ್ತು 38 ರನ್‌ಗಳ ಸೋಲು ಕಂಡಿತು.

ಇಂಗ್ಲೆಂಡ್‌ನ ಆರಂಭಿಕ ಆಟಗಾರ್ತಿ ಡೇನಿಯಲ್ ವ್ಯಾಟ್ 47 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್‌ಗಳ ಸಮೇತ 75 ರನ್ ಬಾರಿಸಿದರೆ, ನ್ಯಾಟ್ ಸಿವರ್-ಬ್ರಂಟ್ 53 ಎಸೆತಗಳನ್ನು ಎದುರಿಸಿ 13 ಬೌಂಡರಿಗಳ ಸಹಾಯದಿಂದ 77 ರನ್ ಗಳಿಸಿದರು.

ಈ ಜೋಡಿ ಮೂರನೇ ವಿಕೆಟ್‌ಗೆ 87 ಎಸೆತಗಳಲ್ಲಿ 138 ರನ್ ಕಲೆಹಾಕಿತು. ಕೊನೆಯಲ್ಲಿ ಆಮಿ ಜೋನ್ಸ್ 9 ಎಸೆತಗಳಲ್ಲಿ 23 ರನ್ ಗಳಿಸಿ ತಂಡದ ಮೊತ್ತವನ್ನು 190ರ ಗಡಿ ದಾಟಿಸಿದರು.

ಇನ್ನು ಬೌಲಿಂಗ್‌ನಲ್ಲಿ ಭಾರತ ತಂಡದ ಪರ ರೇಣುಕಾ ಠಾಕೂರ್ ಸಿಂಗ್ 4 ಓವರ್‌ಗಳಲ್ಲಿ 27 ರನ್ ನೀಡಿ 3 ವಿಕೆಟ್ ಪಡೆದರೆ, ಅಲ್ಲದೆ, ಮೊದಲ ಓವರ್‌ನಲ್ಲೇ ಇಂಗ್ಲೆಂಡ್ ತಂಡದ 2 ವಿಕೆಟ್‌ ಪಡೆಯುವ ಮೂಲಕ ಆಘಾತ ನೀಡಿದ್ದರು. ಇನ್ನು ಕನ್ನಡತಿ ಶ್ರೇಯಾಂಕಾ ಪಾಟೀಲ್ 2 ವಿಕೆಟ್ ಮತ್ತು ಉಳಿದಂತೆ ಸೈಕಾ ಇಶಾಕ್ ಒಂದು ವಿಕೆಟ್ ಪಡೆದರು.

ಪ್ರತ್ಯುತ್ತರವಾಗಿ, ಭಾರತ ಮಹಿಳಾ ತಂಡದ ಪರ ಆರಂಭಿಕ ಬ್ಯಾಟರ್ ಶಫಾಲಿ ವರ್ಮಾ 42 ಎಸೆತಗಳಲ್ಲಿ 9 ಬೌಂಡರಿಗಳ ಮೂಲಕ 52 ರನ್ ಗಳಿಸಿ ತಂಡದ ಏಕೈಕ ಅಗ್ರ ಸ್ಕೋರರ್ ಎನಿಸಿದರು. ಸ್ಮೃತಿ ಮಂಧಾನ 6 ರನ್, ಜೆಮಿಮಾ ರೋಡ್ರಿಗಸ್ 4 ರನ್ ಗಳಿಸಿ ನಿರಾಸೆ ಮೂಡಿಸಿದರು.

IND-W vs ENG-W: India womens Team Lost Against England Womens team in the 1st T20 Match

ಮಧ್ಯಮ ಕ್ರಮಾಂಕದಲ್ಲಿ ಹರ್ಮನ್‌ಪ್ರೀತ್ ಕೌರ್ 26 ರನ್, ರಿಚಾ ಘೋಷ್ 21 ರನ್, ಕನಿಕಾ ಅಹುಜಾ 15 ರನ್, ಪೂಜಾ ವಸ್ತ್ರಾಕರ್ 11 ರನ್ ಗಳಿಸಿದರೂ, ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ.

ಬೌಲಿಂಗ್‌ನಲ್ಲಿ ಇಂಗ್ಲೆಂಡ್ ತಂಡದ ಪರ ಸೋಫಿ ಎಕ್ಲೆಸ್ಟೋನ್ 4 ಓವರ್‌ಗಳಲ್ಲಿ 15 ರನ್ ನೀಡಿ 3 ವಿಕೆಟ್ ಪಡೆದರೆ, ಉಳಿದಂತೆ ನ್ಯಾಟ್-ಸೀವರ್-ಬ್ರಂಟ್, ಫ್ರೆಯಾ ಕೆಂಪ್ ಮತ್ತು ಸರಾಹ್ ಗ್ಲೆನ್ ತಲಾ ಒಂದೊಂದು ವಿಕೆಟ್ ಕಬಳಿಸಿದರು.

IND-W vs ENG-W: India womens Team Lost Against England Womens team in the 1st T20 Match

Story first published: Wednesday, December 6, 2023, 23:40 [IST]
Other articles published on Dec 6, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+