IND-W vs ENG-W: 2ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ಸೋಲಿಸಲು ಸಲಹೆ ನೀಡಿದ ಶ್ರೇಯಾಂಕಾ ಪಾಟೀಲ್!
ಭಾರತ ಮಹಿಳಾ ತಂಡದ ಯುವ ಸ್ಪಿನ್ನರ್ ಶ್ರೇಯಾಂಕಾ ಪಾಟೀಲ್ ಅವರು ಬುಧವಾರ ಡಿಸೆಂಬರ್ 6ರಂದು ಇಂಗ್ಲೆಂಡ್ ಮಹಿಳಾ ತಂಡದ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಆಡುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು.
ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿನ ಫ್ಲಾಟ್ ಬ್ಯಾಟಿಂಗ್ ಟ್ರ್ಯಾಕ್‌ನಲ್ಲಿ ಶ್ರೇಯಾಂಕಾ ಪಾಟೀಲ್ ತನ್ನ ಚೊಚ್ಚಲ ಪಂದ್ಯದಲ್ಲಿ 4 ಓವರ್‌ಗಳಲ್ಲಿ 44 ರನ್ ನೀಡಿ 2 ವಿಕೆಟ್ ಪಡೆದರು.

ಇಂಗ್ಲೆಂಡ್ ಮಹಿಳಾ ಬ್ಯಾಟರ್‌ಗಳು ಮುಂಬೈ ಪಿಚ್‌ನ ಪರಿಸ್ಥಿತಿಯನ್ನು ಆನಂದಿಸಿದರು ಮತ್ತು ಪಂದ್ಯ ಗೆಲ್ಲುವ 197 ರನ್‌ಗಳ ಮೊತ್ತವನ್ನು ಬಾರಿಸಿದರು. ಗುರಿ ಬೆನ್ನಟ್ಟಿದ ಭಾರತ ವನಿತಾ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 159 ರನ್ ಗಳಿಸಲಷ್ಟೇ ಶಕ್ತವಾಯಿತು ಮತ್ತು 38 ರನ್‌ಗಳಿಂದ ಸೋಲು ಅನುಭವಿಸಿತು.
ಇನ್ನು 2ನೇ ಟಿ20 ಪಂದ್ಯದ ಮೊದಲು ಮಾತನಾಡಿದ ಭಾರತ ತಂಡದ ಶ್ರೇಯಾಂಕಾ ಪಾಟೀಲ್, ಭಾರತವು ಉತ್ತಮವಾಗಿ ಬೌಲಿಂಗ್ ಮಾಡಬೇಕಿತ್ತು, ಆದರೆ ಭಾರತ ಮೊದಲ ಪಂದ್ಯವನ್ನು ಸೋಲಲು ನಿಜವಾದ ಕಾರಣ ತಂಡದ ಕಳಪೆ ಫೀಲ್ಡಿಂಗ್ ಎಂದು ನಂಬಿದರು.
ಶನಿವಾರ, ಡಿಸೆಂಬರ್ 9ರಂದು ಅದೇ ಮುಂಬೈನ ವಾಂಖೆಡೆಯಲ್ಲಿ ಹರ್ಮನ್‌ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ತಂಡವು ಇಂಗ್ಲೆಂಡ್ ವಿರುದ್ಧ 2ನೇ ಟಿ20 ಪಂದ್ಯವನ್ನು ಆಡಲಿದೆ.

"ವಿಕೆಟ್ ಬ್ಯಾಟ್ ಮಾಡಲು ಅದ್ಭುತವಾಗಿತ್ತು, ಆದರೆ, ಬೌಲಿಂಗ್‌ಗೆ ಸುಲಭವಿರಲಿಲ್ಲ. ಆದರೆ ನಾವು ಸಾಕಷ್ಟು ಯೋಗ್ಯ ಆಟವನ್ನು ಆಡಿದ್ದೇವೆ ಎಂದು ನಾನು ಭಾವಿಸುತ್ತೇನೆ. ನಾವು ಎಲ್ಲಿ ಸುಧಾರಿಸಬಹುದು ಎಂಬುದರ ಕುರಿತು ಚರ್ಚೆ ನಡೆಸಿದ್ದೇವೆ. ಫೀಲ್ಡಿಂಗ್ ಇನ್ನೂ ಉತ್ತಮವಾಗಿರಬಹುದಿತ್ತು, ಆದರೆ ನಾವು ಬಲಶಾಲಿಯಾಗಿ ಪುನರಾಗಮನ ಮಾಡುತ್ತೇವೆ," ಎಂದು ಶ್ರೇಯಾಂಕಾ ಪಾಟೀಲ್ ಹೇಳಿದಳು.
ಬೌಲಿಂಗ್ ಮಾಡುವುದು ಸುಲಭದ ವಿಕೆಟ್ ಅಲ್ಲ ಎಂದು ಯುವ ಸ್ಪಿನ್ನರ್ ತಿಳಿಸಿದರು ಮತ್ತು ಡೆತ್ ಓವರ್‌ಗಳಲ್ಲಿ ನಾವು ಬೇಗನೆ ಸುಧಾರಿಸಬೇಕಾಗಿದೆ ಎಂದರು.
"ನಾವು ವೇಗದ ಬೌಲಿಂಗ್‌ನಲ್ಲಿ ಸ್ವಲ್ಪ ಹೆಚ್ಚು ಬದಲಾವಣೆ ಮಾಡಬಹುದಿತ್ತು, ಆದರೆ ಬೌಲರ್‌ಗಳಿಗೆ ವಿಕೆಟ್ ಅಷ್ಟು ಉತ್ತಮವಾಗಿಲ್ಲ, ಅದು ಸಂಪೂರ್ಣವಾಗಿ ಬ್ಯಾಟರ್‌ಗಳ ಪರವಾಗಿತ್ತು. ನಾನು ಉತ್ತಮವಾಗಿ ಬೌಲಿಂಗ್ ಮಾಡಬಲ್ಲೆ. ಆದರೆ ಡೆತ್ ಓವರ್‌ಗಳಲ್ಲಿ ಬೌಲಿಂಗ್ ಮಾಡುವುದು ಸುಲಭವಲ್ಲ," ಎಂದು ಕರ್ನಾಟಕದ ಶ್ರೇಯಾಂಕಾ ಪಾಟೀಲ್ ಸುದ್ದಿಗಾರರಿಗೆ ತಿಳಿಸಿದರು.
ಮಹಿಳಾ ಪ್ರೀಮಿಯರ್ ಲೀಗ್‌ನ ಉದ್ಘಾಟನಾ ಆವೃತ್ತಿಯ ಆವಿಷ್ಕಾರಗಳಲ್ಲಿ ಒಬ್ಬರಾಗಿರುವ ಶ್ರೇಯಾಂಕಾ ಪಾಟೀಲ್ ತಮ್ಮ ಚೊಚ್ಚಲ ಪಂದ್ಯದ ಬಗ್ಗೆ ಮಾತನಾಡಿದರು. 21ರ ಹರೆಯದ ಯುವತಿ ಶ್ರೇಯಾಂಕಾ ಇಂಗ್ಲೆಂಡ್ ವಿರುದ್ಧ ಚೊಚ್ಚಲ ಪಂದ್ಯವಾಡಲಿದ್ದೇನೆ ಎಂದು ತಿಳಿದ ನಂತರ, ನಿದ್ರೆ ಮಾಡಲಿಲ್ಲ ಎಂದರು.
"ನನಗೆ ಭಾರತ ತಂಡದ ಕ್ಯಾಪ್ ಸಿಕ್ಕಿದ್ದಕ್ಕೆ ನನಗೆ ತುಂಬಾ ಸಂತೋಷವಾಯಿತು. ನಾನು ಸ್ವಲ್ಪ ಉತ್ಸುಕನಾಗಿದ್ದೆ ಮತ್ತು ಆತಂಕಗೊಂಡಿದ್ದೆ, ನನಗೆ ಹಿಂದಿನ ರಾತ್ರಿ ನಿದ್ರೆ ಬರಲಿಲ್ಲ. ಆದರೆ ಒಂದೆರಡು ಎಸೆತಗಳ ನಂತರ ನಾನು ಚೆನ್ನಾಗಿದ್ದೆ," ಶ್ರೇಯಾಂಕಾ ಹೇಳಿದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications