Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND W vs ENG W Test: ಐತಿಹಾಸಿಕ ಪಂದ್ಯಕ್ಕೆ ಕ್ಷಣಗಣನೆ; ಇಲ್ಲಿದೆ ಕಂಪ್ಲೀಟ್ ಮಾಹಿತಿ

ಭಾರತ ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿದೆ. ಈ ಪ್ರವಾಸದಲ್ಲಿ ಭಾರತ ಪುರುಷರ ತಂಡ ಐದು ಪಂದ್ಯಗಳ ಟಿ20 ಸರಣಿಯನ್ನು ಆಡುತ್ತಿದೆ. ಈ ಮಧ್ಯೆ ಮಹಿಳಾ ತಂಡ ಸಹ ದೊಡ್ಡ ಸವಾಲಿಗೆ ಸಿದ್ಧವಾಗುತ್ತಿದೆ. ಮಹಿಳಾ ಟಿ20 ವಿಶ್ವಕಪ್‌ಗೆ ವೇದಿಕೆ ಕಲ್ಪಿಸಿದ್ದ ಇಂಗ್ಲೆಂಡ್‌ ಮತ್ತೊಂದು ಐತಿಹಾಸಿಕ ಪಂದ್ಯಕ್ಕೆ ಆತಿಥ್ಯ ನೀಡಲಿದೆ. ಐತಿಹಾಸಿಕ ಲಾರ್ಡ್ಸ್‌ ಅಂಗಳದಲ್ಲಿ ಭಾರತ ಮಹಿಳಾ ತಂಡ ಹಾಗೂ ಇಂಗ್ಲೆಂಡ್‌ ಮಹಿಳಾ ತಂಡಗಳ ನಡುವಣ ಏಕೈಕ ಟೆಸ್ಟ್‌ ಆರಂಭವಾಗಲಿದ್ದು, ಇದು ದಾಖಲೆಯ ಪುಟಕ್ಕೆ ಎಂಟ್ರಿ ನೀಡಲಿದೆ. ಏಕೆಂದರೆ ಇಲ್ಲಿಯ ವರೆಗೆ ಲಾರ್ಡ್ಸ್‌ ಮೈದಾನದಲ್ಲಿ ಒಂದೇ ಒಂದು ಮಹಿಳಾ ಟೆಸ್ಟ್‌ ಪಂದ್ಯ ನಡೆದಿಲ್ಲ.

ಇದೇ ಮೊದಲ ಬಾರಿಗೆ ಐಕಾನಿಕ್ ಲಾರ್ಡ್ಸ್‌ ಮೈದಾನ ಮಹಿಳಾ ಟೆಸ್ಟ್‌ಗೆ ಆತಿಥ್ಯವನ್ನು ವಹಿಸಲಿದೆ. ಈ ಮೈದಾನದಲ್ಲಿ ಕಣಕ್ಕೆ ಇಳಿಯುತ್ತಿದ್ದಂತೆ ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು ದಾಖಲೆ ನಿರ್ಮಿಸಲಿವೆ. ಇಂಗ್ಲೆಂಡ್ ಮಹಿಳಾ ತಂಡ ತನ್ನ 103ನೇ ಟೆಸ್ಟ್ ಪಂದ್ಯವನ್ನು ಆಡಲು ಸಜ್ಜಾದರೆ, ಭಾರತ ತಂಡ 43ನೇ ಪಂದ್ಯಕ್ಕೆ ಸಿದ್ಧತೆ ನಡೆಸಿದೆ.

IND W vs ENG W Test

ಈಗಾಗಲೇ ಕ್ರಿಕೆಟ್‌ ಮೆಕ್ಕಾ ಎಂದೇ ಕರೆಯುವ ಲಾರ್ಡ್ಸ್ ಮೈದಾನದಲ್ಲಿ ಪುರುಷರ 150 ಟೆಸ್ಟ್‌ ಪಂದ್ಯಗಳು ನಡೆದಿವೆ. ಆದರೆ ಈ ವರೆಗೆ ಒಂದೇ ಒಂದು ಟೆಸ್ಟ್‌ ಪಂದ್ಯ ನಡೆದಿರಲಿಲ್ಲ. ಈ ಐತಿಹಾಸಿಕ ಕ್ಷಣವನ್ನು ಸ್ಮರಣೀಯವಾಗಿಸಲು ಭಾರತ ತಂಡ ಸಹ ಪ್ಲ್ಯಾನ್ ಮಾಡಿಕೊಂಡಿದೆ.

ಭಾರತ ಹಾಗೂ ಇಂಗ್ಲೆಂಡ್‌ ಹೆಡ್‌ ಟು ಹೆಡ್‌ ದಾಖಲೆ

ಭಾರತ, ಇಂಗ್ಲೆಂಡ್ ತಂಡಗಳು ಈ ವರೆಗೆ 15 ಟೆಸ್ಟ್‌ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಭಾರತ 3 ಪಂದ್ಯಗಳಲ್ಲಿ ಜಯ ಸಾಧಿಸಿದರೆ, ಇಂಗ್ಲೆಂಡ್‌ 1 ಪಂದ್ಯದಲ್ಲಿ ಜಯದ ನಗೆ ಬೀರಿದೆ. ಉಳಿದಂತೆ 11 ಪಂದ್ಯಗಳು ಡ್ರಾದಲ್ಲಿ ಅಂತ್ಯವಾಗಿವೆ. ಟಿ20 ವಿಶ್ವಕಪ್‌ನಲ್ಲಿ ನೀರಸ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾ, ಪುಟಿದೇಳುವ ಲೆಕ್ಕಾಚಾರದಲ್ಲಿದೆ.

ಪಂದ್ಯ ನಡೆಯುವುದು ಯಾವಾಗ?

ಲಾರ್ಡ್ಸ್‌ನಲ್ಲಿ ನಡೆಯಲಿರುವ ಏಕೈಕ ಟೆಸ್ಟ್‌ ಪಂದ್ಯ ಜುಲೈ 10 ರಿಂದ ಆರಂಭವಾಗುತ್ತದೆ. ಅಲ್ಲದೆ ಜುಲೈ 13ರ ವರೆಗೆ ನಡೆಯಲಿದೆ. ಭಾರತೀಯ ಕಾಲಮಾನ ಮಧ್ಯಾಹ್ನ 3.30ಕ್ಕೆ ಪಂದ್ಯ ಆರಂಭವಾಗಲಿದೆ.

ಭಾರತ, ಇಂಗ್ಲೆಂಡ್‌ ಏಕೈಕ ಟೆಸ್ಟ್‌ ನೋಡುವುದು ಎಲ್ಲಿ?

ಭಾರತ, ಇಂಗ್ಲೆಂಡ್‌ ನಡುವಣ ಟೆಸ್ಟ್‌ ಪಂದ್ಯವನ್ನು ಸೋನಿ ನೆಟ್‌ವರ್ಕ್‌ನಲ್ಲಿ ನೋಡಬಹುದಾಗಿದೆ.

ಭಾರತದ ತಂಡದಲ್ಲಿ ಯಾವೆಲ್ಲಾ ಆಟಗಾರ್ತಿಯರು ಇದ್ದಾರೆ?

ಭಾರತ ತಂಡವನ್ನು ಟೆಸ್ಟ್‌ ಪಂದ್ಯದಲ್ಲೂ ಹರ್ಮನ್ ಪ್ರೀತ್ ಕೌರ್ ಮುನ್ನಡೆಸಲಿದ್ದಾರೆ. ಸ್ಮೃತಿ ಮಂಧಾನ ಉಪನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಉಳಿದಂತೆ ಯಾಸ್ತಿಕಾ ಭಾಟಿಯಾ, ಶ್ರೀಚರಣಿ, ಹರ್ಲಿನ್ ಡಿಯೋಲ್‌, ಕ್ರಾಂತಿ ಗೌಡ, ರಿಚಾ ಘೋಷ್ (ವಿಕೆಟ್‌ ಕೀಪರ್‌), ಸ್ನೇಹಾ ರಾಣಾ, ಪ್ರಿಯಾ ಪುನಿಯಾ, ಜೆಮಿಮಾ ರೋಡ್ರಿಗಸ್‌, ಸಯಾಲಿ, ದೀಪ್ತಿ ಶರ್ಮಾ, ರೇಣುಕಾ ಸಿಂಗ್, ಶಫಾಲಿ ವರ್ಮಾ ಅವರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

Story first published: Thursday, July 9, 2026, 20:27 [IST]
Other articles published on Jul 9, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+